ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟ


Team Udayavani, Mar 2, 2019, 12:30 AM IST

v-50.jpg

ಅಬುಧಾಬಿ/ಇಸ್ಲಾಮಾಬಾದ್‌: “ಭಯೋತ್ಪಾದನೆ ವಿರುದ್ಧ ಹೋರಾಟ ಎನ್ನುವುದು ಯಾವುದೇ ಧರ್ಮದ ವಿರುದ್ಧ ಅಲ್ಲ. ಜತೆಗೆ  ಈ ಹೋರಾಟ ಯಾವುದೇ ಪ್ರಾದೇಶಿಕ ಭಾಗವನ್ನು ಅಸ್ಥಿರಗೊಳಿಸುವ ಪ್ರಯತ್ನವೂ ಅಲ್ಲ’ ಎಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ. 

ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ)ದ ಅಬುಧಾಬಿಯಲ್ಲಿ ಶುಕ್ರವಾರದಿಂದ ಆರಂಭವಾದ 2 ದಿನಗಳ ಮುಸ್ಲಿಂ ರಾಷ್ಟ್ರಗಳ ಒಕ್ಕೂಟದ 46ನೇ ಸಮಾವೇಶದಲ್ಲಿ ವಿಶೇಷ ಅತಿಥಿಯಾಗಿ ಅವರು ಮಾತನಾಡಿದರು. “ಭಯೋತ್ಪಾದನೆ ಮತ್ತು ಉಗ್ರಗಾಮಿತ್ವ ಬೇರೆ ಬೇರೆ ಹೆಸರುಗಳು. ಪ್ರತಿಯೊಂದು ಹಂತದಲ್ಲಿಯೂ ಅದು ಧರ್ಮವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವ ಹಂತವನ್ನೇ ತಲುಪಿರುತ್ತದೆ. ಕೊನೆಗೆ ಅದನ್ನೇ ನಿಜ ಮತ್ತು ಜಯವೆಂದು ನಂಬಲಾಗುತ್ತದೆ. ಭಯೋತ್ಪಾದನೆ ವಿರುದ್ಧದ ಹೋರಾಟ ಎನ್ನುವುದು ಯಾವುದೇ ಧರ್ಮದ ವಿರುದ್ಧ ಅಲ್ಲ’ ಎಂದು ವಿದೇಶಾಂಗ ಸಚಿವೆ ಹೇಳಿದ್ದಾರೆ.

ಇಸ್ಲಾಂ ಎನ್ನುವ ಶಬ್ದದ ಅರ್ಥವನ್ನು ಭಾಷಣದಲ್ಲಿ ಪ್ರಸ್ತಾಪಿಸಿರುವ ಸುಷ್ಮಾ, ಅದು ಶಾಂತಿಯ ಸಂಕೇತ. ಅಲ್ಲಾಹ್‌ಗೆ ಇರುವ 99 ಹೆಸರುಗಳಲ್ಲಿ ಹಿಂಸೆಗೆ ಪ್ರೇರೇಪಿಸುವ ಅಂಶಗಳೇ ಇಲ್ಲ. ವಿಶ್ವದಲ್ಲಿರುವ ಎಲ್ಲಾ ಧರ್ಮಗಳು ಶಾಂತಿ, ಸಹೋದರತ್ವ ಮತ್ತು ಸಹಾನುಭೂತಿಯನ್ನು ಬೋಧಿಸುತ್ತವೆ ಎಂದಿದ್ದಾರೆ.

