ಬರಲಿದೆ ಬರಲಿದೆ ರೆಡ್‌ಮಿ ನೋಟ್‌ 7

Team Udayavani, Feb 25, 2019, 12:30 AM IST

redmi-note-7-press-shot-840×472.jpg

ಕೆಲವೊಂದು ಮೊಬೈಲ್‌ ಫೋನ್‌ಗಳು ಬಿಡುಗಡೆ ಆಗುವ ಮುನ್ನವೇ ಬಹಳ ಕ್ರೇಜ್‌ ಸೃಷ್ಟಿಸುತ್ತವೆ. ಫೆ. 28ರಂದು 
ಭಾರತದಲ್ಲಿ ಬಿಡುಗಡೆ ಆಗಲಿರುವ ಶಿಯೋಮಿಯವರ ರೆಡ್‌ಮಿ ನೋಟ್‌ 7 ಅಂಥದ್ದೊಂದು ಹೈಪ್‌  ಸೃಷ್ಟಿಸಿರುವ ಫೋನ್‌. ಗ್ರಾಹಕರ ಕೈಗೆಟುಕುವ ದರಕ್ಕೆ ಉತ್ತಮ ಪ್ರೊಸೆಸರ್‌, ರ್ಯಾಮ್‌, ಕ್ಯಾಮರಾ  ಇತ್ಯಾದಿ ಸ್ಪೆಸಿಫಿಕೇಷನ್‌ ನೀಡಿದ್ದರಿಂದ ಶಿಯೋಮಿ ಕಂಪೆನಿ ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಬಹುಬೇಗ ಪ್ರಸಿದ್ಧಿಯಾಗಿ, ನಂ. 1 ಸ್ಥಾನದಲ್ಲಿದ್ದ ಸ್ಯಾಮ್‌ಸಂಗ್‌ ಅನ್ನು ಹಿಂದೆ ಹಾಕಿ, ತಾನೇ ನಂ. 1 ಆಗಿದೆ. ಅದರ ಹೊಸ ಮಾಡೆಲ್‌ಗ‌ಳು ಬಿಡುಗಡೆಯಾದಾಗಲೆಲ್ಲ ಚೆನ್ನಾಗಿ ಮಾರಾಟ ಗುತ್ತವೆ. ನಾವು ದಿನನಿತ್ಯ ನೋಡುವ ಒಬ್ಬರ ಕೈಯಲ್ಲಾದರೂ ರೆಡ್‌ಮಿ ಫೋನ್‌ ಗಳಿರುತ್ತವೆ.  ರಿಂಗ್‌ಟೋನ್‌ ಮೊಳಗಿದಾಗ ಒಬ್ಬರಿಗೊಬ್ಬರಿಗೆ ಕನ್‌ಫ್ಯೂಸ್‌ ಕೂಡ ಆಗುತ್ತದೆ!

ಇಂತಿಪ್ಪ ರೆಡ್‌ಮಿ, ಗುರುವಾರ ರಿಲೀಸ್‌ ಮಾಡಲಿರುವ ಫೋನ್‌ಗಾಗಿ ಅದರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಧಿಕೃತವಾಗಿ ಕಂಪೆನಿ ರೆಡ್‌ಮಿ ನೋಟ್‌ 7 ನ ಸ್ಪೆಸಿಫಿಕೇಷನ್‌ಗಳನ್ನು ಬಿಡುಗಡೆ ಮಾಡಿಲ್ಲ. ಆದರೆ ಶಿಯೋಮಿಯ ತವರು ನಾಡು ಚೀನಾ ಮಾರುಕಟ್ಟೆಗೆ ಈಗಾಗಲೇ ಇದನ್ನು ಬಿಡುಗಡೆ ಮಾಡಲಾಗಿದೆ. ಅದರ ಆಧಾರದಲ್ಲಿ ಭಾರತದಲ್ಲೂ ಅದೇ ಸ್ಪೆಸಿಫಿಕೇಷನ್‌ ಇರಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಮಧ್ಯಮ ವರ್ಗದಲ್ಲಿ ಶಕ್ತಿಶಾಲಿಯಾದ ಸ್ನಾಪ್‌ಡ್ರಾಗನ್‌ 660 ಪ್ರೊಸೆಸರ್‌ ಇರಲಿದೆ. 6 ಜಿಬಿ ರ್ಯಾಮ್‌ 64 ಜಿಬಿ ಆಂತರಿಕ ಸಂಗ್ರಹ, 4 ಜಿಬಿ ರ್ಯಾಮ್‌, 64 ಜಿಬಿ

ಆಂತರಿಕ ಸಂಗ್ರಹ, 3 ಜಿಬಿ ರ್ಯಾಮ್‌, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿರುವ ಮೂರು ಆವೃತ್ತಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. 6.3 ಇಂಚಿನ ಎಫ್ಎಚ್‌ಡಿ ಪ್ಲಸ್‌ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಇದೆ. ಅದಕ್ಕೆ  ನೀರಿನ ಹನಿಯಂಥ ನಾಚ್‌ ಇದೆ. ಪರದೆ ಸುಲಭವಾಗಿ ಒಡೆಯದಂತೆ ಕಾರ್ನಿಂಗ್‌ ಗೊರಿಲ್ಲಾ ಗಾಜಿನ ರಕ್ಷಣೆ ಸಹ ಇದಕ್ಕಿದೆ.

