ಬದುಕಿನ ಸಂತೋಷ ಎಲ್ಲಿದೆ?

Team Udayavani, Feb 25, 2019, 8:08 AM IST

25-february-12.jpg

ಹಣ- ಸಂಪತ್ತು ಇದ್ದರೆ ಖುಷಿಯೂ ಇರುತ್ತೆ ಅಂತ ನಂಬಿರೋ ಜಗತ್ತು ನಮ್ಮದು. ಜಗತ್ತಿನ ಅತ್ಯಂತ ಖುಷಿಯ ಮನುಷ್ಯ ಸಿಕ್ಕರೆ, ಅದು ಪ್ಯಾಲೇಸ್‌ನಲ್ಲೇ  ಎಂದು ಹೇಳುವವರೂ ಇದ್ದಾರೆ. ಅವರ ಈ ತರ್ಕಕ್ಕೆ ಕಾರಣವೂ ಇಲ್ಲದಿಲ್ಲ. ಚಿನ್ನದ ಸಿಂಹಾಸನ, ರತ್ನಾಭರಣಗಳ ಕಿರೀಟ, ಖಜಾನೆಯನ್ನು ತುಂಬಿಕೊಂಡ ಸಂಪತ್ತು, ರಾಜ ವೈಭೋಗ, ಅರಮನೆ, ಸಾಮ್ರಾಜ್ಯಕ್ಕೆ ಬೆಂಗಾವಲಾಗಿ ನಿಂತ ದೊಡ್ಡ ಸೈನ್ಯ… ಇವೆಲ್ಲ ಸಿರಿವೈಭವಗಳನ್ನು ತನ್ನೊಂದಿಗೆ ಇಟ್ಟುಕೊಂಡ ರಾಜ, ಇನ್ನೇನು ತಾನೇ ಕಷ್ಟಪಡಲು ಸಾಧ್ಯ? ಆದರೆ, ಇವ್ಯಾವೂ ಇಲ್ಲದೆಯೂ ಖುಷಿಯಲ್ಲಿರಲು ಸಾಧ್ಯವಿದೆ ಎಂಬುದನ್ನು ರಾಜನೊಬ್ಬ ತೋರ್ಪಡಿಸಿದ್ದಾನೆ. ರಾಜ ಅಂದ ಮಾತ್ರಕ್ಕೆ, ಈತನ ಅರಮನೆ ಊರಿನಗಲ ಹಬ್ಬಿಲ್ಲ, ಒಂದು ಸಮುದ್ರ ತೀರದಲ್ಲಿ ಎಂಟತ್ತು ಅಡಿ ಮಾತ್ರವೇ. ಅಲ್ಲಿ ತನ್ನ ಕೈಯ್ನಾರೆ ಕಟ್ಟಿದ ಮರಳಿನ ಗೂಡೇ ಈತನ ಪ್ಯಾಲೇಸ್‌. ಅದರೆದುರು ಸಿಂಹಾಸನದಂತೆ ಒಂದು ಮರದ ಕುರ್ಚಿ ಇಟ್ಟು, ಚಿನ್ನದಂತೆ ಕಾಣುವ ಲೋಹದಿಂದ ಮಾಡಿದ ವಸ್ತುವನ್ನು, ತಲೆ ಮೇಲೆ ಧರಿಸಿ ಕಿರೀಟವೆಂಬಂತೆ ಕಳೆದ 22 ವರ್ಷಗಳಿಂದ ಸಂಭ್ರಮಿಸುತ್ತಿರುತ್ತಿದ್ದಾನೆ. ಇವನ ಈ ಅವತಾರ ನೋಡಿ, ಅಲ್ಲಿನ ಜನ ‘ಸ್ಯಾಂಡ್‌ ಕಿಂಗ್‌’ ಅಂತಲೇ ಕರೆಯುತ್ತಾರೆ. ಮಾರ್ಸಿಯೋ ಮಿಝೇಲ್ ರಿಯೋ ಡಿ ಜನೈರೋದ ಬರ್ರಾದ ತಿಜುಕಾ ಬೀಚ್‌ ನಲ್ಲಿ ಈ ರಾಜನ ಮರಳಿನ ಸಾಮ್ರಾಜ್ಯ ಕಾಣಿಸುತ್ತೆ.

ಈತ ಒಬ್ಬ ಪುಸ್ತಕ ವ್ಯಾಪಾರಿ. ಒಮ್ಮೆ ಬ್ರೆಜಿಲ್‌ನ ರಾಜನನ್ನು ಭೇಟಿಯಾಗಲು ಹೋಗಿದ್ದಾಗ ಈತನ ಹರಕು ಪೋಷಾಕು ನೋಡಿ ಸೆಕ್ಯೂರಿಟಿ ಗಾರ್ಡ್‌ಗಳು ಒಳಗೆ ಬಿಡಲಿಲ್ಲ. ಹೀಗಾಗಿ ಅಂದೇ ಮಾರ್ಸಿಯೋ ನಿರ್ಧರಿಸಿದಂತೆ ಕಡಲ ತಡಿಯಲ್ಲಿ ಮರಳಿನ ಅರಮನೆ ನಿರ್ಮಿಸಿದ್ದ. ಮಳೆ ಬಂದಾಗ, ಚಂಡಮಾರುತ ಎದ್ದಾಗ, ಈ ಅರಮನೆ ಕುಸಿದು ಬೀಳುತ್ತದೆ. ಕೆಲವೊಮ್ಮೆ ರಕ್ಕಸದ ಅಲೆಗಳಿಗೆ ಕೊಚ್ಚಿ ಹೋಗುತ್ತದೆ. ಆದರೆ, ಮಾರ್ಸಿಯೋ ತಾಳ್ಮೆ ಕಳೆದುಕೊಳ್ಳದೆ ಅಪಾರ ಸಹನೆಯಿಂದ ಮರು ನಿರ್ಮಿಸುತ್ತಾನೆ. ರಾತ್ರಿ ಮರಳಿನ ಅರಮನೆ ಒಳಗೆ ಅಪಾರ ಸೆಕೆಯ ಅನುಭವ ಆದಾಗ ಹೊರಗೆ ಬಂದು ಆಕಾಶ ನೋಡುತ್ತಾ ಮಲಗುತ್ತಾನೆ. ಚಿನ್ನ, ರತ್ನಗಳಿರುವ ಅರಮನೆಯಲ್ಲಿ ಮಲಗುವ ರಾಜನಿಗೆ ರಾತ್ರಿ ನಿದ್ರೆಯೇ ಬರುವುದಿಲ್ಲ. ಆದರೆ, ನನಗೆ ಕಣ್ತುಂಬಾ ನಿದ್ದೆ  ಬರುತ್ತೆ. ಯಾರ ಭಯವೂ ಇಲ್ಲ. ಹಣ- ಐಶ್ವರ್ಯ ಇದ್ದಲ್ಲಿ ಮನುಷ್ಯ ಸಕಲ ನೆಮ್ಮದಿ ಕಳಕೊಂಡಿರುತ್ತಾನೆ ಎನ್ನುತ್ತಾನೆ ಮಾರ್ಸಿಯೋ. ಈಗ ಹೇಳಿ, ಯಾರು ಜಗತ್ತಿನ ಅತ್ಯಂತ ಖುಷಿಯ ಮನುಷ್ಯ? 

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.