“ಧರ್ಮದಿಂದ ಆಧ್ಯಾತ್ಮಿಕತೆಯ ಸಂರಕ್ಷಣೆ’

Team Udayavani, Feb 21, 2019, 12:30 AM IST

20-kblm-1.jpg

ಕುಂಬಳೆ: ಧರ್ಮವೆಂಬ ನೆಟ್‌ವರ್ಕ್‌ ಮೂಲಕ ಆಧ್ಯಾತ್ಮಿಕತೆಯ ಸಂರಕ್ಷಣೆಯನ್ನು ಕೊಂಡೆವೂರಿನ ಶ್ರೀಗಳು ಶಿಸ್ತಿನಿಂದ ಮಾಡುತ್ತಿದ್ದು, ಸೋಮಯಾಗ ದಿಂದ ವಿಶ್ವಪರಿವರ್ತನೆಯ ಸಂದೇಶವನ್ನು ಸಮಾಜಕ್ಕೆನೀಡುತ್ತಿರುವರು. ಕಲ್ಲನ್ನು ಶಿಲ್ಪವಾಗಿಸುವ ಸಂಕಲ್ಪ ದೊಂದಿಗೆ ನಡೆಯುತ್ತಿರುವ ವಿಶ್ವಜಿತ್‌ ಅತಿರಾತ್ರ ಸೋಮಯಾಗದಿಂದ ಧರ್ಮ ಸಂಸ್ಕೃತಿಯ ಅನಾವರಣವಾಗಲಿದೆ. 

ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಈ ಕಾಲಘಟ್ಟದಲ್ಲಿ ಯಾಗ ಯಜ್ಞಾದಿಗಳು ನಡೆಯಬೇಕಾದ ಅಗತ್ಯವಿದೆ. ಆ ಪುಣ್ಯದ ಕೆಲಸ ಕೊಂಡೆವೂರಿನ ಪವಿತ್ರ ನೆಲದಲ್ಲಿ ಸಂಪನ್ನಗೊಳ್ಳುತ್ತಿದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾ ನಂದ ಸ್ವಾಮೀಜಿಯವರು ನುಡಿದರು.

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ವಿಶ್ವಜಿತ್‌ ಅತಿರಾತ್ರ ಸೋಮ ಯಾಗದ ಪ್ರಯುಕ್ತ ಬುಧವಾರ ಜರಗಿದ ಧರ್ಮ ಸಂದೇಶ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮೂಡುಬಿದಿರೆ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ, ತಾಳ್ಮೆ, ಪರಿಶ್ರಮ, ಸಾಧನೆಗಳಿಂದ ಯಜ್ಞಗಂಗೆಯನ್ನು ಕೇರಳಕ್ಕೆ ತಂದು ಭಗೀರಥ ಎಂಬ ಹೆಸರಿಗೆ ಕೊಂಡೆವೂರು ಪಾತ್ರವಾಗಿದೆ. ಇಲ್ಲಿ ನಡೆಯುತ್ತಿರುವ ಅತ್ಯಪೂರ್ವ ಸೋಮಯಾಗದ ಫಲದಿಂದ ಕೇರಳ ಮತ್ತೆ ದೇವರ ನಾಡೆನಿಸಿಕೊಳ್ಳಲಿ ಎಂದು ಅವರು ತಿಳಿಸಿದರು. 

ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಉಪಸ್ಥಿತರಿದ್ದರು. ಡಾ| ಜಯಪ್ರಕಾಶ್‌ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ದಿನಕರ್‌ ಹೊಸಂಗಡಿ ನಿರೂಪಿಸಿ, ವಂದಿಸಿದರು.

