ರಾಜಕೀಯ ದಾಳ ಪುಲ್ವಾಮಾ
Team Udayavani, Feb 22, 2019, 12:30 AM IST
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿನ ದಾಳಿ ಬಗ್ಗೆ ರಾಜಕೀಯ ಮಾಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಭರವಸೆ ನೀಡಿದ್ದರು. ಆದರೂ ಈ ಪ್ರಕರಣವನ್ನು ರಾಜಕೀಯಲಾಭ ಪಡೆದುಕೊಳ್ಳಲು ಮಾಡಿಕೊಳ್ಳುವ ಪ್ರಯತ್ನ ನಿಂತಿಲ್ಲ. ಅದಕ್ಕೆ ಬಿಜೆಪಿ ನಾಯಕ, ಕೇಂದ್ರ ಸಚಿವ ರವಿಶಂಕರ ಪ್ರಸಾದ್ ತಿರುಗೇಟು ನೀಡಿದ್ದಾರೆ.
ಪುಲ್ವಾಮಾ ದಾಳಿ ನಡೆಯುತ್ತಿದ್ದ ವೇಳೆ, ಕಾರ್ಬೆಟ್ ನ್ಯಾಷನಲ್ ಪಾರ್ಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರಕ್ಕಾಗಿ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಫೆ. 14 ರಂದು ದಾಳಿ ವಿವರ ತಿಳಿದ ನಂತರ ಸಂಜೆಯವರೆಗೂ ಅಲ್ಲಿಯೇ ಇದ್ದರು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇವಾಲಾ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಜತೆಗೆ ಕೆಲವೊಂದು ಫೋಟೋಗಳನ್ನೂ ಪ್ರದರ್ಶಿಸಿದ್ದಾರೆ.
“ಪುಲ್ವಾಮಾದಲ್ಲಿ ದಾಳಿ ನಡೆದಿದ್ದು ಮಧ್ಯಾಹ್ನ 3.10ಕ್ಕೆ. ನಾವು ಸಂಜೆ 5.15 ಕ್ಕೆ ಪ್ರತಿಕ್ರಿಯೆ ನೀಡಿದೆ. ಘಟನೆಯ ಬಗ್ಗೆ ತಿಳಿದಿದ್ದರೂ, ಸಂಜೆಯವರೆಗೂ ಉತ್ತರಾಖಂಡದ ಕಾರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಮೋದಿ ಬೋಟ್ ರೈಡ್ ಮಾಡುತ್ತಾ ಕ್ಯಾಮೆರಾಗೆ ಪೋಸ್ ಕೊಡುತ್ತಿದ್ದರು. ಅಲ್ಲಿನ ಪಿಡಬ್ಲೂಡಿ ಅತಿಥಿ ಗೃಹದಲ್ಲಿ ಸಂಜೆ 7 ಗಂಟೆಗೆ ಚಹಾ ಸಮೋಸಾ ಸೇವಿಸಿದ್ದಾರೆ. ಇಡೀ ದೇಶವೇ ಆಗ ಏನನ್ನೂ ತಿನ್ನದೆ ಸೈನಿಕರಿಗಾಗಿ ಮಿಡಿಯುತ್ತಿತ್ತು’ ಎಂದು ಸುರ್ಜೆವಾಲ ಆರೋಪಿಸಿದ್ದಾರೆ.
