ಒಂದು ಟೈಟಾನಿಕ್‌ ಶೋ


Team Udayavani, Feb 26, 2019, 12:30 AM IST

x-13.jpg

ಅತಿಯಾದ ಆತ್ಮವಿಶ್ವಾಸ (ಓವರ್‌ ಕಾನ್ಫಿಡೆನ್ಸ್‌) ಎನ್ನುವುದು ಟೈಟಾನಿಕ್‌ ಹಡಗಿದ್ದಂತೆ. ಅದೆಷ್ಟೋ ಬೃಹತ್ತಾಗಿರಬಹುದು. ಸದೃಢವಾಗಿ ನಿರ್ಮಿತವಾಗಿರಬಹುದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರಬಹುದು. ಆದರೆ, ಮಾರ್ಗದಲ್ಲಿ ಪುಟ್ಟ ಐಸ್‌ಬರ್ಗ್‌ ತಾಕಿದರೂ ಮುಳುಗುವುದು ಖಂಡಿತ. ಆದರೆ, ಆತ್ಮವಿಶ್ವಾಸವನ್ನು ತಹಬದಿಯಲ್ಲಿ ಇರಿಸಿಕೊಳ್ಳುವುದರಿಂದ ಯಾವುದೇ ಅವಘಡಗಳಿಗೆ ತುತ್ತಾಗದಂತೆ ಗುರಿ ಮುಟ್ಟಬಹುದು. ಓವರ್‌ ಕಾನ್ಫಿಡೆನ್ಸ್‌  ಎಂಬ “ಟೈಟಾನಿಕ್‌’ ವಿದ್ಯಾರ್ಥಿಗಳಿಗೆ ಬಹುದೊಡ್ಡ ಸವಾಲು. ಅದನ್ನು ಸುರಕ್ಷಿತವಾಗಿ ಚಲಾಯಿಸುವುದರ ಕುರಿತು ಈ ಬರಹ…

ಅತಿಯಾದರೆ ಅಮೃತವೂ ವಿಷ ಎಂಬ ನಾಣ್ಣುಡಿಯನ್ನು ಎಲ್ಲರೂ ಕೇಳಿರುತ್ತಾರೆ. ಅದೇ ರೀತಿ ಆತ್ಮವಿಶ್ವಾಸ ಕೂಡಾ. ಒಬ್ಬ ವಿದ್ಯಾರ್ಥಿಗೆ ಆತ್ಮವಿಶ್ವಾಸ ಅದಮ್ಯ ಬಲವನ್ನು ತುಂಬಬಲ್ಲುದು ನಿಜ. ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಪ್ರತಿಯೊಬ್ಬ ವಿದ್ಯಾರ್ಥಿಗೂ ಆತ್ಮವಿಶ್ವಾಸ ಎನ್ನುವುದು ಖಂಡಿತವಾಗಿ ಇರಲೇಬೇಕು. ಆದರೆ, ಅದು ಮಿತಿ ಮೀರದಂತೆ ಎಚ್ಚರ ವಹಿಸಿದಾಗಲಷ್ಟೆ ಅದರ ಪ್ರಯೋಜನ ವಿದ್ಯಾರ್ಥಿಗೆ ದೊರಕುವುದು. ಒಂದು ವೇಳೆ ಆತ್ಮವಿಶ್ವಾಸ ರವಷ್ಟು ಮಿತಿ ಮೀರಿದರೂ ಅದರಿಂದ ತೊಂದರೆ ತಪ್ಪಿದ್ದಲ್ಲ. ಎಲ್ಲರೂ ಸೂಪರ್‌ಮ್ಯಾನ್‌ ಆಗುವುದಕ್ಕೆ ಸಾಧ್ಯವಿಲ್ಲ. ಕಾಮನ್‌ ಮ್ಯಾನ್‌ ಆಗುವುದರಲ್ಲೂ ತಪ್ಪಿಲ್ಲ. ತಪ್ಪು ಎಲ್ಲಾಗುತ್ತದೆಂದರೆ ಕಾಮನ್‌ ಮ್ಯಾನ್‌ ತನ್ನನ್ನು ತಾನು ಸೂಪರ್‌ಮ್ಯಾನ್‌ ಎಂದುಕೊಂಡು ಹಾರಲು ಹೋದಾಗ!

