ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ರೈತ ಪಾಠಶಾಲೆ
Team Udayavani, Feb 26, 2019, 1:00 AM IST
ಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶನಿವಾರಸಂತೆ ಒಕ್ಕೂಟ ಮತ್ತು ಶನಿವಾರಸಂತೆ ಕಾಫಿ ಮಂಡಳಿ ಸಂಪರ್ಕ ಕೇಂದ್ರ ವತಿಯಿಂದ ಸ್ಥಳೀಯ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಗಾರದಲ್ಲಿ ಕಾಳುಮೆಣಸು, ಬಾಳೆ, ಕಿತ್ತಳೆ ಮುಂತಾದ ತೋಟಗಾರಿಗೆ ಬೆಳೆ, ರೋಗ ನಿಯಂತ್ರಣ, ರೈತರಿಗೆ ಸರಕಾರದಿಂದ ಸಿಗುವ ಸೌಲಭ್ಯದ ಕುರಿತು ಸೋಮವಾರಪೇಟೆ ತೋಟಗಾರಿಕೆ ಇಲಾಖೆ ಅಧಿಕಾರಿ ಕಾವ್ಯ ಮಾಹಿತಿ ನೀಡಿ-ತೋಟಗಾರಿಕಾ ಬೆಳೆಗಲಾದ ಕಾಳುಮೆಣಸು, ಬಾಳೆ, ಅಡಿಕೆ ಸೇರಿದಂತೆ ಅಲ್ಪಾವಧಿ ಬೆಳೆಯಾದ ಶುಂಠಿ ಬೆಳೆಯುವುದ್ದರಿಂದ ರೈತರಿಗೆ ಲಾಭದಾಯಕವಾಗುತ್ತದೆ, ಆದರೆ ರೈತರು ಬೆಳೆಯ ನಿರ್ವಹಣೆಯನ್ನು ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ ಇದರಿಂದ ಹೆಚ್ಚಿನ ಇಳುವರಿ ಸಿಗುತ್ತದೆ ಎಂದರು. ಕಾಫಿತೋಟದ ಉಪ ಬೆಳೆಯಲ್ಲಿ ಒಂದಾದ ಕಾಳುಮೆಣಸು ಲಾಭದಾಯಕ ಬೆಳೆಯಾಗಿದೆ, ಆದರೆ ರೈತರು ಕಾಳುಮೆಣಸು ಬೆಳೆಗೆ ಔಷಧಿ ಸಿಂಪಡನೆ, ನೀರು ಹಾಯಿಸುವಿಕೆ ಸೇರಿದಂತೆ ಕಾಳುಮೆಣಸು ಬಳ್ಳಿಯನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡುತ್ತಿರುವುದ್ದರಿಂದ ಕಾಳೆಮೆನಸು ಬಳ್ಳಿಗೆ ರೋಗಗಳು ಬಂದು ಬೆಳೆ ಕುಂಟಿತಗೊಳ್ಳಲು ಕಾರಣವಾಗುತ್ತಿದೆ ಎಂದರು. ತೋಟಗಾರಿಕೆ ಇಲಾಖೆ ಕಾಳುಮೆಣಸು ಬೆಳೆಯಿಂದ ರೈತರಿಗೆ ಹೆಚ್ಚಿನ ಇಳುವರಿ ತೆಗೆಯಬೇಕೆಂಬ ಉದ್ದೇಶದಿಂದ ರೈತರಿಗಾಗಿ ಮಾಹಿತಿ ಕಾರ್ಯಕ್ರಮ ಆಯೋಜನೆ ಮಾಡುತ್ತಿರು ವುದರ xಜಚಿ ಬಾಳೆ, ಅಡುಕೆ ಮುಂತಾದ ಬೆಳೆಗಳನ್ನು ಬೆಳೆಯುವ ಸಲುವಾಗಿ ಔಷಧ, ಸ್ಪಿಂಕ್ಲೆರ್, ಮುಂತಾದ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಿ ಪೋ›ತ್ಸಾಹಿಸಲಾಗುತ್ತಿದೆ, ಈ ನಿಟ್ಟಿನಲ್ಲಿ ರೈತರು ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಿಸಿಕೊಂಡು ತೋಟದ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದು ಹೆಚ್ಚಿನ ಲಾಬಗಳಿಸುವಂತೆ ಸಲಹೆ ನೀಡಿದರು.
