ಫೇಸ್‌ಬುಕ್ ಮೂಲಕ ವಂಚಿಸಿದ ಆರೋಪಿ ಸೆರೆ
Team Udayavani, Feb 21, 2019, 6:54 AM IST
ಬೆಂಗಳೂರು: ಯುವತಿಯರ ಹೆಸರಲ್ಲಿ ಫೇಸ್ ಬುಕ್ ಖಾತೆ ತೆರೆದು, ಪುರುಷರೊಂದಿಗೆ “ವಾಯ್ಸ ಚೇಂಜರ್ ಆ್ಯಪ್’ ಬಳಸಿ ಯುವತಿಯಂತೆ ಮಾತನಾಡಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ತುಮಕೂರು ಮೂಲದ ವ್ಯಕ್ತಿಯೊಬ್ಬ ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ತುಮಕೂರಿನ ಕೆಎಚ್‌ಬಿ ಕಾಲೋನಿ ನಿವಾಸಿ ಪ್ರಖ್ಯಾತ್ ಅಲಿಯಾಸ್ ವಿನಯ್ (32) ಬಂಧಿತ. ಮಗುವಿನ ಶಸ್ತ್ರ ಚಿಕಿತ್ಸೆ ವೆಚ್ಚ ಭರಿಸಲು ಹಾಗೂ ತಾನು ಜೂಜಾಟದಲ್ಲಿ ಮಾಡಿಕೊಂಡಿದ್ದ ಸಾಲ ತೀರಿಸಲು ಈ ರೀತಿ ವಂಚನೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಆರೂಪಿಯು ಕೃತ್ಯಕ್ಕೆ ಬಳಸಿದ್ದ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.
ಕೋಳಿ ಅಂಗಡಿ ಹೊಂದಿರುವ ಆರೋಪಿ ಪ್ರಖ್ಯಾತ್, ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ವಿನುತಾ.ಎಸ್ ಹಾಗೂ ವಿಜೀತಾ ಎಂಬ ಹೆಸರುಗಳಲ್ಲಿ ನಕಲಿ ಖಾತೆಗಳನ್ನು ತೆರೆದು, ಪ್ರೊಫೈಲ್‌ಗೆ ಆಕರ್ಷಕ ಹುಡುಗಿಯರ ಫೋಟೋಗಳನ್ನು ಅಪ್‌ಲೋಡ್
ಮಾಡುತ್ತಿದ. ಬೆಂಗಳೂರಿನಲ್ಲೇ ವಾಸವಿರುವುದಾಗಿ ಬರೆದುಕೊಂಡಿದ್ದ ಆರೋಪಿ, ಕೆಲ ಪುರುಷರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ರಿಕ್ವೆಸ್ಟ್ ಅಕ್ಸೆಪ್ಟ್ಮಾ ಡಿಕೊಂಡ ಪುರುಷರ ಜತೆ ಸಲುಗೆಯಿಂದ ಚಾಟ್ ಮಾಡುತ್ತಿದ್ದ. ಈ ವೇಳೆ ಅವರ ಖಾಸಗಿ ವಿಚಾರ ತಿಳಿದುಕೊಂಡು, ಅವರೊಂದಿಗೆ ಡೇಟಿಂಗ್ ಮಾಡುವುದಾಗಿ ಆಸೆ ಹುಟ್ಟಿಸಿ, ಅವರ ತೀರಾ “ಖಾಸಗಿ’ ಭಾವಚಿತ್ರಗಳನ್ನು ತರಿಸಿಕೊಳ್ಳುತ್ತಿದ್ದ. ಬಳಿಕ, ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದ. ಒಂದೊಮ್ಮೆ ಅವರು ಹಣ ಕೊಡಲು ನಿರಾಕರಿಸಿದರೆ, ಅವರ “ಖಾಸಗಿ’ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸುತ್ತಿದ್ದ. ಇದರಿಂದ ಹೆದರಿದ ಕೆಲವರು ಆನ್ ಲೈನ್ ಮೂಲಕ ಆರೋಪಿ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದರು.
ಇತ್ತೀಚೆಗೆ ನಗರದ ವ್ಯಕ್ತಿಯೊಬ್ಬರಿಂದ ಆರೋಪಿ ಎರಡು ಲಕ್ಷ ರೂ. ಹಣ ಪಡೆದು ವಂಚಿಸಿದ್ದ. ಈ ಸಂಬಂಧ ವಂಚನೆಗೊಳಗಾದ ವ್ಯಕ್ತಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸ್ನೇಹಿತನಿಂದ ಪ್ರೇರಣೆ: ಇತ್ತೀಚೆಗೆ ಆರೋಪಿ ಪ್ರಖ್ಯಾತ್‌ಗೆ ಕರೆ ಮಾಡಿದ್ದ ಸ್ನೇಹಿತನೊಬ್ಬ, ವಾಯ್ಸ ಚೇಂಜರ್ ಆ್ಯಪ್ ಬಳಸಿ ಯುವತಿಯ ಧ್ವನಿಯಲ್ಲಿ ಮಾತನಾಡಿ ತಮಾಷೆ ಮಾಡಿದ್ದ. ಇದನ್ನೇ ಪ್ರೇರಣೆಯಾಗಿ ಪಡೆದುಕೊಂಡ ಆರೋಪಿ, ಗಂಡಸಿನ ಧ್ವನಿಯನ್ನು ಹೆಂಗಸಿನ ಧ್ವನಿಯನ್ನಾಗಿ ಮಾರ್ಪಡಿಸುವ ಆ್ಯಪ್‌ಗ್ಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಪುರುಷರ ಜತೆ ಇದೇ ಆ್ಯಪ್‌ಗ್ಳ ಮೂಲಕ ಮಾತನಾಡಿ ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಮಗುವಿನ ಶಸ್ತ್ರಚಿಕಿತ್ಸೆಗೆ ಹಣ: ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರನ್ನು ಬೆದರಿಸಿ ಎರಡು ಲಕ್ಷ ರೂ. ಪಡೆದಕೊಂಡಿದ್ದ ಆರೋಪಿ, ಆ ಹಣವನ್ನು ತನ್ನ ಮೊದಲ ಮಗುವಿನ ಶಸ್ತ್ರ ಚಿಕಿತ್ಸೆ, ಪತ್ನಿಯ ಎರಡನೇ ಹೆರಿಗೆ ಹಾಗೂ ಕುದುರೆ ರೇಸ್‌ಗಾಗಿ ಮಾಡಿಕೊಂಡಿದ್ದ ಸಾಲ ತೀರಿಸಲು ಬಳಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.
ಎಚ್ಚರದಿಂದ ಇರಲುಪೊಲೀಸರ ಮನವಿ ಯುವತಿಯರ ಹೆಸರು, ಅಂದವಾದಭಾವಚಿತ್ರ ಮತ್ತು ಖಾಸಗಿ ಮಾಹಿತಿ ಬಳಸಿಕೊಂಡು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಡೇಟಿಂಗ್ ವೆಬ್‌ಸೈಟ್ ಹಾಗೂ ಇತರೆ ಆ್ಯಪ್ ಗಳ ಮೂಲಕ ಕೆಲವರು ತಮ್ಮ ಖಾಸಗಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ನಂತರ ಬ್ಲಾಕ್‌ಮೇಲ್ ಮಾಡಿ ಹಣ ಪಡೆದು ವಂಚಿಸುಲೂ ಬಹುದು ಇಂಥವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೈಬರ್ ಕ್ರೈಂ ಪೊಲೀಸರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.