ಕನ್ನಡ ಶಾಲೆ ಉಳಿಸುವಲ್ಲಿ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ
Team Udayavani, Feb 23, 2019, 12:30 AM IST
ಅಜೆಕಾರು: ಕಡ್ತಲ ಗ್ರಾ.ಪಂ. ವ್ಯಾಪ್ತಿಯ ಎಳ್ಳಾರೆ ಗ್ರಾಮದಲ್ಲಿರುವ ಅನುದಾನಿತ ಕನ್ನಡ ಶಾಲೆಯಲ್ಲಿ ಶಿಕ್ಷಕರೇ ಇಲ್ಲದೆ ಸ್ಥಳೀಯ ವಿದ್ಯಾರ್ಥಿಗಳು ಕಳೆದ 2 ವರ್ಷಗಳಿಂದ ಅತಿಥಿ ಉಪನ್ಯಾಸಕರನ್ನೇ ಅವಲಂಭಿಸಿದ್ದಾರೆ.
ಅನುದಾನಿತ ಕನ್ನಡ ಶಾಲೆಯನ್ನು ಸರಕಾರಿ ಶಾಲೆಯನ್ನಾಗಿ ಪರಿವರ್ತಿಸಿ ಶಿಕ್ಷಕರನ್ನು ನೇಮಿಸುವಂತೆ ಕಳೆದ 2 ವರ್ಷಗಳಿಂದ ಶಾಲೆಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ನಿರಂತರ ಮನವಿ ಮಾಡುತ್ತಾ ಬಂದರೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯತೋರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕಡ್ತಲ ಗ್ರಾ.ಪಂ.ದ ದ್ವಿತೀಯ ಹಂತದ ಗ್ರಾಮ ಸಭೆಯು ಶುಕ್ರವಾರ ಕಡ್ತಲ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.ಎಳ್ಳಾರೆ ಗ್ರಾಮದಲ್ಲಿ ಇರುವ ಈ ಖಾಸಗಿ ಶಾಲೆಯು ಸ್ಥಳೀಯ ವಿದ್ಯಾರ್ಥಿಗಳಿಗೆ ಇರುವ ಏಕೈಕ ಶಾಲೆಯಾಗಿದ್ದು ಸರಕಾರ ಹಾಗೂ ಶಿಕ್ಷಣ ಇಲಾಖೆಯ ನಿರ್ಲಕ್ಷದಿಂದಾಗಿ ಶಾಲೆ ಮುಚ್ಚುವ ಹಂತಕ್ಕೆ ಬಂದಿದೆ. ಒಂದು ವೇಳೆ ಶಾಲೆ ಮುಚ್ಚುಗಡೆಗೊಂಡಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬೇಕಿದೆ ಎಂದು ಗ್ರಾಮಸ್ಥರು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಇಲಾಖೆಯ ಅಧಿಕಾರಿ ನಾಗಾರ್ಜುನರವರು ಮಾತನಾಡಿ ಖಾಸಗಿ ಶಾಲೆಯನ್ನು ಸರಕಾರಿ ಶಾಲೆಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಸರಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂದರು.
ಆಗ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಕಳೆದ 2 ವರ್ಷಗಳಿಂದ ಖಾಯಂ ಶಿಕ್ಷಕರೇ ಇಲ್ಲದ ಸಮಸ್ಯೆ ಇದ್ದರೂ ಶಿಕ್ಷಣಾಧಿಕಾರಿಗಳು ಈ ಶಾಲೆಗೆ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಪಂ. ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ವಹಿಸಿ, ಗ್ರಾಮದಲ್ಲಿ ಪಂಚ ಸೇತುವೆ, ಕಿಂಡಿ ಅಣೆಕಟ್ಟು, ಪ್ರಮುಖ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಜನತೆಯ ಮೂಲ ಬೇಡಿಕೆಗಳನ್ನು ದಾಖಲೆಯ ಪ್ರಮಾಣದಲ್ಲಿ ಈಡೇರಿಸಲಾಗಿದ್ದು ಮಾದರಿ ಪಂ.ಆಗಿ ನಿರ್ಮಿಸಲಾಗಿದೆ ಎಂದರು.
ದೊಂಡೇರಂಗಡಿ ಪ್ರಾ. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚಂದ್ರಿಕಾ ಕಿಣಿ ಮಾತನಾಡಿ ಪಂ.ವ್ಯಾಪ್ತಿಯಲ್ಲಿ ಕೋತಿ ಶವ ಪತ್ತೆಯಾಗಿದ್ದರೂ ಮಂಗನ ಕಾಯಿಲೆಯ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಗ್ರಾಮಸ್ಥರು ಈ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಆದರೂ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದರು.
ದಬುìಜೆ, ಮೂಡಬೆಟ್ಟು, ಗರಡಿ ರಸ್ತೆ ಅಭಿವೃದ್ದಿಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.ತಾ.ಪಂ. ಸದಸ್ಯರಾದ ಸುಲತಾ ನಾಯ್ಕ, ಗ್ರಾ.ಪಂ. ಸದಸ್ಯರಾದ ಸತೀಶ್ ಪೂಜಾರಿ, ಸುಕೇಶ್ ಹೆಗ್ಡೆ, ಜಯಂತಿ, ಸುಮಿತ್ರ, ಹರೀಶ್, ಅಶೋಕ್, ಸುಧೀರ್, ಲಲಿತಾ, ರತ್ನಾವತಿ, ಗ್ರಾಮ ಕರಣಿಕರಾದ ಪ್ರಶಾಂತ್, ಅರಣ್ಯ ಇಲಾಖೆಯ ಅಧಿಕಾರಿ ಶೋಭಾ ಉಪ್ಪಾರ್ ಉಪಸ್ಥಿತರಿದ್ದರು.
ಪಿಡಿಒ ಫರ್ಜಾನಾ ಎಂ. ಆರ್ಥಿಕ ವರ್ಷದ ವರದಿ ಮಂಡಿಸಿ ತೆರಿಗೆ ಹಾಗೂ ನೀರಿನ ಬಿಲ್ಲು ಪಾವತಿಸಲು ಮನವಿ ಮಾಡಿದರು. ಬೇಸಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸುವುದರಿಂದ ಮಿತವಾಗಿ ನೀರು ಬಳಕೆ ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ಶಿಕ್ಷಣ, ಆರೋಗ್ಯ, ಅರಣ್ಯಾ, ಕಂದಾಯ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾಮಸ್ಥರ ಪರವಾಗಿ ದೇವೇಂದ್ರ ಕಾಮತ್, ದಯಾನಂದ ಹೆಗ್ಡೆ ಮಾತನಾಡಿದರು.
ಸಭೆಯಲ್ಲಿ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು. ಪಿಡಿಒ ಫರ್ಜಾನ ಎಂ. ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.