ಹುತಾತ್ಮ ಪಟ್ಟವಿಲ್ಲ?: ಇದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ಯೋಧರು ಹುತಾತ್ಮರಾಗಿದ್ದರೂ ಅವರಿಗೆ ಹುತಾತ್ಮ ಪಟ್ಟವನ್ನು ಕೇಂದ್ರ ಸರಕಾರ ನೀಡಿಲ್ಲ ಎಂದು ಟೀಕಿಸಿದ್ದಾರೆ. ಅದರ ಪ್ರಧಾನಿ ನರೇಂದ್ರ ಮೋದಿ ಉದ್ಯಮಿ (ಅನಿಲ್ ಅಂಬಾನಿ)ಗೆ 30 ಸಾವಿರ ಕೋಟಿ ರೂ. ಅನ್ನು ಉದ್ಯಮಿಗೆ ನೀಡುತ್ತಿದ್ದಾರೆ. ಮೋದಿಯವರ ನವಭಾರತಕ್ಕೆ ಸ್ವಾಗತ ಎಂದು ಬರೆದು ಕೊಂಡಿದ್ದಾರೆ. ಜತೆಗೆ ಅನಿಲ್ ಅಂಭಾನಿಯವರ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವರದಿಗಳ ಪ್ರತಿಯನ್ನೂ ಕಾಂಗ್ರೆಸ್ ಅಧ್ಯಕ್ಷರು ಟ್ಯಾಗ್ ಮಾಡಿದ್ದಾರೆ.
ಆತಂಕ ಮೂಡಿಸುತ್ತಿದೆ: ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಕೂಡ ಟ್ವೀಟ್ ಮಾಡಿ ಭಾರತದ ಭಾಗವಾಗಿ ಕಾಶ್ಮೀರ ಇರಬೇಕೆಂದು ನಾವು ಬಯಸುತ್ತಿದ್ದೇವೆ. ಆದರೆ ಕಾಶ್ಮೀರಿಗರು ಭಾರತೀಯರಾ ಗಿರುವುದು ನಮಗೆ ಬೇಕಿಲ್ಲ ಎಂಬ ವಿಚಿತ್ರ ಪರಿಸ್ಥಿತಿ ಉಂಟಾಗಿದೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ. ಅಲ್ಲದೆ, ಕಾಶ್ಮೀರ ಉತ್ಪನ್ನಗಳನ್ನು ನಿರ್ಬಂಧಿಸಿ ಹಾಗೂ ಕಾಶ್ಮೀರ ಪ್ರವಾಸಕ್ಕೂ ಹೋಗಬೇಡಿ ಎಂದು ಮೇಘಾಲಯ ರಾಜ್ಯ ಪಾಲ ತಥಾಗತ ರಾಯ್ ಹೇಳಿಕೆಯನ್ನೂ ಅವರು ಉಲ್ಲೇಖೀಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್‌ನ ಮತ್ತೂಬ್ಬ ನಾಯಕ, ದೆಹಲಿಯ ಮಾಜಿ ಸಚಿವ ಹಾರೂನ್ ಯೂಸುಫ್ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ 3 ಕೆಜಿ ಬೀಫ್ನ ಮೂಲ ಪತ್ತೆ ಮಾಡುತ್ತಾರೆ. ಆದರೆ .ಯೋಧರನ್ನು ಬಲಿ ತೆಗೆದುಕೊಂಡ 350 ಕೆಜಿ ಆರ್‌ಡಿಎಕ್ಸ್ ಪತ್ತೆ ಹಚ್ಚಲು ಸಾಧ್ಯವಾಗಿಲ್ಲವೇ ಎಂದು ಆಕ್ಷೇಪಾರ್ಹವಾಗಿ ಬರೆದುಕೊಂಡಿದ್ದಾರೆ. ಈ ವಿಚಾರ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗುರಿಯಾಗಿದ್ದು, ಖಂಡಿಸಿದ್ದಾರೆ.
