ಆದಾಯವಿಲ್ಲದಿದ್ದರೂ ಅಬ್ಬರದ ಬಜೆಟ್‌


Team Udayavani, Feb 21, 2019, 6:27 AM IST

blore-1.jpg

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ಮಂಡಿಸಿದ 2019-20ನೇ ಸಾಲಿನ ಬಿಬಿಎಂಪಿ ಬಜೆಟ್‌ ಅವಾಸ್ತವಿಕ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ್ದಾರೆ.

ಬುಧವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಜೆಟ್‌ ಮಂಡನೆ ದಿನ ರಾಜ್ಯ ಸರ್ಕಾರದಿಂದ ಪತ್ರ ಬಂದಿದ್ದು, ಆದಾಯಕ್ಕೆ ತಕ್ಕಂತೆ ಬಜೆಟ್‌ ಮಂಡಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಆದರೆ, ನೀವು 5 ಸಾವಿರ ಕೋಟಿ ರೂ. ಆದಾಯ ಇಟ್ಟುಕೊಂಡು 10,688 ಕೋಟಿ ರೂ. ಬಜೆಟ್‌
ಮಂಡಿಸಿದ್ದೀರಿ. ಹೀಗಾಗಿ, ಇದು ಅವಾಸ್ತವಿಕ ಬಜೆಟ್‌ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದರು.

2018-19ನೇ ಸಾಲಿನ ಆಯವ್ಯಯ ಕಾರ್ಯ ನಿರ್ವಹಣಾ ವರದಿಯಂತೆ ಬಜೆಟ್‌ ಕಾರ್ಯಕ್ರಮಗಳು ಶೇ.10ರಷ್ಟೂ ಅನುಷ್ಠಾನಗೊಂಡಿಲ್ಲ. ಆದರೆ, ಜಾರಿಯಾಗದ ಯೋಜನೆಗಳನ್ನು ಜಾರಿಯಾಗಿವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿದರು.

 ಜಾಬ್‌ಕೋಡ್‌ ಬಜೆಟ್‌: ಕಳೆದ ಸಾಲಿನ ಬಜೆಟ್‌ನ ಯಾವುದೇ ಯೋಜನೆ ಅನುಷ್ಠಾನಗೊಳಿಸಿದೆ ಕೇವಲ ಜಾಬ್‌ ಸಂಖ್ಯೆ ನೀಡುವ ಮೂಲಕ 2018-19ನೇ ಸಾಲಿನ ಬಜೆಟ್‌ನ್ನು “ಜಾಬ್‌ಕೋಡ್‌ ಬಜೆಟ್‌’ ಮಾಡಿದ್ದಾರೆ. ಜತೆಗೆ ಸೈನಿಕರಿಗೆ ಆಸ್ತಿ ತೆರಿಗೆ ವಿನಾಯಿತಿ, ಟೋಟಲ್‌ ಸ್ಟೇಷನ್‌ ಸರ್ವೆ, ಸ್ಯಾನಿಟರಿ ಇನ್ಸಿನೇಟರ್‌ ನಂತಹ ಸಣ್ಣ ಯೋಜನೆಗಳನ್ನು ಜಾರಿಗೊಳಿಸಲೂ ಮೈತ್ರಿ ಆಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ಪದ್ಮನಾಭರೆಡ್ಡಿ, ತರಾಟೆಗೆ ತೆಗೆದುಕೊಂಡರು. ಬರುವ ಅನುದಾನದ ಮೇಲೆ 10,688 ಕೋಟಿ ರೂ. ಬಜೆಟ್‌ ಮಂಡಿಸಲಾಗಿದೆ. ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳಿಗೆ 2,954 ಕೋಟಿ ರೂ. ಚಾಲ್ತಿ ಕಾಮಗಾರಿಗಳಿಗೆ 4,167.87 ಕೋಟಿ ರೂ., ಕಾರ್ಯಾದೇಶ ನೀಡಿ ಕಾಮಗಾರಿ ಆರಂಭಿಸಬೇಕಿರುವ ಯೋಜನೆಗಳಿಗೆ 728.10 ಕೋಟಿ ರೂ., ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ 1,996.08 ಕೋಟಿ ರೂ. ಮೀಸಲಿಡಲಾಗಿದೆ.