ಕುರಾನ್‌ನಲ್ಲಿರುವ “ಲಾ ಇಖ್‌ರಾಹ್‌ ಫಿದ್ದೀನ್‌’  ಅಂದರೆ “ಧರ್ಮದಲ್ಲಿ ಯಾವುದೇ ಅಂಶ ಕಡ್ಡಾಯವಿಲ್ಲದಿರಲಿ’ ಎಂದು ಅರ್ಥ ಎಂದು ಸುಷ್ಮಾ ಉಲ್ಲೇಖೀಸಿದ್ದಾರೆ. ಅನಾದಿ ಕಾಲದಿಂದಲೂ ಭಾರತದಲ್ಲಿ ಬಹು ಸಂಸ್ಕೃತಿ ವ್ಯವಸ್ಥೆ ಇದೆ. ಅದಕ್ಕಾಗಿ ಋಗ್ವೇದದಿಂದ ಏಕಂ ಸತ್‌ ವಿಪ್ರಾ ಬಹುದಾ ವಧಂತಿ ಅಂದರೆ “ದೇವರು ಒಬ್ಬನೇ. ಆದರೆ ಅದರ ಬಗ್ಗೆ ಅರಿತವರು ಬಹು ವಿಧದಲ್ಲಿ ಆತನನ್ನು ವಿವರಿಸುತ್ತಾರೆ’ ಎಂದು ವ್ಯಾಖ್ಯಾನಿಸಿªದಾರೆ. ಅದುವೇ ವಿಶ್ವದ ಇತರ ಭಾಗಗಳಲ್ಲಿನ ಧರ್ಮಗಳಲ್ಲಿಯೂ ಅಡಕವಾಗಿದೆ ಎಂದಿದ್ದಾರೆ.  

ಪ್ರಧಾನಿ ನರೇಂದ್ರ ಮೋದಿಯವರ  ಮತ್ತು 185 ದಶಲಕ್ಷ ಮುಸ್ಲಿಮರನ್ನೂ ಒಳಗೊಂಡ 1.3 ಶತಕೋಟಿ ಭಾರತೀಯರ ಶುಭ ಹಾರೈಕೆಗಳನ್ನು ಹೊತ್ತು ತಂದಿದ್ದೇನೆ ಎಂದು ಸ್ವರಾಜ್‌ ಹೇಳಿದ್ದಾರೆ. ತಾವು ಶಾಂತಿಯ ಪ್ರತೀಕ, ಜ್ಞಾನವೆಂಬ ಕಾರಂಜಿಯ ನಾಡಿನ ಪ್ರತಿನಿಧಿಯಾಗಿ ಆಗಮಿಸಿರುವುದಾಗಿ ಸ್ವರಾಜ್‌ ವಿವರಿಸಿದ್ದಾರೆ. ಒಟ್ಟು 17 ನಿಮಿಷಗಳ ಭಾಷಣದಲ್ಲಿ ಸಚಿವೆ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪ ಮಾಡಲಿಲ್ಲ. ಮುಸ್ಲಿಂ ರಾಷ್ಟ್ರಗಳ ಒಕ್ಕೂಟಕ್ಕೆ  ಮತ್ತು ಜಗತ್ತಿನ ಇತರ ರಾಷ್ಟ್ರಗಳಿಗೆ ಫೆ.14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಘಟನೆ, ಫೆ.26ರ ವಾಯುಪಡೆ ದಾಳಿಯ ಅಗತ್ಯವನ್ನು ಸುಷ್ಮಾ ಸ್ವರಾಜ್‌ ಸಮರ್ಥವಾಗಿಯೇ ಮನವರಿಕೆ ಮಾಡಿಕೊಟ್ಟಿದ್ದಾರೆ.   

