ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಸಾಮಾಜಿಕ ಸಂಘರ್ಷ ಸಮಿತಿ ಪ್ರತಿಭಟನೆ
Team Udayavani, Feb 28, 2019, 8:36 AM IST
ದಾವಣಗೆರೆ: ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ಸಾಮಾಜಿಕ ಸಂಘರ್ಷ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಾವೆಲ್ಲರೂ ಒಂದು ಎಂಬ ಮಾತು ಹೇಳುತ್ತಿರುವ ನಡುವೆಯೂ ದಲಿತರನ್ನು ಅತ್ಯಂತ ಕೀಳಾಗಿ ನೋಡುವಂತಹ ಘಟನೆಗಳು ನಡೆಯುತ್ತಲೇ ಇವೆ. ಗದಗ ಜಿಲ್ಲೆಯ ಅಸೂಟಿ, ಯಲಬುರ್ಗಿಯಲ್ಲಿ ದಲಿತರ ಮೇಲೆ ನಡೆದಿರುವಂತಹ ದೌರ್ಜನ್ಯಗಳು ಜಾತಿ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿವೆ. ದಲಿತರ ಮೇಲಿನ ದೌರ್ಜನ್ಯಗಳನ್ನ ಸರ್ಕಾರ ಕೂಡಲೇ ತಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಸವಾದಿಗಳ ನಾಡಾದ ಕರ್ನಾಟಕದಲ್ಲೂ ಅಸ್ಪೃಶ್ಯತೆ ಆಚರಣೆಗಳು ನಡೆಯುತ್ತಿವೆ. ಈಚೆಗೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಉತ್ತರ ಪ್ರದೇಶದದ ಯೋಧರೊಬ್ಬರ ಶವ ಸಂಸ್ಕಾರಕ್ಕೆ ದಲಿತರು ಎಂಬ ಕಾರಣಕ್ಕೆ ಅಲ್ಲಿನ ಮೇಲ್ಜಾತಿಯವರು ಸರ್ಕಾರಕ್ಕೆ ಸಂಬಂಧಿಸಿದ 10+10 ಅಡಿ ಜಾಗ ನೀಡಲು ರಂಪಾಟವನ್ನೇ ನಡೆಸಿದರು. ಅಂತಹ ದೇಶದ್ರೋಹ ಘಟನೆ ನಡೆದಿರುವುದು ರಾಷ್ಟ್ರೀಯತೆ ಹೇಳುವ ಪಕ್ಷದ ಸರ್ಕಾರ ಇರುವ ರಾಜ್ಯದಲ್ಲಿ ಎಂಬುದು ಖಂಡನೀಯ ಎಂದು ದೂರಿದರು.
ಸಮಿತಿ ರಾಜ್ಯ ಅಧ್ಯಕ್ಷ ಪ್ರೊ| ಸಿ.ಕೆ.ಮಹೇಶ್, ಜಿಲ್ಲಾ ಅಧ್ಯಕ್ಷ ಪಿ. ತಿಪ್ಪೇರುದ್ರಪ್ಪ, ಬಿ.ಎನ್. ನಾಗೇಶ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.