ಬದುಕಿನ ಸೂರ್ಯೋದಯ-ಚಂದ್ರೋದಯ


Team Udayavani, Feb 23, 2019, 12:30 AM IST

22.jpg

ಸಕಲಜೀವಿಗಳ ಬದುಕೂ ಸೂರ್ಯನ ಉದಯಾಸ್ತವನ್ನು ಅವಲಂಬಿಸಿವೆ.  ಹಗಲು ಬೇಕು, ರಾತ್ರಿಯೂ ಬೇಕು. ಆಗ ಮಾತ್ರ ಜೀವನವು ಸರಿಯಾದ ಕ್ರಮದಲ್ಲಿ ಸಾಗುತ್ತದೆ. ಅಂದರೆ ಅಲ್ಲೊಂದು  ಚಲನೆ ಇರಬೇಕು; ಬದಲಾವಣೆ ಇರಬೇಕು. ಪೂರ್ವದಲ್ಲಿ ಉದಯಿಸಿ, ಪಶ್ಚಿಮದಲ್ಲಿ ಅಸ್ತಂಗತನಾಗುವ, ಸರಿಸುಮಾರು ಹನ್ನೆರಡು ಗಂಟೆಗಳ ಕಾಲ ಭೂಮಿಯು ಬೆಳಕನ್ನು ಪಡೆಯಲು ಕಾರಣವಾಗುವ ಸೂರ್ಯ ಎಲ್ಲ ಆಗುಹೋಗುಗಳಿಗೆ ಕಾರಣನಾಗಿದ್ದಾನೆ. 

ಲೌಕಿಕ ಬದುಕಿನಲ್ಲಿ ಮುಕ್ತಿ ಪಡೆಯುವ ಜೀವನವಿಧಾನವನ್ನು ನಿರ್ದೇಶಿಸಿಕೊಳ್ಳುವಾಗ ಚಂದ್ರನಿಂದ ಸಂಪಾದಿಸಬೇಕಾದ ಜ್ಞಾನಗಳೂ ಸಾಕಷ್ಟಿವೆ. ಮೊತ್ತ ಮೊದಲು ಈ ಜಗತ್ತಿನಲ್ಲಿ ಯಾವುದೂ ನನ್ನದಲ್ಲ, ನಾನು ಎಂಬುದೂ ನನ್ನದಲ್ಲ ಎಂದು ಅರಿತುಕೊಳ್ಳಬೇಕು. ಚಂದ್ರನೇ ಇದಕ್ಕೆ ಸ್ಪಷ್ಟ ಉದಾಹರಣೆ. ಚಂದ್ರನ ಬೆಳದಿಂಗಳು ಅವನ ಸ್ವಂತದ್ದಲ್ಲ. ಅದು ಸೂರ್ಯನಿಂದ ಪ್ರತಿಬಿಂಬಿತವಾದ ಬೆಳಕು. ಅದರೆ ಎಳೆಯ ಮಗುವೂ ಚಂದ್ರನನ್ನು ಗುರುತಿಸುವುದು ಮಾತ್ರ ಆ ಬೆಳದಿಂಗಳಿನಿಂದಾಗಿಯೇ. ಇಲ್ಲವಾದಲ್ಲಿ ಚಂದ್ರನಿರುವುದು ಬರಿಗಣ್ಣಿಗೆ ನಮಗೆ ಕಾಣದು. ನಾವು ಇದ್ದೇವೆ ಎಂಬುದು ನಮಗೆ ಗೊತ್ತಿರುತ್ತದೆ. ಆದರೆ ನಾವು ಏನಾಗಿದ್ದೇವೆ? ಎಂಬುದನ್ನು ಪರರೇ ಹೇಳಬೇಕು. ನಮ್ಮ ಇರುವಿಕೆ ಎಂಬುದು ಪ್ರಸ್ತುತವಾಗಿರಬೇಕು. ಅದಕ್ಕೆ ನಾನು-ನನ್ನದು ಎಂಬ ಮೋಹವನ್ನು ಸಂಪೂರ್ಣವಾಗಿ ಬಿಡಬೇಕು.

