ಕೇಂದ್ರ ಚುನಾವಣಾ ಆಯೋಗದಿಂದ “ಸಿ ವಿಜಿಲ್’ ಆ್ಯಪ್
Team Udayavani, Feb 25, 2019, 12:07 AM IST
ಮಣಿಪಾಲ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಅಭ್ಯರ್ಥಿಗಳ ಚುನಾವಣಾ ವೆಚ್ಚ ಅಕ್ರಮಕ್ಕೆ ಅಂಕುಶ ಹಾಕುವಲ್ಲಿ ಪ್ರಜ್ಞಾವಂತ ನಾಗರಿಕರ ಸಹಭಾಗಿತ್ವ ಪಡೆಯಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.
ಇದಕ್ಕಾಗಿ “ಸಿ ವಿಜಿಲ್’ (ಸಿಟಿಜನ್ ವಿಜಿಲ್) ಆ್ಯಪ್ ಸಿದಟಛಿಪಡಿಸಿದೆ. ನಾಗರಿಕರಿಂದ ದೂರುಗಳನ್ನು ಸ್ವೀಕರಿಸುವ ದಿಸೆಯಲ್ಲಿ ಆಯೋಗದ ಚೊಚ್ಚಲ ಉಪಕ್ರಮವಿದು. ನಾಗರಿಕರು ಇದಕ್ಕೆ ಲಾಗಿನ್ ಆಗಿ ಅಥವಾ ಅನಾಮಧೇಯವಾಗಿಯೂ ಈ ಆ್ಯಪ್ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಆಯೋಗ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬಹುದು.
ಗೂಗಲ್ ಪ್ಲೇ ಸ್ಟೋರ್‌ನಿಂದ “ಸಿ ವಿಜಿಲ್’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಲಾಗಿನ್‌ಗೆ ಮೊಬೈಲ್ ನಂಬರ್, ಓಟಿಪಿ ಮತ್ತು ಇತರ ಮಾಹಿತಿನೀಡಬೇಕು. ಅನಾಮಧೇಯವಾಗಿ ದೂರು ನೀಡಲು ಇಚ್ಛಿಸುವವರು “ಅನಾನಿಮಸ್’ ಆಯ್ಕೆ ಯನ್ನು ಮಾಡಿಕೊಳ್ಳಬಹುದು. ಈಗಾಗಲೇ ಆ್ಯಪ್ ಬಳಕೆ ಬಗ್ಗೆ ಸೆಕ್ಟರ್ ಅಧಿಕಾರಿಗಳು, ಸ್ಕ್ವಾಡ್, ಚುನಾವಣಾಧಿಕಾರಿಗಳು ಮತ್ತು ಪೊಲೀಸರಿಗೆ ತರಬೇತಿ ನೀಡಲಾಗಿದೆ. ನಾಗರಿಕರಿಗೆ ಮಾಹಿತಿ ನೀಡುವ ಕಾರ್ಯ ಶೀಘ್ರವೇ ಆರಂಭವಾಗಲಿದೆ.
ಏನು ವಿಶೇಷ?: ಆ್ಯಪ್‌ನಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಫೋಟೋ, ವಿಡಿಯೋಗಳನ್ನು ಕಳುಹಿಸಬಹುದು. ಈ ದೂರುಗಳು ಜಿಲ್ಲಾ ಸಂಪರ್ಕ ಕೇಂದ್ರದ ಮೂಲಕ ಘಟನಾ ಸ್ಥಳದ ಬಳಿ ಕಾರ್ಯ ನಿರ್ವಹಿಸುತ್ತಿರುವ ಫ್ಲೈಯಿಂಗ್‌ಸ್ಕ್ವಾಡ್ ಅಥವಾ ಇತರ ಚುನಾವಣಾ ಧಿಕಾರಿಗಳ ತಂಡಕ್ಕೆ ರವಾನೆಯಾಗುತ್ತವೆ.
ಏನು ಪ್ರಯೋಜನ?: ನ್ಯಾಯಸಮ್ಮತ ಚುನಾವಣೆಗೆ ನಾಗರಿಕರು ಸಹಕರಿಸಲು ಇದೊಂದು ಅವಕಾಶ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಖುದ್ದಾಗಿ ನೀಡಲು ಹಿಂಜರಿಯುವವರು, ಇನ್ನು ಕೆಲವು ಪ್ರಕರಣಗಳಲ್ಲಿ ದೂರು ಸಲ್ಲಿಸಿದರೂ ತಕ್ಷಣದ ಕ್ರಮವಾಗುವಲ್ಲಿ ವಿಳಂಬವಾಗುತ್ತದೆ ಎನ್ನುವವರು ಈ ಆ್ಯಪ್ ಬಳಸಬಹುದು. ಕಾರಣ ಈ ವ್ಯವಸ್ಥೆಯಲ್ಲಿ ಮಾಹಿತಿ ತಕ್ಷಣ ಸಂಬಂಧಪಟ್ಟವರಿಗೆ ರವಾನೆಯಾಗುತ್ತದೆ. ಫೋಟೊ, ವಿಡಿಯೋ ಸಾಕ್ಷ್ಯಗಳಿರು ವುದರಿಂದ ತಪ್ಪಿತಸ್ಥರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವುದೂ ಕಷ್ಟ. ಜಿಪಿಎಸ್, ಐಪಿ ಮಾಹಿತಿ ಇರುವುದರಿಂದ ಅನಾಮಧೇಯರು ಸುಳ್ಳು ದೂರು ನೀಡಲಾಗದು ಹಾಗೂ ಆ ಮೂಲಕ ಚುನಾವಣಾಧಿಕಾರಿಗಳ ಗಮನ ಬೇರೆಡೆ ಸೆಳೆಯಲೂ ಆಗದು.
