ಅತ್ತ ಅಣಕು ಪ್ರದರ್ಶನ; ಇತ್ತ ರಿಯಲ್ ಘಟನೆ
Team Udayavani, Feb 20, 2019, 6:27 AM IST
ಬೆಂಗಳೂರು: ಅತ್ತ ವಿಮಾನಗಳ ದುರಂತ ಸಂಭವಿಸಿದಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅಣಕು ಪ್ರದರ್ಶನ ನಡೆಯುತ್ತಿತ್ತು. ಇತ್ತ ಆ ಘಟನೆಯೇ ನಿಜರೂಪದಲ್ಲಿ ಸಂಭವಿತ್ತು. – ನಗರದಲ್ಲಿ ಮಂಗಳವಾರ ಈ ಕಾಕತಾಳೀಯ ನಡೆದಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಲ್ಫಾ-3ರಲ್ಲಿ ಬೆಳಗ್ಗೆ 9.30ರಿಂದ 11.30ರವರೆಗೆ ವಿಮಾನ ದುರಂತಗಳು ಸಂಭವಿಸಿದಾಗ, ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಿವಿಲ್ ಡಿಫೆನ್ಸ್ ಸಿಬ್ಬಂದಿಗೆ ತಿಳಿವಳಿಕೆ ನೀಡಲಾಗುತ್ತಿತ್ತು.
ಇದೇ ಸಮಯಕ್ಕೆ ಸೂರ್ಯಕಿರಣ ಪತನದ ಸುದ್ದಿ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದವರಿಗೆ ತಲುಪಿತು. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. “ನಮ್ಮಲ್ಲಿ ಸುಮಾರು 200 ಜನ ಸಿಬ್ಬಂದಿ ಇದ್ದು, ಈ ಪೈಕಿ ಸುಮಾರು 70ರಿಂದ 80 ಜನ ಹಾಗೂ 8-10 ವಾಹನಗಳು ವಿಮಾನ ದುರಂತದ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯ ಕೈಗೊಂಡರು.
ಬೆಂಕಿ ನಂದಿಸುವುದು, ವಿಮಾನಗಳ ಅವಶೇಷಗಳನ್ನು ಸಂಗ್ರಹಿಸುವುದು, ಪೈಲಟ್‌ಗಳ ರಕ್ಷಣೆಯಲ್ಲಿ ಇವರು ತೊಡಗಿದ್ದರು’ ಎಂದು ಅಗ್ನಿಶಾಮಕ, ತುರ್ತು ಸೇವೆಗಳ ಎಡಿಜಿಪಿ ಸುನೀಲ್ ಅಗರವಾಲ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.