ಬೈಂದೂರು ತಾಲೂಕು: ಚೊಚ್ಚಲ ಕನ್ನಡ ಸಾಹಿತ್ಯ ಸಮ್ಮೇಳನ: ಭರದ ಸಿದ್ಧತೆ


Team Udayavani, Mar 2, 2019, 12:30 AM IST

0103bdre2.jpg

ಉಪ್ಪುಂದ: ಬೈಂದೂರು ತಾಲೂಕು ರಚನೆಯ ಬಳಿಕ ಮಾ. 2ರಂದು ನಡೆಯುವ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಖಂಬದ ಕೋಣೆಯ ಸಂವೇದನಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಕಾಲೇಜು ಸಭಾಂಗಣದ ಬಿ. ಎಚ್‌. ಶ್ರೀಧರ ವೇದಿಕೆಯಲ್ಲಿ ಹಿರಿಯ ಪತ್ರಕರ್ತ, ಎಸ್‌. ಜನಾರ್ದನ ಮರವಂತೆ ಅಧ್ಯಕ್ಷತೆಯಲ್ಲಿ ನಡೆಯುವ‌ ಸಮ್ಮೇಳನಕ್ಕೆ ಸಾಧನಾ-2019 ಎಂಬ ಹೆಸರಿಡಲಾಗಿದೆ.

ಮಾ. 2ರಂದು ಬೆಳಗ್ಗೆ 8.30ಕ್ಕೆ ಖಂಬದಕೋಣೆ ಗ್ರಾ.ಪಂ. ಅಧ್ಯಕ್ಷ ಆನಂದ ಪೂಜಾರಿ ರಾಷ್ಟ್ರ ಧ್ವಜಾರೋಣ, ಕೆರ್ಗಾಲು ಗ್ರಾ.ಪಂ. ಅಧ್ಯಕ್ಷೆ ಸೋಮು ಕನ್ನಡ ಧ್ವಜಾರೋಹಣ, ರವೀಂದ್ರ ಎಚ್‌. ಪರಿಷತ್‌ ಧ್ವಜಾರೋಹಣ ನಡೆಸಲಿದ್ದಾರೆ.ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ| ಜೆ. ಈಶ್ವರ ಭಟ್‌ ಉದ್ಘಾಟಿಸಲಿದ್ದು, ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡುವರು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  ಕೃಷಿ ಕ್ಷೇತ್ರದ ಸವಾಲುಗಳ ಕುರಿತು ಗೋಷ್ಠಿ  ಸಾಂಸ್ಕೃತಿಕ ಕಾರ್ಯಕ್ರಮ, ಸಮ್ಮೇಳನದ ವಿವಿಧ ಹಂತಗಳಲ್ಲಿ ಉದಯರಾಗ, ಜಾನಪದ ಹಾಡು, ಕನ್ನಡ ಗೀತ ಗಾಯನ, ಮಹಮದ್‌ ಗೌಸ್‌ ನಿರ್ದೇಶನದಲ್ಲಿ ಯಕ್ಷ ಸೌರಭ ಪ್ರವಾಸಿ ಮೇಳದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

30 ವರ್ಷ ಶಿಕ್ಷಕ ವೃತ್ತಿ, ಮರವಂತೆಯಲ್ಲಿ ಆರೋಗ್ಯ ಕೇಂದ್ರ, ಪ್ರೌಢಶಾಲೆ ಸ್ಥಾಪನೆಯಲ್ಲಿ  ಪ್ರಧಾನ ಪಾತ್ರ. ಸಾಧನಾ ಹೆಸರಿನ ಸೇವಾ, ಸಾಂಸ್ಕೃತಿಕ ವೇದಿಕೆ ಸ್ಥಾಪನೆ. ಮರವಂತೆ ಗ್ರಾ.ಪಂ.ನಲ್ಲಿ 15 ವರ್ಷ ಸದಸ್ಯ, 2 ಅವಧಿಯ ಅಧ್ಯಕ್ಷ.  ಮಾದರಿ ಪಂಚಾಯತ್‌ ರೂಪಿಸಿದ್ದರ ಫಲವಾಗಿ 2 ರಾಷ್ಟ್ರೀಯ, ಒಂದು ರಾಜ್ಯ ಮತ್ತು 2 ಜಿಲ್ಲಾ ಪ್ರಶಸ್ತಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಕ್ಷೇತ್ರದಲ್ಲಿನ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.

ಚೊಚ್ಚಲ ಸಮ್ಮೇಳನದ ಅಧ್ಯಕ್ಷರಾಗಿ ಅನ್ನಿಸಿಕೆ
ಅಧ್ಯಾಪಕನಾಗಿ, ಪಂಚಾಯತ್‌ ರಾಜ್ಯ ಗ್ರಾಮೀಣ ಅಭಿವೃದ್ಧಿಯ ಸಂಪನ್ಮೂಲ ವ್ಯಕ್ತಿಯಾಗಿ, ಪತ್ರಕರ್ತನನಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ದುಡಿದ ಅನುಭವದಲ್ಲಿ ಈ ಜವಾಬ್ದಾರಿ ಸಿಕ್ಕಿರುವುದು ವಿಶೇಷ ಅವಕಾಶ ಹಾಗೂ ಸಂತಸ ನೀಡಿದೆ.

