ವಿದ್ಯೆಗೆ ಸಮನಾದ ಬಂಧುವಿಲ್ಲ: ಬಾಳೇಕುಂದ್ರಿ


Team Udayavani, Feb 26, 2019, 4:30 AM IST

gul-1.jpg

ಕಲಬುರಗಿ: ಶಿಕ್ಷಕ ತನ್ನೆಲ್ಲ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದರೆ ವಿದ್ಯಂ ಸರ್ವತ್ರ ಸಾಧನಂ ಆಗುತ್ತದೆ. ಅಲ್ಲದೇ ವಿದ್ಯೆಗೆ ಸಮನಾದ ಬಂಧು ಇಲ್ಲ ಹಾಗೂ ರೋಗಕ್ಕೆ ಸಮನಾದ ಶತ್ರುವಿಲ್ಲ ಎಂದು ಖ್ಯಾತ ಮಕ್ಕಳ ತಜ್ಞೆ ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು. ನಗರದ ಪ್ರತಿಷ್ಠಿತ ಸರ್ವಜ್ಞ ಚಿಣ್ಣರ ಲೋಕ, ಪ್ರಾಥಮಿಕ ಮತ್ತು ಪ್ರೌಢಶಾಲೆ ವಾರ್ಷಿಕೋತ್ಸವ ಹಾಗೂ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ವಿಶೇಷ ಉಪನ್ಯಾಸ ನೀಡಿದರು.

ಮಕ್ಕಳ ಮನಸ್ಸು ಫಲವತ್ತಾದ ಭೂಮಿಯಿದ್ದ ಹಾಗೆ, ಅಲ್ಲಿ ಸದ್ಭಕ್ತಿ, ಸದ್ಭಾವ, ಉತ್ತಮವಾದ ಸಂಸ್ಕೃತಿಯನ್ನು ಬೆಳೆಸಬಹುದಾಗಿದೆ. ಶಿಕ್ಷಣದೊಂದಿಗೆ ಕಲೆ, ಸಾಹಿತ್ಯ, ಸಂಗೀತ ಕಲಿಯಬೇಕು. ದೇಶಪ್ರೇಮ ಬೆಳೆಸಿಕೊಳ್ಳಬೇಕು. ಮಾತೃಭಾಷೆ ಬೆಳೆಸಬೇಕು. ಮಾತೃಭಾಷೆ ಮರೆತರೆ ಮಾತೆ ಮರೆತಂತೆ. ಪಾಲಕರು ಮಕ್ಕಳಿಗೆ ಅಪ್ಪ ಅಮ್ಮ ಎನ್ನುವುದನ್ನು ಕಲಿಸಬೇಕು. 

ಮಾತೃದೇವೋಭವ ಎಂಬ ಭರತ ಭೂಮಿಯಲ್ಲಿ ತಾಯಿಯೇ ದೇವರು. ಮಕ್ಕಳಿಗೆ ನೀಡುವ ಉತ್ತಮ ಶಿಕ್ಷಣ ದೇವರಿಗೆ ಸಲ್ಲಿಸುವ ನೈವೇದ್ಯ. ಮಕ್ಕಳಿಗೆ ಮಾಡುವ ಉಪಚಾರ ದೇವರಿಗೆ ಅಭಿಷೇಕ ಮಾಡಿದಂತೆ ಎಂದು ಹೇಳಿದರು.

