ಆಪರೇಷನ್ ವ್ರ್ಯಾತ್ ಒಫ್ ಗಾಡ್
Team Udayavani, Feb 27, 2019, 12:30 AM IST
ಹೊಸದಿಲ್ಲಿ: ತನಗೆ, ತನ್ನವರಿಗೆ ಹಾನಿ ಉಂಟು ಮಾಡಿದವರನ್ನು ಎಷ್ಟು ವರ್ಷಗಳಾದರೂ ಸರಿ, ಎಲ್ಲಿದ್ದರೂ ಸರಿ; ಹುಡುಕಿ ಶಿಕ್ಷಿಸುವುದನ್ನು ಜಗತ್ತಿಗೆ ಕಲಿಸಿದ್ದು ಇಸ್ರೇಲ್ ಮತ್ತು ಅದರ ರಾಷ್ಟ್ರೀಯ ಬೇಹುದಳ ಮೊಸಾದ್. ಅದು 1972. ಇಸ್ರೇಲ್ ಮತ್ತು ಪ್ಯಾಲಸ್ತೀನ್ ನಡುವಣ ಸಂಘರ್ಷ ಜೋರಾಗಿದ್ದ ಸಂದರ್ಭ. ಜರ್ಮನಿಯ ಮ್ಯೂನಿಕ್‌ನಲ್ಲಿ ಒಲಿಂಪಿಕ್ಸ್ ಏರ್ಪಾಟಾಗಿತ್ತು. ಪ್ಯಾಲಸ್ತೀನ್‌ನ “ಬ್ಲ್ಯಾಕ್ ಸೆಪ್ಟೆಂಬರ್’ ಉಗ್ರ ಸಂಘಟನೆ ಮತ್ತು ಪ್ಯಾಲಸ್ತೀನ್ ಲಿಬರೇಶನ್ ಆರ್ಗನೈಸೇಶನ್‌ನ ಸದಸ್ಯರು ಮ್ಯೂನಿಕ್‌ಗೆ ಬಂದಿದ್ದ ಇಸ್ರೇಲ್‌ನ 11 ಮಂದಿ ಕ್ರೀಡಾಳುಗಳನ್ನು ಒತ್ತೆಯಾಳುಗಳನ್ನಾಗಿಸಿಕೊಂಡರು. ಇಸ್ರೇಲ್‌ನಲ್ಲಿ ಸೆರೆಯಲ್ಲಿದ್ದ ಪ್ಯಾಲಸ್ತೀನಿ ಉಗ್ರರನ್ನು ಬಿಡುಗಡೆ ಮಾಡಬೇಕೆಂಬುದು ಅವರ ಬೇಡಿಕೆ. ಇಸ್ರೇಲ್ ಒಪ್ಪದಾಗ ಕ್ರೀಡಾಳುಗಳನ್ನು ಬರ್ಬರವಾಗಿ ವಧಿಸಿದರು.
ಈ ಭೀಕರ ನರಮೇಧ ನಡೆಸಿದವರನ್ನು ತತ್‌ಕ್ಷಣಕ್ಕೆ ಕೊಂದು ಹಾಕಿದರೂ ಆಗ ಇಸ್ರೇಲ್ ಪ್ರಧಾನಿಯಾಗಿದ್ದ ಗೋಲ್ಡಾ ಮೇಯರ್ ಅಷ್ಟಕ್ಕೆ ಸುಮ್ಮನಾಗಲಿಲ್ಲ. ನರಮೇಧಕ್ಕೆ ಕಾರಣಕರ್ತರು, ಅದನ್ನು ಬೆಂಬಲಿಸಿದ ಪ್ರತಿಯೊಬ್ಬರನ್ನೂ ಅಳಿಸಿ ಹಾಕಲು “ಆಪರೇಷನ್ ವ್ರಾéತ್ ಆಫ್ ಗಾಡ್’ ನಡೆಸಲು ಮೊಸಾದ್‌ಗೆ ವೀಳ್ಯ ಕೊಟ್ಟರು. ಅಂದರೆ ದೇವರು ಕೊಟ್ಟ ಶಿಕ್ಷೆ ಎಂದರ್ಥ!