ಗಗನಕ್ಕೆ ಚಿಮ್ಮಿದ ಪ್ರವಗ್ಯì ಅಗ್ನಿ ವೈಭವ
ಯಾಗದ ಪ್ರವಗ್ಯì ವಿಧಿ ವಿಶಿಷ್ಟವಾಗಿದೆ.  ಒಟ್ಟು ಯಾಗ ಪ್ರಕ್ರಿಯೆಯಲ್ಲಿ 8 ಬಾರಿ ಆಚರಿಸಲ್ಪಡುವ ಈ ವಿಧಾನದಲ್ಲಿ ದಿನಕ್ಕೆ ಎರಡು ಬಾರಿಯಂತೆ ಕ್ರಮ ಅನುಸರಿಸಲಾಗುತ್ತಿದೆ. ಶೇ. 50 ಹುತ್ತದ ಮಣ್ಣು, ಶೇ. 15 ಹಂದಿ ತಿವಿದ ಮಣ್ಣು, ಶೇ. 35 ಆವೆ ಮಣ್ಣಿಗೆ ಆಡಿನ ಹಾಲು, ಗರಿಕೆ, ಸೋಮಲತೆ, ಗಂಡು ಆಡಿನ ರೋಮ, ಕೃಷ್ಣ ಮೃಗದ ರೋಮವನ್ನು ಸೇರಿಸಿ ತಯಾರಿಸಿದ ಮೂರು ಪಾತ್ರೆಗಳು ಬಳಸಲಾಗುವುದು. ಇದನ್ನು ಮಹಾವೀರ ಪಾತ್ರೆ ಎನ್ನುತ್ತಾರೆ. ಇದರಲ್ಲಿ ತಯಾರಿಸಿದ ಆಜ್ಯಗಳನ್ನು ಬಳಸಿ ನಡೆಸುವ ಯಾಗ ಪ್ರಕ್ರಿಯೆ ಪ್ರವಗ್ಯì ಎನಿಸಿಕೊಂಡಿದ್ದು, ಚತುರ್ವೇದಗಳ ಮಂತ್ರೋಚ್ಚಾರಗಳೊಂದಿಗೆ 20 ನಿಮಿಷಗಳ ವಿಧಿವಿಧಾನದಲ್ಲಿ ಮೂರು ಬಾರಿ ನ್ಪೋಟ ಸಂಭವಿಸಿ ಅಗ್ನಿಯ ಕೆನ್ನಾಲಿಗೆ 5-6 ಅಡಿ ಎತ್ತರಕ್ಕೆ ಚಿಮ್ಮಿತು. ಯಾಗ ಪರಿಸರದಲ್ಲಿ ಕಟ್ಟಿದ ಗಿಡ್ಡ ತಳಿಯ ಹಸುವಿನ ಹಾಲನ್ನು ಕರೆದು ಬಳಸಲಾಯಿತು.

ಅಗ್ನಿಹೋತ್ರಿಗಳ ಸಾನ್ನಿಧ್ಯ
ಸೋಮಯಾಗದ ಯಜಮಾನರಾದ ಮುಂಬಯಿ ರತ್ನಗಿರಿಯ ಅಗ್ನಿಹೋತ್ರಿಗಳಾದ ಅನಿರುದ್ಧ ವಾಜಪೇಯಿ ದಂಪತಿ ಸಾನ್ನಿಧ್ಯ ಮಹತ್ವ ಪಡೆದಿದೆ. ಭರತ ಖಂಡದಲ್ಲಿ ಒಟ್ಟು 26 ಅಗ್ನಿಹೋತ್ರಿಗಳು ಮಾತ್ರವಿದ್ದಾರೆ. ಕೊಂಡೆವೂರು ಶ್ರೀ ಕ್ಷೇತ್ರದ ಸೋಮಯಾಗಕ್ಕೆ ಅನಿರುದ್ಧ ವಾಜಪೇಯಿ ದಂಪತಿಯೇ ಯಜಮಾನತ್ವ ವಹಿಸಿದ್ದಾರೆ.

ಸೋಮಯಾಗ ಭೂಮಿಗೆ ಸೋಮರಾಜನ ಆಗಮನ!
ಬುಧವಾರ ಬೆಳಗ್ಗೆ ಪಾರಂಪರಿಕ ಜೋಡು ಎತ್ತಿನಗಾಡಿಯಲ್ಲಿ ಸೋಮರಾಜನನ್ನು ಯಾಗ ಭೂಮಿಗೆ ಕರೆತರುವ ವಿಶಿಷ್ಟ ಕಾರ್ಯಕ್ರಮ ನಡೆಯಿತು.

ಸೋಮಯಾಗದ ಪ್ರಧಾನ ದೇವತೆಯಾದ ಸೋಮರಾಜನ ಉಪಸ್ಥಿತಿಯಲ್ಲಿ ವಿಧಿವಿಧಾನ ಗಳು ಏರ್ಪಡುವುದು ಇದರ ಹಿನ್ನೆಲೆಯಾಗಿದೆ. ಸುಬ್ರಹ್ಮಣ್ಯ ನಾಮಕರಾದ ಋತ್ವಿಜರು ಸೋಮ ರಾಜರ ಪೋಷಾಕಿನಲ್ಲಿ ಜೋಡಿ ಎತ್ತುಗಳು ಎಳೆದ ಗಾಡಿಯಲ್ಲಿ ಋಕ್‌, ಯಜುರ್‌, ಸಾಮ ಹಾಗೂ ಅಥರ್ವ ವೇದೋಕ್ತ ಮಂತ್ರೋಚ್ಚಾರಗಳೊಂದಿಗೆ ಸ್ವಾಗತಿಸಲಾಯಿತು. 

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.