“ಮೂರು ದಿನದ’ ನಳಪಾಕ 


Team Udayavani, Feb 20, 2019, 12:30 AM IST

u-3.jpg

ರೀ, ನಾನು ಮೂರು ದಿನ ರಜಾ ಎಂದು ಹೆಂಡತಿ ಘೋಷಿಸಿ ಬಿಟ್ಟರೆ, ಆ ಕ್ಷಣದಿಂದಲೇ ಅಡುಗೆ ಮನೆಯ ಉಸ್ತುವಾರಿ ಗಂಡನ ಕೈಗೆ ಬರುತ್ತದೆ. ಅಂಥದೊಂದು ಸಂದರ್ಭದಲ್ಲಿ ತಂದೆಯೊಬ್ಬನಿಗೆ ಆದ ಅನುಭವದ ಮಾತುಗಳು ಇಲ್ಲಿವೆ…

ಗಂಡಸರು ಮನೆಯಲ್ಲಿ ಉಂಡು, ತಿಂದು ಹಾಯಾಗಿರುತ್ತಾರೆ ಎಂಬುದು ಎಲ್ಲರ ಮಾತು. ಆದರೆ ಸಂಪ್ರದಾಯಸ್ಥರ ಮನೆಗಳಲ್ಲಿ ಗಂಡಸರಿಗೂ ತಿಂಗಳಿನಲ್ಲಿ ಮೂರು ದಿನ ಅಡುಗೆ ಮನೆ ಡ್ನೂಟಿ ಕಡ್ಡಾಯ. ತಡರಾತ್ರಿ ಕಚೇರಿ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯೊಡತಿ, “ರೀ, ನಾನು ರಜಾ’ ಅಂದುಬಿಟ್ಟರೆ ಮುಗಿಯಿತು. ಕಾಲಡಿಯ ನೆಲ ಕಂಪಿಸಿದ ಅನುಭವ. 

ಮರುದಿನ ಬೆಳಗ್ಗೆಯಿಂದ ಮುಂದಿನ ಮೂರು ದಿನ ನನಗೆ ಓವರ್‌ ಡ್ನೂಟಿ. ಬೆಳಗ್ಗೆ ಯಾವ ತಿಂಡಿ ಮಾಡಿದರೆ ಬೇಗ ಕೆಲಸ ಮುಗಿಯುತ್ತೆ, ಮಧ್ಯಾಹ್ನ ಊಟಕ್ಕೇನು ಮಾಡುವುದು? ರಾತ್ರಿಗೆ ಸಾಂಬಾರ್‌ ಏನು… ಹೀಗೆ ತಲೆಯಲ್ಲಿ ನೂರೆಂಟು ಯೋಚನೆಗಳು.

ಬೆಳಗ್ಗೆ 6ಕ್ಕೆ ಎದ್ದು ಹಾಲು, ತರಕಾರಿ ತರುವುದರೊಂದಿಗೆ, ನನ್ನ ಕೆಲಸ ಆರಂಭವಾಗುತ್ತದೆ. ಹಾಲು ಕಾಯಿಸಿ, ಕಾಫಿ ಫಿಲ್ಟರಿಗೆ ಡಿಕಾಕ್ಷನ್‌ ಹಾಕುತ್ತಿರುವಾಗ, ಮಕ್ಕಳಿನ್ನೂ ಮಲಗಿದ್ದಾರೆ ಅನ್ನೋದು ನೆನಪಾಗುತ್ತೆ. ಸುಖ ನಿದ್ರೆಯಲ್ಲಿರುವ ಅವರನ್ನು ಎಬ್ಬಿಸುವುದೇ ಒಂದು ಸವಾಲು. “ಹೋಗಪ್ಪ, ಇನ್ನೂ ಟೈಮೇ ಆಗಿಲ್ಲ, ಸುಳ್ಳು ಹೇಳ್ತೀಯ’ ಎಂದು ಗೊಣಗುತ್ತಲೇ ಏಳುವ ಮಕ್ಕಳು, “ಅಯ್ಯೋ, ಅಮ್ಮ ರಜಾ ಆದ್ಲಾ? ಯಾಕಮ್ಮಾ ರಜಾ ಆದೆ?’ ಅಳುಮೋರೆ ಮಾಡುತ್ತವೆ. ಇನ್ನೂ ನಿದ್ದೆಗಣ್ಣಲ್ಲೇ ಇರುವ ಅವರನ್ನು, “ಇವತ್ತು ಸ್ಕೂಲಿನಿಂದ ಬಂದಮೇಲೆ ಏನಾದ್ರೂ ತಗೊಳ್ಳುವಿರಂತೆ’ ಎಂದು ಪುಸಲಾಯಿಸಿದರೆ ಮಾತ್ರ ಹಲ್ಲುಜ್ಜಲು ಮನಸ್ಸು ಮಾಡುತ್ತಾರೆ. ಇಷ್ಟರನಡುವೆ ಶಾಲೆಯ ಹೋಂ ವರ್ಕ್‌, ಪ್ರಾಜೆಕ್ಟ್ ಏನಾದ್ರೂ ಬಾಕಿ ಇದ್ದರೆ ಮುಗಿಯಿತು. ಅದನ್ನು ಬೇಗ ಮುಗಿಸುವಂತೆ ಹುರಿದುಂಬಿಸಿ, ಅವರ ಸ್ಕೂಲ್‌ ಬ್ಯಾಗ್‌ ರೆಡಿ ಮಾಡಬೇಕು. ಈ ಬಡಪಾಯಿಯ ಕಷ್ಟವನ್ನು ಅರ್ಥವೇ ಮಾಡಿಕೊಳ್ಳದ ಸಮಯ “ಎಂಟೂವರೆ ಆಯ್ತು’ ಎಂದು ಹೆದರಿಸುತ್ತದೆ.  