ಇದರೊಂದಿಗೆ ಕಾಮಗಾರಿ ಸಂಖ್ಯೆ ನೀಡಿ ಟೆಂಡರ್‌ ಕರೆಯಬೇಕಿರುವ ಕಾಮಗಾರಿಗಳಿಗೆ 1,801.28 ಕೋಟಿ, ಆಡಳಿತಾತ್ಮಕ ಆದೇಶ ನೀಡಿ ಕಾಮಗಾರಿ ಸಂಖ್ಯೆ ನೀಡಬೇಕಿರುವ ಯೋಜನೆಗಳಿಗೆ 1,193.66 ಕೋಟಿ ರೂ. ಹಾಗೂ 2019-20ನೇ ಸಾಲಿಗೆ ಹೊಸ ಕಾಮಗಾರಿಗಳಿಗೆ 6886.75 ಕೋಟಿ ರೂ. ಸೇರಿ ಒಟ್ಟಾರೆ 19,728.57 ಕೋಟಿ ರೂ. ಅಗತ್ಯವಿರುವಾಗ 10,688 ಕೋಟಿ ರೂ.ಗಳ ಬಜೆಟ್‌ ಮಂಡಿಸಿರುವುದು ಅವಾಸ್ತವ ಎಂದು ಹೇಳಿದರು.

ಅವರದು ಮನ್‌ ಕೀ ಬಾತ್‌, ನಮ್ಮದು ಕಾಮ್‌ ಕೀ ಬಾತ್‌ ಬಜೆಟ್‌ ಮೇಲಿನ ಚರ್ಚೆಯ ಸಭೆಯಲ್ಲಿ ವಿಷಯ ಮಂಡಿಸಿದ ಆಡಳಿತ ಪಕ್ಷ ನಾಯಕ ಅಬ್ದುಲ್‌ ವಾಜಿದ್‌, 2019-20ನೇ ಸಾಲಿನ ಬಜೆಟ್‌ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಜತೆಗೆ ಕಳೆದ ಸಾಲಿನಲ್ಲಿ ನಾವು ಘೋಷಿಸಿದ ಯೋಜನೆಗಳ ಪೈಕಿ ಶೇ.73ರಷ್ಟು ಅನುಷ್ಠಾನಗೊಂಡಿವೆ. ಕಾಂಗ್ರೆಸ್‌-ಜೆಡಿಎಸ್‌ ಆಡಳಿತ ಬರುವ ಮೊದಲು ಶೇ.39-40ರಷ್ಟು ಮಾತ್ರ ಬಜೆಟ್‌ ಜಾರಿಯಾಗುತ್ತಿತ್ತು ಎಂದು ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದರು. ಬಜೆಟ್‌ನಲ್ಲಿ ಮಹಾಲಕ್ಷ್ಮೀ, ಅನ್ನಪೂರ್ಣೇಶ್ವರೀ, ಆರೋಗ್ಯ ಕವಚ ಸೇರಿದಂತೆ ಹತ್ತಾರು ಯೋಜನೆಗಳನ್ನು ಮಹಿಳೆಯರಿಗಾಗಿ ಘೋಷಿಸಿದ್ದೇವೆ. ಆದರೆ, ಮಹಿಳೆಯೊಬ್ಬರು ಮಂಡಿಸುತ್ತಿದ್ದ ಬಜೆಟ್‌ಗೆ ಅಡ್ಡಿಪಡಿಸುವ ಮೂಲಕ ಮಹಿಳೆಯರ ಬಗ್ಗೆ  ನಗೆಷ್ಟು ಗೌರವವಿದೆ ಎಂದು ಬಿಜೆಪಿ ಸಾಬೀತುಪಡಿಸಿದೆ. ಕೆಲವರು ಬೇಟಿ ಪಡಾವೋ, ಬೇಟಿ ಬಚಾವೋ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಾರೆ. ಆದರೆ, ನಾವು ಬಜೆಟ್‌ನಲ್ಲಿ ಯೋಜನೆಗಳನ್ನು ಘೋಷಿಸಿದ್ದೇವೆ. ಅವರದು “ಮನ್‌ ಕೀ ಬಾತ್‌’, ನಮ್ಮದು “ಕಾಮ್‌ ಕೀ ಬಾತ್‌’ ಎಂದು ಪ್ರತಿಪಕ್ಷದ ಸದಸ್ಯರಿಗೆ ಟಾಂಗ್‌ ನೀಡಿದರು.

ಅವರ ಶಾಪ ತಟ್ಟುತ್ತೆ
ಕಳೆದ ವರ್ಷ ಕಾರ್ಯ ನಿರ್ವಹಣಾ ವರದಿಯ ಕುರಿತು ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಬಜೆಟ್‌ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದ್ದ 1 ಕೋಟಿ ರೂ.ಗಳನ್ನು ಯಾವುದೇ ಕಾರ್ಯಕ್ರಮಗಳಿಗೆ ಬಳಸಿಲ್ಲ ಎಂದು ದೂರಿ ಆಡಳಿತ ಪಕ್ಷದ ಕಡೆಗೆ ತಿರುಗಿ ಚಪ್ಪಾಳೆ
ಹೊಡೆದು, ಅವರ ಶಾಪ ನಿಮಗೆ ತಟ್ಟುತ್ತದೆ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು. 