ಚಂದ್ರನು ಸೂರ್ಯನಿಂದ ಪ್ರತಿಬಿಂಬಿಸುವ ಬೆಳಕನ್ನು ತನ್ನೊಳಗೇ ಇಟ್ಟುಕೊಳ್ಳಲಾರ. ಹುಣ್ಣಿಮೆಯ ದಿನ ಸಂಪೂರ್ಣವಾಗಿ, ಆ ಬಳಿಕ ಕಡಿಮೆಯಾಗುತ್ತ ಹೋಗಿ ಕೊನೆಗೆ ಎಷ್ಟು ದೊರೆಯುವುದೋ ಅಷ್ಟನ್ನೂ ಜಗತ್ತಿಗೆ ಹಂಚಿಬಿಡುತ್ತಾನೆ. ನಾವು ಕೂಡ ಅಂತಹ ಉದಾರತೆಯನ್ನು ಬೆಳೆಸಿಕೊಳ್ಳಬೇಕು. ನಾವು ಪಡೆದದ್ದನ್ನು ಹನಿಯಾದರೂ ಹಂಚುವ ಸತ್ಕರ್ಮದಲ್ಲಿ ತೊಡಗಿಕೊಳ್ಳಬೇಕು. ಎಲ್ಲರೂ ನನಗಿಂತಲೂ ಉತ್ತಮರು ಎಂದು ತಿಳಿದು ಗೌರವಾದರದ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು. ಸೂರ್ಯನಿರುವಾಗ ಚಂದ್ರ ಕಾಣಿಸುವುದಿಲ್ಲ. ಅಮಾವಾಸ್ಯೆಯ ದಿನ ಸೂರ್ಯನ ಬೆಳಕು ಚಂದ್ರನನ್ನು ಮುಟ್ಟುವುದೂ ಇಲ್ಲ. ನಮ್ಮ ಬದುಕಿನ ಒಳಗುಟ್ಟೇ ಇದು. ಚಂದ್ರನಂತೆ ನಾವು ಕೂಡ ಪರಾವಲಂಬಿಗಳೇ. ಪ್ರತಿ ಜೀವಿಯೂ ಬದುಕಿದೆ ಎಂದರೆ ಅದು ಇನ್ನೊಂದು ವಸ್ತುವನ್ನೋ ಜೀವಿಯನ್ನೂ ಅವಲಂಬಿಸಿದೆ  ಎಂದೇ ಅರ್ಥ. ಗಿಡಕ್ಕೆ ಮಣ್ಣು ಬೇಕು.  ಹುಲಿಗೆ ಆಹಾರಕ್ಕೆ ಇನ್ನೊಂದು ಪ್ರಾಣಿ ಬೇಕು, ದನಕ್ಕೆ ಹುಲ್ಲು, ಕಪ್ಪೆಗೆ ಹುಳ-ಹುಪ್ಪಟೆ, ಹೀಗೆ ಎಲ್ಲವೂ ಪರಾವಲಂಬಿಯೇ.  ಹಾಗಾಗಿ, ಸ್ವಂತವಾಗಿ ಪ್ರಕೃತಿಯಿಂದ ಹೊರಗಿದ್ದು ಬದುಕಲಾಗದು. 

ಚಂದ್ರನೂ ಜಾಣ. ಆತ ಪ್ರಖರವಾದ ಬೆಳಕಿರುವ ಸೂರ್ಯನಿಂದಲೇ ಬೆಳಕನ್ನು ಪ್ರತಿಬಿಂಬಿಸುತ್ತಾನೆ. ಅವನಿಗೂ ಗೊತ್ತು ಯಾವುದನ್ನು ಎಲ್ಲಿಂದ ಪಡೆದು, ಹೇಗೆ ಹಂಚಬೇಕೆಂಬುದು. ಇದು ನಮಗೆ ಮಾರ್ಗದರ್ಶಿ. ಹೀಗೆ ಚಂದ್ರನು ಜ್ಞಾನವನ್ನು ಹೇಗೆ ಗಳಿಸಬೇಕು ಮತ್ತು ಹೇಗೆ ಪರರಿಗೆ ಹಂಚಬೇಕು ಎಂಬುದನ್ನು ತಿಳಿಸುವ ಗುರುವಾಗಿ¨ªಾನೆ. 

