ಮೋದಿ ಪ್ರಧಾನಿಯಾದ ಬಳಿಕ ದೇಶದ ಚಿತ್ರಣವೇ ಬದಲು


Team Udayavani, Feb 24, 2019, 7:09 AM IST

dvg.jpg

ದಾವಣಗೆರೆ: ಕಳೆದ ಐದು ವರ್ಷದಲ್ಲಿ ಭಾರತ ಸುರಕ್ಷಿತ ದೇಶವಾಗಿ ನಿರ್ಮಾಣವಾಗಿದೆ ಎಂದು ಬೆಂಗಳೂರಿನ ಚಿಂತಕ ರಾಧಕೃಷ್ಣ ಹೊಳ್ಳ ಹೇಳಿದರು. ನಗರದ ಶಾಂತಿ ರಾಯಲ್‌ ಸಭಾಂಗಣದಲ್ಲಿ ಶನಿವಾರ ವರ್ತಮಾನ ಇಂಟಲೆಕುcಯಲ್‌ ಡಿಬೆಟ್ಸ್‌ ಪೋರಂ ವತಿಯಿಂದ ಆಯೋಜಿಸಿದ್ದ ಭಾರತ ಅಂದು-ಇಂದು 2014-19 ರ ಒಂದು ಅವಲೋಕನ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಭವ್ಯ ಭಾರತದಲ್ಲಿ ಮೂರ್‍ನಾಲ್ಕು ದಶಕಗಳ ನಂತರ ಅಂದರೆ, 2014ರ ನಂತರ ಉತ್ತಮ ಸರ್ಕಾರ ಆಡಳಿತಕ್ಕೆ ಕೇಂದ್ರದಲ್ಲಿ ಬಂದಿದೆ. ಈ ಹಿಂದೆ ದೀಪಾವಳಿ, ಸ್ವಾತಂತ್ರ್ಯಾ ದಿನೋತ್ಸವ ಬಂದರೆ ಬಾಂಬ್‌ ಬೀಳಬಹುದಾ ಎಂಬ ಹೆದರಿಕೆ ಇತ್ತು. ಪ್ರತಿಷ್ಠೆಯ, ಸಾರ್ವಭೌಮತ್ವದ ಸಂಕೇತವಾದ ಸಂಸತ್ತಿನ ಮೇಲೂ ದಾಳಿ ನಡೆದ ಭೀತಿ ನೆನಪಿನಲ್ಲಿತ್ತು. ಆದರೆ, ಉತ್ತಮ ನಾಯಕ ದೇಶದ ಪ್ರಧಾನಿ ಆದ ಬಳಿಕ ದೇಶದ ಚಿತ್ರಣ ಬದಲಾಗಿದೆ ಎಂದರು. 

 ದೇಶದ ಜನ ನಿರ್ಭಯ ಹಾಗೂ ನೆಮ್ಮದಿಯಿಂದ ಬದುಕುವ ಪೂರಕ ವಾತಾವರಣ ನಿರ್ಮಾಣವಾಗಿದೆ. 2014ರ ಆರಂಭದ ದಿನಗಳಲ್ಲಿ 2ಜಿ ಹಗರಣ, ಆದರ್ಶ ಹೌಸಿಂಗ್‌ ಹಗರಣ, ಕಾಮನ್‌ ವೆಲ್ತ್‌ ಹಗರಣಗಳದ್ದೇ ಸುದ್ದಿ ದೇಶದಲ್ಲಿ ನಡೆಯುತ್ತಿತ್ತು. ಪ್ರಧಾನಮಂತ್ರಿ ಆದವರೂ ಕೈ ಕಟ್ಟಿಕೊಂಡು ನಿಲ್ಲುವ ಪರಿಸ್ಥಿತಿ ಇತ್ತು. ನಮ್ಮ ನಾಯಕನನ್ನು ನಾಯಕ ಎನ್ನುವ ಹೆಮ್ಮೆಯ ಪರಿಸ್ಥಿತಿ ಇರಲಿಲ್ಲ.  ಜಾಪ್ರಭುತ್ವದಲ್ಲಿರುವ ಪ್ರಜೆಗಳು ನಮಗೆ ಎಂತಹ ನಾಯಕ ಬೇಕುಎಂಬುದನ್ನು ಸ್ಪಷ್ಟವಾಗಿ ಜನರು ಹೇಳಿದರು.

30 ವರ್ಷದ ನಂತರ ದೇಶದಲ್ಲಿ ಸ್ಪಷ್ಟ ಬಹುಮತ ಇರುವ ಸರ್ಕಾರ ಬಂತು. ನರೇಂದ್ರಮೋದಿ ಸಂಸತ್‌ಗೆ ಪ್ರವೇಶ ಮಾಡುವ ಮುಂಚೆ ಮಂಡಿಯೂರಿ ನಮಿಸಿದ್ದು ಅದಕ್ಕೆ ಸಂಕೇತವಾಗಿತ್ತು. ಪ್ರಧಾನಿ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಸುರಕ್ಷತೆ, ಸ್ವಾವಲಂಬನೆ, ಸ್ವಾಭಿಮಾನ, ಸ್ವತ್ಛತೆಗೆ ಮೊದಲ ಆದ್ಯತೆ ನೀಡಿದ್ದಾರೆ. ಇದರಿಂದಾಗಿ 10 ವರ್ಷಗಳ ಹಿಂದೆ ಭಾರತೀಯರನ್ನು ಇತರೆ ದೇಶದವರು ಈಗ ನೋಡುವ ನೋಡುವ ಸ್ಥಿತಿ ಬದಲಾಗಿದೆ. ಇದು ಹೆಮ್ಮೆಯ ಸಂಗತಿ ಎಂದರು. 

