ರಾಜ್ಯದಲ್ಲಿ ಮೂರು ಕಡೆ ರೈಸ್‌ ಪಾರ್ಕ್‌ ಆರಂಭ: ಸಚಿವ ಜಯರಾಜನ್‌


Team Udayavani, Feb 23, 2019, 12:30 AM IST

22ksde10.jpg

ಕಾಸರಗೋಡು: ಕೃಷಿ ವಲಯಕ್ಕೆ ಹೆಚ್ಚುವರಿ ಮಹತ್ವ ನೀಡುವ ಮೂಲಕ ರಾಜ್ಯದಲ್ಲಿ ಮೂರು ಕಡೆ ರೈಸ್‌ ಪಾರ್ಕ್‌ ಆರಂಭಿಸಲಾಗುವುದು ಎಂದು ರಾಜ್ಯ ಉದ್ದಿಮೆ ಸಚಿವ ಇ.ಪಿ. ಜಯರಾಜನ್‌ ಹೇಳಿದರು.

ರಾಜ್ಯ ಸರಕಾರದ ಒಂದು ಸಾವಿರ ದಿನ ಪೂರೈಸಿದ ಅಂಗವಾಗಿ ನಡೆಯುತ್ತಿರುವ ಸರಣಿ ಕಾರ್ಯಕ್ರಮಗಳ ಅಂಗವಾಗಿ ಉದ್ದಿಮೆ ಇಲಾಖೆ, ಜಿಲ್ಲಾ ಉದ್ದಿಮೆ ಕೇಂದ್ರ ಜಂಟಿ ವತಿಯಿಂದ ಪಡನ್ನಕ್ಕಾಡ್‌ ಬೇಕಲ ಕ್ಲಬ್‌ನಲ್ಲಿ ನಡೆದ ಹೂಡಿಕೆದಾರರ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಮೂಲಕ ರಾಜ್ಯದಲ್ಲಿ ಉತ್ಪಾದಿ ಸಲಾಗುವ ಪೂರ್ಣ ಪ್ರಮಾಣದ ಅಕ್ಕಿ ಯನ್ನು ಸಂಸ್ಕರಿಸಿ 25 ಕಿಲೋದ ಚೀಲ ವಾಗಿಸಿ, ಕನ್ಸೂÂಮರ್‌ ಫೆಡ್‌ಗೆ ವಿತರಿಸ ಲಾಗುವುದು. ಹೆಚ್ಚುವರಿ ಉಳಿ ಯುವ ಅಕ್ಕಿಯನ್ನು ಇತರೆಡೆಗೆ ಮಾರಾಟ ಮಾಡ ಲಾಗುವುದು ಎಂದರು. ಪಾಲಾ^ಟ್‌ ನೆಲ್ಲರ, ಕುಟ್ಟನಾಡ್‌, ತೃಶ್ಶೂರು ಪ್ರದೇಶಗಳಲ್ಲಿ ರೈಸ್‌ ಪಾರ್ಕ್‌ ಆರಂಭಿಸಲಾಗುವುದು. ಭತ್ತವನ್ನು ಸುಟ್ಟು ಅದರ ಅವಿಶಿಷ್ಟಗಳನ್ನು ರಫ್ತು ಮಾಡುವ ಕ್ರಮವನ್ನೂ ಶೀಘ್ರದಲ್ಲಿ ಆರಂಭಿಸಲಾಗುವುದು. ಕೃಷಿ ಇಲಾಖೆಯೊಂದಿಗೆ ಕೈಜೋಡಿಸಿ ಒಂದು ವಾರ್ಡ್‌ಗೆ ತಲಾ 75 ತೆಂಗಿನ ಸಸಿಗಳಂತೆ ವಿತರಣೆ ನಡೆಸಿ, ಆ ಮೂಲಕ 3 ವರ್ಷಗಳಲ್ಲಿ 10 ಲಕ್ಷ ತೆಂಗಿನ ಸಸಿಗಳನ್ನು ಉತ್ಪಾದಿಸಲಾಗುವುದು. ಮಲಬಾರ್‌ ಬ್ರಾಂಡ್‌ ಕಾಫಿ ವಯನಾಡ್‌ನ‌ಲ್ಲಿ ಉತ್ಪಾದಿಸಲಾಗುವುದು. ಈ ಮೂಲಕ ಕಾರ್ಬನ್‌ ಫ್ರೀ ಕಾಫಿಯನ್ನು ಉತ್ತಮ ಬೆಲೆಗೆ ಮಾರಾಟ ನಡೆಸಲು ಸಾಧ್ಯ. ರಾಜ್ಯವನ್ನು ರಬ್ಬರ್‌ ಕೇಂದ್ರಿತ ಉದ್ಯಮ ಕೇಂದ್ರವಾಗಿಸಲಾಗುವುದು ಎಂದರು.

