ರತ್ನಗಿರಿ ಅರ್ಬನ್ ಕೋ ಆ. ಬ್ಯಾಂಕ್‌ನ ವ್ಯವಹಾರ ಅಭಿವೃದ್ಧಿ ಸಭೆ
Team Udayavani, Feb 28, 2019, 3:53 PM IST
ಮುಂಬಯಿ: ರತ್ನಗಿರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ವ್ಯವಹಾರ ಅಭಿವೃದ್ಧಿ ಸಭೆಯು ಫೆ. 26ರಂದು ಸಂಜೆ ಕಾಮೊಟೆಯ ಹೊಟೇಲ್ ವೆಂಕಟ್ ಪ್ರಸಿಡೆಂಟ್ ಸಭಾಗೃಹದಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಇವರ ನೇತೃತ್ವದಲ್ಲಿ ನಡೆಯಿತು.
ಸಭೆಯನ್ನು ಉದ್ಧೇಶಿಸಿ ಮಾತನಾಡಿದ ರತ್ನಾಕರ ಶೆಟ್ಟಿ ಮುಂಡ್ಕೂರು ಅವರು, ಕೋಲ್ಹಾಪುರ, ರಾಯಗಡ್, ರತ್ನಗಿರಿ ಜಿಲ್ಲೆಗಳಲ್ಲಿ ಬ್ಯಾಂಕಿನ ವ್ಯವಹಾರವನ್ನು ವಿಸ್ತರಿಸಲು ಸರಕಾರದಿಂದ ಅನುಮತಿ ದೊರಕಿದ್ದು, ಇದರ ಸದುಪಯೋಗವನ್ನು ನಾವು ಪಡೆದುಕೊಂಡು ಆದಷ್ಟು ಶೀಘ್ರದಲ್ಲಿ ಮುಂಬಯಿಯಲ್ಲೂ ಇದರ ಶಾಖೆಯು ಪ್ರಾರಂಭಗೊಳ್ಳುವಂತಾಗಬೇಕು. ಅಲ್ಲದೆ ನಮ್ಮದೆ ಸ್ವಂತ ಬ್ಯಾಂಕೊಂದು ಕಾರ್ಯ ನಿರ್ವಹಿಸುವಂತೆ ಆಗುವಲ್ಲಿ ಎಲ್ಲರೂ ಶ್ರಮಿಸುತ್ತಿದ್ದೇವೆ ಎಂದರು.
ರತ್ನಗಿರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಸಿಎ ಶಂಕರ್ ಬಿ. ಶೆಟ್ಟಿ ಇವರು ಮಾತನಾಡಿ, ನವಿಮುಂಬಯಿ ಪರಿಸರದ ರಾಯಗಡ್‌ನಲ್ಲಿರುವ ತುಳು-ಕನ್ನಡಿಗರು
ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ವ್ಯವಹಾರಗಳನ್ನು ರತ್ನಗಿರಿ ಬ್ಯಾಂಕಿನೊಂದಿಗೆ ಹೊಂದಿ ಸಹಕರಿಸಬೇಕು. ತಮ್ಮ ಉದ್ದಿಮೆ ಹಾಗೂ ಗೃಹ ಸಾಲಕ್ಕಾಗಿ ಈ ಬ್ಯಾಂಕ್‌ನ್ನು ಅವಲಂಬಿಸಬೇಕು. ಇದು ನಮ್ಮ ಮುಂದಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಇವರು ಮಾತನಾಡಿ, ನಮ್ಮ ಬಹುದಿನಗಳ ಕನಸನ್ನು ನನಸಾಗಿಲು ಜತೆಯಾಗಿ ಶ್ರಮಿಸುವ ಅಗತ್ಯವಿದೆ. ಕಾನೂನುಬದ್ಧವಾಗಿ ರಿಸರ್ವ್ ಬ್ಯಾಂಕಿನ ಸಲಹೆ ಸೂಚನೆಯಂತೆ ಮುಂದುವರಿಯಬೇಕು. ನಮ್ಮ ಸಮಾಜಕ್ಕೊಂದು ಬ್ಯಾಂಕ್ ಆಗುವ ಕನಸಿಗೆ ಎಲ್ಲರ ಸಹಕಾರ ಬೇಕು ಎಂದು ನುಡಿದರು.
ಚರಿಷ್ಮಾ ಬಿಲ್ಡರ್ನ ಸಿಎಂಡಿ ಸುಧೀರ್ ವಿ. ಶೆಟ್ಟಿ ಇವರು ಮಾತನಾಡಿ, ಬಂಟ್ಸ್ ಸಮಾಜಕ್ಕೊಂದು ಸ್ವಂತ ಬ್ಯಾಂಕ್ ಬೇಕು ಎಂಬ ನನ್ನಾಸೆ ಬಹುದಿನಗಳದ್ದಾಗಿದೆ. ಅದು ಸದ್ಯದಲ್ಲೇ ನೆರವೇರುತ್ತದೆ ಎಂಬ ವಿಶ್ವಾಸ ನನಗಿದೆ. ನಾನು ನನ್ನಿಂದಾಗುವ ಎಲ್ಲ ರೀತಿಯ ಸಹಾಯವನ್ನು ನೀಡಲು ಬದ್ಧನಾಗಿದ್ದೇನೆ ಎಂದರು.
