ನಮ್ಮ ಆರೋಗ್ಯಕ್ಕೆ ಸೂಕ್ಷ್ಮಜೀವಿ ಜಗತ್ತೇಕೆ ನಿರ್ಣಾಯಕ?
Team Udayavani, Feb 24, 2019, 12:30 AM IST
ಮುಂದುವರಿದುದು– ದೇಹ ತೆಳ್ಳಗಿರುವ ಇಲಿಗಳಿಗೆ ಹೋಲಿಸಿದರೆ ದಢೂತಿ ದೇಹದ ಇಲಿಗಳು ಬ್ಯಾಕ್ಟಿರೊçಡೆಟಿಸ್ ಎಂಬ ಸೂಕ್ಷ್ಮಜೀವಿಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತವೆ. ತೆಳ್ಳಗಿನ ಇಲಿಗಳಿಗೆ ದಡೂತಿ ಇಲಿಗಳ ಅಂಶಗಳನ್ನು ನೀಡಿದಾಗ ಅವು ಕೊಬ್ಬು ಬೆಳೆಸಿಕೊಳ್ಳುವುದು ಕಂಡುಬಂದಿದೆ. ಮನುಷ್ಯರಲ್ಲಿಯೂ ಇದೇ ತೆರನಾದ ವಿದ್ಯಮಾನ ಕಂಡುಬಂದಿದ್ದು, ಬೆರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮೂಲಕ ತೂಕ ಕಳೆದುಕೊಳ್ಳುವವರಲ್ಲಿ ಸೂಕ್ಷ್ಮಜೀವಿಗಳ ಪ್ರಮಾಣ ವ್ಯತ್ಯಸ್ಥವಾಗಿ ವಿರುದ್ಧ ದಿಕ್ಕಿನಲ್ಲಿ ನಡೆಯುವುದು ಕಂಡುಬಂದಿದೆ.
ವ್ಯಕ್ತಿಯ ಕರುಳಿನಲ್ಲಿ ವಾಸಿಸುವ ಸೂಕ್ಷ್ಮಜೀವಿಗಳು ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುವುದು ಕಂಡುಬಂದಿದೆ. ಅವು ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಮೇಲೆ ಪ್ರಭಾವ ಬೀರುವುದು ಇದಕ್ಕೆ ಕಾರಣ. ರುಮೆಟಾಯ್ಡ ಆಥೆùìಟಿಸ್ ಉಂಟಾಗುವುದಕ್ಕೆ ಹಿನ್ನೆಲೆಯಲ್ಲಿ ಕೆಲಸ ಮಾಡುವ ಸಂಭಾವ್ಯ ಪರೋಕ್ಷ ಕಾರಣ ಇದು ಎಂಬುದಾಗಿ ಅಂದಾಜಿಸಲಾಗಿದೆ. ಇಲಿಗಳಲ್ಲಿ, ಕರುಳಿನಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ಪ್ರತಿಜೀವಕಗಳ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು ಕಂಡುಬಂದಿದೆ. ಈ ಪ್ರತಿಜೀವಕಗಳು ರುಮಟಾಯ್ಡ ಆಥೆùìಟಿಸ್‌ನಂತೆಯೇ ಸಂದುಗಳ ನಿಧಾನ ನಾಶಕ್ಕೆ ಕಾರಣವಾಗುತ್ತವೆ.
ಹಾಗೆಯೇ, ಸಿಝೊಫ್ರೆàನಿಯಾ, ಆಬೆÕಸಿವ್ ಕಂಪಲ್ಸರಿ ಡಿಸಾರ್ಡರ್, ಅಟೆನ್ಶನ್ ಡಿಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್, ಆಟಿಸಮ್ ಹಾಗೂ ದೀರ್ಘಕಾಲಿಕ ದಣಿವು ಕಾಯಿಲೆಯಂತಹ ನ್ಯೂರೋಸೈಕಿಯಾಟ್ರಿಕ್ ಅನಾರೋಗ್ಯಗಳು ಉಂಟಾಗುವುದಕ್ಕೆ ಕಾರಣವಾಗುವ ಅಪಾಯಾಂಶಗಳಲ್ಲಿ ಕರುಳಿನಲ್ಲಿ ಇರುವ ಸೂಕ್ಷ್ಮಜೀವಿ ಜಗತ್ತಿನ ಪಾತ್ರ ಇರುವುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ವಂಶವಾಹೀಯವಾಗಿ ಈ ಕಾಯಿಲೆಗಳಿಗೆ ತುತ್ತಾಗಬಲ್ಲ ವ್ಯಕ್ತಿಗಳಲ್ಲಿ, ಕರುಳಿನಲ್ಲಿ ಇರುವ ಪರಿವರ್ತಿತ ಸೂಕ್ಷ್ಮಜೀವಿಗಳು ರಕ್ತ-ಮಿದುಳು ಸಂಬಂಧವನ್ನು ಅಸ್ತವ್ಯಸ್ತಗೊಳಿಸುವ ಮೂಲಕ ಮಿದುಳಿನ ಸಹಜ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪ್ರತಿಜೀವಕಗಳ ಉತ್ಪಾದನೆಗೆ ದಾರಿ ಮಾಡಿಕೊಡುತ್ತವೆ ಎಂಬುದಾಗಿ ಅಧ್ಯಯನಕಾರರು ಹೇಳುತ್ತಾರೆ.
ಆರೋಗ್ಯ ಮತ್ತು ಅನಾರೋಗ್ಯಗಳಲ್ಲಿ ಸೂಕ್ಷ್ಮಜೀವಿ ಜಗತ್ತಿನ ಪಾತ್ರವನ್ನು ವ್ಯಾಖ್ಯಾನಿಸುವಲ್ಲಿ ಇರುವ ಸವಾಲು ಏನು ಎಂದರೆ, ದೇಹದ ವಿವಿಧ ಅಂಗಭಾಗಗಳಲ್ಲಿ ವಾಸಿಸುತ್ತಿರುವ ಸೂಕ್ಷ್ಮಜೀವಿಗಳಲ್ಲಿ ಉಂಟಾಗುವ ಪರಿವರ್ತನೆಗಳು ಕಾರಣವೇ ಅಥವಾ ಪರಿಣಾಮವೇ ಎಂಬುದು. ವಿವಿಧ ಅನಾರೋಗ್ಯಗಳನ್ನು ಹೊಂದಿರುವ ವ್ಯಕ್ತಿಗಳ ದೇಹದ ಸೂಕ್ಷ್ಮಜೀವಿ ಜಗತ್ತಿನ ಬಗ್ಗೆ ನಾವು ಈಗಾಗಲೇ ಪಡೆದಿರುವ ಜ್ಞಾನದಲ್ಲಿ ಬಹುಪಾಲು ವೀಕ್ಷಣೆಯನ್ನು ಆಧರಿಸಿದೆ; ಇದರಿಂದ ಯಾವುದು ಮೊದಲು – ಸೂಕ್ಷ್ಮಜೀವಿ ಜಗತ್ತಿನ ಪರಿವರ್ತನೆಯೇ ಅಥವಾ ಅನಾರೋಗ್ಯವೇ ಎಂಬುದನ್ನು ಖಚಿತವಾಗಿ ಹೇಳಲಾಗುತ್ತಿಲ್ಲ.
– ಮುಂದುವರಿಯುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.