ತಣ್ಣನೆಯ ಪರಿಸರದಲ್ಲೊಂದುಕಲರ್‌ಫ‌ುಲ್‌ ಲವ್‌


Team Udayavani, Feb 24, 2019, 10:01 AM IST

cin-2.jpg

ಯಾರಿಗೆ ಏನೇ ಖಾಯಿಲೆ ಬಂದರೂ ವಾಸಿ ಮಾಡುವ ಪ್ರಕೃತಿ ಮಧ್ಯದಲ್ಲಿರುವ ಆರೋಗ್ಯಧಾಮ ಆಸ್ಪತ್ರೆ. ಇಂಥ ಆಸ್ಪತ್ರೆಯಲ್ಲೇ ಮೂರು ಲವ್‌ ಟ್ರ್ಯಾಕ್‌ನಲ್ಲಿ ತನ್ನ ಲವ್‌ಸ್ಟೋರಿಯನ್ನು ಪ್ರೇಕ್ಷಕರಿಗೆ ಹೇಳಿಕೊಂಡು ಹ್ಯಾಪಿಯಾಗಿ ಹೋಗುತ್ತಿರುತ್ತಾನೆ ವಾರ್ಡ್‌ ಬಾಯ್‌ ಚಿರಂಜೀವಿ ಅಲಿಯಾಸ್‌ ಚಿರು.

ಹೀಗೆ ಸರಾಗವಾಗಿ ಸಾಗುತ್ತಿದ್ದ ಚಿರು ಲವ್‌ ಟ್ರ್ಯಾಕ್‌ ನಡುವೆ ಒಂದೆರಡು ಕಡೆ ಹಂಪ್ಸ್‌ ಸಿಕ್ಕಿ, ಲವ್‌ ಟ್ರ್ಯಾಕ್‌ಗೆ ಟ್ವಿಸ್ಟ್‌ ಸಿಗುತ್ತದೆ. ಹಾಗಾದ್ರೆ ಚಿರು ಲವ್‌ ಟ್ರ್ಯಾಕ್‌ನಲ್ಲಿ ಸಿಗುವ ಟ್ವಿಸ್ಟ್‌ ಏನು? ಚಿರುಗೆ ಪ್ರೀತಿಯ ಸಂಜೀವಿನಿ ಸಿಗುತ್ತಾ, ಇಲ್ಲವಾ? ಇದು ಈ ವಾರ ತೆರೆಗೆ ಬಂದಿರುವ “ಯಾರಿಗೆ ಯಾರುಂಟು’ ಚಿತ್ರದ ಕಥೆಯ ಒಂದು ಎಳೆ.
 
ಈ ಚಿತ್ರದ ಕಥೆಯಲ್ಲಿ ತೀರಾ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ. ಒಬ್ಬ ಹುಡುನಿಗೆ ಮೂವರು ಹುಡುಗಿಯರು. ಇವರಲ್ಲಿ ಯಾರು ಯಾರಿಗೆ, ಸಿಗುತ್ತಾರೆ ಅಥವಾ ಇಲ್ಲವಾ? ಅನ್ನೋದನ್ನೆ ಒಂದಷ್ಟು ಮಸಾಲೆ ಅಂಶಗಳೊಂದಿಗೆ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ ನಿರ್ದೇಶಕ ಕಿರಣ್‌ ಗೋವಿ.

ಅದನ್ನು ಹೊರತುಪಡಿಸಿದರೆ, ಚಿತ್ರದ ಕಥೆಯಲ್ಲಿ ಪ್ರೇಕ್ಷಕರ ಕುತೂಹಲ ಕೆರಳಿಸುವ ಅಂಶಗಳನ್ನು ನಿರೀಕ್ಷಿಸುವಂತಿಲ್ಲ. ಚಿತ್ರದ ಕಥೆಗಿಂತ, ಚಿತ್ರಕಥೆ ಮತ್ತು ನಿರೂಪಣೆಯೇ ಈ ಚಿತ್ರದ ಜೀವಾಳ. ಒಂದೇ ಮಾತಿನಲ್ಲಿ ಹೇಳುವುದಾದರೆ, ಸರಳವಾದ ಕಥೆಗೆ ಮೆಲೋಡಿ ಹಾಡುಗಳು, ಬ್ಯೂಟಿಫ‌ುಲ್‌ ಲೊಕೇಶನ್‌ಗಳು, ದೊಡ್ಡ ತಾರಾಗಣವನ್ನು ಬಳಸಿಕೊಂಡು ಕಲರ್‌ಫ‌ುಲ್‌ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಚಿತ್ರದ ಪಾತ್ರದಲ್ಲಿ ಪ್ರಶಾಂತ್‌ ಕೆಲವು ಕಡೆ ಪ್ರಬುದ್ಧ ಅಭಿನಯ ತೋರಿಸಿದರೆ, ಕೆಲವು ಕಡೆ ಅಷ್ಟೇ ಪೇಲವ ಅಭಿನಯವನ್ನೂ ನೀಡಿದ್ದಾರೆ. ಉಳಿದಂತೆ ಕೃತಿಕಾ ರವೀಂದ್ರ, ಲೇಖಾಚಂದ್ರ ತಮ್ಮ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ಅಚ್ಯುತಕುಮಾರ್‌, ನರ್ಸ್‌ ಜಯಲಕ್ಷ್ಮೀ, ಸುಂದರ್‌ ಸೇರಿದಂತೆ ಕೆಲವು ಪಾತ್ರಗಳು ಚಿತ್ರಕ್ಕೆ ಭಾರವಾಗಿ ಪರಿಣಮಿಸಿವೆ.

