ನಿರ್ವಹಣೆಯಿಲ್ಲದೆ ಸೊರಗಿದ ಬಾರಕೂರು ಕೋಟೆಕೆರೆ
Team Udayavani, Feb 22, 2019, 12:30 AM IST
ಬ್ರಹ್ಮಾವರ: ಐತಿಹಾಸಿಕ ಬಾರಕೂರು ಕೋಟೆಕೆರೆ ನಿರ್ವಹಣೆ ಇಲ್ಲದೆ ದುಃಸ್ಥಿತಿಗೆ ತಲುಪಿದ್ದು, ಜೀರ್ಣೋದ್ಧಾರ ನಿರೀಕ್ಷೆಯಲ್ಲಿದೆ. ಬಾರಕೂರಿನ ಪ್ರಧಾನ ಧಾರ್ಮಿಕ ಕೇಂದ್ರ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ಹಾಗೂ ಶ್ರೀ ಬಟ್ಟೆ ವಿನಾಯಕ ದೇವಸ್ಥಾನದ ಸಮೀಪ ಈ ಕೆರೆ ಇದೆ.
7ನೇ ಶತಮಾನದ್ದು!
ಬಾರಕೂರು ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ 7 ಶತಮಾನದಲ್ಲಿ ನಿರ್ಮಾಣಗೊಂಡಿದೆ ಎಂದು ಇತಿಹಾಸ ಹೇಳುತ್ತದೆ. ಅದೇ ಸಂದರ್ಭ ಕೋಟೆಕೆರೆಯೂ ರಚನೆ ಯಾಗಿತ್ತು ಎನ್ನಲಾಗಿದೆ.
ರಾಜರ ಆಳ್ವಿಕೆ
ರಾಜರ ಆಳ್ವಿಕೆಯಲ್ಲಿ ವೈಭವದ ದಿನಗಳನ್ನು ಕಂಡ ನಗರಿ ಬಾರಕೂರು. ಆಳುಪರು, ಪಾಂಡ್ಯರು, ಜೈನರು, ವಿಜಯನಗರ, ಸಾಮಂತ ರಾಜರು ಬಾರಕೂರನ್ನು ಆಳಿದ್ದರು. ಪ್ರತಿ ನಿತ್ಯ ಉತ್ಸವ ನಡೆಯಲಿ ಎನ್ನುವ ಉದ್ದೇಶದಿಂದ 365 ದೇವಸ್ಥಾನಗಳನ್ನು ನಿರ್ಮಿಸಲಾಗಿತ್ತು. ಕೃಷಿ, ನೀರಾವರಿ ಮತ್ತಿತರ ಉದ್ದೇಶದಿಂದ ಸಾಕಷ್ಟು ಕೆರೆಗಳನ್ನೂ ನಿರ್ಮಿಸಲಾಗಿತ್ತು. ಬಾರಕೂರಿನಲ್ಲಿ ಕೋಟೆ ಕೆರೆ ಜತೆಗೆ ಮೂಡುಕೇರಿ, ಚೌಳಿಕೇರಿಗಳಲ್ಲಿ ಬೃಹತ್ ಕೆರೆಗಳಿವೆ.
ಸಮೃದ್ಧ ಕೆರೆ
ಕೋಟೆಕೆರೆಯಲ್ಲಿ ಮೊದಲು ಸಮೃದ್ಧ ನೀರಿತ್ತು. ನೂರಾರು ಎಕ್ರೆ ಕೃಷಿ ಭೂಮಿಗೆ ಆಸರೆಯಾಗಿತ್ತು. ದೇವಸ್ಥಾನದ ಕೆರೆ ದೀಪೋತ್ಸವವೂ ವಿಜೃಂಭಣೆಯಿಂದ ನಡೆಯುತ್ತಿತ್ತು. ಬೃಹತ್ ಶಿಲಾ ಕಲ್ಲು ಗಳಿಂದ, ಕೆಂಪು ಕಲ್ಲಿನಿಂದ ಕಟ್ಟಿದ ಸುಂದರ ಕೆರೆ ಇದಾಗಿದೆ. ನೋಡಲೂ ರಮಣೀಯವಾಗಿದ್ದು, ಸುಮಾರು 15 ವರ್ಷಗಳ ಹಿಂದೆ ಸ್ವಲ್ಪ ಪ್ರಮಾಣದ ಮಣ್ಣು ತೆಗೆಯಲಾಗಿತ್ತು.
