ಖೇಲೊ ಇಂಡಿಯಾ ಆ್ಯಪ್ ಬಿಡುಗಡೆ
Team Udayavani, Feb 28, 2019, 12:35 AM IST
ಹೊಸದಿಲ್ಲಿ: ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉದ್ದೀಪಿಸಲು ಕೇಂದ್ರ ಸರಕಾರ ಇದೇ ಮೊದಲ ಬಾರಿ “ಖೇಲೊ ಇಂಡಿಯಾ’ ಎಂಬ ಕ್ರೀಡಾ ಆ್ಯಪ್ ಬಿಡುಗಡೆ ಮಾಡಿದೆ. ಬುಧವಾರ ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ನೇತೃತ್ವದಲ್ಲಿ ಈ ಆ್ಯಪನ್ನು ಲೋಕಾರ್ಪಣೆ ಮಾಡಲಾಯಿತು.
ಹಲವು ಮಾಹಿತಿ
ಇಡೀ ಭಾರತದ ಕ್ರೀಡಾವಲಯವನ್ನು, ಕ್ರೀಡಾಪಟುಗಳನ್ನು, ಪೋಷಕರನ್ನು ಬೆಸೆಯುವ ಉದ್ದೇಶ ಈ ಆ್ಯಪ್‌ನ ಹಿಂದಿದೆ. ದೇಶದ ಎಲ್ಲೆಲ್ಲಿ ಕ್ರೀಡಾ ಸೌಲಭ್ಯಗಳಿವೆ, ಯಾವ ಕ್ರೀಡೆಗಳನ್ನು ಹೇಗೆ ಆಡಬಹುದು, ದೈಹಿಕ ದೃಢತೆ ಹೇಗಿರಬೇಕು, ಪೋಷಕರು ಏನು ಮಾಡಬಹುದು ಎಂಬ ಮಾಹಿತಿಗಳ ಜತೆಗೆ ಕ್ರೀಡಾ ಸೌಲಭ್ಯಗಳನ್ನು ಪಡೆದುಕೊಳ್ಳುವುದು, ಪ್ರತಿಭೆಗಳನ್ನು ಗುರುತಿಸಿ, ಹೆಸರಿಸುವ ಕೆಲಸವನ್ನೂ ಮಾಡಬಹುದು.
ಆ್ಯಪ್‌ನಲ್ಲಿ ಏನೇನಿದೆ?
ಈ ವಿಭಾಗದಲ್ಲಿ ಒಟ್ಟು 18 ಕ್ರೀಡೆಗಳ ನಿಯಮಗಳ ಬಗ್ಗೆ ಮಾಹಿತಿಯಿದೆ. ಇನ್ನೂ ಕ್ರೀಡಾ ಜೀವನ ಆರಂಭ ಮಾಡುತ್ತಿರುವವರಿಗೆ ಇದು ಮಾರ್ಗದರ್ಶನದಂತಿದೆ. ಯಾವ ಉಪಕರಣ ಬಳಸಬೇಕು, ಹೇಗೆ ಆಡಬೇಕು ಎಂಬ ಮಾಹಿತಿಯಿದೆ.
ಈ ವಿಭಾಗದಲ್ಲಿ ಮಾಹಿತಿಯ ಕಣಜವೇ ಇದೆ. ಇಡೀ ದೇಶದಲ್ಲಿ ಸರಕಾರಿ ನಿಯಂತ್ರಿತ ಅಕಾಡೆಮಿಗಳು, ಸೌಲಭ್ಯಗಳು ಎಲ್ಲೆಲ್ಲಿವೆ, ಎಲ್ಲಿ ಆಸಕ್ತ ಕ್ರೀಡಾಪಟುಗಳು ಕ್ರೀಡೆಗೆ ಸೇರಿಕೊಳ್ಳಬಹುದು ಎಂಬ ಮಾಹಿತಿಯಿದೆ.
ಮಕ್ಕಳ ದೈಹಿಕ ದೃಢತೆಯನ್ನು ಹೆಚ್ಚಿಸುವುದು ಹೇಗೆ, ಅದಕ್ಕೆ ಏನೇನು ಮಾಡಬೇಕು, ದೈಹಿಕ ಮಟ್ಟವನ್ನು ಪೋಷಕರು, ಶಾಲಾ ಶಿಕ್ಷಕರು ಅಳೆಯುವ ಬಗೆ ಹೇಗೆ ಎಂಬ ವಿವರ ಇಲ್ಲಿದೆ. ಜತೆಗೆ ಹಿರಿಯರೂ ಇದನ್ನು ಬಳಸಿಕೊಳ್ಳಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.