ಅಮೆರಿಕ ಕ್ರಿಕೆಟ್‌ ತಂಡಕ್ಕೆ ಭಾರತೀಯ ಸೌರಭ್‌ ನಾಯಕ


Team Udayavani, Mar 1, 2019, 12:30 AM IST

saurabh-netravalkar.jpg

ನ್ಯೂಯಾರ್ಕ್‌: ಅಮೆರಿಕ ಕ್ರಿಕೆಟ್‌ ತಂಡ ತನ್ನ ಇತಿಹಾಸದಲ್ಲೇ ಮೊದಲ ಬಾರಿ ಅಂತಾರಾಷ್ಟ್ರೀಯ ಟಿ20ಸರಣಿಯಲ್ಲಿ ಆಡಲು ಸಿದ್ಧವಾಗಿದೆ. ಯುಎಇ ವಿರುದ್ಧ ಮಾ. 15ರಿಂದ 2 ಟಿ20, ಒಂದು ಏಕದಿನ ಪಂದ್ಯವಾಡಲು ಅಮೆರಿಕ ತಂಡವನ್ನು ಪ್ರಕಟಿಸಲಾಗಿದೆ. ವಿಶೇಷವೆಂದರೆ, ಭಾರತೀಯ ಮೂಲದ ಸೌರಭ್‌ ನೇತ್ರಾವಲ್ಕರ್‌ ಈ ತಂಡದ ನಾಯಕರಾಗಿರುವುದು!ಈ ತಂಡದಲ್ಲಿ ಕನ್ನಡಿಗ ನಾಸ್ತುಷ್‌ ಕೆಂಜಿಗೆ ಕೂಡ ಸ್ಥಾನ ಪಡೆದಿದ್ದಾರೆ. ಇನ್ನೂ ವಿಶೇಷವೆಂದರೆ, ಈ ತಂಡದಲ್ಲಿರುವ ಶೇ.ಅರ್ಧದಷ್ಟು ಮಂದಿ ಆಟಗಾರರು ಭಾರತೀಯ ಮೂಲದವರಾಗಿರುವುದು!

ಮುಂಬಯಿ ಮೂಲದ ಸೌರಭ್‌
ಅಮೆರಿಕ ತಂಡದ ನಾಯಕ ಸೌರಭ್‌ ನೇತ್ರಾವಲ್ಕರ್‌, ಮುಂಬಯಿಯವರು. 27 ವರ್ಷ. 2010ರಲ್ಲಿ ಭಾರತದ ಪರ ಅಂಡರ್‌-19 ವಿಶ್ವಕಪ್‌ ಆಡಿದ್ದಾರೆ! 2013-14ರ ಅವಧಿಯಲ್ಲಿ ಮುಂಬಯಿ ಪರ ರಣಜಿಯನ್ನೂ ಆಡಿದ್ದಾರೆ. ಎಡಗೈ ವೇಗದ ಬೌಲರ್‌ ಆಗಿರುವ ಅವರು ಪ್ರಾರಂಭದಲ್ಲಿ ಯಶಸ್ಸು ಕಂಡರೂ, ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ ಎಂದು ಭಾಸವಾಯಿತು. ಆದ್ದರಿಂದ 2015ರಲ್ಲಿ ಕ್ರಿಕೆಟನ್ನು ಬಿಟ್ಟು ಅಮೆರಿಕಕ್ಕೆ ಓದಲು ತೆರಳಿದರು. ಅಲ್ಲಿನ ಕಾರ್ನೆಲ್‌ ವಿವಿಯಲ್ಲಿ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಈ ಹಂತದಲ್ಲಿ ಕ್ರಿಕೆಟ್‌ ಬಗೆಗಿನ ಅವರ ಸೆಳೆತ ಕಡಿಮೆಯಾಗಿರಲಿಲ್ಲ. ಪರಿಣಾಮ 2018ರಲ್ಲಿ ಅವರು ಅಮೆರಿಕ ತಂಡದ ನಾಯಕರಾದರು.

