ಕಪ್ಪು ಕೊಕ್ಕರೆ
Team Udayavani, Mar 2, 2019, 4:59 AM IST
ಗಾತ್ರದಲ್ಲಿ ಹದ್ದಿನಷ್ಟು ದೊಡ್ಡದಾಗಿರುವ ಕಪ್ಪು ಕೊಕ್ಕರೆ, ಮೀನು, ಚಿಕ್ಕ ಏಡಿ, ಶಂಖದ ಹುಳುವನ್ನು ಹಿಡಿದು ತಿನ್ನುತ್ತದೆ. ಏಪ್ರಿಲ್- ಮೇತಿಂಗಳಲ್ಲಿ ಇದು ಮರಿ ಮಾಡುತ್ತದೆ. ಹದ್ದಿನಷ್ಟೇ ದೊಡ್ಡ ಗಾತ್ರದ್ದು ಕೊಕ್ಕರೆ ಈ ಕಪ್ಪು
ಕೊಕ್ಕರೆ. ಈ ಪಕ್ಷಿ ‘ಸೈಕೋನಿಡಿಯಾ’ ಕುಟುಂಬಕ್ಕೆ ಸೇರಿದೆ. ಕೊಕ್ಕರೆಗಳಲ್ಲಿಯೇ ದೊಡ್ಡದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದು ಮುಖ್ಯವಾಗಿ ಮೀನು, ಮೃದ್ವಂಗಿ, ಶಂಖದ ಹುಳು, ಶೆಟಿ ಚಿಕ್ಕ ಏಡಿ, ಚಿಕ್ಕ ಸರೀಸೃಪಗಳನ್ನು ತಿಂದು ಬದುಕುತ್ತದೆ.
ಮೈಯಗರಿ ಕಪ್ಪು ಬಣ್ಣದಿಂದ ಕೂಡಿದ್ದು, ಫಳ ಫಳಹೊಳೆಯುತ್ತದೆ. ಕಂದು ಗರಿ ಅದರ ಸುತ್ತ ಹೊಳೆವನೀಲಿ ಮಿಶ್ರಿತ ಹಸಿರು ಬಣ್ಣದ ಹೊಳೆವ ಗರಿ ಇದರ ಚೆಲುವನ್ನು ಹೆಚ್ಚಿಸಿದೆ. ಕುತ್ತಿಗೆ ಭಾಗದ ಗರಿ ನವಿಲಿನ ಗರಿಯಂತೆ ಹೊಳಪಿದೆ. ಇದರ ಕಣ್ಣ ಸುತ್ತ ರೋಮಗಳಿಲ್ಲದ ಕೆಂಪು ಬಣ್ಣದ ಚರ್ಮ ಇರುತ್ತದೆ. ಕಾಲಿನ ಬಣ್ಣ ತಿಳಿ ಗುಲಾಬಿ. ಉದ್ದದಬೆರಳಿರುವುದರಿಂದ ನೀರು, ಕೆಸರಿನಲ್ಲಿರುವ ಮೀನು,ಮೃದ್ವಂಗಿಗಳನ್ನು ಹಿಡಿದು ತಿನ್ನಲು ಸಹಾಯಕವಾಗಿದೆ.
ಇದರ ರೆಕ್ಕೆಯ ಅಗಲ 145 ರಿಂದ 155 ಸೆಂ.ಮೀ ಇರುತ್ತದೆ. ಹೊಳೆವ ಕಪ್ಪು, ಹಿತ್ತಾಳೆಯಂತೆ ಹೊಳೆವಕಂದು, ಹಸಿರು, ನೀಲಿ ಬಣ್ಣ ಕುತ್ತಿಗೆ ಮತ್ತು ತಲೆಭಾಗದಲ್ಲಿದೆ. ಕೆಸರಿನ ಜೌಗು, ಗಜನೀ ಭಾಗ ನದಿತೀರದಲ್ಲಿ ಈ ಪಕ್ಷಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಹಾರುವಾಗ ಇದರ ಹೊಟ್ಟೆ ಭಾಗದ ಬಿಳಿ ಗರಿ ಬೀಸಣಿಗೆಯಂತೆ ಕಾಣುತ್ತದೆ. ಯೌವನ ತಲುಪಿದ ಕೊಕ್ಕರೆ ಸುಮಾರು 2.9 ಕೆ.ಜಿ ಭಾರ ಇರುತ್ತದೆ.
