ಪುಟ್ಟ ಹೃದಯ ಕೊಟ್ಟ ನಗುವ ಕೆಟ್ಟ ವಿಧಿಯು ಸುಟ್ಟಿತು!


Team Udayavani, Feb 26, 2019, 12:30 AM IST

x-10.jpg

ನಿನ್ನ ಮಾತುಗಳಲ್ಲಿ ಅವನು ಹೊಸತೊಂದು ಬೆರಗಾಗಿ ನಲಿಯುತ್ತಿದ್ದ. ಎಲ್ಲಿಂದ ಮಾತು ಶುರುವಾದರೂ ಅವನತ್ತಲೇ ನಿನ್ನ ಮಾತು ಹೊರಳುತ್ತಿತ್ತು. ನಿನ್ನ ಕಂಗಳು ಹೊಸತೊಂದು ಕನಸು ಕಂಡಂತೆ ಹೊಳೆಯುತ್ತಿದ್ದವು. ನಾನು ರಾತ್ರಿಯಿಡೀ ಉರಿದು ಸೂರ್ಯೋದಯದ ಸಮಯಕ್ಕೆ ಆರಿ ಹೋಗುತ್ತಿರುವ ಹಣತೆಯಂತಾಗಿದ್ದೆ.

ನಿಲುಕದ ನಕ್ಷತ್ರವೇ…
ನನ್ನ ಅಂತರಾಳದಲ್ಲಿ ಒಬ್ಬನೇ ಅದೆಷ್ಟೋ ದಿನಗಳಿಂದ ಅನುಭವಿಸುತ್ತಿದ್ದ ಸಿಹಿ ಸಂಭ್ರಮವೊಂದನ್ನು, ನಿನ್ನ ಮುಖದಲ್ಲಿ ತುಂಬಿ ತುಳುಕುತ್ತಿದ್ದ ಎಂದಿನಂತಿಲ್ಲದ ಹೊಚ್ಚ ಹೊಸ ನಗೆಯೊಂದು ಕೊಂದು ಹಾಕಿತು. ನಾನೋ ಯಾವತ್ತೂ ಒಳಮುಚ್ಚುಗ. ನನ್ನೊಳಗನ್ನೆಲ್ಲಾ ನಿನ್ನೆದುರು ಹೇಳಿಕೊಳ್ಳೋಣ ಅಂದುಕೊಂಡಾಗೆಲ್ಲಾ, ಬರೀ ಒಣ ಶಬ್ಧಗಳಲ್ಲಷ್ಟೇ ನನ್ನ ಆದ್ರì ಪ್ರೀತಿಯನ್ನ ಯಾಕಾದರೂ ನಿವೇದಿಸಬೇಕು? ಅದೇನಿದ್ದರೂ ಕಣ್ಣ ಭಾಷೆ, ತುಟಿಯಂಚಿನ ಕಿರು ನಗೆಯ ಮಿಂಚಿನಾಸೆ. ಮೌನದಲ್ಲೇ ಎಲ್ಲ ಹೇಳಬಹುದಲ್ಲವಾ ಎಂಬ ಜಿಜ್ಞಾಸೆ. ಕಾಯಿ ಹಣ್ಣಾಗುವವರೆಗೆ ಕಾಯಬೇಕೆಂದು ನನಗೆ ನಾನೇ ಮನದೊಳಗೆ ಕೊಟ್ಟುಕೊಂಡ ಭಾಷೆ. ನಿನ್ನೆಡೆಗೆ ನನ್ನೊಳಗೇ ಇಂಥವೇ ಮುಗಿಯದ ನೂರಾರು ಅನುರಾಗದ ಮೂಲರಾಗಗಳ ಆಲಾಪನೆ. ನೀನೆಂದರೆ ನನ್ನೊಳಗೆ ಅದಮ್ಯ ಆರಾಧನೆ. 

