ಟಿ20ಯಲ್ಲಿ 8 ಸಾವಿರ ರನ್, ರೈನಾ ಮೊದಲ ಭಾರತೀಯ
Team Udayavani, Feb 26, 2019, 12:35 AM IST
ನವದೆಹಲಿ: ಟಿ20 ಕ್ರಿಕೆಟ್ನಲ್ಲಿ ಸುರೇಶ್ ರೈನಾ 8 ಸಾವಿರ ರನ್ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಒಟ್ಟಾರೆ ವಿಶ್ವದ 6ನೇ ಆಟಗಾರ ಎನ್ನುವ ಸಾಧನೆಯನ್ನು ರೈನಾ ಮಾಡಿದ್ದಾರೆ. ಇವರು ತಮ್ಮ 300ನೇ ಪಂದ್ಯದಲ್ಲಿ ಇಂತಹದೊಂದು ವಿಶೇಷ ಸಾಧನೆಗೆ ಮಾಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಕೂಟದಲ್ಲಿ ರೈನಾ ಪುದುಚೇರಿ ವಿರುದ್ಧದ ಪಂದ್ಯದಲ್ಲಿ 12 ರನ್ಗಳಿಸಿದಾಗ 8 ಸಾವಿರ ರನ್ ಪೂರೈಸಿದರು. ಒಟ್ಟಾರೆ ಟಿ20ನಲ್ಲಿ ರೈನಾ 4 ಶತಕ, 48 ಅರ್ಧಶತಕ ಬಾರಿಸಿದ್ದಾರೆ. ವಿಂಡೀಸ್ ತಾರೆ ಗೇಲ್ (12,298 ರನ್), ನ್ಯೂಜಿಲೆಂಡ್ನ ಬ್ರೆಂಡನ್ ಮೆಕಲಂ (9,922 ರನ್), ವಿಂಡೀಸ್ನ ಕೈರನ್ ಪೊಲಾರ್ಡ್ (8,838 ರನ್),ಪಾಕ್ನ ಶೋಯಿಬ್ ಮಲಿಕ್ (8,603 ರನ್) ಹಾಗೂ ಡೇವಿಡ್ ವಾರ್ನರ್ (8,111 ರನ್) ವಿಶ್ವ ಮಟ್ಟದಲ್ಲಿ ಅತೀ ಹೆಚ್ಚು ರನ್ಗಳಿಸಿರುವ ಅಗ್ರ ಐವರು ಆಟಗಾರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.