ಮೊಸಾದ್ ವಿವಿಧ ದೇಶಗಳಲ್ಲಿ ನಡೆಸಿದ ಈ ಕಾರ್ಯಾಚರಣೆ 1972ರಿಂದ 1988ರ ವರೆಗೆ ಬರೋಬ್ಬರಿ 16 ವರ್ಷಗಳ ಕಾಲ ನಡೆಯಿತು! ಹೀಗೆ ಹುಡುಕಿ ಹತ್ಯೆಗೈದವರ ಸಂಖ್ಯೆ 20ರಿಂದ 35 ಎನ್ನಲಾಗುತ್ತಿದೆ. ಖಚಿತ ಸಂಖ್ಯೆ ಅವರಿಗಷ್ಟೇ ಗೊತ್ತು. ಹಾಸಿಗೆಯಡಿ, ಕಾರಿನ ಸೀಟಿನಡಿ ಬಾಂಬ್ ಇರಿಸಿ, ದೂರವಾಣಿಗೆ ಬಾಂಬ್ ಜೋಡಿಸಿ, ನಡುರಸ್ತೆಯಲ್ಲಿ ಗುಂಡು ಹಾರಿಸಿ…ಹೀಗೆ ಮೊಸಾದ್ ಏಜೆಂಟರ ವಧಾ ಕ್ರಮ ತರಹೇವಾರಿ.
ಈ ಆಪರೇಶನ್ ಬಗ್ಗೆ ಮೊಸಾದ್‌ನ ಮಾಜಿ ಉಪ ಮುಖ್ಯಸ್ಥ ಡೇವಿಡ್ ಕಿಮ್ಶೆ ಹೀಗೆ ಹೇಳಿದ್ದರು: “ಕೇವಲ ಸೇಡು ತೀರಿಸಿಕೊಳ್ಳುವುದು ನಮ್ಮ ಉದ್ದೇಶವಾಗಿರಲಿಲ್ಲ. ಅವರ (ಪ್ಯಾಲಸ್ತೀನಿಯನ್ ಉಗ್ರರು) ಬೆನ್ನು ಹುರಿಯಲ್ಲಿ ನಡುಕ ಹುಟ್ಟಿಸುವುದು ಉದ್ದೇಶವಾಗಿತ್ತು.ಆದ್ದರಿಂದಲೇ ನಡುರಸ್ತೆಯಲ್ಲಿ ಶೂಟ್ ಮಾಡಿ ಕೊಲ್ಲುವ ಸುಲಭ ದಾರಿಯನ್ನು ಆರಿಸಿಕೊಳ್ಳಲಿಲ್ಲ…’.
ಮಸೂದ್ ನಿಷೇಧಕ್ಕೆ ಬಲ ?
ಈ ವಾಯು ದಾಳಿಯು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್‌ಗೆ ವಿಶ್ವಸಂಸ್ಥೆಯಿಂದ ನಿಷೇಧ ವಿಧಿ ಸುವ ಭಾರತದ ಪ್ರಯತ್ನಕ್ಕೆ ಶಕ್ತಿ ತುಂಬಬಹುದೇ? ಹೌದೆನ್ನುತ್ತಾರೆ ಪರಿಣತರು. ಭಾರತದ ಈ ಕ್ರಮಕ್ಕೆ ಚೀನಾ ಅಡ್ಡಗಾಲು ಹಾಕುತ್ತಿದೆ. ಆದರೆ ಒಂದೆಡೆ ಭಾರತದ ಪ್ರಯತ್ನಕ್ಕೆ ಫ್ರಾನ್ಸ್ ಸಹಕಾರ, ಮತ್ತೂಂದೆಡೆ ಈ ದಾಳಿ ಮೂಲಕ ಅವನೊಬ್ಬ ಉಗ್ರನೆಂಬುದಕ್ಕೆ ಸಿಕ್ಕಿರುವ ಸಾಕ್ಷ್ಯ ಚೀನಾದ ಬಾಯಿ ಮುಚ್ಚಿಸಿದೆ. ಫ್ರಾನ್ಸ್ ನೊಂದಿಗೆ ಅಮರಿಕ, ರಷ್ಯಾ ಮತ್ತಿತರ ರಾಷ್ಟ್ರಗಳೂ ಬೆಂಬಲಿಸಿರುವುದು ಭಾರತಕ್ಕೆ ಬಲ ಬಂದಂತಾಗಿದೆ.
