ಒಳ್ಳೆ ಅಪ್ಪ!
Team Udayavani, Feb 28, 2019, 12:30 AM IST
ರಾಮಪುರ ಎಂಬ ಗ್ರಾಮದಲ್ಲಿ ರಾಮದಾಸ ಎಂಬ ಹೂವಿನ ವ್ಯಾಪಾರಿ ವಾಸಿಸುತ್ತಿದ್ದ.ಅವನಿಗೆ ಒಂದು ಎಕರೆ ಹೂವಿನ ತೋಟವಿತ್ತು. ಮಲ್ಲಿಗೆ, ಗುಲಾಬಿ ಗಿಡಗಳನ್ನು ಬೆಳೆಸಿ, ಪಟ್ಟಣದಲ್ಲಿ ಮಾರಿ ಜೀವನ ಸಾಗಿಸುತ್ತಿದ್ದನು. ಅವನಿಗೆ ಮೂರು ಮಂದಿ ಮಕ್ಕಳು. ಅವನು ಯಾವಾಗಲೂ ಮಕ್ಕಳನ್ನು ಗದರುತ್ತಾ, ಅವರ ಮೇಲೆ ಕೋಪಗೊಳ್ಳುತ್ತಾ ಆಗಾಗ ಹೊಡೆಯುತ್ತಿರುತ್ತಿದ್ದನು. ಇದರಿಂದಾಗಿ ಮಕ್ಕಳಿಗೆ ಅಪ್ಪನನ್ನು ಕಂಡರೆ ಭಯದಿಂದ ನಡುಗುತ್ತಿದ್ದರು. ಇದರಿಂದ ಪತ್ನಿ ಬೇಸರಗೊಂಡಿದ್ದಳು. ಅವಳು ಪತಿಯ ನಡವಳಿಕೆಯನ್ನು ತಿದ್ದಲು ಎಷ್ಟೋ ಬಾರಿ ಪ್ರಯತ್ನಿಸಿದ್ದಳು. ಆದರೆ ಫಲ ನೀಡಿರಲಿಲ್ಲ.
ಒಂದು ದಿನ ತೋಟದ ಕೆಲಸಗಾರರು ಯಾರೂ ಬರಲಿಲ್ಲ. ಆ ದಿನವೇ ಹೂಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಬೇಕಾಗಿತ್ತು. ಹೀಗಾಗಿ ರಾಮದಾಸ ಮತ್ತು ಅವನ ಪತ್ನಿ ಇಬ್ಬರೇ ಹೂಗಳನ್ನು ಕೊಯ್ಯುವ ಕೆಲಸ ಮಾಡಬೇಕಾಗಿತ್ತು. ರಾಮದಾಸನ ಪತ್ನಿ ಹೂವುಗಳನ್ನು ತನಗೆ ಇಷ್ಟ ಬಂದ ಹಾಗೆ ಕೊಯ್ಯುತ್ತಿದ್ದಳು. ಇದರಿಂದ ಕೆಲವು ಹೂಗಳ ದಳಗಳು ಉದುರಿ ಹೋದವು. ಅದನ್ನು ಕಂಡ ರಾಮದಾಸ ಬಹಳ ಕೋಪದಿಂದ “ಹೂವುಗಳನ್ನು ಏಕೆ ಹಾಗೆ ಕೊಯ್ಯುತ್ತಿರುವೆ? ಹೂವುಗಳು ತುಂಬಾ ನಾಜೂಕಾಗಿರುತ್ತವೆ. ಅವುಗಳನ್ನು ತುಂಬಾ ಜಾಗರೂಕತೆಯಿಂದ ಕೊಯ್ಯಬೇಕು. ನಮಗೆ ಇಷ್ಟ ಬಂದ ಹಾಗೆ ಕೊಯ್ಯುತ್ತಿದ್ದರೆ ಅವು ಹಾಳಾಗುತ್ತವೆ’ ಎಂದು ಗದರಿಸಿದನು.
ಆಗ ಅವನ ಪತ್ನಿ “ಹೂಗಳಿಗೆ ಈ ರೀತಿಯಾಗಿ ಹೇಳುತ್ತಿದ್ದೀರಲ್ಲ, ಅದೇ ರೀತಿ ಮಕ್ಕಳು ಕೂಡಾ ಹೂವಿನಂತೆಯೇ ತುಂಬಾ ನಾಜೂಕಾಗಿರುತ್ತಾರಲ್ಲವೆ? ಅವರೊಂದಿಗೆ ನೀವು ಮೃದುವಾಗಿ ವರ್ತಿಸುತ್ತಿದ್ದೀರಾ? ಎಂದಾದರೂ ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿದ್ದೀರ?’ ಎಂದು ರಾಮದಾಸನನ್ನೇ ಪ್ರಶ್ನಿಸಿದಳು. ಪತ್ನಿಯ ಮಾತು ಕೇಳಿ ರಾಮದಾಸನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಅವನು “ಮಕ್ಕಳೊಂದಿಗೆ ಆ ರೀತಿಯಾಗಿ ನಡೆದುಕೊಂಡಿದ್ದಕ್ಕೆ ನಾನು ಕ್ಷಮೆ ಕೋರುತ್ತೇನೆ, ಇನ್ನು ಮುಂದೆ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ’ ಎಂದು ಪತ್ನಿಗೆ ಮಾತುಕೊಟ್ಟನು. ಪತಿಯ ವರ್ತನೆಯಲ್ಲಿ ಬದಲಾವಣೆ ಬಂದಿದ್ದಕ್ಕೆ ಪತ್ನಿ ತುಂಬಾ ಸಂತೋಷಪಟ್ಟಳು. ತಂದೆಯಲ್ಲಿ ಬದಲಾವಣೆಯನ್ನು ಕಂಡು ಮಕ್ಕಳಿಗೂ ಖುಷಿಯಾಯಿತು.
ಕೆ.ಎನ್.ಅಕ್ರಂ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.