ರಾಜತಾಂತ್ರಿಕ ವಿಜಯ: ಭಾರತ ಮತ್ತು ಯುಎಇ ನಡುವೆ 2016ರ ಬಳಿಕ ಉತ್ತಮ ರಾಜತಾಂತ್ರಿಕ ಬಾಂಧವ್ಯವಿದೆ. ಹೀಗಾಗಿ ಪಾಕಿಸ್ತಾನ ಕಾರ್ಯಕ್ರಮ ಬಹಿಷ್ಕರಿಸಿರುವುದು ಭಾರತಕ್ಕೆ ರಾಜತಾಂತ್ರಿಕ ಜಯವೇ ಆಗಿದೆ. ಒಐಸಿ ಸಮ್ಮೇಳನಕ್ಕೆ ಸುಷ್ಮಾ ಸ್ವರಾಜ್‌ ಭಾಗವಹಿಸುವುದೇ ಭಾರತದ ನೆರೆಯ ರಾಷ್ಟ್ರಕ್ಕೆ ಮುಜುಗರದ ವಿಚಾರ. ಇದೇ ವೇದಿಕೆಯಲ್ಲಿ ಭಾರತವನ್ನು ಪಾಕಿಸ್ತಾನ ಮುಜುಗರಕ್ಕೆ ಒಳಪಡಿಸಿತ್ತು.  ಜತೆಗೆ ಒಐಸಿಯ ವೀಕ್ಷಕ ರಾಷ್ಟ್ರ ಅಥವಾ ಸದಸ್ಯನಾಗುವುದಕ್ಕೂ ಪಾಕಿಸ್ತಾನ ಪ್ರಬಲ ವಿರೋಧ ಮಾಡುತ್ತಿದೆ. ಭಾರತದ ಪರವಾಗಿ ಬಾಂಗ್ಲಾದೇಶ ಹಲವು ಬಾರಿ ಸದಸ್ಯತ್ವ ನೀಡುವ ಬಗ್ಗೆ ಒತ್ತಾಯಿಸಿತ್ತು.

ಸುಷ್ಮಾ ಸ್ವರಾಜ್‌ ಮೊದಲ ಸಚಿವೆ 
ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದ ಫ‌ಕ್ರುದ್ದೀನ್‌ ಅಲಿ ಅಹ್ಮದ್‌ಗೆ 1969ರಲ್ಲಿ ಒಐಸಿ ರಾಷ್ಟ್ರಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಸಿಕ್ಕಿತ್ತು. ಆದರೆ ಪಾಕಿಸ್ತಾನದ ಚಿತಾವಣೆಯಿಂದಾಗಿ ಹಿಂಪಡೆಯಲಾಗಿತ್ತು. ಮಾಹಿತಿ ಗೊತ್ತಾಗುವ ವೇಳೆಗೆ ಫ‌ಕ್ರುದ್ದೀನ್‌ ಅಲಿ ಅಹ್ಮದ್‌ ಮೊರೊಕ್ಕೋ ರಾಜಧಾನಿ ತಲುಪಿದ್ದರು. ನಂತರ ಭಾರತವನ್ನು ಹೊರಗಿಡಲಾಗಿತ್ತು. ಇದೀಗ ಮೊದಲ ಬಾರಿಗೆ ಸುಷ್ಮಾ ಸ್ವರಾಜ್‌ಗೆ ಆಹ್ವಾನ ನೀಡಲಾಗಿದೆ.

ಸಮ್ಮೇಳನ ಬಹಿಷ್ಕರಿಸಿದ  ಪಾಕಿಸ್ತಾನ
ಅಬುದಾಭಿಯಲ್ಲಿ ನಡೆಯುತ್ತಿರುವ ಮುಸ್ಲಿಂ ರಾಷ್ಟ್ರಗಳ ಒಕ್ಕೂಟ (ಒಐಸಿ) ಸಮ್ಮೇಳನವನ್ನು ಪಾಕಿಸ್ತಾನ ಬಹಿಷ್ಕರಿಸಿದೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ಮತ್ತು ಎರಡು ದೇಶಗಳ ನಡುವೆ ಉದ್ವಿಗ್ನ ವಾತಾವರಣ ಇರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಭಾರತದ ನೆರೆಯ ರಾಷ್ಟ್ರದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಅಲ್ಲಿನ ಸಂಸತ್‌ಗೆ ತಿಳಿಸಿದ್ದಾರೆ. ಸುಷ್ಮಾ ಸ್ವರಾಜ್‌ ಅವರನ್ನು ವಿಶೇಷ ಅತಿಥಿಯನ್ನಾಗಿ ಪ್ರಸಕ್ತ ಸಾಲಿನಲ್ಲಿ ಆಹ್ವಾನಿಸಲಾಗಿದೆ.

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

Canada Court: ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು

Canada Court:ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.