ಭವಾನಿ ಫೌಂಡೇಷನ್ ಮುಂಬಯಿ ಸಂಸ್ಥಾಪಕಾಧ್ಯಕ್ಷ ಕೆ. ಡಿ. ಶೆಟ್ಟಿ ಇವರು ಮಾತನಾಡಿ, ಈ ಕನಸಿನ ಯೋಜನೆಗೆ ನನ್ನ ಸಂಪೂರ್ಣ ಸಹಕಾರವಿದೆ. ಅಸಾಧ್ಯವಾದುದು ಏನೂ ಇಲ್ಲ. ನಮ್ಮ ಪ್ರಯತ್ನ ಇದೇ ಮಾದರಿಯಲ್ಲಿ ಮುಂದುವರಿದಾಗ ಯಶಸ್ಸು ಖಂಡಿತ ಸಿಗುತ್ತದೆ ಎಂದು ಹೇಳಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಬಂಟ ಸಮಾಜಕ್ಕೊಂದು ಬ್ಯಾಂಕ್ ಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಅದಕ್ಕೆ ಇದೀಗ ಕಾಲ ಕೂಡಿ ಬಂದಂತಾಗಿದೆ. ಇದಕ್ಕೆ ನನ್ನ ಸಹಕಾರ ಸದಾಯಿದೆ ಎಂದು ನುಡಿದು ಶುಭ ಹಾರೈಸಿದರು.
ಬಂಟರ ಸಂಘದ ವಿಶ್ವಸ್ತ ಕರ್ನಿರೆ ವಿಶ್ವನಾಥ ಶೆಟ್ಟಿ ಇವರು ಮಾತನಾಡಿ, ಸಲಹೆ ಸೂಚನೆಗಳನ್ನಿತ್ತು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.
ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಡಾ| ಆರ್. ಕೆ. ಶೆಟ್ಟಿ, ರತ್ನಗಿರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಕಾರ್ಯಾಧ್ಯಕ್ಷ ನ್ಯಾಯವಾದಿ ಸುಜಿತ್ ಬಿ. ಜಿಮನ್ ಉಪಸ್ಥಿತರಿದ್ದ ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ, ವ್ಯವಹಾರದ ಬಗ್ಗೆ ವಿವರಿಸಿ ಎಲ್ಲರ ಸಹಕಾರ ಬಯಸಿದರು.
ನೆರೂಲ್ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ವೆಂಕಟ್ ರೆಸಿಡೆನ್ಸಿ ಮಾಲಕ ವೆಂಕಟ್ರಮಣ್ ಇವರು ಸಲಹೆ ಸೂಚನೆಗಳನ್ನಿತ್ತು ತಮ್ಮ ಸಹಕಾರ ಸದಾಯಿದೆ ಎಂದು ನುಡಿದರು.
ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಉಪಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಎ ರಮೇಶ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಮಂಜಯ್ಯ ಸಿ. ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಉಮಾಕೃಷ್ಣ ಶೆಟ್ಟಿ, ಸುಜಾತಾ ಐಕಳ ಗುಣಪಾಲ್ ಶೆಟ್ಟಿ, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ಉದ್ಯಮಿ ಖಾಂದೇಶ್ ಭಾಸ್ಕರ ಶೆಟ್ಟಿ, ಬಂಟರ ಸಂಘ ಮುಂಬಯಿ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕೋಶಾಧಿಕಾರಿ ಐಕಳ ಗುಣಪಾಲ್ ಶೆಟ್ಟಿ, ರೀಜನಲ್ ಕೋಆರ್ಡಿನೇಟರ್ ಡಾ| ಪ್ರಭಾಕರ ಶೆಟ್ಟಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿ, ಪೊವಾಯಿ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಹರೀಶ್ ವಾಸು ಶೆಟ್ಟಿ, ಉದ್ಯಮಿ ಸಂಜೀವ ಶೆಟ್ಟಿ, ಪನ್ವೇಲ್ ನಗರ ಸೇವಕ ಸಂತೋಷ್ ಶೆಟ್ಟಿ, ಥಾಣೆ ಬಂಟ್ಸ್‌ನ ಕಾರ್ಯಾಧ್ಯಕ್ಷ ಕುಶಲ್ ಸಿ. ಭಂಡಾರಿ, ಬೋಂಬೆ ಬಂಟ್ಸ್‌ನ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಪ್ರವೀಣ್ ಬಿ. ಶೆಟ್ಟಿ ವಂದಿಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.