ದಾಳಿಗೆ ಪ್ರತ್ಯುತ್ತರ ನೀಡಿ
“ಭಾರತ ನಮ್ಮ ಮೇಲೆ ದಾಳಿ ನಡೆಸಿದರೆ ತಕ್ಕ ಪ್ರತ್ಯುತ್ತರ ನೀಡಿ’ ಎಂದು ಪಾಕಿಸ್ಥಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸೇನೆಗೆ ನಿರ್ದೇಶನ ನೀಡಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಗುರುವಾರ ಸೇನೆಯ ಹಿರಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ ಜತೆಗೆ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ. ಇದು ಹೊಸ ಪಾಕಿಸ್ಥಾನ. ನಮ್ಮ ಜನರನ್ನು ರಕ್ಷಿಸಲು ಸಾಮರ್ಥ್ಯವಿದೆ ಎನ್ನುವುದನ್ನು ನೆರೆಯ ರಾಷ್ಟ್ರಕ್ಕೆ ತೋರಿಸಿಕೊಡಬೇಕಾಗಿದೆ. ಭಾರತ ನಡೆಸುವ ದಾಳಿಯನ್ನು ಸಮರ್ಥವಾಗಿ ಎದುರಿಸಿ ಎಂದು ಹೇಳಿದ್ದಾರೆ. ಯಾವುದೇ ರೀತಿಯಲ್ಲಿ ಪಾಕಿಸ್ಥಾನ ಮತ್ತು ನಮ್ಮವರು ಪುಲ್ವಾಮಾದಲ್ಲಿ ಫೆ.14ರಂದು ನಡೆದ ದಾಳಿಯಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.
ಬಣ್ಣ ಬದಲಾಯಿಸಿದ ಕಾಂಗ್ರೆಸ್: ಸಚಿವ ಪ್ರಸಾದ್
ಪುಲ್ವಾಮಾ ದಾಳಿ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಜ ಬಣ್ಣ ಬದಲಾಯಿಸಿದೆ. ಈ ಸಮಯದಲ್ಲೂ ವಾಗ್ಧಾಳಿ ನಡೆಸುವ ಮೂಲಕ ನಮ್ಮ ಸೇನೆಯ ನೈತಿಕತೆಯನ್ನು ಕುಸಿಯುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದಲ್ಲಿ ಹುಲಿ ಸಂರಕ್ಷಣೆ ಕುರಿತ ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪುಲ್ವಾಮಾ ದಾಳಿ ನಡೆಯುತ್ತಿದ್ದರೂ ಮೋದಿ ಉತ್ತರಾಖಂಡದಲ್ಲಿದ್ದರು ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ನಮಗೆ ದಾಳಿ ನಡೆಯುತ್ತದೆ ಎಂದು ಮೊದಲೇ ಗೊತ್ತಿರಲಿಲ್ಲ. ಕಾಂಗ್ರೆಸ್‌ಗೆ ತಿಳಿದಿತ್ತೇ ಎಂದು ಪ್ರಸಾದ್ ತಿರುಗೇಟು ನೀಡಿದ್ದಾರೆ. ಘಟನೆಯ ಬಳಿಕ ಕಠಿಣ ಕ್ರಮ ಕೈಗೊಳ್ಳಲು ಭದ್ರತಾ ಪಡೆಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ. ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಕಾಶ್ಮೀರ ವಿಚಾರವನ್ನು ಸಮರ್ಥವಾಗಿ ನಿಭಾಯಿಸಿದ್ದರಿಂದಲೇ ಈಗ ಪರಿಸ್ಥಿತಿ ನಿಭಾಯಿಸಲು ಅಸಾಧ್ಯವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇಂದು ಸುಪ್ರೀಂಕೋರ್ಟಲ್ಲಿ ವಿಚಾರಣೆ
ಪುಲ್ವಾಮಾ ದಾಳಿ ನಂತರದಲ್ಲಿ ದೇಶದ ವಿವಿಧೆಡೆ ಕಾಶ್ಮೀರದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಿರುವುದರಿಂದ ಅವರ ರಕ್ಷಣೆಗೆ ಆಗ್ರಹಿಸಿ ಕೇಂದ್ರ ಸೂಚನೆ ನೀಡಬೇಕೆಂದು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ನಿರ್ಧಾರ ಕೈಗೊಂಡಿದೆ.
