ಖಜಾನೆ-2 ತರಬೇತಿ ಕೇಂದ್ರಕ್ಕೆ ಚಾಲನೆ
Team Udayavani, Feb 22, 2019, 10:40 AM IST
ಕಾರವಾರ: ಸರ್ಕಾರದ ಹಣಕಾಸಿನ ವ್ಯವಹಾರಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಖಜಾನೆ -2 ತರಬೇತಿ ಕೇಂದ್ರ ಪ್ರಾರಂಭಿಸಲಾಗಿದೆ. ಇದರಿಂದ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರು ಬಿಲ್‌ಗಳನ್ನು ಮತ್ತು ವೇತನವನ್ನು ಕೆ-2 ವ್ಯವಸ್ಥೆಯ ಸೌಕರ್ಯ ಪಡೆಯಬಹುದು. ಕೆ-2 ವ್ಯವಸ್ಥೆಯ ತರಬೇತಿ ನೀಡಲು ಮೂವರು ಎಂಜಿನಿಯರ್‌ಗಳಿದ್ದು ಅವರು ಇಲ್ಲಿಗೆ ಬರುವ ಎಲ್ಲಾ ನೌಕರರಿಗೆ ನೆರವಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಮೊದಲ ಮಹಡಿಯಲ್ಲಿ ಪ್ರಾರಂಭವಾದ ನೂತನ ಕಚೇರಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಖಜಾನೆ ರಾಜ್ಯದಲ್ಲಿಯೇ ಮಾದರಿಯಾಗಿದೆ. ಇದೀಗ ಜಿಲ್ಲಾಧಿಕಾರಿ ಕಚೇರಿಯಲ್ಲೇ ತರಬೇತಿ ಕೇಂದ್ರ ಆರಂಭವಾಗಿರುವ ಕಾರಣ ಖಜಾನೆ-2ರಲ್ಲಿ ವ್ಯವಹರಿಸುವವರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಸೌಕರ್ಯ ಮತ್ತು ತರಬೇತಿ ಕೇಂದ್ರ ಕಾರವಾರದಲ್ಲಿ ಆರಂಭವಾದಂತಾಗಿದೆ ಎಂದರು.
ಕಾಗದ ರಹಿತ ಮತ್ತು ಚೆಕ್ ರಹಿತ ವಹಿವಾಟು: ಹಣಕಾಸಿನ ಎಲ್ಲ ವ್ಯವಹಾರಗಳನ್ನು, ವಿವಿಧ ಸರ್ಕಾರಿ ಇಲಾಖೆಗಳು ಖಜಾನೆ-2ರಲ್ಲಿಯೇ ಮಾಡುವಂತೆ ಸರ್ಕಾರ ಆದೇಶಿ 2 ವರ್ಷ ಕಳೆದಿವೆ. ಸರ್ಕಾರದಿಂದ ಹೊಸ ತಂತ್ರಾಂಶ ಒದಗಿಸಿ ಎರಡು ವರ್ಷಗಳು ಸಂದಿವೆ. ಆದರೂ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳು ಕೆ-2 ವ್ಯವಸ್ಥೆ ಅಡಿ ಬಂದಿರಲಿಲ್ಲ. ಹಾಗೂ ಕೆಲ ಇಲಾಖೆಗಳಲ್ಲಿ ಖಜಾನೆ-2ರಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ಕೆಲವು ತಾಂತ್ರಿಕ ತೊಂದರೆಗಳು, ಜ್ಞಾನದ ಕೊರತೆ ಇತ್ಯಾದಿ ಸಮಸ್ಯೆಗಳನ್ನು ಅನುಭವಿಸಬೇಕಾಗಿತ್ತು. ಇದನ್ನು ಅರಿತ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರು ಜಿಲ್ಲಾಡಳಿತ ಭವನದಲ್ಲಿಯೇ ಒಂದು ವಿಶೇಷ ತರಬೇತಿ ಕೇಂದ್ರ ತೆರೆಯುವ ಸಲಹೆ ನೀಡಿ ಕೊಠಡಿಯನ್ನು ಒದಗಿಸಿದ ಹಿನ್ನೆಲೆಯಲ್ಲಿ ಒಂದು ಸುಸಜ್ಜಿತ ಖಜಾನೆ-2 ಸೌಕರ್ಯ ಮತ್ತು ತರಬೇತಿ ಕೇಂದ್ರ ತೆರೆಯಲು ಅನುಕೂಲವಾಯಿತು ಎಂದು ಜಿಲ್ಲಾ ಖಜಾನೆ
ಉಪನಿರ್ದೇಶಕ ಸುನೀಲ್ ವಿಶ್ವನಾಥ್ ಮೂಗಿ ಹೇಳಿದರು.
ಖಜಾನೆ-2ರಲ್ಲಿ ಹಣಕಾಸಿನ ವ್ಯವಹಾರಗಳನ್ನು ಮಾಡುವ ಇಲಾಖೆಗಳಲ್ಲಿ ಕಂಪ್ಯೂಟರ್ ಸಮಸ್ಯೆ, ಮುದ್ರಣ ಯಂತ್ರದ ಸಮಸ್ಯೆ ಅಥವಾ ಜ್ಞಾನದ ಸಮಸ್ಯೆಯಿಂದ ಒಂದಿಲ್ಲೊಂದು ಸಮಸ್ಯೆಯಿಂದ ವಿಳಂಬಕ್ಕೆ ಕಾರಣವಾಗುತ್ತಿತ್ತು. ದಾಖಲೆಗಳು ಸರಿಯಿದ್ದರೂ ಮಾಡುವ ವಿಧಾನದಲ್ಲಿ ತಪ್ಪಾಗಿ ಖಜಾನೆಯಿಂದ ಆಕ್ಷೇಪಣೆಗೆ ಕಾರಣವಾಗುತ್ತಿತ್ತು. ಆ ಕಾರಣದಿಂದಲೇ ಈ ಸೌಲಭ್ಯ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲಾಗಿದ್ದು ಇಲ್ಲಿ ಕಂಪ್ಯೂಟರ್‌ಗಳು, ಮುದ್ರಣ ಯಂತ್ರಗಳು ಹಾಗೂ ಮೂರು ಮಂದಿ ಕಂಪ್ಯೂಟರ್ ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ. ಸಮಸ್ಯೆಯಿರುವ ಇಲಾಖೆ ಅಧಿಕಾರಿಗಳು ಈ ಕೇಂದ್ರದ ಉಪಯೋಗವನ್ನು ಸಂಪೂರ್ಣ ಉಚಿತವಾಗಿ ಪಡೆಯಬಹುದಾಗಿದೆ. ಅಲ್ಲದೆ ಸರ್ಕಾರದ ಇಲಾಖೆಗೆ ಸಾರ್ವಜನಿಕರು ಖಜಾನೆ-2ರಲ್ಲಿ ಡಿಡಿ ಚಲನ್ ತೆಗೆಯಲೂ ಈ ಕೇಂದ್ರವನ್ನು ಪಯೋಗಿಸಿಕೊಳ್ಳಬಹುದಾಗಿದೆ ಎಂದು ಸುನೀಲ್ ಮೂಗಿ ಹೇಳಿದರು. ಜಿಪಂ ಸಿಇಒ ಎಂ.ರೋಷನ್, ಎಸ್ಪಿ ವಿನಾಯಕ್ ಪಾಟೀಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.