ಸಾಮಾಜಿಕ ಸುರಕ್ಷಾ ಸಂಹಿತೆ ಹಿಂಪಡೆಯಲು ಆಗ್ರಹ
Team Udayavani, Mar 1, 2019, 1:00 AM IST
ಉಡುಪಿ: ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರನ್ನು ಒಳಗೊಂಡ ಕಾರ್ಮಿಕರಿಗೆ ಸಿದ್ಧಗೊಂಡ ಸಾಮಾಜಿಕ
ಸುರಕ್ಷಾ ಸಂಹಿತೆ ಹಿಂಪಡೆಯಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ಜಿಲ್ಲಾ ಮಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿ (ಸಿಐಟಿಯು) ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಈಗಿರುವ ಕಾಯಿದೆಯನುಸಾರ 2 ಕೋಟಿ ಕಾರ್ಮಿಕರು ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ 3 ಲಕ್ಷ ಕಾರ್ಮಿಕರು ಫಲಾನುಭವಿಗಳಾಗಿ ಸೇರ್ಪಡೆಗೊಂಡಿ ದ್ದಾರೆ. ಕಾರ್ಮಿಕರ ಕಲ್ಯಾಣ ತೆರಿಗೆಯಿಂದ ಸಂಗ್ರಹವಾಗುವ 7,500 ಕೋ.ರೂ. ಗಳಲ್ಲಿ ಪಿಂಚಣಿ, ಮದುವೆ, ಶಿಕ್ಷಣ,
ಹೆರಿಗೆ ಸೌಲಭ್ಯ ಇತ್ಯಾದಿ 30 ಸೌಲಭ್ಯ ಗಳಲ್ಲಿ ದೊರಕುತ್ತಿವೆೆ. ಈಗ ಸಿದ್ಧಗೊಂಡ ಸಾಮಾಜಿಕ ಸುರಕ್ಷಾ ಸಂಹಿತೆಯಿಂದ ಕಾರ್ಮಿಕರಿಗೆ ದೊರಕುವ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ಉದ್ದೇಶಿತ ಮಸೂದೆ ಹಿಂದಕ್ಕೆ ಪಡೆಯಬೇಕೆಂದು ಪ್ರತಿಭಟನೆ ನಡೆಸಲಾಯಿತು.
ಸಮಿತಿ ನಾಯಕರಾದ ಶೇಖರ ಬಂಗೇರ, ಬಾಲಕೃಷ್ಣ ಶೆಟ್ಟಿ, ಯು.ದಾಸ ಭಂಡಾರಿ, ಸುರೇಶ ಕಲ್ಲಾಗರ, ದಯಾನಂದ ಕೋಟ್ಯಾನ್, ಗಣೇಶ ನಾಯ್ಕ, ಜಗದೀಶ ಆಚಾರ್ ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.