ಈ ಫೋನ್‌ 15 ಸಾವಿರ ರೂ. ಒಳಗೆ ಲಭ್ಯವಾಗಬಹುದೆಂಬ ನಿರೀಕ್ಷೆ ಇದೆ.  ಈ ಕೆಟಗರಿಯಲ್ಲಿ, ವೇಗದ ಚಾರ್ಜಿಂಗ್‌ ಸೌಲಭ್ಯ ಹಾಗೂ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ನೀಡಿರುವುದು ವಿಶೇಷ. ಆದರೆ ಬಾಕ್ಸ್‌ ಜೊತೆ ವೇಗದ ಚಾರ್ಜರ್‌ ನೀಡಲಾಗುತ್ತದೋ ಇಲ್ಲವೋ ಎಂಬುದನ್ನು ನೋಡಬೇಕು. ಅಲ್ಲದೇ ಈ ಫೋನ್‌ನ ಹಿಂಬದಿ ಆಕರ್ಷಕ ಹೊಳೆಯುವ ಗಾಜಿನ ವಿನ್ಯಾಸ ಮಾಡಲಾಗಿದೆ. ಶಿಯೋಮಿ ಫೋನ್‌ಗಳಲ್ಲಿ ಈ ರೀತಿಯ ವಿನ್ಯಾಸ ಇರಲಿಲ್ಲ. ಎಲ್ಲ ಮಾಡೆಲ್‌ಗ‌ಳು ಲೋಹದಲ್ಲಿ ಒಂದೇ ರೀತಿ ಇದ್ದವು. ಲೋಹ ಮತ್ತು ಗಾಜಿನ ದೇಹ, ಈ ಫೋನ್‌ ಅನ್ನು ಸುಂದರವಾಗಿಸಿವೆ.

ಕ್ಯಾಮರಾ ಮೆಗಾಪಿಕ್ಸಲ್‌ ಇದರ ವಿಶೇಷ: ಈ ಫೋನ್‌ ಸಂಚಲನ ಮೂಡಿಸಿರುವುದು ಮೇಲೆ ಹೇಳಲಾದ ವಿಶೇಷಣಗಳಿಗಲ್ಲ. ಇದರ ಮುಖ್ಯ ಅಂಶವಿರುವುದು, ಇದರ ಕ್ಯಾಮರಾದಲ್ಲಿ. ಇದು 48 ಮೆಗಾ ಪಿಕ್ಸಲ್‌ ಹಾಗೂ 5 ಮೆಗಾಪಿಕ್ಸಲ್‌ ಡುಯೆಲ್‌ ಲೆನ್ಸ್‌ ಹಿಂಬದಿ ಕ್ಯಾಮರಾ ಹೊಂದಿದೆ! 13 ಮೆಗಾ ಪಿಕ್ಸಲ್‌ ಸೆಲ್ಫಿà ಕ್ಯಾಮರಾ ಹೊಂದಿದೆ.