ಧರ್ಮಸ್ಥಳ ಸಂಘದ ಶನಿವಾರಸಂತೆ ಎಒಕ್ಕೂಟದ ಅಧ್ಯಕ್ಷೆ ಭುವನೇಶ್ವರಿ ಅವರು ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಗೀತಾ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬಿ ಒಕ್ಕೂಟದ ಅಧ್ಯಕ್ಷೆ ಶಾಹಿದ್‌ತಾಜ್, ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ಸುಬ್ರಮಣಿ, ಶನಿವಾರಸಂತೆ ಸೇವಾ ಪ್ರತಿನಿಧಿ. ಶೋಭಾವತಿ, ದುಂಡಳ್ಳಿ ಪ್ರತಿನಿಧಿ ಪವನ್‌ಉಪಸ್ಥಿತರಿದ್ದರು.
ಬೆಳೆಗಾರರಿಗೆ ಸಬ್ಸಿಡಿಯಲ್ಲಿ ಸಾಲ ಸೌಲಭ್ಯ
ಶನಿವಾರಸಂತೆ ಕಾಫಿ ಮಂಡಳಿಯ ಸಂಪರ್ಕಧಿಕಾರಿ ವಿಶ್ವನಾಥ್ ಮಾಹಿತಿ ನೀಡಿ-ಕಾಫಿ ಮಂಡಳಿಯಿಂದ ಬೆಳೆಗಾರರಿಗೆ 12ನೇ ಹಣಕಾಸು ಯೋಜನೆಯ ಮುಂದುವರೆದ ಭಾಗವಾಗಿ ಹೊಸದಾಗಿ ಕಾಫಿತೋಟ ಮಾಡಲು, ಕೆರೆ ನಿರ್ಮಿಸಲು ಮತ್ತು ಸ್ಪಿಂಕ್ಲರ್ ವ್ಯವಸ್ಥೆಗಾಗಿ ಸಬ್ಸಿಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು. ಕಾಫಿ ಬೆಳೆಗಾರರಿಗೆ ಕಾಫಿಬೋರರ್ ದೊಡ್ಡ ಸಮಸ್ಯೆಯಾಗಿದೆ, ಕಾಫಿ ಮಂಡಳಿ, ಮತ್ತು ವಿಜ್ಞಾನಿಗಳಿಂದ ಕಾಫಿಬೋರರ್ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಔಷಧಿ ಕಂಡುಹಿಡಿಯಲು ಸಾಧ್ಯವಾಗದಿದ್ದರೂ ರೋಗ ಬರುವುದಕ್ಕೆ ಮುಂಚೆ ಕಾಫಿ ಬೋರರ್ ಕೀಟವನ್ನು ನಿಯಂತ್ರಿಸಲು ಔಷಧಿ ಮಾರ್ಗೋಪಾಯಗಳನ್ನು ಕಂಡುಹಿಡಿದು ಇದರ ಬಗ್ಗೆ ರೈತರಿಗೆ ಕಾರ್ಯಗಾರಗಳಲ್ಲಿ ಮಾಹಿತಿ ನೀಡಲಾಗುತ್ತಿದೆ, ಈ ನಿಟ್ಟಿನಲ್ಲಿ ರೈತರು ಪ್ರಾರಂಭದಲ್ಲೆ ಮಾರ್ಗೋಪಾಯಗಳನ್ನು ಅನುಸರಿಸಿದರೆ ಈ ಸಮಸ್ಯೆ ನಿವಾರಣೆ ಯಾಗುತ್ತದೆ ಘಿಬೆಳೆಗಾರರು ಕಾಫಿ ಮಂಡಳಿಯಿಂದ ಸಿಗುವಂತಹ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.