ಹೆಮ್ಮಾಡಿ: ಕುಡಿಯಲು ನೀರಿಲ್ಲ ನೋಡಿ
Team Udayavani, Feb 24, 2019, 1:00 AM IST
ಕುಂದಾಪುರ: ಸೇವಂತಿಗೆಗೆ ಪ್ರಸಿದ್ಧವಾದ ಹೆಮ್ಮಾಡಿಯಲ್ಲಿ ಬೇಸಗೆಯಿಡೀ ನೀರಿನ ಅಭಾವ ಹರಿಯುವ ನದಿಯಲ್ಲಿ ಉಪ್ಪು ನೀರು ತುಂಬಿದ ಕಾರಣದಿಂದ ಕುಡಿಯಲು ನೀರಿಲ್ಲ. ಒಟ್ಟು 4,299 ಜನಸಂಖ್ಯೆ ಹೊಂದಿದ ಹೆಮ್ಮಾಡಿಯ ಕಾಲು ಭಾಗದಲ್ಲಿ ಮಾತ್ರ ಸಿಹಿನೀರು ಲಭ್ಯ.
ಜಾಲಾಡಿ, ಸಂತೋಷ್‌ನಗರ, ಬುಗರಿಕಟ್ಟು, ಹೆಮ್ಮಾಡಿಯಲ್ಲಿ ಬಹುತೇಕ ಮನೆಯವರು ಸೇವಂತಿಗೆ ಬೆಳೆಸುತ್ತಾರೆ. ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರನಿಗೂ ಈ ಸೇವಂತಿಗೆಗೂ ಅವಿನಾಭಾವ ನಂಟು. ಆದರೆ ಇಲ್ಲಿ ಕೃಷಿಗೂ ಕುಡಿಯಲೂ ನೀರಿಲ್ಲದ ಕೊರಗು.
ಎಲ್ಲೆಲ್ಲಿ ಸಮಸ್ಯೆ?
ಜಾಲಾಡಿ, ಬಟ್ರಬೆಟ್ಟು, ಕೋಟೆಬೆಟ್ಟು, ಸಂತೋಷ್ ನಗರ, ಬುಗರಿಕಡು, ಕನ್ನಡಕುದ್ರು, ಹೆಮ್ಮಾಡಿ, ಕಟ್ಟು, ಮುವತ್ತುಮುಡಿ ಮೊದಲಾದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಪಂಚಾಯತ್‌ಗೆ
1 ತೆರೆದಬಾವಿ, 1 ಕೊಳವೆ ಬಾವಿ ಮಾತ್ರ ಇದೆ. ಇನ್ನೊಂದು ಕೊಳವೆ ಬಾವಿ ಕಟ್‌ಬೆಲೂ¤ರು ಪಂ. ವ್ಯಾಪ್ತಿಯ ಸುಳೆÕಯಲ್ಲಿದ್ದು ಅದು ನಿರುಪಯುಕ್ತವಾಗಿದೆ. ಉಳಿದಂತೆ ಕೆಲವು ಪ್ರದೇಶಗಳಿಗೆ ಕಟ್‌ಬೆಲೂ¤ರು ಪಂ. ವ್ಯಾಪ್ತಿಯಿಂದ ನೀರು ದೊರೆಯುತ್ತದೆ.