ಏಳನೆಯ ಗುರು 
ಸೂರ್ಯನನ್ನು ಕಣ್ಣಿಗೆ ಕಾಣುವ ದೇವರು ಎಂದು ಈ ಮೊದಲೇ ಹೇಳಿ¨ªೆ. ಸೂರ್ಯನು ಬಾರದೇ ಹೋದರೆ ಏನೆಲ್ಲ ಆಗಬಹುದು? ಜೀವನವು ನಿಂತೇ ಹೋಗುತ್ತದೆ. ಇವತ್ತೂ ಇಲ್ಲ; ನಾಳೆಯೂ ಇಲ್ಲ. ಸಕಲಜೀವಿಗಳ ಬದುಕೂ ಸೂರ್ಯನ ಉದಯಾಸ್ತವನ್ನು ಅವಲಂಬಿಸಿವೆ.  ಹಗಲು ಬೇಕು, ರಾತ್ರಿಯೂ ಬೇಕು. ಆಗ ಮಾತ್ರ ಜೀವನವು ಸರಿಯಾದ ಕ್ರಮದಲ್ಲಿ ಸಾಗುತ್ತದೆ. ಅಂದರೆ ಅÇÉೊಂದು ಚಲನೆ ಇರಬೇಕು; ಬದಲಾವಣೆ ಇರಬೇಕು. ಪೂರ್ವದಲ್ಲಿ ಉದಯಿಸಿ, ಪಶ್ಚಿಮದಲ್ಲಿ ಅಸ್ತಂಗತನಾಗುವ, ಸರಿಸುಮಾರು ಹನ್ನೆರಡು ಗಂಟೆಗಳ ಕಾಲ ಭೂಮಿಯು ಬೆಳಕನ್ನು ಪಡೆಯಲು ಕಾರಣವಾಗುವ ಸೂರ್ಯ ಎಲ್ಲ ಆಗುಹೋಗುಗಳಿಗೆ ಕಾರಣನಾಗಿ¨ªಾನೆ. ಹಾಗಾಗಿ, ಆತನನ್ನು ನಾವು ನಮಸ್ಕರಿಸುತ್ತೇವೆ. ಮದ್ಭಾಗವತವು ಸೂರ್ಯನಿಂದ ಕಲಿತುಕೊಳ್ಳಬೇಕಾದ ಜ್ಞಾನದ ಬಗ್ಗೆ ಹೇಳುತ್ತದೆ.

ಗುಣೈರ್ಗುಣಾನುಪಾದತ್ತೇ ಯಥಾಕಾಲಂ ವಿಮುಂಚತಿ |
ನ ತೇಷು ಯುಜ್ಯತೇ ಯೋಗೀ ಗೋಭಿರ್ಗಾ ಇವ ಗೋಪತಿಃ ||
ಸೂರ್ಯನು ಸಮಯಕ್ಕೆ ಸರಿಯಾಗಿ ತನ್ನ ಕಿರಣಗಳಿಂದ ಸಮುದ್ರದ ನೀರನ್ನು ಸಂಗ್ರಹಿಸಿ, ಅದು ಆಗಸದಲ್ಲಿ ಮೋಡವಾಗುವಂತಿ ಮಾಡಿ, ಆಮೇಲೆ ಅದನ್ನು ಮಳೆಯಾಗಿ ಸುರಿಸುತ್ತಾನೆ. ಆದರೆ ಈ ಸಂಗ್ರಹಿಸಿದ ನೀರಿನಲ್ಲಿ ಆತ ಆಸಕ್ತಿಯನ್ನು ಹೊಂದಿರುವುದಿಲ್ಲ ಮತ್ತು ಅದನ್ನು ಭೂಮಿಗೆ ಸುರಿಯುವಾಗ ತ್ಯಾಗದ ಭಾವನೆಯನ್ನೇ ಹೊಂದಿರುತ್ತಾನೆ. ಯೋಗಿಯಾದವನೂ ಈ ಸೂರ್ಯನಂತೆ ಗ್ರಹಿಸುವಾಗ ಮತ್ತು ಅದನ್ನು ತ್ಯಜಿಸುವಾಗ ಎಲ್ಲಿಯೂ ಆಸಕ್ತನಾಗಿರಬಾರದು ಎಂಬುದು ಇದರ ಅರ್ಥ.

