ಪುತ್ತೂರು: ನೀರು ಪೂರೈಕೆ ಉನ್ನತೀಕರಿಸಿದ ವ್ಯವಸ್ಥೆ
Team Udayavani, Mar 2, 2019, 5:39 AM IST
ನಗರ : ಬೆಳೆಯುತ್ತಿರುವ ಪುತ್ತೂರು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ಹೊಸ ಯೋಜನೆಯ ಕಾಮಗಾರಿಗೆ ಶನಿವಾರ ಚಾಲನೆ ನೀಡಲಾಗಿದೆ.
ಹಿಂದಿನ ಸರಕಾರದ ಅವಧಿಯಲ್ಲಿ ಎಡಿಬಿ ಯೋಜನೆಯಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ಕಾಮಗಾರಿಗೆ 71.41 ಕೋಟಿ ರೂ. ಗುತ್ತಿಗೆ ಮೊತ್ತ ಅನುಮೋದನೆಗೊಂಡಿದ್ದು, ನಗರಸಭೆ ಮತ್ತು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆ.ಯು.ಐ.ಡಿ.ಎಫ್.ಸಿ.) ಸಹಯೋಗದಲ್ಲಿ ನಡೆಯುವ ಈ ಕಾಮಗಾರಿಯನ್ನು 33 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದ್ದು, ಅನಂತರ 3 ತಿಂಗಳು ಪ್ರಾಯೋಗಿಕ ಸರಬರಾಜು ನಡೆಯಲಿದೆ. ಮುಂದಿನ 3 ವರ್ಷಗಳಲ್ಲಿ 24×7 ನಿರಂತರ ನೀರು ಸರಬರಾಜಿನ ಉನ್ನತೀಕರಿಸಿದ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಸಾಕಷ್ಟು ಮುನ್ನೆಚ್ಚರಿಕೆ ಕ್ರಮ
ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಕುಮಾರಧಾರಾ ನದಿಗೆ ಒಡ್ಡು ನಿರ್ಮಿಸಿ ಅದರಲ್ಲಿ ಸಂಗ್ರಹಗೊಂಡ ನೀರನ್ನು ಪೈಪ್ ಗಳ ಮೂಲಕ ಪುತ್ತೂರಿಗೆ ಮೂರು ದಶಕಗಳ ಕಾಲ ರವಾನಿಸಲಾಗುತ್ತಿತ್ತು. ಅನಂತರ 10 ವರ್ಷಗಳ ಹಿಂದೆ ಅನುಷ್ಠಾನಗೊಂಡ 38 ಕೋಟಿ ರೂ. ಮೊತ್ತದ ಎಡಿಬಿ ಕುಡಿಯುವ ನೀರು ಯೋಜನೆಯಲ್ಲಿ ಹಳೆಯ ಪೈಪ್‌ಲೈನ್ ಜತೆಗೆ ಹೊಸ ಪೈಪ್‌ಲೈನ್ ಅಳವಡಿಕೆ, ಹೊಸದಾಗಿ ಒವರ್‌ಹೆಡ್ ಟ್ಯಾಂಕ್‌ಗಳು, ರೇಚಕಸ್ಥಾವರ ನಿರ್ಮಾಣ ಇತ್ಯಾದಿ ಕಾಮಗಾರಿ ಜಾರಿಗೆ ಬಂದಿತ್ತಾದರೂ ಹಲವು ಹುಳುಕುಗಳು ಕಂಡುಬಂದ ಜತೆಗೆ ನಗರದ ಕೇವಲ ಶೇ. 60 ಪ್ರದೇಶಕ್ಕೆ ಮಾತ್ರ ನೀರು ಪೂರೈಕೆ ನಡೆದಿತ್ತು. ಈ ಕಾರಣದಿಂದ ಹೊಸ ಯೋಜನೆಯನ್ನು ಅಳವಡಿಸುವ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗಿದೆ. ಹಲವು ಸುತ್ತಿನ ಸಭೆಗಳ ಮೂಲಕ ಚರ್ಚಿಸಲಾಗಿದೆ. ಸಾರ್ವಜನಿಕ ಅಭಿಪ್ರಾಯವನ್ನೂ ಪರಿಗಣಿಸಲಾಗಿದೆ. ಎಸ್‌ಪಿಪಿಎಲ್ -ಎಸ್ ಪಿಐಪಿಎಲ್-ಡಿಆರ್‌ಎಸ್ ಇನ್‌ಫ್ರಾಟೆಕ್ ಪೈ.ಲಿ. ಸಂಸ್ಥೆಯು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ.
ಪ್ರಸ್ತಾವಿತ ಘಟಕಗಳು
ಮುರ, ಶಾಂತಿನಗರ, ಪಟ್ನೂರು -ಮೇಲ್ಮಟ್ಟದ ಜಲಸಂಗ್ರಹಗಾರ (3 ಲಕ್ಷ ಲೀ. ಸಾಮರ್ಥ್ಯ).
ಮೈಕ್ರೋವೇವ್ ಸ್ಟೇಷನ್ ಮಂಜಲ್ಪಡು³ – ಮೇಲ್ಮಟ್ಟದ ಜಲಸಂಗ್ರಹಗಾರ (1 ಲಕ್ಷ ಲೀ.
ಸಾಮರ್ಥ್ಯ).