ಹೀಗಾಗಿ, ನಿಧಾನಕ್ಕೆ ಹಾರುತ್ತದೆ. ಹಾರುವಾಗ ಇತರ ಕೊಕ್ಕರೆಯಂತೆ ಕುತ್ತಿಗೆಯನ್ನು ಸ್ವಲ್ಪ ಸಂಕುಚಿತಗೊಳಿಸಿ, ತನ್ನ ಎರಡೂ ಕಾಲನ್ನು ಮುಮ್ಮುಖವಾಗಿ ಚಾಚುವುದು ಈ ಹಕ್ಕಿಯ ಸ್ವಭಾವ. ಈ ಹಕ್ಕಿ ದೊಡ್ಡ ಮರಗಳ ಮೇಲೆ ಬೃಹದಾಕಾರದಗೂಡನ್ನು ಕಟ್ಟುತ್ತದೆ. ಮರದ ಕಟ್ಟಿಗೆ ತುಂಡನ್ನುಸೇರಿಸಿ ಅಟ್ಟಣಿಗೆ ನಿರ್ಮಿಸುತ್ತದೆ. ಕೆಲವೊಮ್ಮ ಟೊಂಗೆಗಳ ಸಂದಿಯನ್ನು ಗೂಡು ನಿರ್ಮಿಸಲು ಉಪಯೋಗಿಸುತ್ತದೆ.
ಇಂಥ ಅಟ್ಟಣಿಗೆಯ ಮಧ್ಯೆ ಚಿಕ್ಕ ಹಸಿರು ಮೆತ್ತನೆಯ ಸಸ್ಯವನ್ನು ಹಾಸಿ -ಈ ಮೆತ್ತನೆಯ ಮಧ್ಯಭಾಗದಲ್ಲಿ ಮುಸುಕು ಬಿಳಿಬಣ್ಣದ 3-5 ಮೊಟ್ಟೆಇಡುತ್ತದೆ. ನಮ್ಮ ಕೊಕ್ಕರೆಗೆ ಅತಿ ಹತ್ತಿರದ ಸಂಬಂಧಿಈ ಹಕ್ಕಿ. ಆಹಾರ ಸ್ವಭಾವ , ಹಾರುವ ರೀತಿ, ಗೂಡುನಿರ್ಮಾಣ -ಮರಿಗಳ ಪಾಲನೆಯಲ್ಲಿ ತುಂಬಾಹೋಲಿಕೆ ಇದೆ.
ಏಪ್ರಿಲ್, ಮೇ ಇದು ಮರಿಮಾಡುವ ಸಮಯ. ಈ ಸಮಯದಲ್ಲಿ ಹೊಸಗರಿ ಮೂಡಿ -ಈ ಕೊಕ್ಕರೆ ತುಂಬಾ ಸುಂದರವಾಗಿ ಕಾಣುತ್ತದೆ . ಮರಿ ಮಾಡುವ ಸಮಯದಲ್ಲಿ ಎದೆಯ ಭಾಗದಲ್ಲಿ ಉದ್ದ ಗರಿ ಮೂಡುವುದು. ಗಂಡು-ಹೆಣ್ಣು ಒಂದೇ ರಿತಿ ಇರುತ್ತವೆ. ಆದರೂ ಗಂಡು -ಹೆಣ್ಣಿಗಿಂತ ದಪ್ಪವಾಗಿರುತ್ತದೆ.
ಕೊಕ್ಕರೆಯಂತೆ ನಿಧಾನವಾಗಿ ಗಂಭೀರವಾಗಿ ನಡೆಯುವುದು. ಎದೆಯಲ್ಲಿ ಮತ್ತು ಪುಕ್ಕದ ಭಾಗದಲ್ಲಿ ಇರುವ ಗರಿಗಳನ್ನು -ಗೂಡುನಿರ್ಮಾಣ ಮತ್ತು ಇರುನೆಲೆ ಘೋಷಿಸಲು ನಡೆಸುವ ಪ್ರಣಯ ಚಟುವಟಿಕೆ ಸಂದರ್ಭದಲ್ಲಿ ಬಳಕೆ ಮಾಡುತ್ತದೆ.
ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.