ಬೆಳಗ್ಗೆ ಮತ್ತು ಮಧ್ಯಾಹ್ನದ ಡಬ್ಬಿಗೆ ಎರಡು ಹೊತ್ತಿಗೂ ಆಗುವಂಥ ಪುಳಿಯೊಗರೆಯನ್ನೋ, ಟೊಮೇಟೋ ಚಿತ್ರಾನ್ನವನ್ನೋ ಮಾಡಿ, ಡಬ್ಬಿ ರೆಡಿ ಮಾಡಿದ್ದಾಯ್ತು. ಅಷ್ಟರಲ್ಲಿ, “ಅಪ್ಪಾ, ನನ್ನ ಯೂನಿಫಾರ್ಮ್ ಐರನ್‌ ಮಾಡಿಲ್ಲ, ನನ್ನ ಶೂ ಪಾಲಿಶ್‌ ಆಗಿಲ್ಲ, ನನ್ನ ಬೆಲ್ಟ್ ಸಿಗ್ತಿಲ್ಲ’ ಎಂಬ ವರಾತ ಶುರುವಾಗಿರುತ್ತದೆ. ಗಡಿಬಿಡಿಯಲ್ಲಿ ಇಸ್ತ್ರಿ ಉಜ್ಜಿ, ಪಾಲಿಶ್‌ ಮಾಡಿ ಬೆವರಿಳಿಸುತ್ತಾ ಮಕ್ಕಳ ಮುಂದೆ ನಿಂತರೆ, ಅಪ್ಪನ ಸ್ಥಿತಿ ನೋಡಿ, “ಅಪ್ಪಾ, ಇವತ್ತು ನೀನೇನು ಸ್ಕೂಲಿಗೆ ಬಿಡೋಕೆ ಬರೋದು ಬೇಡ, ನಾವೇ ಹೋಗ್ತಿವಿ’ ಅಂತ ನನ್ನ ಕೆಲಸವನ್ನು ಚೂರು ಕಡಿಮೆ ಮಾಡುತ್ತಾರೆ. 

ಮಕ್ಕಳು ಸ್ಕೂಲಿಗೆ ತೆರಳಿದ ನಂತರ ಸ್ನಾನ ಮಾಡಿ, ಹೊಟ್ಟೆಗೊಂದಿಷ್ಟು ತಿಂಡಿ ಕಾಣಿಸಿದರೆ ಸ್ವಲ್ಪ ವಿರಾಮ ಸಿಕ್ಕಂತೆ. ಜಾಸ್ತಿ ಹೊತ್ತು ಆರಾಮಾಗಿ ಕೂರುವಂತಿಲ್ಲ. ಸಿಂಕ್‌ನಲ್ಲಿ ಬಿದ್ದಿರುವ ಪಾತ್ರೆ ರಾಶಿ ಕೈ ಬೀಸಿ ಕರೆಯುತ್ತದೆ. ಪ್ರತಿದಿನ ಮೂರು ಹೊತ್ತು, ಮೂರು ಬಗೆಯ ಅಡುಗೆ ಬೇಕಾದರೂ ಮಾಡಬಹುದು. ಆದರೆ, ಪಾತ್ರೆ ತೊಳೆಯುವುದೇ ದೊಡ್ಡ ಗೋಳು. ಹಾಗಂತ ಪಾತ್ರೆ ತೊಳೆಯದೇ ಇರಲಾದೀತೆ? ಪಾತ್ರೆ ತೊಳೆಯುತ್ತಲೇ ಮಧ್ಯಾಹ್ನ ಹಾಗೂ ರಾತ್ರಿಯ ಅಡುಗೆಯ ಬಗ್ಗೆ ಮಾನಸಿಕವಾಗಿ ರೆಡಿ ಆಗುತ್ತೇನೆ. ಅನ್ನ- ಸಾಂಬಾರ್‌ ಮಾಡಿ ಮುಗಿಸುವಾಗ ಗಂಟೆ 1. ಊಟ ಮಾಡಿ, ಬುತ್ತಿ ಕಟ್ಟಿಕೊಂಡು ಆಫೀಸಿಗೆ ಹೊರಟರೆ ಬರುವುದು ರಾತ್ರಿ 12 ಗಂಟೆಗೆ.