ಯಾರು ಓವರ್‌ ಕಾನ್ಫಿಡೆಂಟ್‌?
ಒಬ್ಬ ವ್ಯಕ್ತಿ ತನ್ನ ಸಾಮರ್ಥ್ಯವನ್ನೂ, ಬಲ ಹೀನತೆಯನ್ನೂ ತಿಳಿದುಕೊಂಡಿರಬೇಕು, ತನ್ನಿಂದ ಏನು ಮಾಡಲು ಸಾಧ್ಯ, ಏನನ್ನು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಸರಿಯಾಗಿ ಅಂದಾಜಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು. ಅದು ಸಾಧ್ಯವಾದಾಗ ಮಾತ್ರ ಆತ ಕಲಿಕೆಯಲ್ಲಷ್ಟೇ ಅಲ್ಲ; ಜೀವನದಲ್ಲಿ ಅದೆಂಥದ್ದೇ ಸವಾಲುಗಳನ್ನೂ ಯಶಸ್ವಿಯಾಗಿ ಎದುರಿಸಬಲ್ಲ. ಯಾವಾಗ ನಮ್ಮ ಸಾಮರ್ಥ್ಯವನ್ನು ಇರುವುದಕ್ಕಿಂತಲೂ ಹೆಚ್ಚಾಗಿದೆಯೆಂದು ಭ್ರಮಿಸಿಕೊಳ್ಳುತ್ತೇವೋ, ಆಗ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಡವಿ ಬೀಳುತ್ತೇವೆ.

ಅತಿಯಾದ ಆತ್ಮವಿಶ್ವಾಸವನ್ನು ಪತ್ತೆ ಹಚ್ಚುವುದು ಹೇಗೆ? ಇದನ್ನು ಕಾನ್ಫಿಡೆಂಟ್‌ ಮತ್ತು ಓವರ್‌ ಕಾನ್ಫಿಡೆಂಟ್‌ ನಡುವಿನ ವ್ಯತ್ಯಾಸವನ್ನು ಪತ್ತೆ ಹಚ್ಚುವುದರಿಂದ ತಿಳಿದುಕೊಳ್ಳಬಹುದು. ಒಂದು ಪುಸ್ತಕದಂಗಡಿಗೆ ಓವರ್‌ ಕಾನ್ಫಿಡೆಂಟ್‌ ವಿದಾರ್ಥಿ ಮತ್ತು ಕಾನ್ಫಿಡೆಂಟ್‌ ವಿದ್ಯಾರ್ಥಿ ಇಬ್ಬರೂ ಹೋಗುತ್ತಾರೆ ಎಂದಿಟ್ಟುಕೊಳ್ಳೋಣ. ಅತಿಯಾದ ಆತ್ಮವಿಶ್ವಾಸವುಳ್ಳವ, ತನ್ನ ಓದಿಗೆ ನಿಲುಕದ, ಅರ್ಥಮಾಡಿಕೊಳ್ಳಲು ಕಷ್ಟಕರವೆನಿಸುವ ಪುಸ್ತಕವನ್ನು ಖರೀದಿಸುತ್ತಾನೆ. ಆ ಪುಸ್ತಕದ ಮೊದಲ ಹತ್ತು ಪುಟಗಳನ್ನು ಓದುವಷ್ಟರಲ್ಲಿ ಆತನ ಶಕ್ತಿಯೆಲ್ಲಾ ಉಡುಗಿ ಹೋಗಿ ಅಲ್ಲಿಗೆ ಓದನ್ನು ನಿಲ್ಲಿಸಿ ಕಪಾಟಿನಲ್ಲಿಡುತ್ತಾನೆ. ಆ ಪುಸ್ತಕ ಹಾಗೆಯೇ ಉಳಿದು ಹೋಗುತ್ತದೆ. ಅದೇ ತನ್ನ ಬಗ್ಗೆ ಸರಿಯಾಗಿ ತಿಳಿದುಕೊಂಡ ಆತ್ವವಿಶ್ವಾಸವುಳ್ಳ ವ್ಯಕ್ತಿ, ತನ್ನ ಬುದ್ಧಿಗೆ ನಿಲುಕದ ವಿಚಾರಗಳತ್ತ ಗಮನ ಹರಿಸುವುದೇ ಇಲ್ಲ. ಓದಲು ಸುಲಭವೆನಿಸಿದ ಪುಸ್ತಕವನ್ನೇ ಆತ ಖರೀದಿಸುತ್ತಾನೆ. ಒಂದು ವಾರದಲ್ಲೇ ಓದು ಮುಗಿಸಿ ಮತ್ತೂಂದು ಪುಸ್ತಕ ಕೊಳ್ಳಲು ಪುಸ್ತಕದಂಗಡಿಗೆ ಬರುತ್ತಾನೆ. ಈ ರೀತಿ ಮಾಡುತ್ತಾ ಆತ ಅಸಂಖ್ಯ ಪುಸ್ತಕಗಳನ್ನು ಓದಿ ಮುಗಿಸಿರುತ್ತಾನೆ. ಇದೇ ವ್ಯತ್ಯಾಸ.

