ನಾಳೆ ಕಂಬಳಬೆಟ್ಟು ಭಟ್ರೆನ ಮಗಳ್ ತುಳು ಚಿತ್ರ ತೆರೆಗೆ
Team Udayavani, Feb 21, 2019, 12:30 AM IST
ಮಂಗಳೂರು: ರೆಚಲ್ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರೊನಾಲ್ಡ್ ಮಾರ್ಟಿಸ್ ನಿರ್ಮಾಣದ, ಶರತ್ ಎಸ್. ಪೂಜಾರಿ ಬಗ್ಗತೋಟ ಇವರ ನಿರ್ದೇಶನದ ಕಂಬಳಬೆಟ್ಟು ಭಟ್ರೆನ ಮಗಳ್ ತುಳು ಚಿತ್ರ ಶುಕ್ರವಾರದಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿರ್ಮಾಪಕ ರೊನಾಲ್ಡ್ ಮಾರ್ಟಿಸ್, ಶುಕ್ರವಾರ ಬೆಳಗ್ಗೆ 9.45ಕ್ಕೆ ನಗರದ ಬಿಗ್ ಸಿನೆಮಾದಲ್ಲಿ ಚಿತ್ರದ ಬಿಡುಗಡೆ ಸಮಾರಂಭ ನಡೆಯಲಿದೆ.
ಮಂಗಳೂರಿನ ಬಿಗ್ ಸಿನೆಮಾ, ಪಿವಿಆರ್, ಸಿನೆಪೊಲೀಸ್, ಜ್ಯೋತಿ, ಮಣಿಪಾಲದ ಬಿಗ್ ಸಿನೆಮಾ, ಐನಾಕ್ಸ್, ಉಡುಪಿಯ ಆಶೀರ್ವಾದ, ಕಾರ್ಕಳದ ರಾಧಿಕಾ, ಪ್ಲಾನೆಟ್, ಮೂಡುಬಿದಿರೆಯ ಅಮರಶ್ರೀ, ಸುರತ್ಕಲ್ನ ನಟರಾಜ್, ಪುತ್ತೂರಿನ ಅರುಣಾ, ಸುಳ್ಯದ ಸಂತೋಷ್ ಥಿಯೇಟರ್ಗಳಲ್ಲಿ ಸಿನೆಮಾ ಪ್ರದರ್ಶನ ನಡೆಯಲಿದೆ ಎಂದರು.
ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಚಿತ್ರದ ತುಳು ಲಿಪಿಯಲ್ಲಿ ಟೈಟಲ್ ಬಿಡುಗಡೆಗೊಳಿಸಿ ಅನಂತರ ಆಶ್ರಮ ಮಕ್ಕಳೊಂದಿಗೆ ಚಿತ್ರ ಟೀಸರ್ ಹಾಗೂ ಸುಮಧುರ ಗೀತೆಗಳ ಅಡಿಯೋ ಲಾಂಚ್ ಮಾಡಿದ ಹೆಗ್ಗಳಿಕೆ ಪಡೆದ ಕಂಬಳಬೆಟ್ಟು ಭಟ್ರೆನ ಮಗಳ್ ತುಳು ಚಿತ್ರ ಮಹಿಳಾ ಪ್ರಧಾನ ಚಿತ್ರಕತೆಯನ್ನು ಹೊಂದಿದೆ.
ತುಳುನಾಡಿನ ಪ್ರಸಿದ್ಧ ಕಲಾವಿದರಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ರಮೇಶ್ ರೈ, ಪ್ರಕಾಶ್ ತುಮಿನಾಡು ಶಿವಪ್ರಕಾಶ್ ಪೂಂಜ ಹಾಗೂ ಹೊಸ ಪ್ರತಿಭೆಗಳ ಅದ್ಭುತ ನಟನೆ ಚಿತ್ರದಲ್ಲಿದೆ. ಇಂಪಾದ ಸಂಗೀತದೊಂದಿಗೆ ತುಳುನಾಡಿನ ಜನರು ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ಚಿತ್ರ ಇದಾಗಿದೆ ಎಂದರು.ನಟ ಶಂಕರ್ ಭಟ್, ಕಲಾವಿದ ರಮೇಶ್ ರೈ ಕುಕ್ಕುವಳ್ಳಿ, ಎಲ್.ಎನ್. ಪ್ರಕಾಶ್ ಗಟ್ಟಿ ಕಂಬಳಪದವು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.