ಕೆಟ್ಟೋರ ಜಗತ್ತಲ್ಲಿ ಮತ್ತೆ ಡಾಲಿ
Team Udayavani, Feb 22, 2019, 12:30 AM IST
ಪ್ರಭು ಶ್ರೀನಿವಾಸ್ ನಿರ್ದೇಶನದ “ಗಣಪ’ ಸಿನಿಮಾ ನೋಡಿದ ಧನಂಜಯ್ ಫೋನ್ ಮಾಡಿ, ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರಂತೆ. ಕಟ್ ಮಾಡಿದರೆ, ಮೈಸೂರಿನಲ್ಲಿ ಧನಂಜಯ್ ಹಾಗೂ ಪ್ರಭು ಶ್ರೀನಿವಾಸ್ ಭೇಟಿಯಾಗಿ ಕಥೆಯೊಂದರ ಬಗ್ಗೆ ಚರ್ಚಿಸಿ, ಮುಂದೊಂದು ದಿನ ಸಿನಿಮಾ ಮಾಡುವ ಬಗ್ಗೆ ಮಾತುಕತೆ ಮಾಡಿದ್ದಾರೆ. ಇತ್ತ ಕಡೆ “ಟಗರು’ ಚಿತ್ರದ ಡಾಲಿ ಪಾತ್ರದ ಮೂಲಕ ನೆಗೆಟಿವ್ ಪಾತ್ರಗಳಲ್ಲಿ ಮಿಂಚುತ್ತಿರುವ ಧನಂಜಯ್‌ಗೆ ಡಾಲಿ ಎಂಬ ಟೈಟಲ್‌ನಡಿ ಸಿನಿಮಾ ಮಾಡಲು ಒಂದೊಳ್ಳೆಯ ಕಥೆ ಬೇಕಿತ್ತು. ಅಂದು ಪ್ರಭು ಶ್ರೀನಿವಾಸ್ ಹೇಳಿದ ಕಥೆಯನ್ನು ಇಷ್ಟಪಟ್ಟಿದ್ದ ಧನಂಜಯ್ ಈಗ ಆ ಕಥೆಗೆ ನಾಯಕರಾಗಿದ್ದಾರೆ. ಹೌದು, ಧನಂಜಯ್ “ಡಾಲಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. “ಎ ಬ್ಯಾಡ್ ಮೆನ್ಸ್ ವರ್ಲ್ಡ್’ ಎಂಬ ಟ್ಯಾಗ್‌ಲೈನ್ ಇದೆ.
ಸೂರಿ ನಿರ್ದೇಶನದ “ಟಗರು’ ಚಿತ್ರದ ಡಾಲಿ ಪಾತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಸ್ವತಃ ಸೂರಿಯೇ ಡಾಲಿ ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿದ್ದರಂತೆ. ಜೊತೆಗೆ ಯಾರಾದರೂ ಈ ಟೈಟಲ್‌ಗೆ ಹೊಂದಿಕೆಯಾಗುವಂತಹ ಸಿನಿಮಾ ಮಾಡುವವರಿದ್ದರೆ ಟೈಟಲ್ ಕೊಡುವುದಾಗಿಯೂ ಹೇಳುತ್ತಿದ್ದರಂತೆ. ಇತ್ತ ಕಡೆ ಪ್ರಭು ಶ್ರೀನಿವಾಸ್ ಅವರ ಕಥೆ ಕೇಳಿದ ಧನಂಜಯ್‌ಗೆ ಇದು ಡಾಲಿ ಟೈಟಲ್‌ಗೆ ಹೊಂದುತ್ತದೆ ಎನಿಸಿ, ಸೂರಿಯವರಲ್ಲಿ ಟೈಟಲ್ ಕೇಳಿ ಪಡೆದಿದ್ದಾರೆ. “ಡಾಲಿ’ ಎಂಬ ಟೈಟಲ್ ಇದ್ದ ಮೇಲೆ ಸಿನಿಮಾದ ಕಥೆ ಹೇಗಿರಬಹುದು ಎಂದು ಊಹಿಸಿಕೊಳ್ಳೋದು ಸುಲಭ. “ಟಗರು’ ಚಿತ್ರದ ಡಾಲಿ ಪಾತ್ರವೇ ಇಲ್ಲಿ ಮುಂದುವರೆಯುತ್ತದೆಯಂತೆ. ಚಿತ್ರತಂಡ ಹೇಳುವಂತೆ ಇದು ಸೆಲೆಬ್ರೇಶನ್ ಆಫ್ ಡಾಲಿ ಆಗಲಿದೆಯಂತೆ. ಡಾಲಿ ಪಾತ್ರವನ್ನು ಇಷ್ಟಪಟ್ಟ ಮಂದಿಗೆ ಈ ಸಿನಿಮಾವೂ ಇಷ್ಟವಾಗಲಿದೆ ಎನ್ನುವುದು ನಿರ್ದೇಶಕ ಪ್ರಭು ಶ್ರೀನಿವಾಸ್ ಮಾತು. ಈ ಚಿತ್ರವನ್ನು ಯೋಗೇಶ್ ನಾರಾಯಣ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಧನಂಜಯ್ ಅವರ “ಎರಡನೇ ಸಲ’ ಚಿತ್ರವನ್ನು ನಿರ್ಮಿಸಿದ್ದು, ಇದೇ ಯೋಗೇಶ್. ಆದರೆ, ಆ ಚಿತ್ರ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಯಿತು. ಜೊತೆಗೆ ಸಾಕಷ್ಟು ತಡವಾಯಿತು ಕೂಡಾ. “ಡಾಲಿ’ ಚಿತ್ರದ ಬಗ್ಗೆ ಮಾತನಾಡುವ ಯೋಗೇಶ್ ನಾರಾಯಣ್, “ಕಥೆ ತುಂಬಾ ಚೆನ್ನಾಗಿದೆ. ಸಿನಿಮಾ ಕೂಡಾ ಅದ್ಧೂರಿಯಾಗಿ ಮೂಡಿಬರಲಿದೆ. ಇದು ಪಂಚವಾರ್ಷಿಕ ಯೋಜನೆ ಆಗಲ್ಲ. ಈ ವರ್ಷವೇ ಬಿಡುಗಡೆ ಮಾಡುತ್ತೇವೆ’ ಎಂದರು.
ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡುವ ಧನಂಜಯ್, “ಪ್ರಭು ಶ್ರೀನಿವಾಸ್ ಅವರ ಹಿಂದಿನ ಸಿನಿಮಾಗಳನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿ ಕಟ್ಟಿಕೊಡುತ್ತಾರೆ. ಈ ಕಥೆ ಕೂಡಾ ಚೆನ್ನಾಗಿದೆ. ಇಲ್ಲಿ ಕೆಟ್ಟೋರ ಜಗತ್ತನ್ನು ತೋರಿಸಲಿದ್ದೇವೆ. ವಿಲನ್‌ಗಳ ನಡುವಿನ ಹೊಡೆದಾಟ ಸೇರಿದಂತೆ ಹಲವು ಅಂಶಗಳು ಇಲ್ಲಿವೆ. ಆ್ಯಕ್ಷನ್ ಜೊತೆಗೆ ಸಾಕಷ್ಟು ಫನ್ ಅಂಶಗಳು ಕೂಡಾ ಈ ಚಿತ್ರದಲ್ಲಿದೆ’ ಎನ್ನುತ್ತಾ “ಡಾಲಿ’ ಟೈಟಲ್ ಕೊಟ್ಟ ಸೂರಿಗೊಂದು ಥ್ಯಾಂಕ್ಸ್ ಹೇಳಿದರು.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.