ಕಸಾಪದಿಂದ ಸಮ್ಮೇಳನಾಧ್ಯಕ್ಷರಿಗೆ ಅಭಿನಂದನೆ
Team Udayavani, Feb 24, 2019, 11:48 AM IST
ಅಜ್ಜಂಪ್ಪುರ: ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಶನಿವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಮುಖ ಎಂಟು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಎ.ಎಸ್.ಕೃಷ್ಣಮೂರ್ತಿ ಅವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜಪ್ಪ, ಸಾಹಿತಿ ಚಟ್ನಳ್ಳಿ ಮಹೇಶ್, ಸ್ವಾತಂತ್ರ್ಯಾ ಹೋರಾಟಗಾರ ಏಕೋರಾಮಸ್ವಾಮಿ, ಕಸಾಪ ಜಿಲ್ಲಾ ಸಮಿತಿಯ ಮಂಜುನಾಥ್, ಲಕ್ಷ್ಮೀಕಾಂತ್, ಕಸಾಪ ಮಹಿಳಾ ಘಟಕದ ವಿಜಯಕುಮಾರಿ, ಎ.ಸಿ.ಚಂದ್ರಪ್ಪ,ಪುಟ್ಟಸ್ವಾಮಿ, ಕನ್ನಡ ರಕ್ಷಣಾ ವೇದಿಕೆ ಯುವಸೇನೆ ಅಧ್ಯಕ್ಷ ಗುರುಮೂರ್ತಿ ಇನ್ನಿತರರಿದ್ದರು.
ಎಂಟು ನಿರ್ಣಯಗಳು
ತಾಲೂಕಿಗೊಂದು ಕನ್ನಡ ಭವನ ನಿರ್ಮಾಣ
ನೂತನ ತಾಲೂಕಿನ ಪ್ರತಿ ಗ್ರಾಮ ಸಂಪರ್ಕಿಸಲು ಕೆಎಸ್‌ಆರ್‌ಟಿಸಿಯಿಂದ ಸಾರಿಗೆ ಸೌಲಭ್ಯ ಕಲ್ಪಿಸಬೇಕು
ಸರ್ಕಾರಿ ಎಲ್ಲಾ ಇಲಾಖೆ ಒಳಗೊಂಡ ಆಡಳಿತ ಭವನ ನಿರ್ಮಿಸಬೇಕು
ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ತಾಂತ್ರಿಕ ವೃತ್ತಿಪರ ಶಿಕ್ಷಣಕ್ಕಾಗಿ ತಾಲೂಕು ಮಟ್ಟದಲ್ಲಿ ಐಟಿಐ, ಫಾರ್ಮಸಿ ಕಾಲೇಜು ಆರಂಭಿಸಬೇಕು
ಅಮೃತ್ ಮಹಲ್‌ಕಾವಲು ಜಾಗದಲ್ಲಿ ಪಶು ವೈದ್ಯ ಶಿಕ್ಷಣ ಮಹಾವಿದ್ಯಾಲಯ ಸ್ಥಾಪಿಸಬೇಕು
ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಆರೋಗ್ಯ ಶುಶ್ರೂಕಿಯರ ಕೇಂದ್ರ ಸ್ಥಾಪಿಸಬೇಕು
ಅಜ್ಜಂಪುರ ತಾಲೂಕಿಗೆ ಭದ್ರಾ ಜಲಾಶಯದಿಂದ ಸಮಗ್ರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು
ತಾಲೂಕು ಕೇಂದ್ರಅಜ್ಜಂಪುರ ಹಾಗೂ ಅಗತ್ಯವಿರುವ ಗ್ರಾಮಗಳಿಗೆ ರುದ್ರಭೂಮಿ ವ್ಯವಸ್ಥೆ ಕಲ್ಪಿಸಬೇಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್ ಮುಕ್ತವಾಯಿತೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.