ಮನೆಯಲ್ಲಿ ತಯಾರಿಸಿದ ಬೆಲ್ಲದ ಸಿಹಿ, ಉಂಡಿ, ಪಾಯಸ, ಹುಗ್ಗಿ, ಚಕ್ಕಲಿ, ಹಾಲು, ಹಣ್ಣು, ತರಕಾರಿ ಮುಂತಾದ ಆಹಾರ ಕೊಡಬೇಕು. ಉಪ್ಪು, ಸಕ್ಕರೆ, ಮೈದಾ – ಇವು ಬಿಳಿ ವಿಷವಿದ್ದಂತೆ, ಇವನ್ನು ಕಡಿಮೆಮಾಡಬೇಕು. ಬೇಕರಿಯಲ್ಲಿ ಸಿಗುವ ಜಂಕ್‌ ಫುಡ್‌ ತಿಂದು ಆರೋಗ್ಯ ಹಾಳು ಮಾಡಿಕೊಳ್ಳಲು ಬಿಡಬಾರದು ಎಂದು ಹೇಳಿದರು ಹಿಂದಿನ ಕಾಲದ ಗುರುಕುಲ ಶಿಕ್ಷಣ ಹೋಗಿ ಈಗ ಕಾನ್ವೆಂಟ್‌ ಶಾಲೆ ಶಿಕ್ಷಣ ಪಡೆದು ಮಕ್ಕಳು ತಮ್ಮ ಸಂಸ್ಕೃತಿ ಮರೆಯಬಾರದು. ಪಾಲಕರನ್ನು ವೃದ್ಧಾಶ್ರಮಕ್ಕೆ ಕಳುಹಿಸಬಾರದು. ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ. ಅವರೇ ಕಣ್ಣಿಗೆ ಕಾಣುವ
ದೇವರು ಎಂದು ಹೇಳಿದರು. ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ| ಶರಣಬಸಪ್ಪಗೌಡ ದರ್ಶನಾಪುರ, ಸರ್ವಜ್ಞ ಶಿಕ್ಷಣ ಸಂಸ್ಥೆ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸುತ್ತಿದೆ. ಮಕ್ಕಳ ಆಸಕ್ತಿ ಕ್ಷೇತ್ರ ಅರಿತು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಶಾಸಕ ದತ್ತಾತ್ರೇಯ ಪಾಟೀಲ ಮಾತನಾಡಿದರು. ಸರ್ವಜ್ಞ ಚಿಣ್ಣರ ಲೊಕದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಪ್ರಾಚಿತಾ ಮಾಲಿ ರಾಷ್ಟ್ರೀಯ ಮಟ್ಟದಲ್ಲಿ ಅಬ್ಯಾಕಸ್‌ ಪರೀಕ್ಷೆಯಲ್ಲಿ 4ನೇ ರ್‍ಯಾಂಕ್‌ ಪಡೆದ ಪ್ರಯುಕ್ತ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮೊದಲು ಶತಾಯುಷಿ ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಹಾಗೂ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರಿಗೆ ಹಾಡಿನ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಿವೃತ್ತ ನ್ಯಾಯಾಧೀಶರಾದ ಎಸ್‌.ಎಂ. ರಡ್ಡಿ. ಎನ್‌. ಶರಣಪ್ಪ, ನ್ಯಾಯಧೀಶರಾದ ಅಯ್ಯನಗೌಡ ಪಾಟೀಲ, ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥೆ ಸಂಸ್ಥಾಪಕರಾದ ಪ್ರೊ| ಚನ್ನಾರಡ್ಡಿ ಪಾಟೀಲ, ಸಂಸ್ಥೆ ಅಧ್ಯಕ್ಷೆ ಗೀತಾ ಚನ್ನಾರಡ್ಡಿ ಪಾಟೀಲ, ಕಾರ್ಯದರ್ಶಿಗಳಾದ ಅಭಿಷೇಕ ಚನ್ನಾರಡ್ಡಿ ಪಾಟೀಲ, ಪ್ರಶಾಂತ ಕುಲಕರ್ಣಿ, ಕರುಣೇಶ ಹಿರೇಮಠ, ಪೃಥ್ವಿರಾಜಗೌಡ, ಗುರುರಾಜ ಕುಲಕರ್ಣಿ, ಪಾಲಕರು, ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು. ಕುಮಾರಿ ಸ್ನೇಹಾ ಕುಲಕರ್ಣಿ ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಡಾ| ಸಂತೋಷಕುಮಾರ ನಾಗಲಾಪುರ ಸ್ವಾಗತಿಸಿದರು. ಗಂಗಾಧರ ಬಡಿಗೇರ ನಿರೂಪಿಸಿ, ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. 

