ಕ್ರೊಕಡೈಲ್ ಹಂಟರ್ ಸ್ಟೀವ್ ಇರ್ವಿನ್ ಗೆ ಡೂಡಲ್ ಗೌರವ
Team Udayavani, Feb 22, 2019, 3:18 AM IST
90ರ ದಶಕದಲ್ಲಿ ಮತ್ತು 2000ನೇ ಇಸವಿಯ ಪ್ರಾರಂಭದಲ್ಲಿ ಜಿಯೋಗ್ರಾಫಿಕ್, ಅನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ಈ ವ್ಯಕ್ತಿಯ ಮುಖ ಸಾಧಾರಣವಾಗಿ ಎಲ್ಲರಿಗೂ ಪರಿಚಯವಿದ್ದದ್ದೇ ಆಗಿತ್ತು. ಇವರೇ ಫೇಮಸ್ ಕ್ರೊಕಡೈಲ್ ಹಂಟರ್ ಅಂದರೆ ಮೊಸಳೆ ಬೇಟೆಗಾರ ಸ್ಟೀವ್ ಇರ್ವಿನ್. ತನ್ನ ವಿಶಿಷ್ಟ ಮ್ಯಾನರಿಸಂಗಳಿಂದ ಇರ್ವಿನ್ ಮೊಸಳೆಗಳನ್ನು ನೀರಿನಲ್ಲಿ, ದಡದಲ್ಲಿ ಹಿಡಿಯುವ ಶೈಲಿಯೇ ಜನಪ್ರಿಯವಾಗಿತ್ತು. ಹೀಗೆ ಪ್ರಾಣಿಪ್ರಿಯರ ಫೇವರಿಟ್ ಆಗಿದ್ದ ಇರ್ವಿನ್ ಅವರು 2006 ಸೆಪ್ಟಂಬರ್ 4ರಂದು ಸ್ಟಿಂಗ್ ರೇ ಫಿಶ್ ದಾಳಿಯಿಂದ ಮೃತಪಟ್ಟಿದ್ದರು. ‘ಓಶಿಯನ್ಸ್ ಡೆಡ್ಲಿಯೆಸ್ಟ್’ ಎಂಬ ಡಾಕ್ಯುಮೆಂಟರಿ ಚಿತ್ರೀಕರಣದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿತ್ತು ಮತ್ತು ಸಾಹಸಿ ಇರ್ವಿನ್ ಅವರ ದುರಂತ ಮರಣಕ್ಕೆ ವಿಶ್ವವೇ ದುಃಖಿಸಿತ್ತು.
ಫೆಬ್ರವರಿ 22 ಸ್ಟೀವ್ ಇರ್ವಿನ್ ಅವರ ಜನ್ಮದಿನ. ಈ ಸಂದರ್ಭಕ್ಕಾಗಿ ಗೂಗಲ್ ಇರ್ವಿನ್ ಅವರಿಗೆ ‘ಡೂಡಲ್’ ಗೌರವವನ್ನು ಸಲ್ಲಿಸಿದೆ. ಡೂಡಲ್ ನಲ್ಲಿ ಇರ್ವಿನ್ ಅವರು ತನ್ನ ತೋಳಿನಲ್ಲಿ ಮೊಸಳೆಯೊಂದನ್ನು ಹಿಡಿದುಕೊಂಡು ನಗುತ್ತಿದ್ದರೆ, ಆ ಮೊಸಳೆ ‘ಎಲ್’ ಅಕ್ಷರವನ್ನು ತನ್ನ ಬಾಯಲ್ಲಿ ಕಚ್ಚಿಕೊಂಡಿರುವಂತೆ ಕ್ರಿಯೇಟಿವ್ ಆಗಿ ಈ ಡೂಡಲ್ ಅನ್ನು ಗೂಗಲ್ ರಚಿಸಿದೆ.
1996 ರಿಂದ 2007ರವರೆಗೆ ಇರ್ವಿನ್ ಅವರ ‘ದಿ ಕ್ರೊಕಡೈಲ್ ಹಂಟರ್’ ಡಾಕ್ಯುಮಂಟರಿ ಸರಣಿಯು ವಿಶ್ವಾದ್ಯಂತ ಅಪಾರ ಜನಮನ್ನಣೆ ಪಡೆದುಕೊಂಡಿತ್ತು. ಇಷ್ಟು ಮಾತ್ರವಲ್ಲದೆ ಇರ್ವಿನ್ ಅವರು ತನ್ನ ಪತ್ನಿ ಟೆರ್ರಿ ಇರ್ವಿನ್ ಮತ್ತು ಇಬ್ಬರು ಮಕ್ಕಳೊಂದಿಗೆ ಹಲವಾರು ಟಿ.ವಿ. ಶೋಗಳನ್ನು ನಡೆಸಿಕೊಡುತ್ತಿದ್ದರು. ಇವುಗಳಲ್ಲಿ ಕ್ರೊಕ್ ಫೈಲ್ಸ್ (1999-2001), ದಿ ಕ್ರೊಕಡೈಲ್ ಹಂಟರ್ ಡೈರೀಸ್ (2002-2006) ಮತ್ತು ನ್ಯೂ ಬ್ರೀಡ್ ವೆಟ್ಸ್ (2005) ಸರಣಿಗಳು ಇರ್ವಿನ್ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿದ್ದವು. ಇಂತಹ ಪ್ರಾಣಿಪ್ರಿಯ ಸ್ಟೀವ್ ಇರ್ವಿನ್ ಇಂದು ಬದುಕಿದ್ದರೆ ಅವರಿಗೆ 57 ವರ್ಷಗಳಾಗಿರುತ್ತಿತ್ತು.
ತಮ್ಮ ಹೆತ್ತವರಿಂದ ಪ್ರಾರಂಭಿಸಲ್ಪಟ್ಟಿದ್ದ ಆಸ್ಟ್ರೇಲಿಯನ್ ಮೃಗಾಲಯದ ಒಡೆತನವನ್ನು ಇರ್ವಿನ್ ಅವರು ಹೊಂದಿದ್ದರು. ಈ ಮೃಗಾಲಯದಲ್ಲೇ ಇರ್ವಿನ್ ಅವರು ತಮ್ಮ ಪತ್ನಿಯನ್ನು ಪ್ರಥಮಬಾರಿ ಭೇಟಿಯಾಗಿದ್ದರು. ಇರ್ವಿನ್ ಕುಟುಂಬವೇ ವನ್ಯಜೀವಿಗಳು ಮತ್ತು ವನ್ಯಸ್ಥಳಗಳ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.