ಇವಿಎಂ “ಹ್ಯಾಕ್’ ಮಾಡಲು ಸಾಧ್ಯವೇ ಇಲ್ಲ: ಸಂಜೀವ್ ಕುಮಾರ್
Team Udayavani, Mar 2, 2019, 2:29 AM IST
ಬೆಂಗಳೂರು: 16ನೇ ಲೋಕಸಭೆಯ ಅವಧಿ ಬರುವ ಮೇ 26ಕ್ಕೆ ಕೊನೆಗೊಳ್ಳಲಿದ್ದು, ದೇಶ 17ನೇ ಲೋಕಸಭಾ ಚುನಾವಣೆಗೆ ಸಜ್ಜುಗೊಂಡಿದೆ. ರಾಜಕೀಯ ಪಕ್ಷಗಳು ಚುನಾವಣ ಮೂಡ್’ಗೆ ಬಂದಾಗಿದೆ. ರಾಜ್ಯದಲ್ಲಿ 28 ಸಂಸದ ರನ್ನು ಚುನಾಯಿಸುವ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಬೇಕಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆ ವಿಚಾರವಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ.
ರಾಜ್ಯದಲ್ಲಿ ಚುನಾವಣ ಸಿದ್ಧತೆಗಳು ಹೇಗೆ ಸಾಗಿವೆ?
ಕಳೆದ ಚುನಾವಣೆಯ ಅನುಭವದ ಆಧಾರದಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗುತ್ತಿದೆ. ಯಾವಾಗ ಚುನಾವಣೆ ಘೋಷಣೆಯಾದರೂ ನಡೆಸಲು ನಾವು ಸನ್ನದ್ಧರಾಗಿದ್ದೇವೆ. ಮತ ದಾರರ ಪಟ್ಟಿ ಪರಿಷ್ಕರಣೆ ಆಗಿದೆ. ಅಧಿಕಾರಿಗಳು ಮತ್ತು ಚುನಾವಣ ಸಿಬಂದಿ ನಿಯೋಜನೆ ಮತ್ತು ಮೊದಲ ಹಂತದ ತರಬೇತಿ ಮುಗಿದಿದೆ. ಇವಿಎಂಗಳು ಪೂರೈಕೆಯಾಗಿವೆ. ಮತದಾನ ಸಾಮಗ್ರಿಗಳ ಖರೀದಿ ಆಗಿದೆ. ಮತಗಟ್ಟೆಗಳಲ್ಲಿನ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಹೊಂದಿಸಲಾಗಿದೆ. ಚುನಾವಣ ಕಾರ್ಯಕ್ಕೆ 2.32 ಲಕ್ಷ ಸಿಬಂದಿ, ಮತ ಎಣಿಕೆ ಕಾರ್ಯಕ್ಕೆ ಹೆಚ್ಚುವರಿಯಾಗಿ 30 ಸಾವಿರ, ಚುನಾವಣ ಸಂಬಂಧಿ, ಇತರ ಕಾರ್ಯಗಳಿಗೆ 40 ಸಾವಿರ ಮತ್ತು ಭದ್ರತೆಗೆ 80 ಸಾವಿರ ಪೊಲೀಸ್ ಸಹಿತ ಒಟ್ಟು 3 ಲಕ್ಷಕ್ಕೂ ಹೆಚ್ಚು ಸಿಬಂದಿಯನ್ನು ಬಳಸಿಕೊಳ್ಳಲಾಗುವುದು. ಅವರಿಗೆ ಮೊದಲ ಹಂತದಲ್ಲಿ ರಾಜ್ಯಮಟ್ಟದ, ಜಿಲ್ಲಾಮಟ್ಟದ ತರಬೇತಿ ನೀಡಲಾಗಿದೆ. ತರಬೇತಿ ಕಾರ್ಯ ಇನ್ನೂ ಮುಂದುವರಿದಿದೆ.
ಮತಗಟ್ಟೆಗಳನ್ನು ಗುರುತಿಸಲಾಗಿದೆಯೇ, ಅಲ್ಲಿ ಮೂಲಸೌಕರ್ಯಗಳ ಲಭ್ಯತೆ ಹೇಗಿದೆ?