ಆದರೆ ನೀನೆಂಥಾ ತುಂಟ ಹುಡುಗಿ, ನಿಂಗೆ ಇದ್ಯಾವುದೂ  ಅರಿವಿಗೆ ಬರಲೇ ಇಲ್ಲ. ಒಂದು ಪುಟಾಣಿ ಕಾಫಿಬೈಟ್‌ ಮತ್ತೂಂದು ದೊಡ್ಡ ಡೈರಿ ಮಿಲ್ಕ್ ಚಾಕೋಲೇಟ್‌ ಇಟ್ಟು , ಯಾವುದು ಬೇಕು ತಗೋ ಎಂದರೆ; ಹೊಳೆಯುವ ಕಂಗಳಿಂದ, ಖುಷಿಖುಷಿಯಾಗಿ, ಒಂದಿಷ್ಟೂ ಯೋಚಿಸದೇ ದೊಡ್ಡ ಡೈರಿ ಮಿಲ್ಕ್ ಚಾಕ್ಲೇಟನ್ನೇ ಎತ್ತಿಟ್ಟುಕೊಂಡ ಮಗುವಿನಂತೆ ನಿನ್ನ ಸಂಭ್ರಮವಿತ್ತು. 

ನಿನ್ನ ಮಾತುಗಳಲ್ಲಿ ಅವನು ಹೊಸತೊಂದು ಬೆರಗಾಗಿ ನಲಿಯುತ್ತಿದ್ದ. ಎಲ್ಲಿಂದ ಮಾತು ಶುರುವಾದರೂ ಅವನತ್ತಲೇ ನಿನ್ನ ಮಾತು ಹೊರಳುತ್ತಿತ್ತು . ನಿನ್ನ ಕಂಗಳು ಹೊಸತೊಂತು ಕನಸು ಕಂಡಂತೆ ಹೊಳೆಯುತ್ತಿದ್ದವು. ನಾನು  ರಾತ್ರಿಯಿಡೀ ಉರಿದು ಸೂರ್ಯೋದಯದ ಸಮಯಕ್ಕೆ ಆರಿ ಹೋಗುತ್ತಿರುವ ಹಣತೆಯಂತಾಗಿದ್ದೆ. ಭರಿಸಲಾಗದ ಸಂಕಟವನ್ನು ಯಾರೊಂದಿಗೂ ಹಂಚಿಕೊಳ್ಳಲಾಗದ ನಿಸ್ಸಹಾಯಕತೆಯಲ್ಲಿ ನರಳುತ್ತಾ, ನಿನ್ನೆದುರು ನಗುತ್ತಿದ್ದೆ. ಆದರೂ ನಿರ್ಲಜ್ಜ ಮನಸಿಗೆ ನಿನ್ನದೇ ಹುಚ್ಚು.  ನಿನಗೆ ಇವತ್ತಲ್ಲ ನಾಳೆ ನನ್ನ ಪ್ರೀತಿ  ಅರ್ಥವಾಗುತ್ತದೆಂದು ಕಾಯುತ್ತಿದ್ದೆ. ಈಗ ಆ ಕಾಯುವಿಕೆ ಅರ್ಥ ಕಳೆದುಕೊಂಡಿದೆ. ನಮ್ಮಿಬ್ಬರ ಮಧ್ಯೆ ಮತ್ಯಾರೋ ಇದ್ದಾರೆ ಅನ್ನೋದನ್ನ, ಈ ಮನಸು ಅರಗಿಸಿಕೊಂಡಿತಾದರೂ ಹೇಗೆ?