ಮಾಹಿತಿ ಹಂಚಿಕೆ ಅವಕಾಶ: ದೇಶವು ಸಾಂಸ್ಕೃತಿಕ, ಶೈಕ್ಷಣಿಕ, ಗ್ರಾಮಾಭಿವೃದ್ಧಿ, ಆರ್ಥಿಕತೆ ಹೀಗೆ ಎಲ್ಲ ವಿಷಯಗಳಲ್ಲಿಯೂ ಮುನ್ನುಗ್ಗುತ್ತಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ಗುಪ್ತಚರ, ಸೈನಿಕ, ಪೊಲೀಸ್‌ ವಲಯದಲ್ಲಿ ಸಮನ್ವಯತೆ ಕೊರತೆ ಇತ್ತು. ಮಾಹಿತಿ ಬಹಳ ವಿಳಂಬವಾಗಿ ತಲುಪುತ್ತಿತ್ತು. ಈಗ ಸ್ಥಳೀಯವಾಗಿ ಮಾಹಿತಿ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ, 1500ಕ್ಕೂ ಹೆಚ್ಚು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಹತರಾಗಿದ್ದಾರೆ ಎಂದು ಹೇಳಿದರು.

ದೇಶದ ಗಡಿಯಿಂದ 35 ಕಿ.ಮೀ. ಈಚೆಗೆ ಯಾವುದೇ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಇದು ಸಂಯುಕ್ತ, ಸಮನ್ವಯ ಕಾರ್ಯಾಚರಣೆಯಿಂದ ಸಾಧ್ಯವಾಗಿದೆ. ಈಗ ಸುರಕ್ಷಿತ ಭಾರತವನ್ನು ಜನರು ನೋಡುವಂತಾಗಿದೆ. ಚೆನೈನಲ್ಲಿ 25 ವರ್ಷಗಳ ಹಿಂದೆ ಬಾಂಬ್‌
ಸ್ಫೋಟ ನಡೆಸಿದವರನ್ನು ಇತ್ತೀಚೆಗೆ ಹಿಡಿಯಲಾಯಿತು. ದೇಶದಲ್ಲಿ ಇಂಟಲಿಜೆನ್ಸಿ ಟ್ರೈನಿಂಗ್‌ ಅನ್ನುವುದೇ ಇರಲಿಲ್ಲ. ಅದೊಂದು ಪನಿಷ್‌ಮೆಂಟ್‌ ಎಂಬ ರೀತಿ ಇತ್ತು. ಈಗ ತರಬೇತಿ ನೀಡಲಾಗಿದೆ. ರಾಜ್ಯಗಳಲ್ಲೂ ಸಹ ಪರಿಸ್ಥಿತಿ ಬದಲಾಗಿದೆ ಎಂದರು. 

ಮತಾಂತರಕ್ಕೆ ಕಡಿವಾಣ: ದೇಶದಲ್ಲಿ ಎಫ್‌ಸಿಆರ್‌ಎ ಕಾನೂನು ಬಲಪಡಿಸಿದ್ದರಿಂದ ವಿದೇಶಿ ದೇಣಿಗೆ ಪಡೆದು ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಎನ್‌ಜಿಒಗೆ ಸಂಸ್ಥೆಗಳಿಗೆ ಕಡಿವಾಣ ಹಾಕಲಾಗಿದೆ. ಗೃಹ ಇಲಾಖೆ ಈ ಹಿನ್ನೆಲೆ ಪರಿಶೀಲನೆ ಮಾಡುತ್ತಿದೆ. ಸಾಕಷ್ಟು ಎನ್‌ಜಿಒಗಳು ದೇಣಿಗೆ ಹಣದಲ್ಲಿ ಸಮಾಜ ಸೇವೆ ಹೆಸರಿನಲ್ಲಿ ಕ್ರಿಶ್ಚಿಯನ್‌ ಮತಾಂತರಕ್ಕೆ ಬಳಸುತ್ತಿದ್ದವು. ಸರ್ಕಾರದ ಕ್ರಮದಿಂದ ಮತಾಂತರಕ್ಕೆ ಕಡಿವಾಣ ಹಾಕಲಾಗಿದೆ ಎಂದರು.

ವರ್ತಮಾನದ ನವೀನ್‌ ಗಡ್ಡದಗೂಳಿ, ಹಿರಿಯ ಪತ್ರಕರ್ತ ಸಿ. ಕೇಶವಮೂರ್ತಿ ಉಪಸ್ಥಿತರಿದ್ದರು. ಪಿ.ಆರ್‌. ಐಸಿರಿ ಪ್ರಾರ್ಥಿಸಿದರು. ಮೇಘರಾಜ್‌ ಸ್ವಾಗತಿಸಿದರು, ಎಂ.ಸಿ. ಗಂಗಾಧರ್‌ ವಂದಿಸಿದರು.

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

2-davangere

Davangere: ಮಹಿಳೆಯ ಮೇಲೆ ಕರಡಿ ದಾಳಿ

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Davanagere: Special tax operation: 1.65 crore tax collection in a single day

Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ

Siddaramaiah will resigns before Assembly session: R. Ashok

Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.