“ಕಲಾ ಚಟುವಟಿಕೆಗಳಿಂದ ಸಾಂಘಿಕ ಬೆಳವಣಿಗೆ ಸಾಧ್ಯ’
Team Udayavani, Mar 2, 2019, 12:35 AM IST
ಮಲ್ಪೆ: ನಾಟಕ, ಯಕ್ಷಗಾನಗಳೆಲ್ಲ ಸಮೂಹ ಭಾವನೆಗಳನ್ನು ಮೂಡಿಸುವಂತದ್ದು. ಅದು ಆಶೋತ್ತರಗಳ ಈಡೇರಿಕೆಗೆ ಶ್ರದ್ಧೆಯ ಸಹಭಾಗಿತ್ವ ಒದಗಿಸುತ್ತದೆಂದು ರಂಗಕರ್ಮಿ ಗುರುಮೂರ್ತಿ ನೀನಾಸಂ ತಿಳಿಸಿದರು.
ಅವರು ಗುರುವಾರ ಉಡುಪಿ ಭುಜಂಗ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ ಇದರ ಸಹಯೋಗದೊಂದಿಗೆ ಸುಮನಸಾ ಕೊಡವೂರು ಆಯೋಜಿಸಿದ ರಂಗಹಬ್ಬ 7ರ 4ನೇ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲೆಯ ಸೆಳೆತವೆ ಉನ್ನತಿಯ ಪರವಾಗಿರುವಂತದ್ದು. ಅದು ಬೆಳೆಯಲು ಮತ್ತು ಬೆಳೆಸಲು ಕಾರಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಯಕ್ಷಗಾನ ಗುರು ಹಾವಂಜೆ ಮಂಜುನಾಥ್ ರಾವ್ ಅವರನ್ನು ರಂಗ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು.
ಪೌರಾಯುಕ್ತ ಆನಂದ ಕಲ್ಲೋಳಿಕರ್, ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕೊಡವೂರು ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಜನಾರ್ದನ ಕೊಡವೂರು, ಉದ್ಯಮಿಗಳಾದ ಮಹಾಬಲ ಸಾಲ್ಯಾನ್, ಸುಮನಸಾದ ಗೌರವಾಧ್ಯಕ್ಷ ಎಮ್.ಎಸ್. ಭಟ್ ಉಪಸ್ಥಿತರಿದ್ದರು.
ಕೋಶಾಧಿಕಾರಿ ಚಂದ್ರಕಾಂತ್ ಕುಂದರ್ ಸ್ವಾಗತಿಸಿದರು. ನೂತನ್ ಕುಮಾರ್ ಮಂದಿಸಿದರು. ಯೋಗೀಶ್ ಕೊಳಲಗಿರಿ ನಿರೂಪಿಸಿದರು.ಬಳಿಕ ಸುಮನಸಾ ಕೊಡವೂರು ತಂಡದಿಂದ ಪಂಚವಟಿ ಯಕ್ಷನಾಟಕ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.