ಬಾಲಾಕೋಟ್ ಯಾಕೆ?
ಪುಲ್ವಾಮಾ ದಾಳಿಯ ಬಳಿಕ ಭಾರತ ಯಾವುದೇ ಸಂದರ್ಭ ಪ್ರತೀಕಾರ ತೀರಿಸಬಹುದು ಎಂದು ತಿಳಿದೇ ಉಗ್ರರು ಬಾಲಾಕೋಟ್‌ನಲ್ಲಿ ಅಡಗಿದ್ದರು. ಈ ಬಗ್ಗೆ ಭಾರತೀಯ ಸೇನೆಗೆ ಖಚಿತ ಮಾಹಿತಿ ಲಭಿಸಿತ್ತು. ಉಗ್ರರು ಒಂದೆಡೆ ಸೇರಿದಾಗ ಹೊಡೆದುರುಳಿಸಲು ಸೇನೆ ಕಾಯುತ್ತಿತ್ತು. ಅಮೆರಿಕವು ಬಿನ್ ಲಾದನ್‌ನನ್ನು ಹತ್ಯೆ ಮಾಡಿದ ಅಬೊಟಾಬಾದ್, ಬಾಲಾಕೋಟ್‌ನಿಂದ ಕೇವಲ 63 ಕಿ.ಮೀ. ದೂರಲ್ಲಿದೆ. ಅದು ಉಗ್ರರ ತಾಣ ಎಂದು ಇಡೀ ವಿಶ್ವಕ್ಕೆ ಗೊತ್ತಿದೆ. ಆದರೆ ಅಲ್ಲಿ ದಾಳಿ ಮಾಡದೆ ಕೇವಲ ಬಾಲಾಕೋಟ್ ಪ್ರಾಂತ್ಯವನ್ನು ಆಯ್ಕೆ ಮಾಡಿಕೊಂಡಿದ್ದು, ಭಾರತೀಯ ಸೇನೆಯ ಹೆಚ್ಚುಗಾರಿಕೆ.