ನಿನ್ನ ರಾಜ ಕುಮಾರ ಮತ್ತೆಲ್ಲೋ ನಿನಗಾಗಿ ಕಾಯುತ್ತಿದ್ದಾನೆ. ನೀನು ಅವನತ್ತಲೇ ಓಡುವ ನದಿ. ಅವನು ಪಕ್ಕನೆ ಸಿಕ್ಕುವ ಕಡಲು. ನಾನೋ ಅದ್ಯಾವುದೋ ಸಾವಿರಾರು ಮೈಲಿಯಾಚಿನ ಕುದಿಯುವ ಮರುಭೂಮಿ. ನನ್ನ ಬದುಕಿನ ಹಾದಿಯಲ್ಲಿ ನಿನ್ನ ಹೆಜ್ಜೆಗಳು ಇವತ್ತಿಗೆ ಮುಗಿಯಿತು. ಇನ್ನೇನಿದ್ದರೂ ನನ್ನದು ಒಬ್ಬಂಟಿ ಖಾಬೋಜಿ ಜೀವನ. ಈ ಮೊದಲೂ ಒಬ್ಬಂಟಿಯೇ! ಆದರೂ ಯಾವತ್ತಾದರೂ ನೀ ನನ್ನೆಡೆಗೆ ನಡೆದು ಬಂದೀಯೆಂಬ ಹಂಬಲವೊಂದು,  ನಿರೀಕ್ಷೆಯ ವೇಷ ತೊಟ್ಟು ಮನದ ಮುಂಬಾಗಿಲು ತೆರೆದು,  ಒಳಮನೆಯಲ್ಲಿ ಪದ್ಮಾಸನ ಹಾಕಿಕೊಂಡು ಕುಳಿತಿತ್ತು. ಇದ್ದ ಒಂದು ಆಸೆಯೂ ಇಂದು ಮಣ್ಣು ಪಾಲಾಯಿತು. 

ಬದುಕಿನ ಪುಟದಲಿ ಬರೆದಿದ್ದ ಒಂದೇ ಒಂದು ಹೆಸರನ್ನೂ, ಕಾಣದ ಕೈಯೊಂದು ಕಣ್ಣ ಮುಂದೆಯೇ ಅಳಿಸಿ ಹಾಕಿದೆ. ಇಷ್ಟು ದಿನ ನನ್ನೊಳಗಿನ ಪ್ರೀತಿಯನ್ನು ಹೇಳಿಕೊಳ್ಳದೇ ಹೋದದ್ದಕ್ಕೆ,  ನೀ ಕೈ ತಪ್ಪಿ ಹೋದೆಯೆಂದು ನನ್ನನ್ನೇ ನಾನು ಶಪಿಸಿಕೊಳ್ಳಲಾ ಅಥವಾ ಹೇಳಿದ್ದರೆ ನಿನ್ನಿಂದ ಆಗುತ್ತಿದ್ದ ನಿರಾಕರಣೆಯ ಶಾಪದಿಂದ ಮುಕ್ತನಾದೆ ಎಂದು ಸಮಾಧಾನ ಹೇಳಿಕೊಳ್ಳಲಾ? 
ಪುಟ್ಟ ಹೃದಯ  ಕೊಟ್ಟ ನಗುವ  
ಕೆಟ್ಟ ವಿಧಿಯು ಸುಟ್ಟಿತು…..
ಕಣ್ಮುಚ್ಚಿ ಕುಳಿತಿದ್ದೇನೆ, ನಾಲ್ಕು ಹನಿಗಳಿಗಾಗಿ ಕಾಯುತ್ತಾ…
  
ಜೀವ ಮುಳ್ಳೂರು

ಟಾಪ್ ನ್ಯೂಸ್

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arest

Kundapura: ಅಂಬರ್‌ ಗ್ರೀಸ್‌ ಮಾರಾಟ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

7

Kasaragod: ಅಂಗಡಿಗೆ ನುಗ್ಗಿದ ಕಾಡು ಹಂದಿ

5

Kadaba: ಮೇಯಲು ಬಿಟ್ಟ ದನದ ಕಾಲು ಕಡಿದ ವ್ಯಕ್ತಿ; ದೂರು

dw

Siddapura: ವಿದ್ಯುತ್‌ ಲೈನಿಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.