ಮೂಡುಬಿದಿರೆ ತಾ| ಉದ್ಘಾಟನೆ: 3ನೇ ಬಾರಿಯೂ ಮುಂದೂಡಿಕೆ?
Team Udayavani, Feb 28, 2019, 12:30 AM IST
ಮೂಡುಬಿದಿರೆ: ಮೂರನೇ ಬಾರಿಯೂ ಮೂಡುಬಿದಿರೆ ತಾಲೂಕು ಉದ್ಘಾಟನ ಸಮಾರಂಭ ಮುಂದೂಡಲಾಗುವುದೇ ಎಂಬ ಗುಮಾನಿ ಹರಡುತ್ತಿದೆ.
ಉಸ್ತುವಾರಿ ಸಚಿವ ಯು.ಟಿ. ಖಾದರ್ ಮತ್ತು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ (ಕಂದಾಯ ಇಲಾಖೆ) ಐವನ್ ಡಿ”ಸೋಜಾ ಅವರು “ಮಾ. 1ರಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು 10 ಕೋಟಿ ರೂ. ಯೋಜನಾ ವೆಚ್ಚದ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡುವುದರೊಂದಿಗೆ ಮೂಡುಬಿದಿರೆ ತಾಲೂಕನ್ನು ಉದ್ಘಾಟಿಸಲು ಆಗಮಿಸಲಿದ್ದಾರೆ’ ಎಂದು ಪ್ರಕಟಿಸಿದ್ದರು. ಆದರೆ ಬುಧವಾರ ರಾತ್ರಿಯವರೆಗೂ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಕಡಬ ತಾಲೂಕು ಮಾ. 2ರಂದು ಉದ್ಘಾಟನೆ ?
ಕಡಬ ನೂತನ ತಾಲೂಕು ಉದ್ಘಾಟನೆ ಮತ್ತೆ ಮುಂದಕ್ಕೆ ಹೋಗಿದೆ. ನಿಗದಿಯಾದಂತೆ ಮಾ. 1ರ ಬದಲು 2ರಂದು ಉದ್ಘಾಟನ ಸಮಾರಂಭ ನಡೆಯಲಿದೆ ಎಂದು ಪುತ್ತೂರು ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಚಾಯತ್ ಕಚೇರಿಗಳಿಗೆ ರವಾನಿಸಿದ ಪತ್ರದಲ್ಲಿ ತಿಳಿಸಿದ್ದಾರೆ. ಕಂದಾಯ ಸಚಿವರು ತುರ್ತಾಗಿ ದಿಲ್ಲಿಗೆ ಹೋಗಬೇಕಿರುವ ಕಾರಣ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಕುರಿತು ಕಂದಾಯ ಅಧಿಕಾರಿಗಳಿಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B Z Zameer ahmed khan ಹೇಳಿಕೆ ಹಿಂದೆ ಎಚ್ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್ಗೆ ಎಲ್ಲಿದೆ?
Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.