ಟಾಪ್ ನ್ಯೂಸ್

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

Maha Election; ಕಾಂಗ್ರೆಸ್‌ ಸಂವಿಧಾನ ಬದಲಾಯಿಸಿ ನಮ್ಮನ್ನು ದೂರುತ್ತಿದೆ: ನಿತಿನ್‌ ಗಡ್ಕರಿ

Maha Election; ಕಾಂಗ್ರೆಸ್‌ ಸಂವಿಧಾನ ಬದಲಾಯಿಸಿ ನಮ್ಮನ್ನು ದೂರುತ್ತಿದೆ: ನಿತಿನ್‌ ಗಡ್ಕರಿ

Kambala Result: ಪಣಪಿಲ ಜಯ-ವಿಜಯ ಜೋಡುಕರೆ ಕಂಬಳ ಕೂಟದ ಫಲಿತಾಂಶ

Kambala Result: ಪಣಪಿಲ ಜಯ-ವಿಜಯ ಜೋಡುಕರೆ ಕಂಬಳ ಕೂಟದ ಫಲಿತಾಂಶ

delhi ganesh

Delhi Ganesh: ಹಿರಿಯ ನಟ ಡೆಲ್ಲಿ ಗಣೇಶ್‌ ಇನ್ನಿಲ್ಲ

JJ Perry of Hollywood came to Yash film Toxic

Toxic: ಯಶ್‌ ಚಿತ್ರಕ್ಕೆ ಬಂದ ಹಾಲಿವುಡ್‌ ನ ಜೆ.ಜೆ.ಪೆರ್ರಿ

final Verdict: ಬುಲ್ಡೋಜರ್‌ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್‌ ಅಂತಿಮ ತೀರ್ಪು

Final Verdict: ಬುಲ್ಡೋಜರ್‌ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್‌ ಅಂತಿಮ ತೀರ್ಪು

BGT 2024-25: Australia’s Squad For 1st Test against India announced

BGT: ಭಾರತ ವಿರುದ್ದದ ಮೊದಲ ಟೆಸ್ಟ್‌ ಗೆ ಆಸೀಸ್‌ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6–chincholi

Chincholi: ಸಾಲದ ಹೊರೆ ತಾಳಲಾರದೇ ಕೀಟನಾಶಕ ಸೇವಿಸಿ ರೈತ ಆತ್ಮಹತ್ಯೆ

Kalaburagi: ಆರ್ಥಿಕ ಬಿಕ್ಕಟ್ಟು… ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ

Kalaburagi: ಆರ್ಥಿಕ ಬಿಕ್ಕಟ್ಟು… ವಿಷ ಸೇವಿಸಿ ಆತ್ಮಹ*ತ್ಯೆಗೆ ಶರಣಾದ ಕೂಲಿ ಕಾರ್ಮಿಕ

Kalaburagi: ಗೂಡ್ಸ್ ವಾಹನ – ಕಾರು ನಡುವೆ ಭೀಕರ ಅಪಘಾತ… ನಾಲ್ವರು ಸ್ಥಳದಲ್ಲೇ ಮೃತ್ಯು

Kalaburagi: ಗೂಡ್ಸ್ ವಾಹನ – ಕಾರು ನಡುವೆ ಭೀಕರ ಅಪಘಾತ… ನಾಲ್ವರು ಸ್ಥಳದಲ್ಲೇ ಮೃತ್ಯು

priyank

Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ

2-kalburgi

Kalaburagi: ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

5

Bengaluru: ಕುಡಿದ ಮತ್ತಲ್ಲಿ ಜಗಳ; ಇಬ್ಬರ ಹತ್ಯೆಯಲ್ಲಿ ಅಂತ್ಯ

4

Bengaluru: ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಹತ್ಯೆ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

2

ಡಿಕೆಶಿ, ಪ್ರಿಯಾಂಕ್‌ ಖರ್ಗೆ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ಮಹಿಳಾ ಎಂಜಿನಿಯರ್‌ಗೆ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.