ವಿದ್ಯಾರ್ಥಿಗಳ ಮೇಲೆ ಹಲ್ಲೆ: ಮಹಾರಾಷ್ಟ್ರದ ಯವತ್ಮಾಳ್‌ನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಶಿವಸೇನೆಯ ಯುವ ವಿಭಾಗ ಯುವ ಸೇನೆಯ ಸದಸ್ಯರು ಎಂದು ಹೇಳಲಾಗಿರುವವರು ಹಲ್ಲೆ ನಡೆಸಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಛತ್ತೀಸ್‌ಘಡ ಬಿಜೆಪಿ ವೆಬ್‌ಸೈಟ್ ಹ್ಯಾಕ್
ಛತ್ತೀಸ್‌ಘಡ ಬಿಜೆಪಿ ಘಟಕದ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ. ಪಾಕಿಸ್ಥಾನ ಮೂಲದ ಹ್ಯಾಕರ್‌ಗಳು ಈ ಕೃತ್ಯವೆಸಗಿದ್ದಾರೆ. ಕೃತ್ಯವೆಸಗಿದವರೂ ಕೂಡ ತಾವು ಪಾಕಿಸ್ಥಾನದವರು ಎಂದು ಹೇಳಿಕೊಂಡಿದ್ದಾರೆ. ಇದರ ಜತೆಗೆ ಭಾರತದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ದಾಳಿಗಳು ನಡೆಯುತ್ತವೆ ಎಂದು ಬೆದರಿಕೆ ಇರುವ ಸಂದೇಶ ನೀಡಿದ್ದಾರೆ. ಕಾಶ್ಮೀರವನ್ನು ಮತ್ತೂಮ್ಮೆ ನಿಮ್ಮ ವಶಕ್ಕೆ ಪಡೆಯುತ್ತೀರಿ ಎಂಬ ಕನಸು ಬಿಟ್ಟು ಬಿಡಿ ಎಂದೂ ಬರೆದುಕೊಳ್ಳಲಾಗಿದೆ. ಛತ್ತೀಸ್‌ಘಡ ಬಿಜೆಪಿ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಡಿ.ಮಶೆ ಈ ಬಗ್ಗೆ ದೂರು ನೀಡಿದ್ದಾರೆ.
ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ
ಜಮ್ಮು ಮತ್ತು ಕಾಶ್ಮೀರದ ಪೂಂಛ… ಜಿಲ್ಲೆಯಲ್ಲಿ ಗುರುವಾರ ಗಡಿ ನಿಯಂತ್ರಣ ರೇಖೆಯ ಗುಂಟ ಕದನ ವಿರಾಮ ಉಲ್ಲಂ ಸಿ ಪಾಕಿಸ್ಥಾನದ ಸೇನೆ ಗುಂಡು ಹಾರಿಸಿದೆ. ಸತತ ಮೂರನೇ ದಿನ ಇಂಥ ಬೆಳವಣಿಗೆಯಾಗಿದೆ. ಅದಕ್ಕೆ ಭಾರತೀಯ ಸೇನೆ ಕೂಡ ಸೂಕ್ತ ಪ್ರತ್ಯುತ್ತರ ನೀಡಿದೆ. ರಜೌರಿ ಮತ್ತು ಪೂಂಛ… ಜಿಲ್ಲೆಗಳಲ್ಲಿ ಬುಧವಾರದಿಂದ ಈಚೆಗೆ ಆರು ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ.
ಜಮ್ಮುವಿನಲ್ಲಿ ಕರ್ಫ್ಯೂ ಹಿಂಪಡೆತ
ಪುಲ್ವಾಮಾ ದಾಳಿಯ ನಂತರದಲ್ಲಿ ಜಮ್ಮುವಿನಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದ್ದರಿಂದ ಅಧಿಕಾರಿಗಳು ಜಮ್ಮುವಿನಲ್ಲಿ ಕರ್ಫ್ಯೂ ಹಿಂಪಡೆದಿದ್ದಾರೆ. ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಮಾರುಕಟ್ಟೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಎಂದಿನಂತೆ ಕೆಲಸ ಮಾಡುತ್ತಿದೆ. ಶಾಲೆಗಳು ಪುನರಾರಂಭವಾಗಿದೆ. ಈ ಮೊದಲು ಕರ್ಫ್ಯೂ ಅವಧಿಯಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಿಂಪಡೆಯಲಾಗಿತ್ತು. ಈಗ ಇಡೀ ದಿನ ಕರ್ಫ್ಯೂ ಹಿಂಪಡೆಯಲಾಗಿದೆ. 2ಜಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.