ಚರ್ಚೆಗೆ ನಿರಾಸಕ್ತಿ
ಪಾಲಿಕೆ ಬಜೆಟ್‌ ಮೇಲಿನ ಚರ್ಚೆಯ ಮೊದಲ ದಿನ ಬಹುತೇಕ ಪಾಲಿಕೆ ಸದಸ್ಯರು ಸಭೆಗೆ ಗೈರಾಗಿದ್ದರು. ಮೇಯರ್‌ ಗಂಗಾಂಬಿಕೆ, ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಸಭೆ ಬೆಳಗ್ಗೆ 10.30ರ ಬದಲು 11.45ಕ್ಕೆ ಶುರುವಾಯಿತು. ಈ ವೇಳೆ ಮೇಯರ್‌, ಉಪ ಮೇಯರ್‌
ಹೊರತುಪಡಿಸಿ ಕೇವಲ 40 ಸದಸ್ಯರು ಹಾಜರಿದ್ದರು. ಇನ್ನು ಮಧ್ಯಾಹ್ನದ ನಂತರ ಕಾಂಗ್ರೆಸ್‌ನ 15, ಬಿಜೆಪಿಯ 9 ಹಾಗೂ ಜೆಡಿಎಸ್‌ನ 4 ಸದಸ್ಯರು ಮಾತ್ರ ಹಾಜರಿದ್ದರು.

ರುಚಿಸದ ಇಂದಿರಾ ಕ್ಯಾಂಟೀನ್‌ ಊಟ
ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಆಹಾರ ಗುಣಮಟ್ಟದಿಂದ ಕೂಡಿದೆ ಎಂಬುದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಕಳೆದ ನಾಲ್ಕು ತಿಂಗಳಿಂದ ಬಿಬಿಎಂಪಿ ಸಾಮಾನ್ಯ ಸಭೆಗೆ ಪೂರೈಕೆಯಾಗುತ್ತಿದ್ದ ಕ್ಯಾಂಟೀನ್‌ ಊಟ ಸ್ಥಗಿತಗೊಂಡಿದ್ದು, ಬೇರೆಡೆಯಿಂದ ಸಸ್ಯಹಾರ, ಮಾಂಸಹಾರ ಪೂರೈಕೆಯಾಗಿದೆ. ಪಾಲಿಕೆ ಬಜೆಟ್‌ ಮೇಲೆ ಬುಧವಾರದಿಂದ ಚರ್ಚೆ ಆರಂಭವಾಗಿದ್ದು, ಮಧ್ಯಾಹ್ನದ ಊಟಕ್ಕೆ ಇಂದಿರಾ
ಕ್ಯಾಂಟೀನ್‌ ಊಟದ ಬದಲಿಗೆ ಈ ಹಿಂದಿನಂತೆ ಬೇರೆಡೆಯಿಂದ ಊಟ ತರಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಇಷ್ಟು ದಿನ ಖಾಲಿ ಹೊಡೆಯುತ್ತಿದ್ದ ಕೌನ್ಸಿಲ್‌ ಕ್ಯಾಂಟೀನ್‌ ಬುಧವಾರ ತುಂಬಿತ್ತು. 2018ರ ಅಕ್ಟೋಬರ್‌ನಿಂದ ಕೌನ್ಸಿಲ್‌ಗೆ ಇಂದಿರಾ ಕ್ಯಾಂಟೀನ್‌ ನಿಂದ ಆಹಾರ ಪೂರೈಕೆಯಾಗುತ್ತಿತ್ತು. ಅದರೆ,
ಮೇಯರ್‌, ಆಡಳಿತ ಪಕ್ಷ ನಾಯಕ ಹಾಗೂ ಆಯುಕ್ತರನ್ನು ಹೊರತುಪಡಿಸಿ ಯಾರೂ ಆ ಊಟ ಸೇವಿಸುತ್ತಿರಲಿಲ್ಲ.

ಮೇಯರ್‌ಗೇ ಮಾಹಿತಿ ಇಲ್ಲ: ಬುಧವಾರ ಮೇಯರ್‌ ಗಮನಕ್ಕೂ ಬಾರದೆ ಏಕಾಏಕಿ ಬೇರೆಡೆ ಯಿಂದ ಕ್ಯಾಂಟೀನ್‌ಗೆ ಆಹಾರ ಪೂರೈಕೆಯಾಗಿದೆ.  

ಟಾಪ್ ನ್ಯೂಸ್

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

14-fruad

Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.