![Santhe-last](https://www.udayavani.com/wp-content/uploads/2025/02/Santhe-last-415x249.jpg)
![Santhe-last](https://www.udayavani.com/wp-content/uploads/2025/02/Santhe-last-415x249.jpg)
Team Udayavani, Feb 19, 2019, 1:33 PM IST
ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ತಾಲೀಮಿನ ವೇಳೆ ನಡೆದ ವಿಮಾನಗಳೆರಡರ ಢಿಕ್ಕಿ ಅವಘಡದಲ್ಲಿ ವಿಂಗ್ ಕಮಾಂಡರ್ ಮೃತ ಪಟ್ಟಿರುವುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಧೃಡ ಪಡಿಸಿದ್ದಾರೆ.
ಏರ್ ಶೋ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ವಿಂಗ್ ಕಮಾಂಡನ್ ಸಾಹಿಲ್ ಗಾಂಧಿ ಮೃತ ಪಟ್ಟಿದ್ದಾರೆ ಎಂದು ತಿಳಿಸಿದ ಅವರು ಶೃದ್ದಾಂಜಲಿಯನ್ನು ಸಲ್ಲಿಸಿದರು.
ನಾಳೆ ಎಂದಿನಂತೆ ಏರ್ ಶೋ ನಡೆಯಲಿದ್ದು, ಸೂರ್ಯಕಿರಣ್ ತಂಡ ದೂರ ಉಳಿಯಲಿದೆ ಎಂದು ತಿಳಿದು ಬಂದಿದೆ.
ಲಘು ಯುದ್ಧ ವಿಮಾನಗಳಾದ ಸೂರ್ಯಕಿರಣ್‌ಗಳು ಪರಸ್ಪರ ಢಿಕ್ಕಿಯಾಗಿ ಇಸ್ರೋ ಲೇಔಟ್‌ನ ಜನವಸತಿ ಪ್ರದೇಶದಲ್ಲಿ ಪತನವಾಗಿದ್ದು, ಇಬ್ಬರು ಪೈಲಟ್‌ಗಳು ಪಾರಾಗಿದ್ದರು.
You seem to have an Ad Blocker on.
To continue reading, please turn it off or whitelist Udayavani.