ಆಕ್ಷೇಪ
ನೀರಿಗಾಗಿ ಇಷ್ಟೆಲ್ಲ ಸಮಸ್ಯೆ ಇದ್ದರೂ ಹೊಸ ಕೊಳವೆ ಬಾವಿ ತೆಗೆಸಲು ಮುಂದಾದ ಪಂಚಾಯತ್‌ಗೆ ಭ್ರಮನಿರಸನ ಆಗಿದೆ. ಕೊಲ್ಲೂರು ರಸ್ತೆ ಬದಿ ನೀರಿರುವ ಪಾಯಿಂಟ್ ನೋಡಿ ಕೊಳವೆ ಬಾವಿ ತೆಗೆಸಲು ಮುಂದಾದಾಗ ಅದು ಖಾಸಗಿ ಜಾಗ ಎಂದು ಆಕ್ಷೇಪ ಬಂತು. ಈಗ ಅಲ್ಲಿ ಸರ್ವೆ ಮಾಡಿಸಿ ಸರಕಾರಿ ಜಾಗದಲ್ಲಿ ಬೋರ್ ಹೊಡೆಸಲು ಪಂಚಾಯತ್ ಆಡಳಿತ ಮುಂದಾಗಿದೆ. ತುಂಬಿಕೇರಿ ಎಂಬಲ್ಲಿ ಕೆರೆಯೊಂದರ ಪಕ್ಕ ತೆರೆದ ಬಾವಿ ತೋಡಲು ಮುಂದಾದಾಗಲೂ ಸ್ಥಳೀಯರು ತಮ್ಮ ಕೆರೆ ಬಾವಿಗಳ ನೀರು ಇಂಗಿ ಹೋಗುವ ಆತಂಕ ವ್ಯಕ್ತಪಡಿಸಿದ ಕಾರಣ ಕಾಮಗಾರಿ ನಡೆಯಲೇ ಇಲ್ಲ. ಇಲ್ಲೀಗ ಎರಡು ದಿನಗಳಿಗೊಮ್ಮೆ ನೀರು ಕೊಡುವ ಹಂತ ತಲುಪಿದೆ.
ಕೊಳವೆಬಾವಿ ತೆಗೆಸಲಾಗುವುದು
ಖಾಸಗಿ ಜಾಗ ಎಂದು ಆಕ್ಷೇಪ ಬಂದ ಕಾರಣ ಸ್ಥಗಿತಗೊಂಡಿದ್ದ ಕೊಳವೆಬಾವಿ ತೋಡಬೇಕಿರುವ ಜಾಗದ ಸರ್ವೆ ನಡೆದಿದ್ದು ಅಲ್ಲಿ ಸರಕಾರಿ ಸ್ಥಳ ಗುರುತಿಸಿ ಬೋರ್ ತೆಗೆಸಲಾಗುವುದು. ನೀರಿನ ಮೂಲಗಳೇ ಕಡಿಮೆ ಇರುವ ಕಾರಣ ಟ್ಯಾಂಕರ್ ನೀರು ವಿತರಿಸಲು ಯೋಜನೆ ಸಿದ್ಧಪಡಿಸಲಾಗಿದೆ. ನೀರಿನ ಸಮಸ್ಯೆ ಈಗಲೇ ಆರಂಭವಾಗಿದೆ.
– ಮಂಜಯ್ಯ ಬಿಲ್ಲವ, ಪಂ. ಅಭಿವೃದ್ಧಿ ಅಧಿಕಾರಿ
ಟ್ಯಾಂಕರ್ ನೀರು ಅನಿವಾರ್ಯ
ಬಾವಿ, ಕೊಳವೆ ಬಾವಿ ತೆಗೆಸಲು ಜನರಿಂದ ಆಕ್ಷೇಪ ಬಂದ ಕಾರಣ ಬೇರೆಡೆ ತೆಗೆಸಬೇಕಿದೆ. ಅಲ್ಲಿತನಕ ಟ್ಯಾಂಕರ್ ನೀರು ಕೊಡುವುದು ಅನಿವಾರ್ಯ. ಉಪ್ಪುನೀರು ಪ್ರದೇಶಗಳೇ ಹೆಚ್ಚು ಇರುವ ಕಾರಣ ಇಲ್ಲಿಗೆ ಬಾವಿ, ಕೊಳವೆ ಬಾವಿ ತೆಗೆಸುವ ಅಗತ್ಯವಿದೆ.
– ಜ್ಯೋತಿ ಹರೀಶ್ ಭಂಡಾರಿ, ಗ್ರಾ.ಪಂ. ಅಧ್ಯಕ್ಷೆ
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.