ಕಾಸರಗೋಡಿನಿಂದ ತಿರುವನಂತ ಪುರದ ವರೆಗೆ 4 ತಾಸುಗಳಲ್ಲಿ 150 ಕಿ.ಮೀ. ವೇಗದಲ್ಲಿ ಸಂಚರಿಸುವ ಅತಿವೇಗ ರೈಲ್ವೇ ಯೋಜನೆ ಜಾರಿಗೊಳಿಸಲಾಗುವುದು. ಇದರ ಕಾಮಗಾರಿ 2021-22ರಲ್ಲಿ ಆರಂಭಿಸ ಲಾಗುವುದು. 7 ವರ್ಷಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದವರು ಭರವಸೆ ವ್ಯಕ್ತಪಡಿಸಿದರು.

ವಿದ್ಯುತ್‌ ಬಳಕೆ ಕಡಿತಗೊಳಿಸುವ ನಿಟ್ಟಿನಲ್ಲಿ 65 ಲಕ್ಷ ಎಲ್‌.ಇ.ಡಿ. ಬಲ್ಬ್ ವಿತರಿಸಲಾಗುವುದು. ಅಡುಗೆ ಅನಿಲ ವಿತರಣೆ ವಲಯದಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ ಎಂದವರು ತಿಳಿಸಿದರು.

ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿರುವ ವೇಳೆ ಜನತೆಗೆ ನೀಡಿದ್ದ ಭರವಸೆಗಳೆಲ್ಲವೂ ಈಡೇರಿವೆ. ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿಗಿರುವ ಅನೇಕ ಯೋಜನೆಗಳು ಜಾರಿಗೊಂಡಿವೆ. ಶಿಲಾನ್ಯಾಸಕ್ಕಷ್ಟೇ ಸೀಮಿತವಾಗದೆ ಆರಂಭಿಸಿದ ಎಲ್ಲ ಯೋಜನೆಗಳನ್ನೂ ಪೂರ್ಣಗೊಳಿಸಲು ಸರಕಾರ ಪ್ರಾಮಾ ಣಿಕ ಯತ್ನ ನಡೆಸಿ ಯಶಸ್ವಿಯಾಗಿದೆ. ಕಾಂಞಂಗಾಡ್‌ ನಗರಸಭೆಯ ಪುದುಕೈ ಗ್ರಾಮದಿಂದ 4.31 ಎಕರೆ ಜಾಗ, ಮಡಿಕೈ ಗ್ರಾ. ಪಂ.ನಿಂದ ನೀಡಲಾದ ಜಾಗ ಮಡಿಕೈ ಉದ್ದಿಮೆ ಪಾರ್ಕ್‌ ಆರಂಭಿಸಲು ಉದ್ದಿಮೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.

ರಾಜ್ಯ ಕಂದಾಯ ಸಚಿವ ಇ. ಚಂದ್ರ ಶೇಖರನ್‌ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧಿಕಾರಿ ಡಾ| ಸಜಿತ್‌ಬಾಬು ವರದಿ ವಾಚಿಸಿದರು. ಶಾಸಕ ಎಂ. ರಾಜಗೋಪಾಲನ್‌, ಕಾಂಞಂಗಾಡ್‌ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷೆ ಎಂ.ಗೌರಿ, ನೀಲೇಶ್ವರ ನಗರಸಭೆ ಅಧ್ಯಕ್ಷ ಪ್ರೊ| ಪಿ. ಜಯರಾಜನ್‌, ಮಡಿಕೈ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಎಂ. ಗೌರಿ, ನೀಲೇಶ್ವರ ನಗರಸಭೆ ಅಧ್ಯಕ್ಷ ಪ್ರೊ| ಪಿ. ಜಯರಾಜನ್‌, ಮಡಿಕೈ ಗ್ರಾ. ಪಂ. ಅಧ್ಯಕ್ಷ ಸಿ. ಪ್ರಭಾಕರನ್‌, ಕಾಂಞಂಗಾಡ್‌ ನಗರಸಭೆ ಉಪಾಧ್ಯಕ್ಷೆ ಎನ್‌. ಸುಲೈಖಾ, ಕುಟುಂಬಶ್ರೀ ಆಡಳಿತ ಸಮಿತಿ ಸದಸ್ಯೆ ಬೇಬಿ ಬಾಲಕೃಷ್ಣನ್‌, ಕೆಎಸ್‌ಎಸ್‌ಐಎ ಅಧ್ಯಕ್ಷೆ ಸಿ. ಬಿಂದೂ, ಕೆ.ಇ. ಇಮಾನ್ಯುವೆಲ್‌ ಮೊದಲಾದವರು ಉಪಸ್ಥಿತರಿದ್ದರು.