ಅಮೆರಿಕ v/s ಏಷ್ಯಾ
ಶಿಯು ಮತ್ತು ಕ್ಲಾಸೆನ್‌ ಎಂಬ ಶಿಕ್ಷಣ ತಜ್ಞರು ಜಗತ್ತಿನ ವಿವಿಧ ದೇಶಗಳ ಸುಮಾರು ಒಂದೂವರೆ ಲಕ್ಷ ವಿದ್ಯಾರ್ಥಿಗಳನ್ನು “ಅತಿಯಾದ ಆತ್ಮವಿಶ್ವಾಸ’ದ ವಿಚಾರವಾಗಿ ಅಧ್ಯಯನಕ್ಕೊಳಪಡಿಸಿದ್ದರು. ಅದರಿಂದ ಅಚ್ಚರಿ ಎನ್ನಿಸುವ ವಿಚಾರಗಳು ಹೊರಬಂದಿದ್ದವು. ಪ್ರೈವಸಿ(ಖಾಸಗಿತನ) ಮೇಂಟೇನ್‌ ಮಾಡುವ ಅಮೆರಿಕ ಮತ್ತು ಸ್ವಿಟlರ್‌ಲೆಂಡ್‌ನ‌ಂಥ ಮುಂದುವರಿದ ದೇಶಗಳಲ್ಲಿ  ಓವರ್‌ ಕಾನ್ಫಿಡೆಂಟ್‌ ವಿದ್ಯಾರ್ಥಿಗಳು ಹೆಚ್ಚಿದ್ದರು. ಅದೇ ಏಷ್ಯಾದ ರಾಷ್ಟ್ರಗಳ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಇದ್ದವರೇ ಹೆಚ್ಚಾಗಿ ಕಂಡುಬಂದಿದ್ದರು. ಅವರ ಓದಿನ ಮಟ್ಟ ಕೂಡಾ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುವಂತಿತ್ತು. ಇದಕ್ಕೆ ಕಾರಣ, ಖಾಸಗಿತನ ಎನ್ನುವುದು ಶಿಯು ಅವರ ಅಭಿಪ್ರಾಯ. ಅಮೆರಿಕದ ವಿದ್ಯಾರ್ಥಿಗಳು ಜಗತ್ತಿನತ್ತ ಕಣ್ಣುಹಾಯಿಸುತ್ತಲೇ ಇರಲಿಲ್ಲ. ತಾವು ಅಂದುಕೊಂಡಿದ್ದೇ ನಿಜ, ತಾವು ಮೆಚ್ಚಿದ್ದೇ ಶ್ರೇಷ್ಠ ಎಂಬ ಭಾವನೆ ಅವರಲ್ಲಿತ್ತು. ಅದೇ ಏಷ್ಯಾದ ವಿದ್ಯಾರ್ಥಿಗಳು ಅಮೆರಿಕದವರಿಗೆ ಹೋಲಿಸಿದರೆ ಸಾಮಾಜಿಕ ಜೀವಿಗಳಾಗಿದ್ದರು. ತಮ್ಮದನ್ನು ತಿಳಿಯುವುದರ ಜೊತೆಗೆ ಮಿಕ್ಕ ದೇಶಗಳ ಸಮಾಚಾರಗಳನ್ನೂ, ಅಲ್ಲಿನ ಸ್ಥಿತಿಗತಿ, ಪದ್ಧತಿ ಮುಂತಾದ ವಿಚಾರಗಳತ್ತಲೂ ಗಮನ ಹರಿಸುತ್ತಿದ್ದರು. ಹೀಗಾಗಿ ಅವರಿಗೆ ಯಾವುದು ಸರಿ ಯಾವುದು ತಪ್ಪು ಎನ್ನುವ ನಿರ್ಧಾರವನ್ನು ತಪ್ಪಿಲ್ಲದಂತೆ ಕೈಗೊಳ್ಳುವುದು ಸಾಧ್ಯವಾಗಿತ್ತು. ಆತ್ವವಿಶ್ವಾಸವೆಂದರೆ ಇದೇ.

ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಹೀಗೆ…
ಓದುವ ಹವ್ಯಾಸ ಬೆಳೆಸಿಕೊಂಡವರಿಗೆ ಕಲಿಕೆಯಲ್ಲಿ ಏಳಿಗೆ ಹೊಂದುವುದು ಬಹಳ ಸುಲಭ. ಪುಸ್ತಕಗಳಿರಬಹುದು, ಇಂಟರ್‌ನೆಟ್‌ನಲ್ಲೇ ಆಗಿರಬಹುದು ಅಥವಾ ಇನ್ಯಾವುದೇ ಮಾಧ್ಯಮದ ಮೂಲಕವಾಗಿರಬಹುದು; ಓದುವ ಹವ್ಯಾಸ ವಿದ್ಯಾರ್ಥಿಗೆ ಕಲಿಕೆಯಲ್ಲಿ ಸಹಕರಿಸುತ್ತದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. 
ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಕೆಳಗಿನ ಮಾರ್ಗಗಳನ್ನು ಅನುಸರಿಸಿದರೆ ಸಾಕು.

1. ನಮ್ಮನ್ನು ನಾವು ಪರೀಕ್ಷೆಗೆ ಗುರಿಪಡಿಸುತ್ತಿರಬೇಕು 
ತರಗತಿಯಲ್ಲಿ ಕಲಿತ ವಿಚಾರಗಳನ್ನು ಹೇಗೆ ಬದುಕಿನಲ್ಲಿ ಬಳಸಿಕೊಳ್ಳುವುದೆಂದು ವಿದ್ಯಾರ್ಥಿಗಳು ಯೋಚಿಸಲು ಶುರುಮಾಡಬೇಕು. ಇದರಿಂದ ವಿಚಾರಗಳು ಪಠ್ಯಕ್ಕೆ ಸೀಮಿತವಾಗುವುದಿಲ್ಲ. ಹಾಗೆ ಮಾಡುವುದರಿಂದ ಗಣಿತ ಸೂತ್ರವೇ ಇರಬಹುದು, ವೈಜ್ಞಾನಿಕ ಸೂತ್ರವೇ ಆಗಿರಬಹುದು ಪಠ್ಯದಿಂದಾಚೆಗೂ ಅದರ ಜ್ಞಾನವಿಸ್ತಾರ ಹರಡುತ್ತದೆ. ಇದರಿಂದ ಆತ್ಮವಿಶ್ವಾಸ ಪ್ರಾಪ್ತವಾಗುತ್ತದೆ.