ಚಿತ್ರದ ತಾಂತ್ರಿಕ ಗುಣಮಟ್ಟ ಚೆನ್ನಾಗಿದೆ. ಛಾಯಾಗ್ರಹಣ, ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್‌ ಪಾಯಿಂಟ್‌ ಎನ್ನಬಹುದು. ಸಂಕಲನ ಇನ್ನಷ್ಟು ಮೊನಚಾಗಿದ್ದರೆ, ಚಿತ್ರ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವ ಸಾಧ್ಯತೆಗಳಿದ್ದವು. ಒಟ್ಟಾರೆ ಲವ್‌, ಸೆಂಟಿಮೆಂಟ್‌ ಸೇರಿದಂತೆ ಒಂದಷ್ಟು ಕಮರ್ಷಿಯಲ್‌ ಸಿದ್ಧ ಸೂತ್ರಗಳ ಪ್ರಯೋಗವಾಗಿರುವ “ಯಾರಿಗೆ ಯಾರುಂಟು’ ಚಿತ್ರವನ್ನು ಒಮ್ಮೆ ಥಿಯೇಟರ್‌ನಲ್ಲಿ ನೋಡಿಬರಲು ಅಡ್ಡಿಯಿಲ್ಲ. 

ಯಾರಿಗೆ ಯಾರುಂಟು
ನಿರ್ಮಾಣ: ರಘುಪತಿ
ನಿರ್ದೇಶನ: ಕಿರಣ್‌ ಗೋವಿ
ತಾರಾಗಣ: ಪ್ರಶಾಂತ್‌, ಕೃತಿಕಾ ರವೀಂದ್ರ, ಲೇಖಾಚಂದ್ರ, ಅದಿತಿ ರಾವ್‌, ಸುಂದರ್‌, ಕುರಿ ಪ್ರತಾಪ್‌, ಅಚ್ಯುತ ಕುಮಾರ್‌, ನರ್ಸ್‌ ಜಯಲಕ್ಷ್ಮೀ, ಶ್ರೀಕಾಂತ್‌ ಹೆಬ್ಳೀಕರ್‌ ಮತ್ತಿತರರು

„ ಸುಧನ್‌

ಟಾಪ್ ನ್ಯೂಸ್

old lady digital arrest for a month: Thieves who looted 3.8 crores!

Cyber Fraud: 1 ತಿಂಗಳು ವೃದ್ದೆ ಡಿಜಿಟಲ್‌ ಅರೆಸ್ಟ್‌: 3.8 ಕೋಟಿ ಲೂಟಿ ಹೊಡೆದ ಕಳ್ಳರು!

IPl-RCb

IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Vidhana-Soudha-CM

Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

We are investigating Rahul’s British citizenship: Government to High Court!

ರಾಹುಲ್‌ ಬ್ರಿಟನ್‌ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!

ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

Hard Disk: ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

Pani movie: ಕನ್ನಡದಲ್ಲಿ ಜೋಜು ಜಾರ್ಜ್‌ ಪಣಿ

Pani movie: ಕನ್ನಡದಲ್ಲಿ ಜೋಜು ಜಾರ್ಜ್‌ ಪಣಿ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

old lady digital arrest for a month: Thieves who looted 3.8 crores!

Cyber Fraud: 1 ತಿಂಗಳು ವೃದ್ದೆ ಡಿಜಿಟಲ್‌ ಅರೆಸ್ಟ್‌: 3.8 ಕೋಟಿ ಲೂಟಿ ಹೊಡೆದ ಕಳ್ಳರು!

IPl-RCb

IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ

Dina Bhavishya

Daily Horoscope; ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ…

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Vidhana-Soudha-CM

Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.