“ಅಪ್ಪಾ, ನಿನ್ನೆ ನೀನು ಮಾಡಿದ್ದ ಈರುಳ್ಳಿ-ಆಲೂಗಡ್ಡೆ ಪಲ್ಯ ಸೂಪರ್‌ ಆಗಿತ್ತು’, “ಈರುಳ್ಳಿ ಟೊಮೇಟೋ ಗೊಜ್ಜನ್ನು ಫ್ರೆಂಡ್ಸೆಲ್ಲಾ ತುಂಬಾ ಇಷ್ಟಪಟ್ರಾ, ಅವರ ಅಪ್ಪಂಗೆ ಅಡುಗೆ ಮಾಡೋಕೆ ಬರಲ್ಲಂತಪ್ಪಾ’ ಎಂದು ಮಕ್ಕಳು ಮೆಚ್ಚುಗೆಯ ಮಾತುಗಳನ್ನಾಡಿದರೆ, “ಪರವಾಗಿಲ್ಲಾರೀ, ನನಗಿಂತ ಚೆನ್ನಾಗಿಯೇ ಅಡುಗೆ ಮಾಡಿದ್ದೀರ’ ಎಂದು “ಅವಳೂ’ ಹೊಗಳಿಬಿಟ್ಟರೆ ಮುಗಿಯಿತು. ನಳ ಮಹಾರಾಜನನ್ನು ಬಿಟ್ಟರೆ ನಾನೇ ಎಂದು ಕೋಡು ಮೂಡುತ್ತದೆ. ಆ ಮೆಚ್ಚುಗೆಯೇ ಮುಂದಿನ ಎರಡು ದಿನಗಳ ಕೆಲಸಕ್ಕೆ ಸ್ಫೂರ್ತಿ. ಕೆಲವೊಮ್ಮೆ ಮಕ್ಕಳು, “ಅಪ್ಪಾ, ಎಷ್ಟು ರುಚಿಯಾಗಿ ಅಡುಗೆ ಮಾಡ್ತೀಯ, ಇನ್ಮುಂದೆ ಅಮ್ಮನ ಬದಲು ನೀನೇ ತಿಂಡಿ ಮಾಡು’ ಅಂದಾಗ, ತಿಂಗಳಿಡೀ ಅಡುಗೆ ಮಾಡುವುದನ್ನು ಊಹಿಸಿಕೊಂಡೇ ಬೆವರುತ್ತೇನೆ.

ಶ್ರೀಮತಿ ರಜೆಯಿಂದ ಒಳಗೆ ಬರುವ ಹಿಂದಿನ ದಿನಕ್ಕೂ, ನಲ್ಲಿಯಲ್ಲಿ ತಡರಾತ್ರಿ ನೀರು ಬರುವುದಕ್ಕೂ ದೊಡ್ಡ ನಂಟಿದೆ. ರಾತ್ರಿ 12ಕ್ಕೆ  ಕೆಲಸದಿಂದ ಬಂದು 1ರವರೆಗೂ ನೀರು ತುಂಬಿ, ಬೆಳಗ್ಗೆ 6ಕ್ಕೆ ಎದ್ದು ಶ್ರೀಮತಿಗೆ ನೀರು ಹಾಕಿ ಒಳಗೆ ಕೆರದುಕೊಂಡರೆ ನನ್ನ ಜವಾಬ್ದಾರಿ ಮುಗಿದಂತೆ. ಮತ್ತೆ ಮುಂದಿನ ತಿಂಗಳವರೆಗೆ, ಮನೆ-ಮಕ್ಕಳ ಕೆಲಸವೆಲ್ಲಾ ಅವಳ ಕೈಯಲ್ಲಿ.

“ಅವಳು ಕೆಲಸಕ್ಕೆ ಹೋಗಲ್ಲ, ಹೌಸ್‌ವೈಫ್ ಅಷ್ಟೆ’ ಅಂತ ಹೇಳುವ ಎಲ್ಲ ಗಂಡಂದಿರೂ, ಕನಿಷ್ಠ ಆ ಮೂರು ದಿನಗಳಾದರೂ ಅಡುಗೆ ಮನೆಯ ಕೆಲಸ ನಿರ್ವಹಿಸಿ ನೋಡಿ. ಆಗ, ಹೆಂಡತಿ “ಹೌಸ್‌ವೈಫ್ ಅಷ್ಟೇ’ ಅಲ್ಲ ಅಂತ ಅರ್ಥವಾಗುತ್ತೆ. ತಿಂಗಳಿಡೀ ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ಬಿಡುವಿಲ್ಲದೆ ದುಡಿಯುವ ಮನೆಯೊಡತಿಗೆ, ಆ ಮೂರು ದಿನಗಳಲ್ಲಾದರೂ ನೆರವಾಗಿ. ಏನೋ ತಿಳಿದ ಅಡುಗೆ ಮಾಡಿ ಬಡಿಸಿ, ಆಕೆಯ ಪಾತ್ರವನ್ನು ನಿರ್ವಹಿಸಿ.  

 ಎ.ಆರ್‌. ಗಿರಿಧರ 

ಟಾಪ್ ನ್ಯೂಸ್

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.