ಮೂಡಿಗೆರೆಯ ಹುಡುಗ ನಾಸ್ತುಷ್‌
ಕರ್ನಾಟಕದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಸಹವರ್ತಿ ಪ್ರದೀಪ್‌ ಕೆಂಜಿಗೆ ಅವರ ಪುತ್ರ ನಾಸ್ತುಷ್‌ ಕೆಂಜಿಗೆ. ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರು. ತಂದೆ ಪ್ರದೀಪ್‌ ಅಮೆರಿಕದ ಟಸ್ಕೆಗೀ ವಿಶ್ವವಿದ್ಯಾಲಯದಲ್ಲಿ ಕೃಷಿ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿದ್ದರು. ನಾಸ್ತುಷ್‌, ಅಲಬಾಮಾದಲ್ಲಿ ಜನಿಸಿದ ಒಂದೇ ವರ್ಷಕ್ಕೆ ಪ್ರದೀಪ್‌ ಕುಟುಂಬ ಸಮೇತ ಭಾರತಕ್ಕೆ ಹಿಂತಿರುಗಿದರು. ಆರಂಭಿಕ ಹಂತದಲ್ಲಿ ನಾಸ್ತುಷ್‌ ಬೆಂಗಳೂರು ವಿವಿ ಮಟ್ಟದಲ್ಲಿ ಕ್ರಿಕೆಟ್‌ ಆಡಿದರು. ಮುಂದೆ 2015ರಲ್ಲಿ ಮತ್ತೆ ಅಮೆರಿಕಕ್ಕೆ ತೆರಳಿದರು. ಎಂಟೆಕ್‌ ಬಳಿಕ ಅವರು ನ್ಯೂಯಾರ್ಕ್‌ ಆಸ್ಪತ್ರೆಯಲ್ಲಿ ಎಂಜಿನಿಯರ್‌ ಆಗಿ ವೃತ್ತಿ ನಿರ್ವಹಿಸುತ್ತಿದ್ದರು. ಕೆಲ ತಿಂಗಳ ಹಿಂದೆ ವೃತ್ತಿಗೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ ಜತೆಗೆ ಎಡಗೈ ಸ್ಪಿನ್‌ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದಾರೆ.

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು..

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು

IPL retention: IPL new rule gave good news to Chennai-Mumbai Franchise

IPL retention: ಚೆನ್ನೈ-ಮುಂಬೈಗೆ ಗುಡ್‌ ನ್ಯೂಸ್‌ ನೀಡಿದ ಐಪಿಎಲ್‌ ಹೊಸ ನಿಯಮ

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL retention: IPL new rule gave good news to Chennai-Mumbai Franchise

IPL retention: ಚೆನ್ನೈ-ಮುಂಬೈಗೆ ಗುಡ್‌ ನ್ಯೂಸ್‌ ನೀಡಿದ ಐಪಿಎಲ್‌ ಹೊಸ ನಿಯಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Kanpura Test: Indian players left the match and went to the hotel due to rain

Kanpur Test: ಪಂದ್ಯ ಬಿಟ್ಟು ಹೋಟೆಲ್‌ ಗೆ ತೆರಳಿದ ಭಾರತೀಯ ಆಟಗಾರರು

ENGvsAUS: ಇಂಗ್ಲೆಂಡ್‌ ಆಟಕ್ಕೆ ಸೋತ ಆಸೀಸ್;‌ ಸರಣಿ ಸಮಗೊಳಿಸಿದ ಬ್ರೂಕ್‌ ಪಡೆ

ENGvsAUS: ಇಂಗ್ಲೆಂಡ್‌ ಆಟಕ್ಕೆ ಸೋತ ಆಸೀಸ್;‌ ಸರಣಿ ಸಮಗೊಳಿಸಿದ ಬ್ರೂಕ್‌ ಪಡೆ

1-bevas

Test ವಿವಾದ : ಹಲ್ಲೆಯಾಗಿಲ್ಲ, ಬಾಂಗ್ಲಾ ಹುಲಿ ‘ಅಸ್ವಸ್ಥ’

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-frrr

Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು..

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

04

Kasaragod: ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ

1-aaa

Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.