ದ.ಆಫ್ರಿಕಾಕ್ಕೆ ವೈಟ್‌ವಾಶ್; ಶ್ರೀಲಂಕಾ ಹೊಸ ಇತಿಹಾಸ
Team Udayavani, Feb 24, 2019, 12:30 AM IST
ಪೋರ್ಟ್ ಎಲಿಜಬೆತ್: ದಕ್ಷಿಣ ಆಫ್ರಿಕಾಕ್ಕೆ ಅವರದೇ ನೆಲದಲ್ಲಿ ವೈಟ್‌ವಾಶ್ ಮಾಡುವ ಮೂಲಕ ಶ್ರೀಲಂಕಾ ತನ್ನ ಟೆಸ್ಟ್ ಚರಿತ್ರೆಯಲ್ಲಿ ಹೊಸ ಎತ್ತರ ತಲುಪಿದೆ. ಮೊನ್ನೆ ಮೊನ್ನೆಯ ತನಕ ಸಾಮಾನ್ಯ ಮಟ್ಟದ ತಂಡವಾಗಿ ಗುರುತಿಸಲ್ಪಡುತ್ತಿದ್ದ ಲಂಕಾ ತಂಡ ಈಗ ತನ್ನ ಅಮೋಘ ಸಾಧನೆಯಿಂದ ಕ್ರಿಕೆಟ್ ವಿಶ್ವದ ಕಣ್ಣು ಕುಕ್ಕುವಂತೆ ಮಾಡಿದೆ.
ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ 8 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ 2 ಪಂದ್ಯಗಳ ಕಿರು ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿತು. ಮೊದಲ ಟೆಸ್ಟ್ ಪಂದ್ಯವನ್ನು ಒಂದು ವಿಕೆಟ್‌ನಿಂದ ರೋಮಾಂಚಕಾರಿ ಯಾಗಿ ಗೆದ್ದ ಶ್ರೀಲಂಕಾ ಇದೇ ಸ್ಫೂರ್ತಿಯಲ್ಲಿ ಹರಿಣಗಳನ್ನು ಬೇಟೆಯಾಡಿತು. ನಿಷೇಧ ಮುಗಿಸಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಮರಳಿದ ದಕ್ಷಿಣ ಆಫ್ರಿಕಾ ವಿರುದ್ಧ ಅವರದೇ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಕೇವಲ 3ನೇ ತಂಡ ವೆಂಬ ಹೆಗ್ಗ ಳಿಕೆ ಲಂಕೆ ಯ ದ್ದು. ಆಸ್ಟ್ರೇಲಿಯ 5 ಸಲ, ಇಂಗ್ಲೆಂಡ್ 2 ಸಲ ಈ ಸಾಧನೆ ಮಾಡಿವೆ.
197 ರನ್ ಗುರಿ
ಗೆಲುವಿಗೆ 197 ರನ್ನುಗಳ ಗುರಿ ಪಡೆದ ಶ್ರೀಲಂಕಾ 2 ವಿಕೆಟ್ ನಷ್ಟದಲ್ಲಿ ಇದನ್ನು ಸಾಧಿಸಿತು. ಆಗ ಒಶಾದ ಫೆರ್ನಾಂಡೊ 75 ರನ್ ಮತ್ತು ಕುಸಲ್ ಮೆಂಡಿಸ್ 84 ರನ್ ಬಾರಿಸಿ ಅಜೇಯರಾಗಿದ್ದರು.
ದಕ್ಷಿಣ ಆಫ್ರಿಕಾದ 222 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ಶ್ರೀಲಂಕಾ 154 ರನ್ ಗಳಿಸಿತ್ತು. ಆದರೆ ದ್ವಿತೀಯ ಸರದಿಯಲ್ಲಿ ತಿರುಗಿ ಬಿದ್ದ ಲಂಕಾ ಬೌಲರ್ ಆತಿಥೇಯರನ್ನು 128ಕ್ಕೆ ಉಡಾಯಿಸಿದರು. ಸುರಂಗ ಲಕ್ಮಲ್ 4, ಧನಂಜಯ ಡಿ’ಸಿಲ್ವ 3 ವಿಕೆಟ್ ಹಾರಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ- 222 ಮತ್ತು 128. ಶ್ರೀಲಂಕಾ-154 ಮತ್ತು 2 ವಿಕೆಟಿಗೆ 197. ಪಂದ್ಯಶ್ರೇಷ್ಠ: ಕುಸಲ್ ಮೆಂಡಿಸ್. ಸರಣಿಶ್ರೇಷ್ಠ: ಕುಸಲ್ ಪೆರೆರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.