ಪಾಕಿಸ್ಥಾನ ಮುರ್ದಾಬಾದ್ ಎಂದರೆ 10 ರೂ ಡಿಸ್ಕೌಂಟ್
“ಪಾಕಿಸ್ಥಾನ ಮುರ್ದಾಬಾದ್ ಎಂದು ಹೇಳಿ’ ಚಿಕನ್ ಲೆಗ್ ಪೀಸ್ ಮೇಲೆ 10 ರೂ.ಡಿಸ್ಕೌಂಟ್’- ಇದು ತಮಾಷೆಯಲ್ಲ. ದಕ್ಷಿಣ ಛತ್ತೀಸ್‌ಘಡದದ ಬಸ್ತಾರ್ ಜಿಲ್ಲೆಯ ಜಗದಾಳು³ರ ಪಟ್ಟಣದಲ್ಲಿರುವ ಮಾಂಸದ ಅಂಗಡಿ ಮಾಲೀಕ ಅಂಜಾಲ್ ಸಿಂಗ್‌ರ ಘೋಷಣೆ ಇದು. ನಮ್ಮ ನೆರೆಯ ದೇಶವಾಗಿರುವ ಪಾಕಿಸ್ಥಾನ ಯಾವತ್ತೂ ಮಾವೀಯತೆಗೆ ಬೆಲೆ ನೀಡಿಲ್ಲ. ಹೀಗಾಗಿ ಎಲ್ಲರೂ ಹೃದಯಾಂತರಾಳದಿಂದ ಪಾಕಿಸ್ಥಾನ ಮುರ್ದಾಬಾದ್ ಎಂದು ಹೇಳಬೇಕು ಎಂದು ಅಭಿಪುಪ್ರಾ ಯಪಟ್ಟಿದ್ದಾರೆ. 40 ಮಂದಿ ಯೋಧರು ಹುತಾತ್ಮರಾದದ್ದು ನಿಜಕ್ಕೂ ದುಃಖದ ಸಂಗತಿ ಎಂದು ಅವರು ಬಣ್ಣಿಸಿದ್ದಾರೆ.
ದಾಳಿಯಲ್ಲಿ ಮಡಿದ ಯೋಧರ ಕುಟುಂಬಗಳು ದುಃಖದಲ್ಲಿ ಮುಳುಗಿದ್ದರೆ, ಬಿಜೆಪಿ ವಿವಿಧ ರೀತಿಯ ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಿತ್ತು. ಆಗಿರುವ ಅನಾಹುತಕ್ಕೆ ಸರಕಾರದ ಬೇಜವಾಬ್ದಾರಿಯೇ ಕಾರಣವಾಗಿದೆ.
ಅಖೀಲೇಶ್ ಯಾದವ್, ಎಸ್‌ಪಿ ಅಧ್ಯಕ್ಷ
ದೇಶದಲ್ಲಿ ಸೈನಿಕರು ಹುತಾತ್ಮರಾಗುವುದು ಮತ್ತು ಉಗ್ರ ದಾಳಿಗಳು ಚುನಾವಣೆ ಗೆಲ್ಲಲು ಬಳಕೆಯಾಗುವ ಅಸ್ತ್ರವಾಗಿದೆ. ಇಂಥ ದೇಶ ವೈರಿಗಳನ್ನು ಹೇಗೆ ಎದುರಿಸುತ್ತದೆ? ಪಾಕ್‌ಗೆ ಬುದ್ಧಿ ಕಲಿಸುವ ಮಾತನಾಡಿದರೆ ಸಾಲದು, ಮೊದಲು ಆ ಕೆಲಸ ಮಾಡಿ.
ಉದ್ಧವ್ ಠಾಕ್ರೆ, ಶಿವಸೇನೆ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.