ಸಿಟಿಗುಡ್ಡೆ – ನೆಲಮಟ್ಟದ ಜಲಸಂಗ್ರಹಗಾರ (10 ಲಕ್ಷ ಲೀ. ಸಾಮರ್ಥ್ಯ).
ಸಿಟಿಒ, ದರ್ಬೆ – ಮೇಲ್ಮಟ್ಟದ ಜಲಸಂಗ್ರಹಗಾರ (6 ಲಕ್ಷ ಲೀ. ಸಾಮರ್ಥ್ಯ).
ಲಿಂಗದಗುಡ್ಡ – ಮೇಲ್ಮಟ್ಟದ ಜಲಸಂಗ್ರಹಗಾರ (2.5 ಲಕ್ಷ ಲೀ. ಸಾಮರ್ಥ್ಯ).
ಬಲ್ನಾಡ್ ಹೆಲಿಪ್ಯಾಡ್ – ಮೇಲ್ಮಟ್ಟದ ಜಲಸಂಗ್ರಹಗಾರ (2 ಲಕ್ಷ ಲೀ. ಸಾಮರ್ಥ್ಯ).
ಬಲ್ನಾಡ್ ಕೆಲ್ಯಾಡಿ – ಮೇಲ್ಮಟ್ಟದ ಜಲಸಂಗ್ರಹಗಾರ (1 ಲಕ್ಷ ಲೀ. ಸಾಮರ್ಥ್ಯ).
ಕೆಎಚ್‌ಬಿ ಸೈಟ್, ತೆಂಕಿಲ – ಮೇಲ್ಮಟ್ಟದ ಜಲಸಂಗ್ರಹಗಾರ (20 ಲಕ್ಷ ಲೀ. ಸಾಮರ್ಥ್ಯ).
ನೆಕ್ಕಿಲಾಡಿ – ನೀರು ಶುದ್ಧೀಕರಣ ಘಟಕ (8.7 ಎಂಎಲ್‌ಡಿ).
ನೆಕ್ಕಿಲಾಡಿ – ಮರು ನೀರು ಶುದ್ಧೀಕರಣ ಘಟಕ (15 ಎಂಎಲ್‌ಡಿ).
ಕಾಮಗಾರಿಗಳು ಹೀಗಿವೆ
1.68 ಕಿ.ಮೀ. ಉದ್ದದ 400 ಮಿ.ಮೀ. ವ್ಯಾಸದ ಕಚ್ಚಾ ನೀರು ಏರು ಕೊಳವೆಯು ಜ್ಯಾಕ್
ವೆಲ್‌ನಿಂದ ನೀರು ಶುದ್ಧೀಕರಣ ಘಟಕದವರೆಗೆ ವಿಸ್ತರಣೆಗೊಳ್ಳಲಿದೆ.
ನೆಕ್ಕಿಲಾಡಿಯಲ್ಲಿ 8.7 ಎಂ.ಎಲ್.ಡಿ. ನೀರು ಶುದ್ಧೀಕರಣ ಘಟಕ ನಿರ್ಮಾಣಗೊಳ್ಳಲಿದೆ.
12.42 ಕಿ.ಮೀ. ಉದ್ದ 400 ಮಿ.ಮೀ. ವ್ಯಾಸದ ಶುದ್ಧ ನೀರು ಏರು ಕೊಳವೆ ಮಾರ್ಗ- ನೀರು
ಶುದ್ಧೀಕರಣ ಘಟಕದಿಂದ ತೆಂಕಿಲದ 20 ಲಕ್ಷ ಲೀ. ನೆಲಮಟ್ಟದ ಸಂಗ್ರಹದವರೆಗೆ.
6 ಮೇಲ್ಮಟ್ಟದ ಜಲಸಂಗ್ರಹಗಾರ ಮತ್ತು 2 ನೆಲಮಟ್ಟದ ಜಲಸಂಗ್ರಹಗಾರ
ನಿರ್ಮಾಣಗೊಳ್ಳಲಿದೆ.
132. 62 ಕಿ.ಮೀ ಉದ್ದದ ವಿತರಣ ಕೊಳವೆ ಜಾಲ ನಿರ್ಮಾಣ.
29 ಬಲ್ಕ್ ವಾಟರ್ ಮೀಟರ್.
4,500 ಹೊಸ ಮನೆ ಸಂಪರ್ಕಗಳು ಮತ್ತು ಹಾಲಿ ಇರುವ 9,226 ಹಳೆಯ ಮಾಪಕಗಳ ಬದಲಾವಣೆ.
ಜ್ಯಾಕ್ ವೆಲ್ (ನೆಕ್ಕಿಲಾಡಿ), ನೀರು ಶುದ್ಧೀಕರಣ ಘಟಕ (ನೆಕ್ಕಿಲಾಡಿ), ಮಧ್ಯಂತರ ರೇಚಕ ಸ್ವಾವರ
(ಸಿಟಿಗುಡ್ಡ) ಗಳಲ್ಲಿ ಡೀಸೆಲ್ ಜನರೇಟರ್ ಅಳವಡಿಕೆ.
ಹಾಲಿ ಇರುವ ಜ್ಯಾಕ್‌ವೆಲ್ ಮತ್ತು ನೀರು ಶುದ್ಧೀಕರಣ ಘಟಕದಲ್ಲಿ ಅಗತ್ಯವಿರುವ ಮೆಕ್ಯಾನಿಕಲ್ ಹಾಗೂ ವಿದ್ಯುತ್ ಉಪಕರಣಗಳ
ಬದಲಾವಣೆ.
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.