ಪಡುಬೆಟ್ಟು-ಕೀರೊಟ್ಟು ಸಂಪರ್ಕ ರಸ್ತೆಗೆ ಬೇಕಿದೆ ಶೀಘ್ರ ಕಾಯಕಲ್ಪ
Team Udayavani, Feb 27, 2019, 1:00 AM IST
ಮಣಿಪಾಲ: ಪಡುಬೆಟ್ಟು ನಿವಾಸಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಪೆರಣಂಕಿಲ ದೇವಸ್ಥಾನಕ್ಕೆ ತೆರಳುವ, ಅಂಗಾರಕಟ್ಟೆ, ಪೆರಣಂಕಿಲ, ಕಟ್ಟಿಂಗೇರಿ, ಪಳ್ಳಿ, ನಿಂಜೂರು, ಕಾಜಾರಗುತ್ತು, ಕೊಡಿಬೆಟ್ಟು, ಓಂತಿಬೆಟ್ಟು, ಚಿತ್ರಬೈಲು, ಮರ್ಣೆಯಿಂದ ನಿಂಜೂರಿನ ಕೀರೊಟ್ಟು ಮೂಲಕ ಪಳ್ಳಿಗೆ ತೆರಳಬಹುದಾದ ಪಡುಬೆಟ್ಟು-ಕೀರೊಟ್ಟು (2 ಕಿ.ಮೀ.) ರಸ್ತೆಗೆ ಶೀಘ್ರ ಕಾಯಕಲ್ಪದ ಆವಶ್ಯಕತೆ ಇದೆ.
ಪಡುಬೆಟ್ಟು ಭಾಗದ ಸುಮಾರು 40-45 ಮನೆಗಳು ಇದೇ ರಸ್ತೆಯನ್ನು ಅವಲಂಬಿಸಿದ್ದರೆ, ಸಂಪರ್ಕ ರಸ್ತೆ ಅಭಿವೃದ್ಧಿಯಾದಲ್ಲಿ ಸುತ್ತಮುತ್ತಲ ಊರುಗಳ ನೂರಾರು ಜನರಿಗೆ ಅನುಕೂಲವಾಗಲಿದೆ. ಈ ರಸ್ತೆಯಲ್ಲಿ 1 ಕಿ.ಮೀ.ಗೆ ಹಲವು ವರ್ಷಗಳ ಹಿಂದೆ ಡಾಮರೀಕರಣ ಆಗಿದ್ದು ಸಂಪೂರ್ಣ ಎದ್ದು ಹೋಗಿರುತ್ತದೆ. ಉಳಿದ 1 ಕಿ.ಮೀ. ರಸ್ತೆ ಕಚ್ಚಾ ರಸ್ತೆಯಾಗಿದೆ.
ಮಳೆಗಾಲದಲ್ಲಿ ಕಂಟಕ
ಸದ್ಯ ಜಲ್ಲಿ ಸಂಪೂರ್ಣ ಎದ್ದಿರುವಲ್ಲಿ ಸ್ಥಳೀಯರು ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿದ್ದರೆ, ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸ್ವಲ್ಪ ಭಾಗಕ್ಕೆ ಕ್ರಷರ್ ಹುಡಿ ಹಾಕಿ ದುರಸ್ತಿ ಮಾಡಲಾಗಿದೆ. ಮಳೆಗಾಲದಲ್ಲಿ ಮಣ್ಣು, ಕ್ರಶರ್ ಹುಡಿ ಕೊಚ್ಚಿ ಹೋಗಲಿದ್ದು, ಹೊಂಡಗುಂಡಿಗಳ ರಸ್ತೆಯಲ್ಲಿ ಸಾಗುವುದು ದುಸ್ತರವಾಗಲಿದೆ.
ಸುತ್ತುವುದು ತಪ್ಪುತ್ತದೆ
ಸಂಪರ್ಕ ರಸ್ತೆ ಅಭಿವೃದ್ಧಿಯಾದರೆ ಜನರು ಎಡೆ¾àರು ಮೂಲಕ ಕಾರ್ಕಳ ರಸ್ತೆಗೆ ತೆರಳುವುದು ತಪ್ಪುತ್ತದೆ. ನೇರವಾಗಿ ಕೀರೊಟ್ಟುವಿನಿಂದ ನಿಂಜೂರಿಗೆ ತೆರಳಬಹುದು. ಅನಾವಶ್ಯಕ ಸುತ್ತಿ ಬಳಸಿ ಹೋಗುವುದು ಇದರಿಂದ ತಪ್ಪುತ್ತದೆ.
ನೀರಿನ ಪೈಪ್‌ಲೈನ್
ಗ್ರಾ.ಪಂ. ಉಪಾಧ್ಯಕ್ಷರ ಅನುದಾನದಲ್ಲಿ ಈ ರಸ್ತೆಯಲ್ಲಿ 1 ಲಕ್ಷ ರೂ.ನಲ್ಲಿ ಕುಡಿಯುವ ನೀರಿನ ಪೈಪ್‌ಲೈನ್, 2 ಲಕ್ಷ ಅನುದಾನದಲ್ಲಿ ಕಚ್ಚಾ ರಸ್ತೆ, ಬೀದಿದೀಪಗಳನ್ನು ಅಳವಡಿಸಲಾಗಿದೆ. ಬೋರ್‌ವೆಲ್‌ಗೂ ಪ್ರಸ್ತಾವನೆ ಕಳುಹಿಸಲಾಗಿದೆ. ರಸ್ತೆ ಡಾಮರೀಕರಣಗೊಂಡು ಅಭಿವೃದ್ಧಿಯಾಗುವುದು ಮಾತ್ರ ಬಾಕಿ ಇದೆ.
ಹಲವಾರು ಜನರಿಗೆ ಉಪಯೋಗವಾಗುವ ಸಂಪರ್ಕ ರಸ್ತೆ ಶೀಘ್ರ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚುವರಿ ಯೋಜನೆ ತರಿಸಲು ಪ್ರಯತ್ನಿಸಲಾಗುತ್ತಿದೆ.
-ಗಣೇಶ್ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷ
ಜಿಲ್ಲಾ ಪಂಚಾಯತ್ ಅನುದಾನದಿಂದ ರಸ್ತೆ ಅಭಿವೃದ್ಧಿಗೆ 4 ಲಕ್ಷ ರೂ. ಇರಿಸಲಾಗಿದೆ. ವಾರದೊಳಗೆ ಕಾಮಗಾರಿ ಆರಂಭವಾಗಲಿದೆ. ಪೂರ್ಣ ರಸ್ತೆ ಅಭಿವೃದ್ಧಿಗೆ ಬೇರೆ ಯೋಜನೆಯನ್ನು ಬಳಸಬೇಕು.
-ಚಂದ್ರಿಕಾ ಕೇಳ್ಕರ್, ಜಿಪಂ ಸದಸ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.