ಅಮಾಯಕರ ಬಲಿ ತಡೆದ ಸೇನೆ
ಒಬ್ಬ ಅಮಾಯಕನಿಗೆ ಹಾನಿಯಾಗುವುದನ್ನು ತಡೆಯಲು 99 ಅಪರಾಧಿಗಳನ್ನು ಬಿಟ್ಟು ಬಿಡುವ ತಣ್ತೀ ಭಾರತೀಯರದ್ದು. ಉಗ್ರರ ತಾಣಗಳನ್ನಷ್ಟೇ ಗುರಿಯಾಗಿಸಿ ಅಮಾಯಕರ ಹತ್ಯೆಯನ್ನು ತಡೆದಿದೆ. ಬಾಲಾಕೋಟ್ ಪ್ರಾಂತ ಉಗ್ರರಿಗಷ್ಟೇ ಸೀಮಿತ. ವಾಯು ದಾಳಿ ಎಂದರೆ ಯದ್ಧ ಸಾರಿದಂತೆ ಎನ್ನಲಾಗುತ್ತಿದೆ. ವಾಯುದಾಳಿಯಲ್ಲಿ ಅಮಾಯಕರ ಅಥವಾ ಸಾರ್ವಜನಿಕರ ಸಾವು ಸಂಭವಿಸಿದರೆ, ಅಂತಾರಾಷ್ಟ್ರೀಯ ಒಪ್ಪಂದವನ್ನು ಮುರಿದಂತಾಗುತ್ತದೆ. ಸಾರ್ವನಿಕರ ಸಾವನ್ನು ಯುದ್ಧ ಎಂದು ಭಾವಿಸಲಾಗುತ್ತದೆ. ಭಾರತೀಯ ಸೇನೆಯ ಗುರಿ ಉಗ್ರರ ಹತ್ಯೆ ಮಾತ್ರವಾಗಿದ್ದು, ಈ ಕಾರಣಕ್ಕೆ ಉಗ್ರರ ತಾಣದ ಮೇಲೆ ಗುರಿ ನಿರ್ದೇಶಿತ ದಾಳಿ ಮಾಡಲಾಗಿದೆ. ಲಾದನ್ ಅವಿತಿದ್ದ ಅಬೋಟಾಬಾದ್ ಉಗ್ರ ಚಟುವಟಿಕೆಗಳ ತಾಣವಾಗಿದರೂ ಅಲ್ಲಿ ಹೆಚ್ಚು ಮಸೀದಿಗಳು, ಮದ್ರಸಗಳು ಹಾಗೂ ಶಾಲೆಗಳು ಹೆಚ್ಚು ಇರುವ ಕಾರಣ ಭಾರತೀಯ ಸೇನೆ ಆ ಕಡೆ ತಲೆಕೆಡಿಸಿಕೊಂಡಿಲ್ಲ.
ಲಾದನ್ ಹತ್ಯೆಯ ಕತೆ
ಉಗ್ರ ಉಸಾಮಾ ಬಿನ್ ಲಾದನ್‌ನನ್ನು ಅಮೆರಿಕ ವಾಯು ಸೇನೆಯ ಸೀಲ್ ಕಮಾಂಡೋ ಪಡೆ 2011ರ ಮೇ 2ರಂದು ಹತ್ಯೆ ಮಾಡಿತ್ತು. ಲಾದನ್‌ಗಾಗಿ 10 ವರ್ಷಗಳಿಂದ ಅಮೆರಿಕ ಹುಡುಕಾಡುತ್ತಿತ್ತು. ಪಾಕಿಸ್ಥಾನ ಸರಕಾರದ ಆಶ್ರಯದಲ್ಲಿದ್ದ ಲಾದನ್ ಹತ್ಯೆಗೆ ಅಮೆರಿಕ “ಆಪರೇಷನ್ ನೆಪೂcನ್ ಸ್ಪೇರ್’ ಎಂದು ಹೆಸರಿಟ್ಟಿತ್ತು. ಬೇರೊಂದು ದೇಶದಲ್ಲಿ ನೆಲೆಯಾಗಿದ್ದ ಉಗ್ರನನ್ನು ಅಲ್ಲಿಗೇ ಹೋಗಿ ಹೊಡೆದುರುಳಿಸಿದ ಘಟನೆ ಅದು. ಅಬೊಟಾಬಾದ್‌ನಲ್ಲಿದ್ದ ಅವನ ಮನೆ ಸುತ್ತಲಿನ ಸರ್ಪಗಾವಲನ್ನು ಭೇದಿಸಿ ಶಬ್ದ ರಹಿತ ಹೆಲಿಕಾಪ್ಟರ್ ಮೂಲಕ ಅಮೆರಿಕ ವಾಯುಪಡೆ ಹತ್ಯೆ ಮಾಡಿತು. ಲಾದನ್ ಶವವನ್ನು ದೃಢೀಕರಿಸಲು ಅಫಘಾನಿಸ್ಥಾನಕ್ಕೆ ಕೊಂಡೊಯ್ಯಲಾಗಿತ್ತು. ಹತ್ಯೆಯಾದ ವ್ಯಕ್ತಿ ಬಿನ್ ಲಾದನ್ ಹೌದು ಎಂದು ದೃಢಪಟ್ಟ ಬಳಿಕ ಸಮುದ್ರದಲ್ಲಿ ಮುಳುಗಿಸಲಾಗಿತ್ತು. ಶವವನ್ನು ಸಮಾಧಿ ಮಾಡಿದರೆ, ಭಯೋತ್ಪಾದಕರ ಆರಾಧನಾ ಸ್ಥಾನವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗಿತ್ತು.