2. ಹಿಂದಿನ ಫ‌ಲಿತಾಂಶವನ್ನು ವಿಮರ್ಶೆಗೆ ಒಳಪಡಿಸಬೇಕು 
ಹೋಂವರ್ಕ್‌ ಇರಬಹುದು, ಹಿಂದಿನ ಪರೀಕ್ಷೆಯ ಫ‌ಲಿತಾಂಶವೇ ಆಗಿರಬಹುದು. ಇವೆಲ್ಲವೂ ವಿದ್ಯಾರ್ಥಿಗಳಿಗೆ ಮೈಲಿಗಲ್ಲುಗಳಿದ್ದಂತೆ. ಒಂದು ಮೈಲಿಗಲ್ಲು ಮುಂದಿನ ಊರು ಇನ್ನೂ ಎಷ್ಟು ದೂರದಲ್ಲಿದೆ ಎನ್ನುವುದನ್ನು ತಿಳಿಸುತ್ತದೆಯಲ್ಲಾ ಅದೇ ರೀತಿ. ಹೋಂ ವರ್ಕ್‌, ಪರೀಕ್ಷೆ ಫ‌ಲಿತಾಂಶಗಳು, ವಿದ್ಯಾರ್ಥಿ ಯಶಸ್ಸಿನಿಂದ ಎಷ್ಟು ದೂರದಲ್ಲಿದ್ದಾನೆ ಎನ್ನುವುದನ್ನು ತಿಳಿಸುತ್ತವೆ. ಇದರಿಂದ ಅತಿಯಾದ ಆತ್ಮವಿಶ್ವಾಸದಿಂದ ವಿದ್ಯಾರ್ಥಿ ದೂರವಿರಬಹುದು. 

3. ಹೋಲಿಕೆ ಒಳ್ಳೆಯದೇ
ಸಾಮಾನ್ಯವಾಗಿ ಇನ್ನೊಬ್ಬರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಳ್ಳಬಾರದು ಎಂದುಕೊಳ್ಳುತ್ತೇವೆ. ಆದರೆ, ಅದು ಪೂರ್ತಿ ನಿಜವಲ್ಲ. ತಮ್ಮ ಸಹಪಾಠಿಗಳು, ಹಿರಿಯ ವಿದ್ಯಾರ್ಥಿಗಳೊಂದಿಗೆ ಹೋಲಿಸಿಕೊಳ್ಳುವುದರಿಂದೂ ವಿದ್ಯಾರ್ಥಿಯೊಬ್ಬ ತನ್ನ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಬಹುದು. ಉದಾಹರಣೆಗೆ, ಒಬ್ಬ ವಿದ್ಯಾರ್ಥಿಗೆ ಪಠ್ಯಕ್ಕೆ ಸಂಬಂಧಿಸಿದ ವಿಚಾರವೊಂದನ್ನು ಓದಲು ಕಷ್ಟವಾಗುತ್ತಿದ್ದಲ್ಲಿ, ಅದು ತನಗೆ ಮಾತ್ರವೇ ಇಲ್ಲವೇ ಮಿಕ್ಕವರೆಲ್ಲರಿಗೂ ಕಷ್ಟವಾಗುತ್ತಿದೆಯೇ ಎಂಬುದನ್ನು  ತಿಳಿಯುವುದರಿಂದ ವಿದ್ಯಾರ್ಥಿ ತರಗತಿಯಲ್ಲಿ ತನ್ನ ಸ್ಥಾನವೇನೆಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.

4. ತಲುಪುವಂಥ ಗುರಿ ಹಾಕಿಕೊಳ್ಳಿ 
ವಿದ್ಯಾರ್ಥಿಗಳು ತಾವೇ ಸ್ವತಃ ಗುರಿಗಳನ್ನು ಹಾಕಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಆ ಗುರಿಗಳು ಹೇಗಿರಬೇಕೆಂದರೆ ಸುಲಭವಾಗಿ ತಲುಪುವಂತೆ ಇರಬೇಕು. ಈ ಮೇಲೆ ನೀಡಿರುವ ಅಂಶಗಳನ್ನು ಪಾಲಿಸುವುದರಿಂದ ವಿದ್ಯಾರ್ಥಿಗಳಿಗೆ ಸಾಧಿಸಲು ಸಾಧ್ಯವಾಗುವಂಥ ಗುರಿಗಳನ್ನು ಹಾಕಿಕೊಳ್ಳುವುದು ಸಾಧ್ಯವಾಗುತ್ತದೆ. ಸುಲಭ ಗುರಿಗಳನ್ನು  ಬೇಗನೆ ಮುಗಿಸಬಹುದಾದ್ದರಿಂದ ವಿದ್ಯಾರ್ಥಿಯಲ್ಲಿ ಆತ್ಮವಿಶ್ವಾಸ ತುಂಬುತ್ತದೆ.

ಹವನ

ಟಾಪ್ ನ್ಯೂಸ್

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.