ರಾಜ್ಯದಲ್ಲಿ ಒಟ್ಟು 58,186 ಮತಗಟ್ಟೆಗಳಿದ್ದು, ಅವುಗಳೆಲ್ಲವನ್ನೂ ಶೇ.100ರಷ್ಟು ಮತದಾರ ಸ್ನೇಹಿಯನ್ನಾಗಿ ಮಾಡುವುದು ನಮ್ಮ ಗುರಿ. ಮತಗಟ್ಟೆಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇರುವಂತೆ ನೋಡಿ ಕೊಳ್ಳಲಾಗುತ್ತಿದೆ. ಮುಖ್ಯವಾಗಿ ಎಲ್ಲ ಮತಗಟ್ಟೆಗಳು ನೆಲ ಮಹಡಿಯಲ್ಲಿ ಇರುವುದನ್ನು ಖಾತರಿಪಡಿಸಿಕೊಳ್ಳಲಾಗಿದೆ. ಒಟ್ಟು ಮತಗಟ್ಟೆಗಳ ಪೈಕಿ 3,277 ಮತಗಟ್ಟೆಗಳಲ್ಲಿ ರ್‍ಯಾಂಪ್ ವ್ಯವಸ್ಥೆಯನ್ನು ಉನ್ನತೀಕರಿಸಬೇಕಾಗಿದೆ. 2,865 ಮತ ಗಟ್ಟೆಗಳಲ್ಲಿ ಕುಡಿಯುವ ನೀರು, 1,908 ಕಡೆ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕಾಗಿದೆ. 1,611 ಮತಗಟ್ಟೆಗಳಲ್ಲಿ ಶೌಚಾಲಯ ದುರಸ್ತಿ ಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇವಿಎಂಗಳ ಬಗ್ಗೆ ಅನುಮಾನ, ಅಪನಂಬಿಕೆ ಇನ್ನೂ ಹಾಗೆಯೇ ಇದೆಯಲ್ಲ?
“ವಿದ್ಯುನ್ಮಾನ ಮತಯಂತ್ರ’ (ಇವಿಎಂ)ಗಳ ಕುರಿತ ಅನುಮಾನ, ಅಪನಂಬಿಕೆಗಳಿಗೆ ಈಗ ಯಾವುದೇ ಅರ್ಥವಿಲ್ಲ. ಇವಿಎಂಗಳನ್ನು ಯಾವುದೇ ಕಾರಣಕ್ಕೂ, ಯಾರೊಬ್ಬರೂ ತಿರುಚಲು, ದುರ್ಬಳಕೆ ಮಾಡಲು ಅಥವಾ ಇಂಟರ್‌ನೆಟ್ ಭಾಷೆಯಲ್ಲಿ ಹೇಳುವುದಾದರೆ “ಹ್ಯಾಕ್’ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ತಾಂತ್ರಿಕ ಸಾಕ್ಷಿ, ಪುರಾವೆಗಳ ಸಹಿತ ಋಜುವಾತುಪಡಿಸಲಾಗಿದೆ.
ರಾಜ್ಯಕ್ಕೆ 75,640 ಕಂಟ್ರೋಲ್ ಯೂನಿಟ್, 87,280 ಬ್ಯಾಲೆಟ್ ಯೂನಿಟ್ ಮತ್ತು 78,560 ವಿವಿಪ್ಯಾಟ್ ಆವಶ್ಯಕತೆ ಇದೆ. ಈಗಾಗಲೇ ಅಷ್ಟೂ ಇವಿಎಂಗಳು ರಾಜ್ಯಕ್ಕೆ ಬಂದಿವೆ. ಬಿಇಎಲ್ ಎಂಜಿನಿಯರ್‌ಗಳಿಂದ ಮೊದಲ ಹಂತದ ತಪಾಸಣೆ ನಡೆಸಲಾಗುತ್ತಿದೆ. ಮತದಾರರ ಬೆರಳಿಗೆ ಹಚ್ಚಲು ಬಳಸುವ ಅಳಿಸಲಾಗದ ಶಾಯಿಯ 1.32 ಲಕ್ಷ ಸೀಸೆಗಳನ್ನು ತರಿಸಿಕೊಳ್ಳಲಾಗಿದೆ. ಗುಣಮಟ್ಟ ಪರೀಕ್ಷೆ ಬಳಿಕ ಅದನ್ನು ಜಿಲ್ಲಾ ಕೇಂದ್ರಗಳಿಗೆ ಪೂರೈಸಲಾಗುವುದು.
ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.