ಕಾಸರಗೋಡನ್ನು ಬೃಹತ್‌ ವಾಣಿಜ್ಯ ಕೇಂದ್ರವಾಗಿ ಬದಲಿಸಲು ಕ್ರಮ : ಸಚಿವ ಇ. ಚಂದ್ರಶೇಖರನ್‌
ಕಾಸರಗೋಡು ಜಿಲ್ಲೆಯನ್ನು ಬೃಹತ್‌ ವಾಣಿಜ್ಯ ಕೇಂದ್ರವಾಗಿ, ಕಾಂಞಂಗಾಡನ್ನು ದೊಡ್ಡ ಉದ್ಯಮ ನಗರವಾಗಿ ಬದಲಿಸುವ ಕ್ರಮ ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್‌ ತಿಳಿಸಿದರು.ಪಡನ್ನಕಾಡಿನ ಬೇಕಲ ಕ್ಲಬ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಹೂಡಿಕೆದಾರರ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೂತನ ಉದ್ದಿಮೆ ನೀತಿಗಳ ಪ್ರಕಾರ ಅನೇಕ ಬದಲಾವಣೆ ಸಾಧ್ಯತೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಉದ್ಯಮ ಕ್ಷೇತ್ರದಲ್ಲೂ ಅಪಾರ ನಿರೀಕ್ಷೆ ಮೂಡಿದೆ. ನೂತನವಾಗಿ ಉದ್ದಿಮೆ ಆರಂಭಿಸಲು ಆಸಕ್ತ‌ರಿಗೆ ಆನ್‌ಲೈನ್‌ ಮೂಲಕ ತಿಂಗಳಲ್ಲಿ ಪರವಾನಿಗೆ ಲಭಿಸಲು ಕ್ರಮಕೈಗೊಳ್ಳಲಾಗಿದೆ. ಮಡಿಕೈಯಲ್ಲಿ 99 ಎಕ್ರೆ ಕಂದಾಯ ಜಾಗ ಉದ್ದಿಮೆ ವಲಯಕ್ಕೆ ಹಸ್ತಾಂತರಗೊಂಡಿದ್ದು, ಜಿಲ್ಲೆಯ ಉದ್ಯಮ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಉದ್ಯಮ ಕೇಂದ್ರಕ್ಕೆ ಜಾಗ ಹಸ್ತಾಂತರ 
ಸಮಾರಂಭದಲ್ಲಿ ಮಡಿಕೈ ಉದ್ಯಮ ಕೇಂದ್ರಕ್ಕಾಗಿ ಜಾಗ ಹಸ್ತಾಂತರ ನಡೆಯಿತು. ಕಂದಾಯ ಸಚಿವ ಇ. ಚಂದ್ರಶೇಖರನ್‌ ಅವರು ಸಚಿವ ಇ.ಪಿ.ಜಯರಾಜನ್‌ ಅವರಿಗೆ ಹಸ್ತಾಂತರಿಸಿದರು. ಜಿಲ್ಲೆಯಲ್ಲಿ 2018-19 ನೇ ವರ್ಷದ ಉದ್ದಿಮೆ ಆರಂಭಕ್ಕೆ ಸಹಾಯ ವಿತರಣೆ ನಡೆಯಿತು. ಕಾಂಞಂಗಾಡ್‌ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್‌ ಸ್ವಾಗತಿಸಿದರು. ವಿವಿಧ ವಿಷಯಗಳಲ್ಲಿ ತರಗತಿ ನಡೆಯಿತು.

ಟಾಪ್ ನ್ಯೂಸ್

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

1

Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.