ಎಎಚ್‌ಎಲ್, ಎಂ.ಕೆ-3 ಧ್ರುವ್ ಸೇನೆಗೆ ಹಸ್ತಾಂತರ
Team Udayavani, Feb 23, 2019, 6:23 AM IST
ಬೆಂಗಳೂರು: ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆ (ಎಚ್‌ಎಎಲ್) ಸಿದ್ಧಪಡಿಸಿರುವ ಸುಧಾರಿತ ಲಘು ಹೆಲಿಕ್ಯಾಪ್ಟರ್ (ಎಎಚ್‌ಎಲ್) ಎಂಕೆ-3 (ಧ್ರುವ್)ಗಳನ್ನು ಭಾರತೀಯ ಸೇನೆಗೆ ಶುಕ್ರವಾರ ಹಸ್ತಾಂತರಿಸಿದೆ.
ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಎಚ್‌ಎಎಲ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಅವರು, ಧ್ರುವ್ ಹೆಲಿಕಾಪ್ಟರ್‌ಗಳ ಮಾದರಿಯನ್ನು ಸೇನೆಯ ವಿಮಾನಯಾನ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಕನ್ವಲ್ ಕುಮಾರ್ ಅವರಿಗೆ ಹಸ್ತಾಂತರಿಸಿದರು. ಎಚ್‌ಎಎಲ್ ಹೆಲಿಕ್ಯಾಪ್ಟರ್ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ವಿ.ಎಸ್. ಭಾಸ್ಕರ್ ಉಪಸ್ಥಿತರಿದ್ದರು.
ಎಚ್‌ಎಎಲ್ 2017ರಲ್ಲಿ 22 ಎಎಲ್‌ಎಚ್ ಎಂಕೆ-3 ಹಾಗೂ 18 ಎಎಲ್‌ಎಚ್-4 ಧ್ರುವ್ ಹೆಲಿಕ್ಯಾಪ್ಟರ್ ಸೇರಿದಂತೆ 40 ಧ್ರುವ್ ಹೆಲಿಕ್ಯಾಪ್ಟರ್ ಪೂರೈಸಲು ಸೇನೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಮೊದಲ ಹಂತವಾಗಿ 3 ಧ್ರುವ್ ಹೆಲಿಕ್ಯಾಪ್ಟರ್‌ಗಳನ್ನು ಸೇನೆಗೆ ನೀಡಲಾಯಿತು.
ಎಂಕೆ-4 ರುದ್ರ ಹೆಲಿಕ್ಯಾಪ್ಟರ್‌ಗಳು ಅಭಿವೃದ್ಧಿ ಹಂತದಲ್ಲಿದ್ದು, ಅಭಿವೃದ್ಧಿ ಪೂರ್ಣಗೊಂಡಿರುವ ಎಎಲ್‌ಎಚ್ ಎಂಕೆ-3 ಧ್ರುವ್ ಪೈಕಿ 3 ಹೆಲಿಕ್ಯಾಪ್ಟರ್‌ಗಳನ್ನು ಶುಕ್ರವಾರ ಹಸ್ತಾಂತರಿಸಿದೆ. ಉಳಿದ 19 ಹೆಲಿಕಾಪ್ಟರ್‌ಗಳನ್ನು ಜೂನ್ ಅಥವಾ ಜುಲೈ ವೇಳೆಗೆ ಹಸ್ತಾಂತರಿಸುವ ಗುರಿ ಹೊಂದಿದ್ದೇವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೆಲಿಕ್ಯಾಪ್ಟರ್ ಉತ್ಪಾದನೆಗೆ ಒಪ್ಪಂದ: ಲಘು ಉಪಯುಕ್ತ ಹೆಲಿಕ್ಯಾಪ್ಟರ್ (ಎಲ್‌ಯುಎಚ್) ಉತ್ಪಾದನೆಗೆ ವೇಗ ನೀಡಲು ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆ (ಎಚ್‌ಎಎಲ್) ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳಿ ಕಾವಲ್‌ನಲ್ಲಿನ ಎಚ್‌ಎಎಲ್‌ನ ಹೆಲಿಕ್ಯಾಪ್ಟರ್ ತಯಾರಿಕಾ ಕಾರ್ಖಾನೆಯ 2ನೇ ಹಂತದ ನಿರ್ಮಾಣಕ್ಕೆ ಕೇಂದ್ರ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ (ಸಿಪಿಡಬ್ಲೂéಡಿ) ಜತೆಗೆ ಒಪ್ಪಂದ ಮಾಡಿಕೊಂಡಿತು.
ಎಚ್‌ಎಎಲ್ ಅಧ್ಯಕ್ಷ ಆರ್.ಮಾಧವನ್ ಮತ್ತು ಸಿಪಿಡಬ್ಲೂಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ವಿ.ಎಸ್.ಭಾಸ್ಕರ್ ನಿರ್ಮಾಣ ಒಪ್ಪಂದಕ್ಕೆ ಸಹಿ ಹಾಕಿದರು. 2ನೇ ಹಂತದ ಕಾಮಗಾರಿ ಎಲ್‌ಯುಎಚ್ ನಿರ್ಮಾಣಕ್ಕೆ ಅಗತ್ಯವಿರುವ ಕಟ್ಟಡದ ಮೂಲ ಸೌಕರ್ಯ ನಿರ್ಮಾಣ ಮಾಡಲಾಗುತ್ತದೆ. ಎಚ್‌ಎಎಲ್‌ನ ಮುಖ್ಯ ಯೋಜನಾ ವ್ಯವಸ್ಥಾಪಕ (ಸಿಪಿಎಂ) ರಾಜೇಶ್ ಜೈನ್, ಕಾರ್ಯಕಾರಿ ನಿರ್ದೇಶಕ ವಿ.ನಟರಾಜನ್ ಇದ್ದರು.
ಬಿದರೆಹಳ್ಳಿ ಕಾವಲ್‌ನ ಘಟಕವು 615 ಎಕರೆ ವಿಸ್ತೀರ್ಣದಲ್ಲಿದ್ದು, 2016ರ ಜನವರಿಯಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. ಹೆಲಿಕ್ಯಾಪ್ಟರ್ ನಿರ್ಮಾಣ ಘಟಕ ಮತ್ತು ಹೆಲಿಕ್ಯಾಪ್ಟರ್ ಉತ್ಪಾದನಾ ವೆಚ್ಚ 5 ಸಾವಿರ ಕೋಟಿ ರೂ. ನಿಗದಿ ಮಾಡಲಾಗಿದೆ. ಎಲ್ಲ ಬಗೆಯ ಸೌಲಭ್ಯವಿರುವ 3ರಿಂದ 12 ಟನ್ ತೂಕದ ಎಲ್‌ಯುಎಚ್ ನಿರ್ಮಾಣ ಕಾರ್ಖಾನೆಯಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.