ಜಿಪಿಎಸ್ ಆಧಾರ: ನಾವು ಕಳುಹಿಸುವ ಮಾಹಿತಿಯು ಘಟನಾ ಸ್ಥಳದ ಜಿಪಿಎಸ್ ಲೊಕೇಶನ್ ಆ್ಯಪ್ ಮೂಲಕ ರವಾನೆಯಾಗುವುದರಿಂದ ಅಧಿಕಾರಿಗಳು ಧಾವಿಸುವುದಕ್ಕೂ ಸುಲಭ. ಇದು ಜಿಲ್ಲಾಮಟ್ಟದಲ್ಲಿ ರೂಟ್ ಮ್ಯಾಪ್‌ನೊಂದಿಗೆ ಸಂಯೋಜಿತಗೊಂಡಿರುತ್ತದೆ. ಆ್ಯಪ್‌ನಲ್ಲಿ ಲೈವ್ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಲು ಮಾತ್ರ ಅವಕಾಶವಿದೆ.
ಸ್ಟೆಟಸ್ ಟ್ರ್ಯಾಕಿಂಗ್
ಸಲ್ಲಿಸಿದ ದೂರುಗಳು, ರದ್ದುಗೊಂಡ ದೂರುಗಳು, ಪ್ರಕ್ರಿಯೆಯಲ್ಲಿರುವ ದೂರುಗಳು ಮತ್ತು ಒಟ್ಟು ದೂರುಗಳ ಮಾಹಿತಿ ಆ್ಯಪ್‌ನಲ್ಲಿ ಲಭ್ಯ. ದೂರು ಸಲ್ಲಿಕೆ ತತ್‌ಕ್ಷಣ ಸ್ವೀಕೃತಿ ಸಂಖ್ಯೆ ಸಿಗಲಿದ್ದು, ದೂರಿನ ಸ್ಥಿತಿಯನ್ನು ತಿಳಿದುಕೊಳ್ಳಲೂಬಹುದು.
ಯಾವಾಗಿನಿಂದ ಕಾರ್ಯಾರಂಭ?
ಸದ್ಯ ಆ್ಯಪ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ತರಬೇತಿ ಗಾಗಿ ಬಳಸಲಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ತಕ್ಷಣದಿಂದ ಆ್ಯಪ್ ಕಾರ್ಯ ನಿರ್ವಹಿಸಲಿದೆ. ದೂರುಗಳ ಸಮರ್ಪಕ ನಿರ್ವಹಣೆಗೆ ನಾಗರಿಕರು, ಮಾನಿಟರ್, ಇನ್‌ವೆಸ್ಟಿಗೇಟರ್, ಅಬ್ಸರ್‌ವರ್ ಹೀಗೆ ನಾಲ್ಕು ಲಾಗಿನ್‌ಗಳ ಮೂಲಕ ಆ್ಯಪ್ ಕಾರ್ಯ ನಿರ್ವಹಿಸಲಿದೆ.
ಬೇಕಿದೆ ಕೊಂಚ ಬದಲಾವಣೆ
ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ನಡೆಯುವ ಘಟನೆಗಳು ಅಥವಾ ಇತರ ವ್ಯಕ್ತಿಗಳಿಂದ ಬಂದ ನಂಬಲರ್ಹ ಮಾಹಿತಿ ರವಾನೆಗೆ (ಅಪ್ ಲೋಡ್) ಇದರಲ್ಲಿ ವ್ಯವಸ್ಥೆ ಇಲ್ಲ. ಈ ಸಂಬಂಧ ಕಂಟ್ರೋಲ್ ರೂಂಗೇ ಮಾಹಿತಿ ನೀಡಬೇಕು. ಫೋಟೋ, ವಿಡಿಯೋ ಚಿತ್ರೀಕರಣ ಸಾಧ್ಯವಿರದ ಕಡೆ ಮಾಹಿತಿಯನ್ನು ಮಾತ್ರ (ಮೆಸೇಜ್) ಕಳುಹಿಸಲು ಅವಕಾಶ ಇರಬೇಕು. ಇಲ್ಲಿಯೂ ಸ್ಥಳದ ಗುರುತನ್ನು ಹೊಂದಿರಬೇಕು.
ನೀತಿ ಸಂಹಿತೆ ಜಾರಿ ಬಳಿಕ “ಸಿ ವಿಜಿಲ್’ ಆ್ಯಪ್ ಕಾರ್ಯಾರಂಭ ಮಾಡಲಿದೆ. ಇದರೊಂದಿಗೆ 1950 ಸಹಾಯವಾಣಿ, ತಾ| ಕಂಟ್ರೋಲ್ ರೂಂ ಹಾಗೂ ನೇರವಾಗಿ ಅಧಿಕಾರಿಗಳಿಗೂ ನಾಗರಿಕರು ದೂರು ನೀಡಬಹುದು. ಘಟನಾ ಸ್ಥಳದಿಂದ ಫೋಟೋ/ ವಿಡಿಯೋ ತೆಗೆಯಲು ಸಾಧ್ಯವಾಗದಾಗ ಆ್ಯಪ್ ಮೂಲಕ ಸಂದೇಶ ಕಳುಹಿಸಲು ಅವಕಾಶ ಒದಗಿಸುವಂತೆ ಆಯೋಗವನ್ನು ಕೋರಲಾಗುವುದು.
● ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ, ಉಡುಪಿ
ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.