ಪಾಕ್ ವಿರುದ್ಧ ಪಂದ್ಯ;ಸರಕಾರದ ತೀರ್ಮಾನಕ್ಕೆ ನಾವು ಬದ್ಧ:ಕೊಹ್ಲಿ
Team Udayavani, Feb 24, 2019, 12:30 AM IST
ವಿಶಾಖಪಟ್ಟಣ: ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಆಡಬೇಕೇ, ಬೇಡವೇ ಎಂಬ ಕುರಿತು ಭಾರತ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. “ಈ ಬಗ್ಗೆ ನಮ್ಮ ನಿಲುವು ಸರಳ. ಭಾರತ ಸರಕಾರ ಮತ್ತು ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ, ಅದಕ್ಕೆ ನಾವು ಬದ್ಧವಾಗಿರುತ್ತೇವೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕೊಹ್ಲಿ, “ಹುತಾತ್ಮರಾದ ಯೋಧರ ಕುಟುಂಬಗಳಿಗಾಗಿ ನಮ್ಮ ಹೃದಯ ಮಿಡಿಯುತ್ತಿದೆ. ಘಟನೆ ಯಿಂದ ಆಘಾತವಾಗಿದೆ, ಭಾರತ ತಂಡ ದುಃಖೀತವಾಗಿದೆ’ ಎಂದು ಹೇಳಿದ್ದಾರೆ.
ಐಪಿಎಲ್: ಕೊಹ್ಲಿ ಸಲಹೆ
ಮುಂಬರುವ ಐಪಿಎಲ್‌ನಲ್ಲಿ ಭಾಗವಹಿಸುವ ಭಾರತದ ವಿಶ್ವಕಪ್ ತಂಡದ ಸದ ಸ್ಯ ರೆಲ್ಲರಿಗೂ ಕ್ಯಾಪ್ಟನ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.
“ನೀವು ಐಪಿಎಲ್ ವೇಳೆ ಕೆಟ್ಟ ತಂತ್ರಗಳನ್ನು ಕಲಿಯುವ ಅಭ್ಯಾಸ ಕ್ಕೊಳಗಾಗಬೇಡಿ. ಐಪಿಎಲ್‌ಗಾಗಿ ನೀವು ಬಳಸುವ ತಂತ್ರಗಳಿಂದ ನಿಮ್ಮ ಲಯ ಹೋದರೆ ವಿಶ್ವಕಪ್‌ನಲ್ಲಿ ಅದನ್ನು ಗಳಿಸಲು ಅಸಾಧ್ಯ. ಐಪಿಎಲ್ ವೇಳೆ ಏಕದಿನಕ್ಕೆ ಹೊಂದಿಕೊಳ್ಳುವ ಮನಸ್ಥಿತಿ ನಿಮ್ಮದಾಗಿರಲಿ. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ನಿಮ್ಮ ದೈಹಿಕ ಪರಿಸ್ಥಿತಿ ನೋಡಿಕೊಳ್ಳಿ. ತಂಡ ಉತ್ತಮ ಸ್ಥಿತಿಯಲ್ಲಿದೆ ಎಂದು ಕಂಡುಬಂದರೆ ಕೆಲವು ಪಂದ್ಯಗಳಿಂದ ಹೊರಗಿರಿ’ ಎಂದು ಕೊಹ್ಲಿ ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.