48 ಮೆಗಾಪಿಕ್ಸಲ್‌ ಎಂದರೆ ಅದು ಸಂಪೂರ್ಣ ನೈಜ 48 ಮೆಗಾ ಪಿಕ್ಸಲ್‌ ಅಲ್ಲ. ಈ ಕ್ಯಾಮರಾದಲ್ಲಿರುವುದು ಸ್ಯಾಮ್‌ಸಂಗ್‌ ಐಸೋಸೆಲ್‌ ಜಿಎಂ1 ಎಂಬ ಸೆನ್ಸರ್‌. ಇದು 48 ಮೆಗಾಪಿಕ್ಸಲರ್‌ ಉಳ್ಳ ಸೋನಿ ಐಎಂಎಕ್ಸ್‌ 586 ಸೆನ್ಸರ್‌ಗೆ ಸರಿ ಸಮವಲ್ಲ. ಸೋನಿ ಐಎಂಎಕ್ಸ್‌ 586 ಸೆನ್ಸರ್‌ನಲ್ಲಿ ಪಿಕ್ಸೆಲ್‌Yಳು ನೈಜ 48 ಮೆಗಾಪಿಕ್ಸಲ್‌ ರೆಸಲೂಶನ್‌ ಹೊಂದಿವೆ. ರೆಡ್‌ಮಿ ನೋಟ್‌ 7 ನಲ್ಲಿರುವ ಸ್ಯಾಮ್‌ಸಂಗ್‌ ಜಿಎಂ1 ಸೆನ್ಸರ್‌ನಲ್ಲಿ 12 ಮೆಗಾಪಿಕ್ಸಲ್‌ ಇದ್ದು, ಇದು ಚಿತ್ರಗಳನ್ನು 48 ಮೆಗಾಪಿಕ್ಸಲ್‌ ಅಗಿ ಪರಿವರ್ತಿಸುತ್ತದೆ ಎಂದು 91 ಮೊಬೈಲ್ಸ್‌ನ ಪ್ರಸಿದ್ಧ ವಿಮರ್ಶಕ ಅಭಿಮಾನ್‌ ಬಿಸ್ವಾಸ್‌ ಹೇಳುತ್ತಾರೆ. ಅಲ್ಲದೇ 48 ಮೆಗಾಪಿಕ್ಸಲ್‌ ಚಿತ್ರದ ರೆಸಲೂಷನ್‌ ಬರಬೇಕಾದರೆ ಕ್ಯಾಮರಾ ಇಂಟರ್‌ಫೇಸ್‌ನಲ್ಲಿ ಪ್ರೊ ಮೋಡ್‌ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಈಗ ಮೊಬೈಲ್‌ಗ‌ಳಲ್ಲಿ 48 ಮೆಗಾಪಿಕ್ಸಲ್‌ ರೇಸ್‌ ಆರಂಭವಾಗಿದೆ. ಸಾಮಾನ್ಯ ಜನರು ಹೆಚ್ಚು ಮೆಗಾಪಿಕ್ಸಲ್‌ ಇದ್ದಷ್ಟೂ ಫೋಟೋಗಳು ಹೆಚ್ಚು ಚೆನ್ನಾಗಿ ಬರುತ್ತವೆ ಎಂದು ನಂಬಿರುವುದರಿಂದ, ರೇಸ್‌ಗೆ ಬಿದ್ದ ಶಿಯೋಮಿ ತಾನೂ 48 ಮೆಗಾಪಿಕ್ಸಲ್‌ ಅನ್ನುತಾಂತ್ರಿಕವಾಗಿ ತೋರಿಸಿದೆ!

15 ಸಾವಿರದೊಳಗಿನ ಫೋನ್‌ನಲ್ಲಿ ಈ ಥರದ್ದೊಂದು ಪ್ರಯತ್ನಕ್ಕೆ ಶಿಯೋಮಿ ಮುಂದಾಗಿರುವುದು ಸ್ವಾಗತಾರ್ಹವೇ. ಈ ದರಕ್ಕೆ ಇದು ಒಳ್ಳೆಯ ಕ್ಯಾಮರಾ ಫೋನ್‌ ಆಗುವುದರಲ್ಲಿ ಸಂದೇಹವಿಲ್ಲ. 4000 ಎಂಎಎಚ್‌ ಬ್ಯಾಟರಿ, ಲೋಹ ಮತ್ತು ಗಾಜಿನ ಆಕರ್ಷಕ ವಿನ್ಯಾಸ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌, ವೇಗದ ಚಾರ್ಜಿಂಗ್‌, ಸ್ನಾಪ್‌ಡ್ರಾಗನ್‌ 660 ಪ್ರೊಸೆಸರ್‌, ಉತ್ತಮ ಕ್ಯಾಮರಾ, 15 ಸಾವಿರ ರೂ. ದರ ವಲಯದಲ್ಲಿರುವುದರಿಂದ ಈ ಫೋನ್‌ ಗ್ರಾಹಕರ ಮನ ಸೆಳೆಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಇದು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ದೊರಕಲಿದ್ದು, ಫೋನ್‌ ಕೊಳ್ಳಲು ಸಾಮಾನ್ಯ ಗ್ರಾಹಕರು ಬಹಳ ಕಷ್ಟಪಡಬೇಕಾಗುತ್ತದೆ. ವಾರಕ್ಕೊಮ್ಮೆ ಫ್ಲಾಶ್‌ ಸೇಲ್‌ಗ‌ಳಿಗೆ ಕಾದು ಕೊಳ್ಳುವುದೆಂದರೆ ಅದೊಂದು ದೊಡ್ಡ ರಗಳೆ. ಮೊದಲ ಸೇಲ್‌ನಲ್ಲಿ 30 ಸೆಕೆಂಡಿನೊಳಗೆ ರೆಡ್‌ಮಿ 7, ಇಷ್ಟು ಲಕ್ಷ ಫೋನ್‌ ಖಾಲಿಯಾಯಿತೆಂದು ಶಿಯೋಮಿಯ ಭಾರತದ ಮುಖ್ಯಸ್ಥ ಮನುಕುಮಾರ್‌ ಜೈನ್‌ ಫೇಸ್‌ಬುಕ್‌ನಲ್ಲಿ, ಟ್ವಿಟರ್‌ನಲ್ಲಿ ಹಾಕಿಕೊಳ್ಳುವುದಂತೂ ಖಚಿತ!

– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.