ಸಂಪೂರ್ಣ ನಿರ್ಲಕ್ಷ್ಯ
ಇತ್ತೀಚಿನ ವರ್ಷಗಳಲ್ಲಿ ಕರೆ ಸಂಪೂರ್ಣ ನಿರ್ಲಕ್ಷéಕ್ಕೊಳಗಾಗಿದೆ. ಗಿಡಗಂಟಿ ಆವರಿಸಿದ್ದು, ಆವರಣ ಕುಸಿಯ ತೊಡಗಿದೆ. ಹೂಳು ತುಂಬಿ ನೀರಿನ ಸಂಗ್ರಹ ಸಾಮರ್ಥ್ಯ ತೀವ್ರ ಇಳಿಕೆಯಾಗಿದೆ. ಕಸ, ತ್ಯಾಜ್ಯ ಎಸೆಯುವ ಕೊಂಪೆಯಾಗಿ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದೆ.
ವಿಪುಲ ಅವಕಾಶ
ಐತಿಹಾಸಿಕ ಕೋಟೆಕೆರೆ ಜೀರ್ಣೋ ದ್ಧಾರಕ್ಕೆ ವಿಫುಲ ಅವಕಾಶಗಳಿವೆ. ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದು ಪರಿಸರದ ಬಾವಿಗಳು ಬರಡಾಗಿವೆ. ಕೆರೆ ಅಭಿವೃದ್ದಿಗೊಳಿಸಿದರೆ ಕುಡಿಯುವ ನೀರಿಗೆ ಆಸರೆಯಾಗುತ್ತದೆ. ಸ್ವಚ್ಚಗೊಳಿಸಿ ಹೂಳು ತೆಗೆದರೆ ಮತ್ತೂಮ್ಮೆ ಸುಂದರ ಕೋಟೆ ಕೆರೆ ಕಾಣಲು ಸಾಧ್ಯವಿದೆ. ಕೋಟೆಕೆರೆ ಸಹಿತ ಬಾರಕೂರಿನ ಯಾವುದೇ ಕೆರೆ ಅಭಿವೃದ್ಧಿಗೊಳಿಸುವುದಾದರೂ ಶಾಶ್ವತ ಕಾಮಗಾರಿಯ ಅಗತ್ಯವಿದೆ. ಗುಣ ಮಟ್ಟದ ಕಾರ್ಯ ಕೈಗೊಂಡು ಸಮಗ್ರ ಅಭಿವೃದ್ಧಿಯಾಗಬೇಕು, ಬಾಕೂìರಿನ ಕೋಟೆಯಲ್ಲಿ ಇತ್ತೀಚೆಗೆ ಆಳುಪೋತ್ಸವ ವಿಜೃಂಭಣೆಯಿಂದ ಜರಗಿತ್ತು. ಇಂತಹ ಉತ್ಸವಗಳ ಜತೆ ಐತಿಹಾಸಿಕ ಸ್ಥಳ, ಕೆರೆಗಳ ಅಭಿವೃದ್ದಿಯೂ ಆಗಲಿ ಎಂದು ಜತೆಗೆ ಆಶಿಸಿದ್ದಾರೆ.
ರಸ್ತೆಗೆ ಮನವಿ
ಕೆರೆ ಸಮೀಪ ಹಲವು ಮನೆಗಳಿದ್ದು, ಇಲ್ಲಿನ ನಿವಾಸಿಗಳು ಕೆರೆ ದಂಡೆಯ ಕಾಲು ಹಾದಿಯನ್ನೇ ಆಶ್ರಯಿಸಿದ್ದಾರೆ. ಸಂಚಾರಕ್ಕೆ ಅನುಕೂಲವಾಗಿ ಕೆರೆ ಬದಿ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದ್ದಾರೆ.
ಪ್ರವಾಸಿ ತಾಣ
ಕೋಟೆ ಕೆರೆ ಅಭಿವೃದ್ದಿ ಪಡಿಸಿ ಪ್ರೇಕ್ಷಣೀಯ ಸ್ಥಳವಾಗಿಸಲು ವಿಫುಲ ಅವಕಾಶವಿದೆ. ಕೆರೆ ಸ್ವತ್ಛಗೊಳಿಸುವ ಜತೆಗೆ ಸುತ್ತಲೂ ನಡೆದಾಡಲು ದಾರಿ ಹಾಗೂ ಪಾರ್ಕ್ ನಿರ್ಮಿಸಿದರೆ ಉತ್ತಮ ಪ್ರವಾಸೀ ತಾಣವಾಗಲಿದೆ.
– ಬಿ. ಮಂಜುನಾಥ ರಾವ್, ಆಡಳಿತ ಮೊಕ್ತೇಸರರು,
ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬಾರಕೂರು
– ಪ್ರವೀಣ್ ಮುದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.