ಜನರಲ್ಲಿ ಸಾಹಿತ್ಯದ ಕಡೆಗೆ ಆಸಕ್ತಿ ಕಡಿಮೆಯಾಗುತ್ತಿದೆಯೇ?
ಹೌದು. ಇಂದು ಜಾಲತಾಣಗಳ ಕಡೆಗೆ ಜನರು ಹೆಚ್ಚು ಆಕರ್ಷಿತರಾಗಿರುವುದರಿಂದ ಪುಸ್ತಕದ ಓದು ಕಡಿಮೆಯಾಗಿದೆ. ವಿದ್ಯಾರ್ಥಿಗಳ ಜೀವನದಲ್ಲೇ ಮಕ್ಕಳಿಗೆ ಓದಿನ ಮಹತ್ವದ ಕುರಿತು ತಿಳಿಸುವ ಜವಾಬ್ದಾರಿ ಶಿಕ್ಷಕರ ಹಾಗೂ ಪಾಲಕರ ಮೇಲಿದೆ. ಪುಸ್ತಕದ ಓದು ಮೌಲ್ಯಯುತ ಜೀವನಕ್ಕೆ ದಾರಿದೀಪವಾಗುತ್ತದೆ. ಇದನ್ನು ತಿಳಿಸುವ ಜವಾಬ್ದಾರಿ ಸಮ್ಮೇಳನದ ಮೇಲಿದೆ.

ಗ್ರಾಮೀಣ ಭಾಗಗಳಲ್ಲಿ ಸಾಹಿತ್ಯ ಸಮ್ಮೇಳನ ಹೇಗೆ ಪ್ರಭಾವ ಬೀರುತ್ತದೆ?
ಪ್ರತಿ ಊರಿನಲ್ಲೂ ಕೂಡ ಕವನಗಾರರು, ಕಥೆಗಾರರು, ಲೇಖಕರು ಹೆಚ್ಚುತ್ತಿದ್ದಾರೆ.  ಸಮ್ಮೇಳನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿವುಳ್ಳವರನ್ನು ಸಂಘಟಿಸಲು ಇದರಿಂದ ಸಾಧ್ಯವಾಗುತ್ತಿದೆ. ಸಮ್ಮೇಳನಕ್ಕೆ ಸಾಕಷ್ಟು ಜನರು ಬರುತ್ತಾರೆ. ಇದು ಜನರಿಗೆ ಪುಸ್ತಕ ಓದಲು ಪ್ರಭಾವ ಬೀರುತ್ತದೆ.

80ರ ಇಳಿವಯಸ್ಸಿನಲ್ಲಿ ಈ ಚಟುವಟಿಕೆ ಹೇಗೆ?
ಯಾವುದೇ ದುಶ್ಚಟಗಳಿಲ್ಲದೆ ಇರುವುದರಿಂದ ಆರೋಗ್ಯದ ಸಮಸ್ಯೆ ಇಲ್ಲ. ಎಲ್ಲ ಕ್ಷೇತಗಳಲ್ಲೂ ಆಸಕ್ತಿಯಿಂದ ತೊಡಗಿಸಿಕೊಂಡು ಯಶಸ್ಸು ಕಂಡಿದ್ದೇನೆ. ಮನೆಯಲ್ಲಿ ಕುಳಿತುಕೊಳ್ಳುವ ಪ್ರವತ್ತಿ ಅಲ್ಲ ನಿರಂತರವಾಗಿ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಇರುವುದರಿಂದ ಸಾಧ್ಯವಾಗಿದೆ.

ಯುವ ಬರಹಗಾರರಿಗೆ ಸಂದೇಶ?
ಉತ್ತಮ ಸಾಹಿತ್ಯಗಳನ್ನು ಅಧ್ಯಯನ ಮಾಡುವ ಮೂಲಕ ಪದ ಸಂಪತ್ತು ಕಟ್ಟಿಕೊಂಡು ತಮ್ಮದೇ ಶೈಲಿಯನ್ನು ರೂಢಿಸಿಕೊಳ್ಳಬೇಕು. ಯಾರೂ ಬರೆಯುತ್ತಾರೆ ನಾನು ಬರೆಯುತ್ತೇನೆ ಇದು ಬೇಡ. ಪ್ರತಿ ಬರವಣಿಗೆಯಲ್ಲೂ ವಿಶೇಷ ಶೈಲಿ, ಆಕರ್ಷಿಸುವ ರೀತಿ ಇರಬೇಕು ಇದರ ಕಡೆಗೆ ಯುವ ಬರಹಗಾರರು ಮನಸ್ಸು ಮಾಡಬೇಕು.

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

7

Malpe: ಫಿಶರೀಸ್‌ ಕಾಲೇಜು ಆವರಣ ಕೊಳಚೆ ಮುಕ್ತಿ

6

Kaup ತಾಲೂಕಿನಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಬೆಳೆ ಕಟಾವು

5

Kundapura: ಎಂಟು ಗಂಟೆ ಕಾಲ ನಡೆದ ಕುಂದಾಪುರ ಪುರಸಭೆ!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.