ಸೂರ್ಯನಿಂದ ಮುಖ್ಯವಾಗಿ ತಿಳಿಯಬೇಕಾದ ಜ್ಞಾನವೆಂದರೆ ಸಂಗ್ರಹ ಮತ್ತು ತ್ಯಾಗ. ಇಲ್ಲಿ ಸೂರ್ಯ ಪರರಿಗಾಗಿ, ಅಂದರೆ ಭೂಮಿಗಾಗಿ ನೀರನ್ನು ತನ್ನಲ್ಲಿ ಸಂಗ್ರಹಿಸುತ್ತಾನೆ. ಆದರೆ ಆ ನೀರು ತನ್ನದ್ದಲ್ಲ ಎಂಬಂತೆ ಮತ್ತೆ ಭೂಮಿಗೆ ಮಳೆಯ ರೂಪದಲ್ಲಿ ಸುರಿಸುತ್ತಾನೆ. ಇದು ಅವನ ಗುಣ. ಇಂಥ ಗುಣವನ್ನು ನಾವುಕೂಡ ಬೆಳಸಿಕೊಳ್ಳಬೇಕು. ಸಂಪತ್ತು, ಧನ ಕನಕ, ಜ್ಞಾನವನ್ನು ಸಂಪಾದಿಸುವಾಗಲೇ ಅವು ನನ್ನದಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಅಂತೆಯೇ ಅವುಗಳನ್ನು ಪರರಿಗೆ ಹಂಚುವ ಬುದ್ಧಿಯನ್ನೂ ಬೆಳಸಿಕೊಳ್ಳಬೇಕು. ಎಲ್ಲಿ ನಾವು ಸಂಗ್ರಹಿಸಿದ್ದು ನಮ್ಮದಲ್ಲ ಎಂದುಕೊಳ್ಳುತ್ತೇವೆಯೋ ಅಲ್ಲಿ ನಾವು ಏನನ್ನೂ ತ್ಯಜಿಸಲು ಸಿದ್ಧರಿರುತ್ತೇವೆ. ಹೂವೊಂದು ಅರಳುತ್ತಿದೆ ಎಂದರೆ ಅದಕ್ಕೆ ಸೂರ್ಯನ ಬೆಳಕು ಬಿದ್ದಿದೇ ಅಂತಲೇ ಅರ್ಥ.

ಆತ್ಮವನ್ನು ಅರಿತುಕೊಳ್ಳುವಲ್ಲಿ ಸೂರ್ಯನು ಅತ್ಯುತ್ತಮ ಉದಾಹರಣೆ. ಹಲವಾರು ಪಾತ್ರೆಗಳಲ್ಲಿ ನೀರನ್ನು ತುಂಬಿಸಿಟ್ಟು ಸೂರ್ಯನ ಪ್ರತಿಬಿಂಬವನ್ನು ನೋಡಿದಾಗ ಎಷ್ಟು ಪಾತ್ರೆಗಳಿವೆಯೋ ಅಷ್ಟು ಸಂಖ್ಯೆಯ ಸೂರ್ಯನು ಕಾಣಿಸಿಕೊಳ್ಳುತ್ತಾನೆ. ಆದರೆ, ನಿಜವಾಗಿ ಇರುವುದು ಒಂದೇ ಸೂರ್ಯ. ಆತ್ಮವೂ ಇದೇ ರೀತಿ ಒಂದೇ ಆಗಿದ್ದು ನಮ್ಮ ಸ್ಥೂಲಬುದ್ಧಿಯಿಂದಾಗಿ ಒಂದೇ ಆತ್ಮದ ಸತ್ಯವನ್ನು ಅರಿಯಲಾರೆವು. ಸೂರ್ಯನ ಈ ದೃಷ್ಟಾಂತದಿಂದ ಆತ್ಮದ ಅಖಂಡತೆಯನ್ನು ಅರಿತುಕೊಳಬೇಕು.
ಬೆಳಕು ಎಂಬುದು ಸತ್ಯವನ್ನು ತೋರು ಎಂದೂ ಅರ್ಥೈಸಬಹುದಾದ ಪದ. ನಮ್ಮಲ್ಲಿ ಸೂರ್ಯನಂತಹ ಬೆಳಕಿರಬೇಕು. ಅಂದರೆ ಸತ್ಯವನ್ನು ಪಾಲಿಸುವ, ಸತ್ಯವನ್ನು ತೋರಿಸುವ ಪಾರದರ್ಶಕವಾದ ಜೀವನ ಪದ್ಧತಿ ನಮ್ಮದಾಗಬೇಕು.

..ಮುಂದುವರಿಯುವುದು.

ವಿಷ್ಣು ಭಟ್‌ ಹೊಸ್ಮನೆ

ಟಾಪ್ ನ್ಯೂಸ್

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

8

Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5

Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್‌

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

6-

Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ

4

Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.