ಪಾಕ್ ಎದುರಿನ ಆಯ್ಕೆ
1 ಪ್ರತೀಕಾರ?
ಒಂದು ವೇಳೆ ಪಾಕ್ ಏನಾದರೂ ಪ್ರತಿ ವಾಯುದಾಳಿ ನಡೆಸಿದರೆ, ಅದು ಪೂರ್ಣ ಪ್ರಮಾಣದ ಯದ್ಧಕ್ಕೆ ನಾಂದಿಯಾಗುತ್ತದೆ. ಇದರಿಂದ ಭಾರತಕ್ಕೂ ಹಾನಿಯಾದರೂ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಪಾಕಿಸ್ಥಾನದ ಸ್ಥಿತಿ ಮಾತ್ರ ಯಾರೂ ಊಹಿಸಲಾರದಷ್ಟು ಶೋಚನೀಯವಾದೀತು.
2 ಉಗ್ರವಾದ ಪೋಷಣೆ
ಛಾಯಾ ಸಮರದ ರೂಪದಲ್ಲಿ ಚಿತಾವಣೆ ಹೆಚ್ಚಿಸಬಹುದು. ಕಾಶ್ಮೀರ ಸೇರಿದಂತೆ ಭಾರತದ ವಿವಿಧೆಡೆಗಳಲ್ಲಿ ಉಗ್ರ ಜಾಲಗಳನ್ನು ಬಳಸಿ ವಿಧ್ವಂಸಕ ಕೃತ್ಯಗಳನ್ನು ತೀವ್ರಗೊಳಿಸಬಹುದು. ಚುನಾವಣೆ ಕಾಲದಲ್ಲಿ ಹಿಂಸಾಕೃತ್ಯಗಳಿಗೆ ಅದು ಹಲವು ರೀತಿಯ ಯತ್ನ ಮಾಡಲೂ ಬಹುದು.
3 ಗಡಿಯಲ್ಲಿ ಕಿರಿಕ್
ಗಡಿಯಲ್ಲಿ ತನ್ನ ಗಡಿ ಭದ್ರತಾ ಪಡೆಯಿಂದ ನಿರಂತರ ಅಪ್ರಚೋದಿತ ಗುಂಡಿನ ದಾಳಿ ನಡೆಸಬಹುದು. ಸೇನಾ ನೆಲೆಗಳಲ್ಲದೆ ನಾಗರಿಕ ನೆಲೆಗಳ ಮೇಲೆ ದಾಳಿ ಮಾಡಬಹುದು.
4 ವಿಶ್ವಸಂಸ್ಥೆಗೆ ದೂರು
ವಾಯುದಾಳಿ ಮೂಲಕ ತನ್ನ ಪ್ರದೇಶದಲ್ಲಿ ಹಾನಿ ಮಾಡಲು ಹೊರಟಿದೆ ಎಂದು ಪಾಕ್ ವಿಶ್ವಸಂಸ್ಥೆ, ಜಗತ್ತಿನ ಪ್ರಬಲ ರಾಷ್ಟ್ರಗಳ ಎದುರು ವಿವರಿಸಬಹುದು. ಸದ್ಯಕ್ಕೆ ಇರುವ ಆಯ್ಕೆಗಳೇ ಇವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.