ಮನೆ ಮನೆಗೆ ಪಾರ್ಸೆಲ್ ತರಲಿದೆ ಡ್ರೋನ್!
Team Udayavani, Feb 21, 2019, 12:30 AM IST
ಬೆಂಗಳೂರು: ಮದುವೆ-ಮುಂಜಿ, ಸಭೆ-ಸಮಾರಂಭದ ಫೊಟೋಗ್ರಫಿ ಹೆಚ್ಚೆಂದರೆ ಕೃಷಿ ಬೆಳೆಗಳಿಗೆ ರಸಗೊಬ್ಬರ ಸಿಂಪರಣೆಗೆ ಸೀಮಿತವಾಗಿರುವ “ಡ್ರೋನ್ ‘ ಶೀಘ್ರದಲ್ಲೇ ಪಾರ್ಸೆಲ್‌ಗಳನ್ನು ಮನೆ- ಮನೆಗೆ ತಲುಪಿಸುವ “ಪೋಸ್ಟ್‌ಮನ್’ ಕೆಲಸವನ್ನೂ ಮಾಡಲಿದೆ! ಹೌದು, ಎಲ್‌ಕಂಪೋನಿಕ್ಸ್ ಏರಾಬ್ ಟೆಕ್ನಾಲಜೀಸ್‌ಇಂಡಿಯಾ ಪ್ರೈ.ಲಿ., ಇದಕ್ಕೆ ಪೂರಕವಾದ ಡ್ರೋನ್ ಅನ್ನು ಪರಿಚಯಿಸುತ್ತಿದೆ. ಇದು 10 ಕೆಜಿಯಷ್ಟು ಭಾರವನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದ್ದು, ಇಸ್ರೇಲ್‌ನ ಕಂಪನಿ ಯೊಂದು ಇದನ್ನು ಅಭಿವೃದ್ಧಿ ಪಡಿಸಿದೆ. ಬುಧವಾರ ಆರಂಭಗೊಂಡ ಐದು ದಿನಗಳ “ಏರೋ ಇಂಡಿಯಾ ಶೋ-2019’ದಲ್ಲಿ ಇದನ್ನು ಪ್ರದರ್ಶನಕ್ಕಿಡಲಾಗಿದೆ.
ಈಗಾಗಲೇ ಭಾರತೀಯ ಸೇನೆಯು ಈ ಡ್ರೋನ್ ಅನ್ನು ಗಡಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಬಳಸಿಕೊಳ್ಳಲು ಉದ್ದೇಶಿಸಿದೆ. ಈ ಸಂಬಂಧ ಕಂಪನಿಯು ಮಾತುಕತೆ ನಡೆಸಿದ್ದು, ಪೂರಕ ಸ್ಪಂದನೆಯೂ ದೊರಕಿದೆ. ಇನ್ನೂ ಮುಂದುವರಿದು ಕೊರಿಯರ್ ಸೇವೆ ಪರಿಚಯಿಸಲಿಕ್ಕೂ ಕಂಪನಿ ಉದ್ದೇಶಿಸಿದೆ. ಇಸ್ರೇಲ್‌ನಲ್ಲಿ ಈ ಸೇವೆಯನ್ನು ಪರಿಚಯಿಸಲಾಗಿದೆ. ನಮ್ಮಲ್ಲಿಯೂ ಸಾಧಕ- ಬಾಧಕಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ. ಯಾವುದಾದರೂ ಕೊರಿಯರ್ ಕಂಪನಿಗಳು ಮುಂದೆಬಂದರೆ, ಸೇವೆಗೆ ಸಿದಟಛಿವಾಗಿದೆ ಎಂದು ಎಲ್‌ಕಂಪೋನಿಕ್ಸ್ ಟೆಕ್ನಾಲಜೀಸ್ ಇಂಡಿಯಾ ಪ್ರೈ.ಲಿ.,ನ ಉಪಾಧ್ಯಕ್ಷೆ ನಿಧಿ ಶಾರದಾ ತಿಳಿಸಿದರು.
ಏನು ಉಪಯೋಗ?
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಆನ್‌ಲೈನ್ ಮಾರುಕಟ್ಟೆ ಮುನ್ನೆಲೆಗೆ ಬಂದಿದ್ದು, ನಿತ್ಯ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಡ್ರೋನ್ ಮೂಲಕ ಲಾಜಿಸ್ಟಿಕ್ ಸೇವೆ ಕಲ್ಪಿಸುವುದರಿಂದ ಜನರಿಗೆ ತ್ವರಿತ ಗತಿಯಲ್ಲಿ ಪಾರ್ಸೆಲ್‌ಗಳನ್ನು ತಲುಪಿಸಬಹುದು. ಸೇವೆಯಲ್ಲಿ ನಿಖರತೆ ಬರಲಿದೆ. ಸಮಯ ಉಳಿತಾಯದ ಜತೆಗೆ ಮಾನವರಹಿತ ವಾಹನ ಆಗಿರುವುದರಿಂದ ಮತ್ತೂಬ್ಬರ ಅವಲಂಬನೆ ತಪ್ಪಲಿದೆ. ನಿರಂತರವಾಗಿ ಸುಮಾರು 12 ತಾಸುಗಳ ಹಾರಾಟ ನಡೆಸಬಲ್ಲದು.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅನುಮತಿ ಸೇರಿದಂತೆ ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ಆರು ತಿಂಗಳಲ್ಲಿ ಕೊರಿಯರ್ ಸೇವೆ ಆರಂಭಿಸಲಾಗುವುದು. ಹಾಗೊಂದು ವೇಳೆ ಇದು ಸಾಧ್ಯವಾದರೆ, ದೇಶದಲ್ಲೇ ಇಂತಹದ್ದೊಂದು ಪ್ರಯೋಗ ಮೊದಲು ಬಾರಿಗೆ ನಡೆಯಲಿದೆ. ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಕಂಪನಿಯೊಂದಿಗೆ ಚರ್ಚೆಗಳು ನಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಉಳಿದ ಡ್ರೋನ್‌ಗಳಿಗೆ ಹೋಲಿಸಿದರೆ, ಇದು ತುಸು ಭಿನ್ನವಾಗಿದೆ. 150 ಕೆಜಿ ಪೇಲೋಡ್ ಹೊಂದಿರುವ ಈ ಡ್ರೋನ್, ಗಂಟೆಗೆ 110 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಆಹಾರ, ಔಷಧಿಗಳು ಮತ್ತಿತರ ಸಾಮಗ್ರಿಗಳನ್ನು ಇದರ ಮೂಲಕ ಸಾಗಿಸಬಹುದಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.