ಮಾತೃಭಾಷೆ ನಾಶವಾದರೆ ಕಲೆ, ಸಂಸ್ಕೃತಿ, ನಾಗರೀಕತೆ ನಾಶ
Team Udayavani, Feb 22, 2019, 7:26 AM IST
ಹನೂರು: ಮಾತೃಭಾಷೆ ನಾಶವಾದರೆ ಆ ಭಾಷೆಯನ್ನಾಡುವ ಜನಾಂಗದ ಕಲೆ, ಸಂಸ್ಕೃತಿ, ನಾಗರೀಕತೆ ಎಲ್ಲವೂ ನಾಶವಾಗುತ್ತದೆ. ಹೀಗಾಗಿ ಮಾತೃ ಭಾಷೆಯನ್ನು ಪ್ರೀತಿಸಿ ಎಂದು ಮೈಸೂರು ಒಂಟಿಕೊಪ್ಪಲು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸೇಸುನಾಥನ್ ತಿಳಿಸಿದರು.
ಮಲೆಮಹದೇಶ್ವರ ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಹನೂರು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ “ಗಡಿ ಪ್ರದೇಶದಲ್ಲಿ ಭಾಷೆ ಮತ್ತು ಶಿಕ್ಷಣ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಆಹಾರದಷ್ಟೇ ಮಾತೃಭಾಷೆ ಮುಖ್ಯ: ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಹಾಗೆಯೇ ಮಾತೃಭಾಷೆಯು ಅಷ್ಟೆ ಮುಖ್ಯ. ಈ ದಿಸೆಯಲ್ಲಿ ವಿಶ್ವದ ಹಲವು ರಾಷ್ಟ್ರಗಳು ಮಾತೃ ಭಾಷೆಯ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದೆ. ಪರಿಣಾಮ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಕೆಲವು ದೇಶಗಳು ಮಾತೃ ಭಾಷೆಯ ಶಿಕ್ಷಣ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಅಭಿವೃದ್ಧಿಯಲ್ಲಿ ಕುಂಠಿತಗೊಂಡಿವೆ.
ಹೀಗಾಗಿ ರಾಜ್ಯದಲ್ಲಿ ಮಾತೃಭಾಷೆಯ ಶಿಕ್ಷಣಕ್ಕೆ ಇನ್ನು ಹೆಚ್ಚಿನ ಒತ್ತನ್ನು ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡಿಗರು ಮಾತೃಭಾಷೆಯನ್ನು ಪ್ರೀತಿಸುವುದರ ಮೂಲಕ ನಾಡು, ನುಡಿಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಜತೆಗೆ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣಕ್ಕೆ ಕೊಡಿಸಬೇಕು ಎಂದು ಸಲಹೆ ನೀಡಿದರು.
ಅರಣ್ಯ ಸಂಪತ್ತು: ಹನೂರು ತಾಲೂಕಾಗಿ ರಚನೆಯಾಗಿದೆ. ಪ್ರಮುಖ ಧಾರ್ಮಿಕ ಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಹಾಗೂ ಚಿಕ್ಕಲ್ಲೂರು ತಾಲೂಕಿನ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಜನಪದ ಕಲೆಗೆ ಹೆಸರುವಾಸಿಯಾಗಿದ್ದು, ರಾಜ್ಯದ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ.
ಅಲ್ಲದೇ ಜನವಸತಿ ಪ್ರದೇಶಕ್ಕಿಂತ ಹೆಚ್ಚು ಅರಣ್ಯ ಪ್ರದೇಶದಿಂದ ಕೂಡಿದ್ದು, ಅಪರೂಪದ ಕಾಡು ಪ್ರಾಣಿಗಳು ಇಲ್ಲಿ ವಾಸವಾಗಿವೆ. ಅಲ್ಲದೇ ತಾಲೂಕಿನ ಈಶಾನ್ಯ ಭಾಗದಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ಪ್ರಾಕೃತಿಕವಾಗಿ ಸಮೃದ್ಧಿಯಿಂದ ಕೂಡಿದೆ. ಆದರೆ ಅಂತ್ಯಂತ ಹಿಂದುಳಿದ ತಾಲೂಕಾಗಿದೆ. ಆದ್ದರಿಂದ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದ್ದು, ಮಾತೃಭಾಷೆಯು ಮತ್ತಷ್ಟು ಹೊಂದಬೇಕಿದೆ ಎಂದರು.
ಬಳಿಕ ಗೋಪಿನಾಥಂ ಸರ್ಕಾರಿ ಶಾಲೆಯ ಶಿಕ್ಷಕ ಡಾ. ಮಹೇಂದ್ರ ಪಟೇಲ್ ಜನಸಾಮಾನ್ಯರ ಆರಾಧ್ಯ ದೈವ ಎಂಬ ವಿಚಾರ ಕುರಿತು ಮಾತನಾಡಿ, 77 ಮಲೆಗಳಲ್ಲಿ ನೆಲೆಸಿರುವ ಮಲೆಮಹದೇಶ್ವರರು ಜನಸಾಮಾನ್ಯರಿಗೆ ಮೊದಲ ಬಾರಿ ದರ್ಶನ ನೀಡುವುದರ ಮೂಲಕ ಹಲವು ಪವಾಡದಿಂದ ಅಷ್ಟೆçಶ್ವರ್ಯ ನೀಡಿದ್ದಾರೆ. ಈ ದಿಸೆಯಲ್ಲಿ ಮಹದೇಶ್ವರರನ್ನು ಜನಸಾಮಾನ್ಯರ ಆರಾಧ್ಯ ದೈವ ಎಂದು ಕರೆಯುತ್ತಾರೆ ಎಂದು ತಿಳಿಸಿದರು.
ಕವಿಗೋಷ್ಠಿ: ಹನೂರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಪದ ಕಲಾವಿದರು ಹಾಗೂ ಸಾಹಿತಿಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಜನಪದ ಸಾಹಿತ್ಯ ಶ್ರೀಮಂತವಾಗಿದೆ. ಸರ್ಕಾರ ಜನಪದ ಕಲಾವಿದರನ್ನು ಪ್ರೋತ್ಸಾಹಿಸುವುದರ ಮೂಲಕ ಜನಪದ ಕಲೆಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಯುವ ಸಾಹಿತಿ ಸ್ವಾಮಿ ಕವಿಗೋಷ್ಠಿಯಲ್ಲಿ ತಿಳಿಸಿದರು.
ಬಳಿಕ ಗೋವಿಂದರಾಜು, ವಿಜಯ, ಪ್ರತಾಪ್, ರಮೇಶ್, ರಂಗುನಾಯ್ಕ, ಸಿದ್ದರಾಜು, ಶುಭಮಂಗಳ, ಸಂತೋಷ್, ಸುರೇಶ್, ಗಿರೀಶ್ ಹಾಗೂ ರಾಜೇಂದ್ರ ಕವಿಗಳು ಕವನಗಳನ್ನು ವಾಚಿಸಿದರು. ಈ ಸಂದರ್ಭದಲ್ಲಿ ಬಂಡಳ್ಳಿ ಕಾಲೇಜಿನ ಪ್ರಾಂಶುಪಾಲ ಮುತುರಾಜು, ಬಸವರಾಜು, ಸಂಪನ್ಮೂಲ ವ್ಯಕ್ತಿ ಇದ್ವಾಂಡಿ ಶಿವಣ್ಣ, ಕರವೇ ಹನೂರು ಘಟಕಾಧ್ಯಕ್ಷ ವಿನೋದ್‌ಕುಮಾರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.