ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಹಸುರು ಆಸ್ಪತ್ರೆ ಪ್ರಶಸ್ತಿ
Team Udayavani, Feb 27, 2019, 1:00 AM IST
ಮಣಿಪಾಲ: ಫಲಿತಾಂಶ ಆಧರಿತ ಆರೋಗ್ಯ ರಕ್ಷಣೆಯಲ್ಲಿ ಫೆ. 15 ಮತ್ತು 16ರಂದು ದಿಲ್ಲಿಯಲ್ಲಿ ನಡೆದ 6ನೇ ಜಾಗತಿಕ ಸಮಾವೇಶದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಭಾರತೀಯ ಆರೋಗ್ಯ ಸೇವಾ ಪೂರೈಕೆದಾರರ ಸಂಘ (ಅಸೋಸಿಯೇಶನ್ ಆಫ್ ಹೆಲ್ತ್‌ಕೇರ್ ಪ್ರೊವೈಡರ್ ಆಫ್ ಇಂಡಿಯಾ)ದಿಂದ ಹಸುರು ಆಸ್ಪತ್ರೆ (ಗ್ರೀನ್ ಹಾಸ್ಪಿಟಲ…) ಪ್ರಶಸ್ತಿ ಲಭಿಸಿದೆ.
2019ರ ಸಾಲನ್ನು “ರೋಗಿ ಕೇಂದ್ರಿತ ವರ್ಷ’ವಾಗಿ ಕೆಎಂಸಿ ಆಚರಿಸುತ್ತಿದ್ದು, ಈ ಪ್ರಶಸ್ತಿಯಿಂದ ಆಚರಣೆಗೆ ಇನ್ನಷ್ಟು ಸ್ಫೂರ್ತಿ ದೊರೆತಿದೆ. ವಿದೇಶಾಂಗ ವ್ಯವಹಾರಗಳ ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಗ್, ಸಂಸದ ಅನಿಲ್ ಅಗರ್ವಾಲ್ ಪ್ರಶಸ್ತಿ ಪ್ರದಾನಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ, ಕಾರ್ಯಾಚರಣೆ ವಿಭಾಗದ ಹಿರಿಯ ವ್ಯವಸ್ಥಾಪಕ ಜಿಬು ಥಾಮಸ್, ಜೋಬಿತಾ ಬಾರ್ನೆಸ್ ಅವರ
ತಂಡವು ಭಾರತೀಯ ಆರೋಗ್ಯ ಸೇವಾ ಪೂರೈಕೆದಾರರ ಸಂಘದ ಅಧಿಕಾರಿಗಳು ಮತ್ತು ಲೆಕ್ಕಪರಿಶೋಧಕರ ಆಸ್ಪತ್ರೆಯ ಭೇಟಿ ಮತ್ತು ಪರಿಶೀಲನಾ ಸಮಯದಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಸಂಘಟಿಸಿ ಸಹಕರಿಸಿತ್ತು.
ಈ ರಾಷ್ಟ್ರೀಯ ಮಟ್ಟದ ಗುರು ತಿಸುವಿಕೆಗೆ ಆಸ್ಪತ್ರೆ ಅನುಷ್ಠಾನಿಸಿದ ಪರಿಸರ ಸ್ನೇಹಿ ಉಪಕ್ರಮಗಳು ಕಾರಣ. ಶಕ್ತಿಯ ಉಳಿತಾಯ ಮತ್ತು ಸಂರಕ್ಷಣೆ ತಂತ್ರಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲಾಗುವುದು ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪರಿಸರ ಸ್ನೇಹಿ ಉಪಕ್ರಮ
ಆಸ್ಪತ್ರೆಯಲ್ಲಿ ಪರಿಸರ ಸ್ನೇಹಿ ಉಪಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಿಸಲಾಗಿದೆ. ಅವೆಂದರೆ ಸಂಪೂರ್ಣ ಸೌರ ಶಕ್ತಿ 720 ಕೆಡಬ್ಲ್ಯುಪಿ ಸಾಮರ್ಥ್ಯ, ಅಪಘಾತ ಮತ್ತು ತುರ್ತು ಸೇವಾ ವಿಭಾಗ, ಮಹಿಳಾ ಮತ್ತು ಮಕ್ಕಳ ವಿಭಾಗ, ಬಹು ಅಂತಸ್ತಿನ ವಾಹನ ನಿಲುಗಡೆ, ಮರುಬಳಕೆ ನೀರು, ಎಲ…ಇಡಿ ದೀಪ, ಸ್ವಯಂಚಾಲಿತ ನಿಯಂತ್ರಣದ ಬೆಳಕಿನ ವ್ಯವಸ್ಥೆ, ಹವಾನಿಯಂತ್ರಣ ವ್ಯವಸ್ಥೆ, ತಾಜಾ ಗಾಳಿಯ ಪ್ರಸರಣ, ನೀರಿನ ಮಿತಬಳಕೆ, ಆಸ್ಪತ್ರೆಯ ಸಂಕೀರ್ಣದಲ್ಲಿ ಹಸುರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.