ಕಾರ್ಮಿಕರ ಪಾದ ತೊಳೆದ ಮೋದಿ
Team Udayavani, Feb 25, 2019, 12:30 AM IST
ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಸ್ವಚ್ಛತಾ ಕಾರ್ಮಿಕರ ಪಾದ ತೊಳೆದಿದ್ದಾರೆ.
ಕುಂಭ ಮೇಳದಲ್ಲಿ ಸ್ವಚ್ಛತೆ ಕಾಪಾಡುವ ಕಾರ್ಮಿಕರಿಗೆ ಸ್ವತ್ಛ ಕುಂಭ ಸ್ವತ್ಛ ಆಭಾರ್ ಪುರಸ್ಕಾರ ನೀಡುವ ಕಾರ್ಯಕ್ರಮ ಇದಾಗಿದ್ದು, ಪಾದ ತೊಳೆಯಲು ಖುದ್ದು ದೇಶದ ಪ್ರಧಾನಿಯೇ ಆಗಮಿಸಿದ್ದು ಸ್ವಚ್ಛತಾ ಕಾರ್ಮಿಕರಿಗೆ ಅಚ್ಚರಿ ಉಂಟು ಮಾಡಿದೆ. ಸ್ವಚ್ಛತಾ ಕಾರ್ಮಿಕರ ಪೈಕಿ ಓರ್ವ ಮಹಿಳೆಯೂ ಇದ್ದು, “ಇದು ನನ್ನ ಜೀವನದ ಅತ್ಯಂತ ಖುಷಿಯ ಕ್ಷಣ. ಕನಸಿನಂತಿತ್ತು. ಎಲ್ಲರೊಂದಿಗೂ ಇದನ್ನು ನಾನು ಹೇಳಿಕೊಳ್ಳುತ್ತೇನೆ’ ಎಂದಿದ್ದಾರೆ.
ಸ್ವಚ್ಛತಾ ಕಾರ್ಮಿಕರ ಪಾದ ತೊಳೆಯುವುದು ಮತ್ತು ಅವರ ಆಶೀರ್ವಾದ ಪಡೆಯುವುದು ನನ್ನನ್ನು ಭಾವುಕನನ್ನಾಗಿಸಿದೆ. ಈ ಕಾರ್ಮಿಕರು ಇಂಚಿಂ ಚನ್ನೂ ಸ್ವಚ್ಛವಾಗಿಡುತ್ತಾರೆ. ಆದರೆ ಅವರನ್ನು ಯಾರೂ ಗುರುತಿಸುವುದಿಲ್ಲ. ಈಗ ಅವರ ಕೆಲಸ ನಮಗೆ ದೆಹಲಿಯವರೆಗೂ ತಲುಪುತ್ತಿದೆ. ಈ ಕುಂಭ ಮೇಳದಲ್ಲಿ ಶ್ರಮಿಸಿದ ಕೆಲಸಗಾರರಿಗಾಗಿ ಸ್ವಚ್ಛ ಸೇವಾ ಸಮ್ಮಾನ ಕೋಶವನ್ನು ಸ್ಥಾಪಿಸಲಾಗಿದೆ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಕೈಗೊಂಡು ಗಂಗಾರತಿಯನ್ನೂ ಮಾಡಿದ್ದಾರೆ. ಕುಂಭ ಮೇಳದ ಆಯೋಜಕರು ಹಾಗೂ ಶುಚಿತ್ವವನ್ನು ಕಾಪಾಡಲು ಶ್ರಮಿಸಿದ ಕಾರ್ಮಿಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 22 ಕೋಟಿ ಭಕ್ತರನ್ನು ನಿರ್ವಹಿಸುವುದು ಸುಲಭವಲ್ಲ. ಹಿಂದೆಂದಿಗಿಂತಲೂ ಗಂಗಾ ಈಗ ಶುದ್ಧವಾಗಿದೆ. ಇದಕ್ಕೆ ನಮಾಮಿ ಗಂಗೆ ಯೋಜನೆಯೇ ಕಾರಣ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.